logo
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಎಲಿಮಿನೇಷನ್‌ನಿಂದ ಮಾನಸಾ ಸಂತೋಷ್‌ ಸೇಫ್‌; ಹಾಗಿದ್ರೆ ಕಾರಿನಲ್ಲಿ ಹತ್ತಿ ಹೊರ ಹೋದವರು ಯಾರು, ಹಂಸ-ಮೋಕ್ಷಿತಾ ಪೈ?

ಬಿಗ್‌ಬಾಸ್‌ ಕನ್ನಡ 11: ಎಲಿಮಿನೇಷನ್‌ನಿಂದ ಮಾನಸಾ ಸಂತೋಷ್‌ ಸೇಫ್‌; ಹಾಗಿದ್ರೆ ಕಾರಿನಲ್ಲಿ ಹತ್ತಿ ಹೊರ ಹೋದವರು ಯಾರು, ಹಂಸ-ಮೋಕ್ಷಿತಾ ಪೈ?

Rakshitha Sowmya HT Kannada

Oct 28, 2024 06:53 AM IST

google News

Bigg Boss Kannada 11: ಈ ವಾರ ಎಲಿಮಿನೇಷನ್‌ ಪ್ರಕ್ರಿಯೆ ನಡೆಸಿಕೊಟ್ಟ ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್.‌ ನಾಮಿನೇಷನ್‌ ಲಿಸ್ಟ್‌ನಲಿದ್ದ ಉಗ್ರಂ ಮಂಜು, ಮಾನಸಾ ಸಂತೋಷ್‌, ಮೋಕ್ಷಿತಾ ಪೈ, ಹಂಸ, ಗೌತಮಿ ಜಾಧವ್‌

  • Bigg Boss Kannada 11: ಸೃಜನ್‌ ಲೋಕೇಶ್‌ ನಡೆಸಿಕೊಟ್ಟ ಎಲಿಮಿನೇಷನ್‌ ಪ್ರಕ್ರಿಯೆಯಲ್ಲಿ ಮಾನಸಾ, ಉಗ್ರಂ ಮಂಜು,ಗೌತಮಿ ಜಾಧವ್‌ ಸೇಫ್‌ ಆದರೆ, ಮೋಕ್ಷಿತಾ ಪೈ ಹಾಗೂ ಹಂಸ ಡೇಂಜರಸ್‌ ಜೋನ್‌ಗೆ ಸೇರಿದರು. ಇಬ್ಬರಿಗೂ ಮುಂದಿನ ವಾರಕ್ಕೆ ಒಬ್ಬರನ್ನು ನೇರ ನಾಮಿನೇಟ್‌ ಮಾಡುವ ಅಧಿಕಾರ ನೀಡಲಾಯ್ತು. ಮೋಕ್ಷಿತಾ, ತ್ರಿವಿಕ್ರಮ್‌ ಹಾಗೂ ಹಂಸ, ಹನುಮಂತನನ್ನು ನಾಮಿನೇಟ್‌ ಮಾಡಿದರು.

Bigg Boss Kannada 11: ಈ ವಾರ ಎಲಿಮಿನೇಷನ್‌ ಪ್ರಕ್ರಿಯೆ ನಡೆಸಿಕೊಟ್ಟ ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್.‌ ನಾಮಿನೇಷನ್‌ ಲಿಸ್ಟ್‌ನಲಿದ್ದ ಉಗ್ರಂ ಮಂಜು, ಮಾನಸಾ ಸಂತೋಷ್‌, ಮೋಕ್ಷಿತಾ ಪೈ, ಹಂಸ, ಗೌತಮಿ ಜಾಧವ್‌
Bigg Boss Kannada 11: ಈ ವಾರ ಎಲಿಮಿನೇಷನ್‌ ಪ್ರಕ್ರಿಯೆ ನಡೆಸಿಕೊಟ್ಟ ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್.‌ ನಾಮಿನೇಷನ್‌ ಲಿಸ್ಟ್‌ನಲಿದ್ದ ಉಗ್ರಂ ಮಂಜು, ಮಾನಸಾ ಸಂತೋಷ್‌, ಮೋಕ್ಷಿತಾ ಪೈ, ಹಂಸ, ಗೌತಮಿ ಜಾಧವ್‌ (PC: Jio Cinema)

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ನಾಲ್ಕನೇ ವಾರ ಮುಕ್ತಾಯಗೊಂಡು ಐದನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಮನೆಯಲ್ಲಿ ಸಾಕಷ್ಟು ಪ್ರಮುಖ ಬೆಳವಣಿಗೆಗಳಾಯ್ತು. ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ದೊಡ್ಮನೆಗೆ ಕಾಲಿಟ್ಟ ಹನುಮಂತ ಕ್ಯಾಪ್ಟನ್‌ ಆಗಿದ್ದರು. ಮನೆಯಲ್ಲಿ ಹನುಮಂತನ ಮುಗ್ದತೆ ಬಗ್ಗೆ ಸಾಕಷ್ಟು ಚರ್ಚೆ ಕೂಡಾ ಆಯ್ತು. ಈ ಬಾರಿ ಸುದೀಪ್‌ ಕಿಚ್ಚನ ಪಂಚಾಯ್ತಿಯಲ್ಲಿ ಭಾಗವಹಿಸದೆ ಇದ್ದಿದ್ದರಿಂದ ನಿರ್ದೇಶಕ ಯೋಗರಾಜ ಭಟ್‌ ಹಾಗೂ ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌ ಬಂತು ಪಂಚಾಯ್ತಿ ಮಾಡಿದರು.

5ನೇ ವಾರಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಕನ್ನಡ 11

4 ವಾರಗಳಲ್ಲಿ ಇದುವರೆಗೂ ಯಮುನಾ ಶ್ರೀನಿಧಿ, ಲಾಯರ್‌ ಜಗದೀಶ್‌ ಹಾಗೂ ರಂಜಿತ್‌ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಈ ಬಾರಿ ಯಾರು ಮನೆಯಿಂದ ಹೊರ ಹೋಗಬಹುದು ಎಂಬ ಕುತೂಹಲ ಬಹಳ ಕಾಡಿತ್ತು. ಸುದೀಪ್‌ ತಾಯಿ ಸರೋಜಾ ಅವರು ನಿಧನರಾದ್ದರಿಂದ ಈ ಬಾರಿ ಸುದೀಪ್‌ ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗಲಿಲ್ಲ. ಅದರ ಬದಲಿಗೆ ಶನಿವಾರ ವಿಕಟಕವಿ ಯೋಗರಾಜ ಭಟ್ಟರು ಮನೆಗೆ ಬಂದು ಹೋದರೆ, ಭಾನುವಾರ ಸೃಜನ್‌ ಲೋಕೇಶ್‌ ಬಂದಿದ್ದರು. ಎಲಿಮಿನೇಷನ್‌ ಪ್ರಕ್ರಿಯೆ ನಡೆಸಿಕೊಟ್ಟರು. ಹಾಗಾದರೆ ಈ ಬಾರಿ ಸೇಫ್‌ ಆದವರು ಯಾರು? ಎಲಿಮಿನೇಷನ್‌ ಆದವರು ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ಬಾರಿ ಉಗ್ರಂ ಮಂಜು, ಮಾನಸಾ ಸಂತೋಷ್‌, ಮೋಕ್ಷಿತಾ ಪೈ, ಹಂಸ, ಗೌತಮಿ ಜಾಧವ್‌ ನಾಮಿನೇಷನ್‌ ಲಿಸ್ಟ್‌ನಲ್ಲಿದ್ದರು. ಕೆಲವು ಸ್ಪರ್ಧಿಗಳನ್ನು ಸೇಫ್‌ ಮಾಡಲು ಬಿಗ್‌ಬಾಸ್‌ ಒಂದು ಚಟುವಟಿಕೆ ನೀಡಿದ್ದರು. ಇದರ ಪ್ರಕಾರ ಆಕ್ಟಿವಿಟಿ ರೂಮ್‌ನಲ್ಲಿ ಕಟ್ಟಲಾದ ಬಲೂನ್‌ ಕೆಳಗೆ ಅಲ್ಲಿ ಸೂಚಿಸಲಾದ ಸ್ಪರ್ಧಿಗಳು ನಿಲ್ಲಬೇಕು. ತಮ್ಮ ಮೇಲಿರುವ ಬಲೂನ್‌ನ್ನು ಸೂಜಿಯಿಂದ ಒಡೆದಾಗ ಹಸಿರು ಬಣ್ಣ ಬಂದರೆ ಸೇಫ್‌ , ಕೆಂಪು ಬಣ್ಣ ಬಂದರೆ ಡೇಂಜರಸ್‌ ಜೋನ್‌ ಎಂದು ಸೃಜನ್‌ ಲೋಕೇಶ್‌ ಮಾಹಿತಿ ನೀಡಿದರು. ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ನಿಂತರು. ಮೊದಲು ಮಾನಸಾ ಮಾತನಾಡಿ ಬಹಳ ಟೆನ್ಷನ್‌ ಆಗುತ್ತಿದೆ. ಮನೆಯವರೆಲ್ಲಾ ಮಾತನಾಡುವುದು ಕೇಳಿದರೆ ನಾನು ಇಷ್ಟು ದಿನಗಳಲ್ಲಿ ಏನೂ ಮಾಡಿಲ್ಲವೇನೂ ಅನ್ನಿಸುತ್ತಿದೆ ಎಂದರು.

ಹೊರ ಹೋಗುತ್ತಾರೆ ಎಂದುಕೊಂಡಿದ್ದ ಮಾನಸಾ ಸೇಫ್‌

ಮಂಜು ಮಾತನಾಡಿ ಇಷ್ಟು ದಿನಗಳ ಕಾಲ ಮನರಂಜನೆ ನೀಡಿದ್ದೇನೆ, ನಾನು ಸೇಫ್‌ ಆಗುತ್ತೇನೆಂಬ ನಂಬಿಕೆ ಇದೆ ಎಂದರು. ಮೋಕ್ಷಿತಾ, ಗೌತಮಿ ಜಾಧವ್‌ ಎಲ್ಲರೂ ಸೇಫ್‌ ಆಗುವ ನಂಬಿಕೆ ವ್ಯಕ್ತಪಡಿಸಿದರು. ನನಗೆ ನಂಬಿಕೆಯೂ ಇದೆ, ಭಯವೂ ಇದೆ ಎಂದು ಹಂಸ ಹೇಳಿಕೊಂಡರು. ಸೃಜನ್‌ ಲೋಕೇಶ್‌ ಸೂಚನೆಯಂತೆ ಮಾನಸಾ ಮೊದಲ ಬಲೂನ್‌ ಒಡೆದರು. ಅದರಲ್ಲಿ ಕೆಂಪು ಬಣ್ಣ ಬಂದು ಡೇಂಜರಸ್‌ ಜೋನ್‌ಗೆ ಹೋದರು. ಹಂಸ ಹಾಗೂ ಮೋಕ್ಷಿತಾ ಪೈ ಕೂಡಾ ಕೆಂಪು ಬಣ್ಣ ಪಡೆದು ಅನ್‌ ಸೇಫ್‌ ಅದರು. ಉಗ್ರಂ ಮಂಜು ಹಾಗೂ ಗೌತಮಿ ಜಾಧವ್‌ಗೆ ಹಸಿರು ಬಂದು ಸೇಫ್‌ ಆದರು. ಸೇಫ್‌ ಆದವರಿಗೆ ಸೃಜನ್‌ ಲೋಕೇಶ್‌ ಕಂಗ್ರಾಜುಲೇಷನ್ಸ್‌ ಹೇಳಿ ಎಲಿಮಿನೇಷನ್‌ ಪ್ರಕ್ರಿಯೆ ಮುಂದುವರೆಸಿದರು.

ಮುಂದಿನ ಹಂತದ ಎಲಿಮಿನೇಷನ್‌ ಪ್ರಕ್ರಿಯೆಯಲ್ಲಿ ಮಾನಸಾ ಸೇಫ್‌ ಆದರು. ಇದರಿಂದ ಮಾನಸಾ ಬಹಳ ಖುಷಿಯಾದರು. ಕೊನೆಗೆ ಉಳಿದ ಹಂಸ ಹಾಗೂ ಮೋಕ್ಷಿತಾ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೋರ ಹೋಗುತ್ತಾರೆ ಎಂದು ಹೇಳಿ ಸೃಜನ್‌ ಅಲ್ಲಿಂದ ನಿರ್ಗಮಿಸಿದರು. ರಾತ್ರಿ 10 ಗಂಟೆ ವೇಳೆಗೆ ಬಿಗ್‌ಬಾಸ್‌ ಹಂಸ ಹಾಗೂ ಮೋಕ್ಷಿತಾ ಇಬ್ಬರನ್ನೂ ಕರೆದು ಇದುವರೆಗಿನೂ ಜರ್ನಿಯ ಬಗ್ಗೆ ಹೇಳುವಂತೆ ತಿಳಿಸಿದರು. ಇಬ್ಬರ ಮಾತು ಮುಗಿದ ನಂತರ ಗಾರ್ಡನ್‌ ಏರಿಯಾದಲ್ಲಿ 2 ಕಾರುಗಳು ಬಂದು ನಿಂತವು, ಹಂಸ ಹಾಗೂ ಮೋಕ್ಷಿತಾ ಒಂದೊಂದು ಕಾರ್‌ ಬಳಿ ಬಂದು ನಿಂತರು.

ಎಲಿಮಿನೇಟ್‌ ಆಗುವವರಿಗೆ ವಿಶೇಷ ಅಧಿಕಾರವಿದ್ದು ಮುಂದಿನ ವಾರ ನೇರವಾಗಿ ನಾಮಿನೇಟ್‌ ಮಾಡಲು ಅಧಿಕಾರ ನೀಡಿದರು. ಮೋಕ್ಷಿತಾ, ತ್ರಿವಿಕ್ರಮ್‌ ಹಾಗೂ ಹಂಸ, ಹನುಮಂತನನ್ನು ನಾಮಿನೇಟ್‌ ಮಾಡಿದರು. ಈ ಪ್ರಕ್ರಿಯೆ ನಂತರ ಕಾರ್ಯಕ್ರಮ ಹಂತವಾಗಿದ್ದು ಈ ಬಾರಿ ಮನೆಯಿಂದ ಯಾರು ಹೊರ ಹೋಗಬಹುದು ಎಂಬ ಕುತೂಹಲ ಇನ್ನೂ ಹಾಗೇ ಉಳಿದಿದೆ. ಸೋಮವಾರ ಈ ಕುತೂಹಲಕ್ಕೆ ಉತ್ತರ ಸಿಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ