logo
ಕನ್ನಡ ಸುದ್ದಿ  /  ಮನರಂಜನೆ  /  ಸೊಸೆಗೆ ಮೋಸ ಮಾಡಿದ್ರೆ ಮಗ ಅನ್ನೋದು ಮರೆತು ಪೊಲೀಸರಿಗೆ ಹಿಡಿದು ಕೊಡ್ತೀನಿ, ತಾಂಡವ್‌ಗೆ ಧರ್ಮರಾಜ್‌ ವಾರ್ನಿಂಗ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಸೊಸೆಗೆ ಮೋಸ ಮಾಡಿದ್ರೆ ಮಗ ಅನ್ನೋದು ಮರೆತು ಪೊಲೀಸರಿಗೆ ಹಿಡಿದು ಕೊಡ್ತೀನಿ, ತಾಂಡವ್‌ಗೆ ಧರ್ಮರಾಜ್‌ ವಾರ್ನಿಂಗ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Oct 12, 2024 09:37 AM IST

google News

ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 11ರ ಸಂಚಿಕೆಯಲ್ಲಿ ಧರ್ಮರಾಜ್‌ಗೆ ಮಗನ ಬಗ್ಗೆ ಎಲ್ಲಾ ವಿಚಾರ ತಿಳಿಯುತ್ತದೆ. ಮುತ್ತಿನಂಥ ಹೆಂಡತಿಗೆ ಮೋಸ ಮಾಡಿದರೆ ಮಗ ಅನ್ನೋದನ್ನು ಮರೆತು ಪೊಲೀಸ್‌ ಕಂಪ್ಲೇಂಟ್‌ ಕೊಡುತ್ತೇನೆ ಎಂದು ಎಚ್ಚರಿಸುತ್ತಾನೆ.

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 11ರ ಎಪಿಸೋಡ್‌ನಲ್ಲಿ ಪತಿ ಧರ್ಮರಾಜ್‌ಗೆ ಕುಸುಮಾ ಮಗನ ಬಗ್ಗೆ ಎಲ್ಲಾ ನಿಜ ಹೇಳಿ ಗೋಳಾಡುತ್ತಾಳೆ. ಮಗನ ವರ್ತನೆಗೆ ಶಾಕ್‌ ಆದ ಧರ್ಮರಾಜ್‌ ಸೊಸೆಗೆ ಮೋಸ ಮಾಡಿದ್ರೆ ಪೊಲೀಸ್‌ ಕಂಪ್ಲೇಂಟ್‌ ಕೊಡ್ತೀನಿ ಅಂತ ಎಚ್ಚರಿಸುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 11ರ ಸಂಚಿಕೆಯಲ್ಲಿ ಧರ್ಮರಾಜ್‌ಗೆ ಮಗನ ಬಗ್ಗೆ ಎಲ್ಲಾ ವಿಚಾರ ತಿಳಿಯುತ್ತದೆ. ಮುತ್ತಿನಂಥ ಹೆಂಡತಿಗೆ ಮೋಸ ಮಾಡಿದರೆ ಮಗ ಅನ್ನೋದನ್ನು ಮರೆತು ಪೊಲೀಸ್‌ ಕಂಪ್ಲೇಂಟ್‌ ಕೊಡುತ್ತೇನೆ ಎಂದು ಎಚ್ಚರಿಸುತ್ತಾನೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 11ರ ಸಂಚಿಕೆಯಲ್ಲಿ ಧರ್ಮರಾಜ್‌ಗೆ ಮಗನ ಬಗ್ಗೆ ಎಲ್ಲಾ ವಿಚಾರ ತಿಳಿಯುತ್ತದೆ. ಮುತ್ತಿನಂಥ ಹೆಂಡತಿಗೆ ಮೋಸ ಮಾಡಿದರೆ ಮಗ ಅನ್ನೋದನ್ನು ಮರೆತು ಪೊಲೀಸ್‌ ಕಂಪ್ಲೇಂಟ್‌ ಕೊಡುತ್ತೇನೆ ಎಂದು ಎಚ್ಚರಿಸುತ್ತಾನೆ. (PC: Jio Cinema)

Bhagyalakshmi Kannada Serial: ಪೂಜಾ, ಕುಸುಮಾ ಶ್ರೇಷ್ಠಾಗೆ ಪ್ರಜ್ಞೆ ತಪ್ಪಿಸಿ ಅವಳ ಮನೆಯಲ್ಲೇ ಬಂಧಿ ಮಾಡಿ ಬರುತ್ತಾರೆ. ಕುಸುಮಾ ಅವತಾರ ಕಂಡು ಭಾಗ್ಯಾ, ತಾಂಡವ್‌ ಶಾಕ್‌ ಆಗುತ್ತಾರೆ. ಅಮ್ಮನನ್ನು ನೋಡಿ, ನೀವು ನನ್ನ ಚಿಕ್ಕಮ್ಮಾನಾ ಎಂದ ತಾಂಡವ್‌ ವ್ಯಂಗ್ಯವಾಡುತ್ತಾನೆ. ಈ ರೀತಿಯ ಡ್ರೆಸ್‌ನಲ್ಲಿ ಅತ್ತೆ ಹೇಗೆ ಕಾಣುತ್ತಾರೆ ಅಂತ ನೋಡಬೇಕಿತ್ತು. ಅದಕ್ಕೆ ನಾನೇ ಬಲವಂತ ಮಾಡಿದ್ದು ಎಂದು ಪೂಜಾ ಸುಳ್ಳು ಹೇಳುತ್ತಾಳೆ.

ಧರ್ಮರಾಜ್‌ಗೆ ಎಲ್ಲಾ ಸತ್ಯ ಹೇಳಿದ ಕುಸುಮಾ

ಧರ್ಮರಾಜ್‌ ಕುಸುಮಾ ಕುರ್ತಾದಲ್ಲಿರುವುದನ್ನು ನೋಡಿ, ಚೆನ್ನಾಗಿ ಕಾಣುತ್ತಿದ್ದೀಯ ಎಂದು ಹೊಗಳುತ್ತಾನೆ. ರೂಮ್‌ನಲ್ಲಿ ಮಾತನಾಡುವಾಗ ಕುಸುಮಾಳನ್ನು ಉದ್ದೇಶಿಸಿ ಧರ್ಮರಾಜ್‌, ಅಂದಹಾಗೆ ನೀವು ಶ್ರೇಷ್ಠಾಗೆ ಪ್ರಜ್ಞೆ ತಪ್ಪಿಸಿದ್ರಲ್ಲ, ಅವಳಿಗೆ ಮತ್ತೆ ಪ್ರಜ್ಞೆ ಬಂತಾ ಎಂದು ಕೇಳುತ್ತಾನೆ. ಗಂಡನ ಮಾತುಗಳನ್ನು ಕೇಳಿ ಕುಸುಮಾ ಶಾಕ್‌ ಆಗುತ್ತಾಳೆ. ಯಾರಿಗೂ ವಿಚಾರ ಗೊತ್ತಾಗಬಾರದು ಎಂದುಕೊಂಡಿದ್ದು ಇವರಿಗೆ ಹೇಗೆ ಗೊತ್ತಾಯ್ತು ಎಂದು ಕುಸುಮಾ ಯೋಚಿಸುತ್ತಾಳೆ. ನೀನು ಹಾಗೂ ಪೂಜಾ ಶ್ರೇಷ್ಠಾಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದನ್ನು ನಾನು ನೋಡಿದೆ, ನೀನು ಏನೇ ಮಾಡಿದರೆ ಅದಕ್ಕೆ ಒಂದು ಬಲವಾದ ಕಾರಣ ಇರುತ್ತದೆ ಅನ್ನೋದು ನನಗೆ ಗೊತ್ತು. ಏನಾಯ್ತು ಹೇಳು ಎಂದು ಕೇಳುತ್ತಾನೆ.

ಕುಸುಮಾ ತಾನು ಬಚ್ಚಿಟ್ಟಿದ್ದ ಮದುವೆ ಆಹ್ವಾನ ಪತ್ರಿಕೆಯನ್ನು ಧರ್ಮರಾಜ್‌ ಕೈಗೆ ಇಟ್ಟು, ನೀವು ಹೇಳಿದ್ದು ನಿಜ, ನಮ್ಮ ಮಗ ನಮಗೆ ಮೋಸ ಮಾಡಿಬಿಟ್ಟ ಎಂದು ಅಳುತ್ತಾಳೆ. ಆಹ್ವಾನ ಪತ್ರಿಕೆಯಲ್ಲಿ ಶ್ರೇಷ್ಠಾ ಜೊತೆ ತಾಂಡವ್‌ ಫೋಟೋ ಇರುವುದನ್ನು ನೋಡಿ ಧರ್ಮರಾಜ್‌ಗೆ ಶಾಕ್‌ ಆಗುತ್ತದೆ. ಮಗ ದಾರಿ ತಪ್ಪಿರುವ ವಿಚಾರ ತಿಳಿದ ಧರ್ಮರಾಜ್‌, ಅವನಿಗೆ ಬುದ್ಧಿ ಕಲಿಸುತ್ತೇನೆ ಎಂದು ತಾಂಡವ್‌ ರೂಮ್‌ಗೆ ಹೋಗಿ ಆಹ್ವಾನ ಪತ್ರಿಕೆಯನ್ನು ಅವನ ಮೇಲೆ ಎಸೆಯುತ್ತಾನೆ. ಅಪ್ಪನಿಗೆ ವಿಷಯ ತಿಳಿದಿರುವುದನ್ನು ಕಂಡು ತಾಂಡವ್‌ ಒಂದು ಕ್ಷಣ ಶಾಕ್‌ ಆದರೂ , ನನಗೆ ಒತ್ತಾಯದ ಬದುಕು ಇಷ್ಟವಿಲ್ಲ. ಆದ್ದರಿಂದ ಈ ನಿರ್ಧಾರ ಎನ್ನುತ್ತಾನೆ.

ಮಗನಿಗೆ ವಾರ್ನಿಂಗ್‌ ಕೊಟ್ಟ ಧರ್ಮರಾಜ್

ಮಗನ ಕೆನ್ನೆಗೆ ಬಾರಿಸುವ ಧರ್ಮರಾಜ್‌, ಒತ್ತಾಯ ಎಂದು ಹೇಗೆ ಹೇಳುವೆ? ಇದನ್ನು ಮದುವೆಗೆ ಮುನ್ನವೇ ಯೋಚಿಸಬೇಕಿತ್ತು. ಮುದ್ದಾದ ಮಕ್ಕಳಿದ್ದಾರೆ, ಇಷ್ಟು ವರ್ಷಗಳ ಕಾಲ ಸಂಸಾರ ಮಾಡಿ ಈಗ ಭಾಗ್ಯಾ ಬೇಡ ಅಂತ ಹೇಳಿದರೆ ಅದನ್ನು ಒತ್ತಾಯ ಎಂದು ಹೇಗೆ ಯೋಚಿಸುವೆ? ಅಂತ ಒಳ್ಳೆ ಹೆಂಡತಿಗೆ ಮೋಸ ಮಾಡಲು ನಿನಗೆ ಹೇಗೆ ಮನಸ್ಸು ಬರುತ್ತದೆ? ನೀನು ಇದೆಲ್ಲವನ್ನೂ ಬಿಟ್ಟು ಭಾಗ್ಯಾ ಜೊತೆ ಸುಮ್ಮನೆ ಸಂಸಾರ ಮಾಡಿಕೊಂಡಿದ್ದರೆ ಸರಿ, ಇಲ್ಲವಾದರೆ ಮಗ ಅನ್ನೋದನ್ನು ನೋಡದೆ, ಪೊಲೀಸ್‌ ಕಂಪ್ಲೇಂಟ್‌ ಕೊಡುತ್ತೇನೆ ಎಂದು ಎಚ್ಚರಿಸುತ್ತಾನೆ.

ಇತ್ತ ಭಾಗ್ಯಾ ಜೊತೆ ಹೋಗುವ ಸುಂದ್ರಿ, ಆಕೆ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾಳೆ ಎಂದು ತಿಳಿಯದೆ ಗಾಬರಿ ಆಗುತ್ತಾಳೆ. ದಯವಿಟ್ಟು ಎಲ್ಲಿಗೆ ಕರೆದೊಯ್ಯುತ್ತಿದ್ದೀಯ ಹೇಳು ಎಂದು ಮನವಿ ಮಾಡುತ್ತಾಳೆ. ಪೊಲೀಸ್‌ ಸ್ಟೇಷನ್‌ಗೆ ಎಂದು ಭಾಗ್ಯಾ ಹೇಳಿದಾಗ ಸುಂದ್ರಿಗೆ ಭಯವಾಗುತ್ತದೆ. ಇಷ್ಟು ದಿನ ನೀನು ನಿಜ ಹೇಳು ಎಂದರೂ ಹೇಳಲಿಲ್ಲ. ಇಲ್ಲಿ ಬಾಯಿ ಬಿಡುತ್ತೀಯ ಅಂತ ಕರೆದುಕೊಂಡು ಬಂದೆ ಎನ್ನುತ್ತಾಳೆ. ಏನು ಮಾಡುವುದು ತೋಚದೆ ಸುಂದ್ರಿ ಪೂಜಾಗೆ ಕರೆ ಮಾಡಿ, ಪರಿಸ್ಥಿತಿಯನ್ನು ವಿವರಿಸುತ್ತಾಳೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ