logo
ಕನ್ನಡ ಸುದ್ದಿ  /  ಮನರಂಜನೆ  /  Varthur Santhosh: ‘ನಮ್ ತಾಯಿ ಊಟ ಮಾಡ್ತಾ ಇಲ್ಲಣ್ಣ, ಈ ನನ್ನ ಮಕ್ಳಿಂದ’; ನ್ಯಾಯಕ್ಕಾಗಿ ವರ್ತೂರು ಸಂತೋಷ್‌ ಕಣ್ಣೀರು

Varthur Santhosh: ‘ನಮ್ ತಾಯಿ ಊಟ ಮಾಡ್ತಾ ಇಲ್ಲಣ್ಣ, ಈ ನನ್ನ ಮಕ್ಳಿಂದ’; ನ್ಯಾಯಕ್ಕಾಗಿ ವರ್ತೂರು ಸಂತೋಷ್‌ ಕಣ್ಣೀರು

Mar 29, 2024 04:09 PM IST

google News

Varthur Santhosh: ‘ನಮ್ ತಾಯಿ ಊಟ ಮಾಡ್ತಾ ಇಲ್ಲಣ್ಣ, ಈ ನನ್ನ ಮಕ್ಳಿಂದ’; ನ್ಯಾಯಕ್ಕಾಗಿ ಕಣ್ಣೀರಿಟ್ಟ ವರ್ತೂರು ಸಂತೋಷ್‌

    • ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್‌ ಕ್ಯಾಮರಾ ಮುಂದೆಯೇ ಕಣ್ಣೀರಿಟ್ಟಿದ್ದಾರೆ. ಎಂಜಲು ಕಾಸು ತಿಂದು ತಮ್ಮ ಬಗ್ಗೆಯೇ ಮಾತನಾಡುತ್ತಿರುವವರ ಬಗ್ಗೆ ಮೌನ ಮುರಿದಿದ್ದಾರೆ. 
Varthur Santhosh: ‘ನಮ್ ತಾಯಿ ಊಟ ಮಾಡ್ತಾ ಇಲ್ಲಣ್ಣ, ಈ ನನ್ನ ಮಕ್ಳಿಂದ’; ನ್ಯಾಯಕ್ಕಾಗಿ ಕಣ್ಣೀರಿಟ್ಟ ವರ್ತೂರು ಸಂತೋಷ್‌
Varthur Santhosh: ‘ನಮ್ ತಾಯಿ ಊಟ ಮಾಡ್ತಾ ಇಲ್ಲಣ್ಣ, ಈ ನನ್ನ ಮಕ್ಳಿಂದ’; ನ್ಯಾಯಕ್ಕಾಗಿ ಕಣ್ಣೀರಿಟ್ಟ ವರ್ತೂರು ಸಂತೋಷ್‌

Varthur Santhosh: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಫಿನಾಲೆ ಹಂತದವರೆಗೂ ಆಗಮಿಸಿ, ಇತರೆ ಸ್ಪರ್ಧಿಗಳಿಗೂ ಸ್ಪರ್ಧೆಯೊಡ್ಡಿದ್ದವರು ಹಳ್ಳಿಕಾರ್‌ ಒಡೆಯ ವರ್ತೂರ್‌ ಸಂತೋಷ್‌. ಬಿಗ್‌ ಬಾಸ್‌ನಿಂದಾಗಿ ರಾಜ್ಯದ ಜನರ ಪ್ರೀತಿ ಸಂಪಾದಿಸಿರುವ ವರ್ತೂರು ಸಂತೋಷ್‌, ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನೇರವಾದ ಮಾತು, ಸ್ನೇಹಕ್ಕೆ ಅವರು ನೀಡುತ್ತಿದ್ದ ಗೌರವ ಎಲ್ಲರಿಗೂ ಇಷ್ಟವಾಗಿತ್ತು. ಬಿಗ್‌ ಬಾಸ್‌ನಿಂದ ಮರಳಿದ ಬಳಿಕವೂ ಅದೇ ಪ್ರೀತಿ ಹೋದಲೆಲ್ಲ ಸಿಗುತ್ತಿದೆ. ಜತೆಗೆ ಅವರ ಬಗ್ಗೆ ಒಂದಷ್ಟು ಅಪಪ್ರಚಾರದ ಕೆಲವೂ ಆಗಿದೆ. ವಿವಾದಗಳಿಗೂ ವರ್ತೂರು ಕಾರಣರಾಗಿದ್ದಾರೆ.

ಆ ಪೈಕಿ ಯಲಹಂಕ ಮಂಜು ಎಂಬುವವರು ವರ್ತೂರು ಸಂತೋಷ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ, ಯೂಟ್ಯೂಬ್‌ಗಳಲ್ಲಿ ಮನಬಂದಂತೆ ಹೇಳಿಕೆಗಳನ್ನು ಕೊಡುತಿದ್ದಾರೆ ಎಂಬುದು ವರ್ತೂರು ಸಂತೋಷ್‌ ಗಮನಕ್ಕೂ ಬಂದಿದೆ. ಈ ಬಗ್ಗೆ ತಾವೂ ಡಿಜಿಟಲ್‌ ಸಿನಿ ಅಡ್ಡ ಯೂಟ್ಯೂಬ್‌ ಚಾನೆಲ್‌ ಜತೆಗೆ ಮಾತನಾಡಿದ್ದಾರೆ. ತಮ್ಮ ವಿರುದ್ಧ ನಾಲಗೆ ಹರಿ ಬಿಡುತ್ತಿರುವವರ ಬಗ್ಗೆ ಅಷ್ಟೇ ಕಟುವಾಗಿಯೇ ಮಾತನಾಡಿದ್ದಾರೆ.

ಎಂಜಲು ಕಾಸು ತಿನ್ನಲು ಬಂದವರವರು..

ಒಂದಲ್ಲ ಎರಡಲ್ಲ ಬಹಳ ನೋವಾಗ್ತಿದೆ. ಅವರವರ ನೋವು ಅವರಿಗೇ ಗೊತ್ತು. ನಾನು ತಂದೆಯನ್ನು ಕಳೆದುಕೊಂಡ ಮೇಲೆ, ನನ್ನ ತಾಯಿಯೇ ನನ್ನನ್ನು ಸಾಕಿರೋದು. ಆವಾಗ ರೇಸ್‌ ಆಡೋವಾಗ ರೇಸ್‌ನಲ್ಲಿ ಸಾವಿರ ಎರಡು ಸಾವಿರಕ್ಕೆ ಬಂದವರಿವರು. 2022ರಲ್ಲಿ ರೇಸ್‌ ಮಾಡಿದಾಗ, ಇವರೆಲ್ಲ ಬಂದು ಎಂಜಲು ಕಾಸು ತಿಂದವರಿವರು. ನಮ್ಮ ಅನ್ನ ತಿಂದು ನಮಗೇ ಮಾತನಾಡ್ತಿದ್ದಾರೆ. ಇದಕ್ಕೆ ಭಗವಂತನೇ ಸಾಕ್ಷಿ.

10 ರೂಪಾಯಿ ಯಾರಿಗೂ ಮೋಸ ಮಾಡಿಲ್ಲ..

ನಮ್ಮ ತಾಯಿ ಬಗ್ಗೆ ನಮ್ಮ ಮನೆ ಬಗ್ಗೆ ನಮ್ಮ ಸಂಬಂಧಿಕರ ಬಗ್ಗೆ ಮನಬಂದಂತೆ ಮಾತನಾಡ್ತಿದ್ದಾರೆ. ಬರ್ರೋ ನಾನೂ ನೋಡಿಯೇ ಬಿಡ್ತಿನಿ. ಯಾರಿಗಾದ್ರೂ ನಾನು 10 ರೂಪಾಯಿ ಮೋಸ ಮಾಡಿದ್ರೆ ಹೇಳಿ. ನಮ್ಮ ಎಂಜಲು ತಿಂದು ಬದುಕಿದವ್ರು ನೀವು. ಇವತ್ತು ಬಂದು ಮಾತನಾಡ್ತಿದ್ದಾರೆ. ಒಬ್ಬರಿಗೂ ಒಂದು ರೂಪಾಯಿ ಅನ್ಯಾಯ ಮಾಡಿಲ್ಲ. ಈ ರೀತಿ ನಿಮ್ಮ ಬಗ್ಗೆ ಬಂದು ಮಾತನಾಡೋಕೆ ನನಗೆ ಇಷ್ಟವಿಲ್ಲ. ಭಗವಂತನ ಸಾಕ್ಷಿಯಾಗಿ ನನಗೆ ಇಷ್ಟ ಇಲ್ಲ.

ನೀವೇ ನನ್ನ ಧರ್ಮದೇವತೆಗಳು..

ನನ್ನ ತಾಯಿ ಬಗ್ಗೆ ಇರಬಹುದು, ನನ್ನ ಸ್ನೇಹಿತರ ಬಗ್ಗೆ ಇರಬಹುದು.. ಒಂದಲ್ಲ ಎರಡಲ್ಲ ಇವ್ರು ಮಾತನಾಡಿರೋದು. ನೀವು ಸತ್ಯವಾಗ್ಲೂ, ನೀವು ಧರ್ಮ ದೇವತೆಗಳು. ನನ್ನನ್ನು ಇಷ್ಟು ಬೆಳೆಸಿದ್ದೀರಿ. ಒಬ್ಬರಿಗೂ ನಾನು ಅನ್ಯಾಯ ಮಾಡಿಲ್ಲ. ಒಬ್ಬರ ಅನ್ನ ಕಿತ್ಕೊಂಡಿಲ್ಲ. ನನಗೆ ಅನ್ನಬಾರದ ಮಾತುಗಳನ್ನ ಆಡಿದ್ದಾರೆ. ಸಂಸಾರದ ಮಾತುಗಳನ್ನೆಲ್ಲ ಅಂದಿದ್ದಾರೆ. ನಮ್ ತಾಯಿ ಊಟ ಮಾಡ್ತಾ ಇಲ್ಲಣ್ಣ, ಈ ನನ್ನ ಮಕ್ಳಿಂದ ಎಂದು ಯಲಹಂಕ ಮಂಜು ಎಂಬುವವರ ವಿರುದ್ಧ ಮಾತನಾಡಿದ್ದಾರೆ ವರ್ತೂರು ಸಂತೋಷ್‌.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ