logo
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪ, ಆಕ್ರೋಶ, ಪ್ರೀತಿ: ಪ್ರೇಕ್ಷಕರ ಅಭಿರುಚಿಯ ಪ್ರಶ್ನೆಗೆ ಕಾಣಿಸ್ತಿದೆ ಬಗೆಬಗೆ ಉತ್ತರ

ಬಿಗ್‌ ಬಾಸ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪ, ಆಕ್ರೋಶ, ಪ್ರೀತಿ: ಪ್ರೇಕ್ಷಕರ ಅಭಿರುಚಿಯ ಪ್ರಶ್ನೆಗೆ ಕಾಣಿಸ್ತಿದೆ ಬಗೆಬಗೆ ಉತ್ತರ

Sep 30, 2024 05:26 PM IST

google News

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಬಗ್ಗೆ ಸೋಷಿಯಲ್‌ ಮೀಡಿಯಾ ಪ್ರತಿಕ್ರಿಯಿಸಿದ್ದು ಹೇಗೆ?

    • ಈ ಸಲದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಬಗ್ಗೆ ನಿರೀಕ್ಷೆಗಳು ಮುಗಿಲು ಮುಟ್ಟಿದ್ದವು. ಅದರಂತೆ, ಭಾನುವಾರ ಗ್ರ್ಯಾಂಡ್‌ ಓಪನಿಂಗ್‌ ಕಂಡ ಈ ಶೋ ಬಗ್ಗೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆ ಟಾಕ್ಸ್‌ ಶುರುವಾಗಿವೆ. ಸ್ಪರ್ಧಿಗಳ ವಿಚಾರಕ್ಕೂ ತರಹೇವಾರಿ ಮಾತುಗಳು ಕೇಳಿಬರುತ್ತಿವೆ. 
ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಬಗ್ಗೆ ಸೋಷಿಯಲ್‌ ಮೀಡಿಯಾ ಪ್ರತಿಕ್ರಿಯಿಸಿದ್ದು ಹೇಗೆ?
ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಬಗ್ಗೆ ಸೋಷಿಯಲ್‌ ಮೀಡಿಯಾ ಪ್ರತಿಕ್ರಿಯಿಸಿದ್ದು ಹೇಗೆ?

Bigg Boss Kannada Season 11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್ ಓಪನಿಂಗ್‌ ಭಾನುವಾರ ಅದ್ಧೂರಿಯಾಗಿ ನೆರವೇರಿದೆ. ಈ ಸಲದ ಶೋನಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಕೌತುಕವೂ ತಣಿದಿದೆ. ಸ್ವರ್ಗ ನರಕದ ಮನೆಯ ದರ್ಶನವೂ ವೀಕ್ಷಕರ ಕಣ್ಣಿಗೆ ಬಿದ್ದಿದೆ. ಇದೆಲ್ಲದರ ನಡುವೆಯೇ ಪ್ರತಿ ವರ್ಷದಂತೆ ಈ ವರ್ಷವೂ ಶೋ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಈ ಸಲದ ಶೋನಲ್ಲಿ ಸಿನಿಮಾ, ಕಿರುತೆರೆ ಸೇರಿ ಹಲವು ಕ್ಷೇತ್ರಗಳ ಪ್ರಭಾವಿಗಳು ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದಾರೆ. ಹಾಗೇ ಮನೆ ಪ್ರವೇಶಿಸಿದ ಸ್ಪರ್ಧಿಗಳ ಬಗ್ಗೆ ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಬೇಸರ ಹೊರಹಾಕಿದರೆ, ಇನ್ನು ಕೆಲವರು ಶೋ ನೋಡಲ್ಲ ಎನ್ನುತ್ತಿದ್ದಾರೆ. ಕೆಲವರು ಸ್ಪರ್ಧಿಗಳಿಗೆ ಒಂದಷ್ಟು ಪ್ರಶ್ನೆಗಳನ್ನೂ ಎಸೆದಿದ್ದಾರೆ. ಇಲ್ಲಿರುವ ಸ್ಪರ್ಧಿಗಳ ಪೈಕಿ, ಯಾರೂ ಇಷ್ಟವಾಗ್ತಿಲ್ಲ. ಸಾಮಾನ್ಯರನ್ನೂ ಕರೆಸಬಹುದಿತ್ತು ಎಂದೂ ಕಾಮೆಂಟ್‌ ಮಾಡಿದ್ದಾರೆ.

ಅಭಿ ಶೆಟ್ಟಿ ಕುಂದಾಪುರ ಪ್ರಶ್ನೆಗಳು

  • ಹಿಂದುತ್ವ ಅನ್ನುವ ಒಂದು ವೈದಿಕ ರಾಜಕೀಯ ಸಿದ್ದಾಂತವನ್ನು ತನ್ನ ಐಡೆಂಟಿಟಿಗೆ ಬಳಸಿಕೊಂಡು, ಅದರ ನೆರಳಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನ ತನ್ನ ಜೊತೆಗಿದ್ದವರಿಗೇ ಪಂಗನಾಮ ಹಾಕಿ, ಜೈಲು ಸೇರಿದ್ದ ಚೈತ್ರಾ ಎಂಬ ವ್ಯಕ್ತಿ ಬಿಗ್ ಬಾಸ್ ಎನ್ನುವ ಮತ್ತೊಂದು ಕಣ್ಕಟ್ಟಿನ ಕಾರ್ಯಕ್ರಮದಲ್ಲಿ ತನ್ನನ್ನು ಹೇಗೆ ಬಿಂಬಿಸಿಕೊಳ್ಳಬಹುದು?
  • ಈಗಾಗಲೇ ತಾನು ಎಸಗಿರುವ ಅಪರಾಧಗಳಿಂದ ಸುತ್ತುವರಿದು ತನ್ನ ಇಮೇಜನ್ನು ಮರುಕಟ್ಟಲು ಏನೆಲ್ಲಾ ಹೈಡ್ರಾಮಾಗಳನ್ನು ನಡೆಸಬಹುದು?
  • ತಾನು ನಿಜಕ್ಕೂ ಕ್ರಿಮಿನಲ್ ಅಲ್ಲವೇ ಅಲ್ಲ ಎಂದು ಪ್ರೂವ್ ಮಾಡಲು ಮತ್ತೆ ಅದೇ ಹಿಂದುತ್ವದ ಕುರಿತು, ಲವ್ ಜಿಹಾದ್ ಕುರಿತು ಮತ್ತಷ್ಟು ಭಾಷಣ ಮಾಡದೇ ಬೇರೆ ರೀತಿಯ ಮೈಂಡ್ ಗೇಮ್ ಗೆ ಹೇಗೆ ಪ್ರಯತ್ನ ಮಾಡಬಹುದು?
  • ನನ್ನ ನಿಜವಾದ ವ್ಯಕ್ತಿತ್ವ ಎಷ್ಟು ಸಚ್ಚಾರಿತ್ರವಾದುದು, ಎಷ್ಟು ಪ್ರಾಮಾಣಿಕವಾದುದು, ಎಷ್ಟು ಮುಗ್ದತೆಯಿಂದ ಕೂಡಿದ್ದು ಎಂದು ಬಿಂಬಿಸಲು ಬಿಗ್ ಬಾಸ್ ಮನೆಯನ್ನು ಹೇಗೆಲ್ಲಾ ಬಳಸಿಕೊಳ್ಳಲು ಪ್ರಯತ್ನಿಸಬಹುದು?

ಯಾರಿಗಾದರೂ ಬಿಗ್ ಬಾಸ್ ನೋಡುವ ಅಭ್ಯಾಸವಿದ್ದರೆ ಮೇಲಿನ ಈ ಪ್ರಶ್ನೆಗಳನ್ನು ಹಾಕಿಕೊಂಡು ನೋಡಿ.. ತಮಾಷೆಯಾಗಿರುತ್ತದೆ...

ಡಾ. ಮೋಹನ್‌ ತಲಕಾಲಕೊಪ್ಪ ಹೇಳಿದ್ದೇನು?

ಬಿಗ್ ಬಾಸ್ ಒಂದು ತೃತೀಯ ದರ್ಜೆಯ ಕಾರ್ಯಕ್ರಮ. ಇಂತಹವನ್ನು ಸಹೃದಯರು ಮುಲಾಜಿಲ್ಲದೆ ತಿರಸ್ಕರಿಸಬೇಕು. ನಾನಂತೂ ಖಂಡಿತಾ ನೋಡೋದಿಲ್ಲ ಅಂತ ಬರೆದಿದ್ದೆ. ಅದಕ್ಕೆ ಕೆಲವರು ನೋಡುವವರು ನೋಡಲಿ ಅಂತ ಪ್ರತಿಕ್ರಿಯೆ ಕೊಟ್ಟಿದ್ದರು. ವಿಷಯ ಅಷ್ಟು ಸರಳವಿಲ್ಲ. ಯಕ್ಷಗಾನದಲ್ಲಿ ಈ ರೀತಿಯ ವಾದ ವಿವಾದಗಳು ಆಗಿ ಕೊನೆಗೆ ಪ್ರೇಕ್ಷಕನ ಅಭಿರುಚಿಯನ್ನು ಎತ್ತರಿಸುವುದು ಕಲಾವಿದನ ಹೊಣೆ. ಪ್ರೇಕ್ಷಕರು ಕೇಳ್ತಾರೆ (ಅಂತ ಸುಳ್ಳು ಹೇಳಿ) ಅಂತ ಅವರನ್ನು ಕೀಳು ಅಭಿರುಚಿಗೆ ಇಳಿಸಬೇಡಿ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾಗಿ ಘನತೆಯುಳ್ಳ, ಸದಭಿರುಚಿಯ ಕಾರ್ಯಕ್ರಮಗಳನ್ನು ಕೊಡುವುದು ಮಾಧ್ಯಮಗಳ ಹೊಣೆ. ಇಲ್ಲಿ ಪ್ರೇಕ್ಷಕರ ತಪ್ಪಿಲ್ಲ.

ಗುಬ್ಬಚ್ಚಿ ಸತೀಶ್‌ ಬರಹ

ಈ ಬಾರಿಯ ಬಿಗ್ ಬಾಸಿನ ಈ ನಾಲ್ಕು ಜನ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಅನ್ನುವ ಪ್ರಶ್ನೋತ್ತರ ಹಲವರ ಪೇಜಿನಲ್ಲಿ ನಡೀತಿದೆ. ನನಗೆ 'ಸತ್ಯ' ಧಾರಾವಾಹಿಯ ಗೌತಮಿ ಜಾಧವ್ ಅವರ ನಟನೆ ಇಷ್ಟ. ಒಂದೆರಡು ಬಾರಿ ನೋಡಿದ್ದೆ. ಆದರೆ, ಇವರ ನಟನೆ ನೋಡಲು ಇದು ಧಾರಾವಾಹಿ ಅಲ್ಲ. ರಿಯಾಲಿಟಿ ಶೋ.

ಇನ್ನೂ ನನಗೆ ಈ ಗೋಲ್ಡ್ ಸುರೇಶ್ ಇಷ್ಟ ಆಗ್ತಿದ್ದಾರೆ. ಕಾರಣ, ಅವರ ಮೈಮೇಲಿರುವ ಚಿನ್ನ ಮತ್ತು ಅವರ ಬಗ್ಗೆ ನನಗಷ್ಟು ಗೊತ್ತಿಲ್ಲ ಎಂಬುದು. ಬಟ್ ಚಿನ್ನ ಇದ್ದರೆ ಜೀವನ ಚೆನ್ನ. ಸೋ, ನನಗೆ ಸ್ಪರ್ಧಿಗಳಾಗಿ ಯಾರೂ ಇಷ್ಟವಾಗಲ್ಲ. ಬಿಗ್ ಬಾಸ್ ಕಿಚ್ಚ ಸುದೀಪ್ ಮಾತ್ರ ಇಷ್ಟ ಆಗ್ತಾರೆ.

ಬಹುಶಃ ಈ ಕಾರ್ಯಕ್ರಮದಲ್ಲಿ ಒಬ್ಬ ಭಿಕ್ಷುಕ, ಆಟೋ ಡ್ರೈವರ್, ಹೋಟೆಲ್ಲಿನಲ್ಲಿ ಕೆಲಸ ಮಾಡುವವರು, ಮೆಡಿಕಲ್ ಶಾಪಿನಲ್ಲಿ ಕೆಲಸ ಮಾಡುವವರು, ಶಿಕ್ಷಕರು, ಥಿಯೇಟರ್ ಕಾರ್ಮಿಕರು ಮತ್ಯಾರೋ ಶ್ರಮಜೀವಿಗಳು ಇದ್ದಿದ್ದರೆ...!?

ಬಿಗ್‌ ಬಾಸ್‌ ಕನ್ನಡ11ನೇ ಸೀಸನ್‌ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?

ಕಲರ್ಸ್‌ ಕನ್ನಡ ನಡೆಸುತ್ತಿರುವ 'ಬಿಗ್‌ ಬಾಸ್‌ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು ಇಲ್ಲಿ ಕ್ಕಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ