logo
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಭಾಗ್ಯಾಗೆ ಮಗ ತಾಂಡವ್‌ ಕಳಿಸಿದ ಡಿವೋರ್ಸ್‌ ನೋಟಿಸ್‌ ನೋಡಿ ಧರ್ಮರಾಜ್‌ಗೆ ಮತ್ತೆ ಹೃದಯಾಘಾತ:ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾಗೆ ಮಗ ತಾಂಡವ್‌ ಕಳಿಸಿದ ಡಿವೋರ್ಸ್‌ ನೋಟಿಸ್‌ ನೋಡಿ ಧರ್ಮರಾಜ್‌ಗೆ ಮತ್ತೆ ಹೃದಯಾಘಾತ:ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Feb 03, 2024 08:29 AM IST

google News

ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 2ರ ಸಂಚಿಕೆ

  • Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 2ರ ಸಂಚಿಕೆ ಹೀಗಿದೆ. ಸೊಸೆ ಭಾಗ್ಯಾಗೆ ಮಗ ತಾಂಡವ್‌ ಕಳಿಸಿದ ಡಿವೋರ್ಸ್‌ ನೋಟಿಸ್‌ ನೋಡಿ ಧರ್ಮರಾಜ್‌ಗೆ ಹೃದಯಾಘಾತವಾಗುತ್ತದೆ. 

ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 2ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 2ರ ಸಂಚಿಕೆ (PC: Colors Kannada)

Bhagyalakshmi Kannada Serial: ತೀರ್ಥಯಾತ್ರೆಗೆ ಹೋಗಿದ್ದ ಭಾಗ್ಯಾ ಮಾವ ಧರ್ಮರಾಜ್‌ ಅಲ್ಲಿಂದ ವಾಪಸಾಗುತ್ತಾರೆ. ತಾಂಡವ್‌ ವರ್ತನೆ ತಿಳಿದು ಅವನನ್ನು ನನ್ನ ಜೊತೆ ಮನೆಗೆ ವಾಪಸ್‌ ಕರೆ ತಂದೇ ತರುತ್ತೇನೆ ಎಂದು ನಿರ್ಧರಿಸುತ್ತಾರೆ. ಮರುದಿನ ಧರ್ಮರಾಜ್‌ ಭಾಗ್ಯಾ ಜೊತೆ ತಾಂಡವ್‌ ಆಫೀಸಿಗೆ ಹೊರಡಲು ಸಿದ್ಧರಾಗುತ್ತಾರೆ.

ಮಗನ ವರ್ತನೆಯಿಂದ ಧರ್ಮರಾಜ್‌ಗೆ ಬೇಸರ

ಧರ್ಮರಾಜ್‌ ಭಾಗ್ಯಾಗಾಗಿ ಕಾಯುವಾಗ ಪೋಸ್ಟ್‌ ಮ್ಯಾನ್‌ ಕೊರಿಯರ್‌ ಕೊಟ್ಟು ಹೋಗುತ್ತಾನೆ. ಲಾಯರ್‌ನಿಂದ ಬಂದ ನೋಟಿಸ್‌ ಇದು, ಏನಿರಬಹುದು ನೋಡೋಣ ಎಂದು ಧರ್ಮರಾಜ್‌ ಸಮೀಪದಲ್ಲೇ ಇದ್ದ ಪಾರ್ಕಿಗೆ ಹೋಗುತ್ತಾರೆ. ಭಾಗ್ಯಾ, ಕೆಳಗಡೆ ಇಳಿದು ಬಂದು ಮಾವನಿಗಾಗಿ ಹುಡುಕಿದರೆ ಅಲ್ಲಿ ಧರ್ಮರಾಜ್‌ ಇರುವುದಿಲ್ಲ. ಅಷ್ಟರಲ್ಲಿ ನೆರೆ ಮನೆಯ ಹುಡುಗಿಯಿಂದ ಧರ್ಮರಾಜ್‌ ಪಾರ್ಕಿನಲ್ಲಿ ಇರುವುದು ಭಾಗ್ಯಾಗೆ ಗೊತ್ತಾಗುತ್ತದೆ. ಇತ್ತ ಪಾರ್ಕಿನಲ್ಲಿ ಧರ್ಮರಾಜ್‌, ಮಗ ತಾಂಡವ್‌ ಸೊಸೆಗೆ ಡಿವೋರ್ಸ್‌ ನೋಟಿಸ್‌ ಕಳಿಸಿರುವುದನ್ನು ನೋಡಿ ಗಾಬರಿ ಆಗುತ್ತಾರೆ. ಕೋಪದಿಂದ ನೋಟಿಸ್‌ ಹರಿದು ಎಸೆಯುತ್ತಾರೆ. ನನ್ನ ಸೊಸೆಗೆ ಡಿವೋರ್ಸ್‌ ಕೊಡಲು ಎಷ್ಟು ಧೈರ್ಯ ಅವನಿಗೆ, ತಾಂಡವ್‌ನನ್ನು ಕರೆದು ತರುತ್ತೇನೆ ಎಂದು ಹೊರಡುವಾಗ ಧರ್ಮರಾಜ್‌ಗೆ ಮತ್ತೆ ಹೃದಯಾಘಾತವಾಗಿ ಕುಸಿದು ಬೀಳುತ್ತಾರೆ.

ಭಾಗ್ಯಾಗೆ ಡಿವೋರ್ಸ್‌ ನೋಟಿಸ್‌ ತಲುಪಿದೆ ಎಂದು ತಿಳಿದ ತಾಂಡವ್‌ ಖುಷಿ ಆಗುತ್ತಾನೆ. ಖುಷಿಯನ್ನು ಶ್ರೇಷ್ಠಾ ಜೊತೆ ಹಂಚಿಕೊಳ್ಳುತ್ತಾನೆ. ಹೇಗಿದ್ದರೂ ಡಿವೋರ್ಸ್‌ ಕೊಡುತ್ತಿದ್ದೀಯ. ನಮ್ಮಿಬ್ಬರ ವಿಚಾರವನ್ನು ಮನೆಗೆ ಹೇಳಿಬಿಡು ಎಂದು ಶ್ರೇಷ್ಠಾ ಹೇಳಿದಾಗ ತಾಂಡವ್‌ ಕೋಪಗೊಳ್ಳುತ್ತಾನೆ. ನಾನು ಈ ಸಮಯದಲ್ಲಿ ನಿನ್ನ ಬಗ್ಗೆ ಹೇಳಿದರೆ ನಿನಗಾಗಿ ನಾನು ಭಾಗ್ಯಾಗೆ ನೋಟಿಸ್‌ ನೀಡಿದ್ದೇನೆ ಎಂದುಕೊಳ್ಳುತ್ತಾರೆ, ನನಗೆ ಅದು ಇಷ್ಟವಿಲ್ಲ. ಈಗ ನೋಟಿಸ್‌ ನೀಡಿದ್ದೇನೆ. ಡಿವೋರ್ಸ್‌ ಆಗಲು 1 ವರ್ಷವಾದರೂ ಬೇಕು. ವಿಚ್ಛೇದನ ದೊರೆತು 2 ವರ್ಷಗಳ ನಂತರ ಮತ್ತೊಂದು ಮದುವೆ ಆದರೆ ಯಾರೂ ಕೇಳುವುದಿಲ್ಲ ಎಂದಾಗ ಶ್ರೇಷ್ಠಾಗೆ ಬೇಸರವಾಗುತ್ತದೆ.

‍ಶ್ರೇಷ್ಠಾಗೆ ಸುಂದರಿ ಬುದ್ಧಿವಾದ

ಇದನ್ನು ಕೇಳಿಸಿಕೊಳ್ಳುವ ಸುಂದರಿ, ಅವನು ನಿನ್ನನ್ನು ಮದುವೆ ಆಗುವುದಿಲ್ಲ, ನಾನು ಕಳ್ಳಿ ಇರಬಹುದು ಆದರೆ ಅದಕ್ಕೂ ಮೊದಲು ಹೆಣ್ಣು, ನನಗೆ ಗಂಡಸರ ಬುದ್ಧಿ ಏನೆಂದು ಗೊತ್ತು. ಅವನಿಗೆ ನಿನ್ನನ್ನು ಮದುವೆ ಆಗಿ ಇವಳೇ ನನ್ನ ಹೆಂಡತಿ ಎಂದು ಧೈರ್ಯವಾಗಿ ಹೇಳಿಕೊಳ್ಳಲು ಇಷ್ಟವಿಲ್ಲ. ತಾಂಡವ್‌ ನಿನ್ನನ್ನು ಮದುವೆ ಆಗುತ್ತಾನೆ ಎಂದು ಕನಸು ಕಾಣುತ್ತಾ ಕೂರುವುದನ್ನು ಬಿಟ್ಟು ನಿನ್ನ ಕೆಲಸದ ಕಡೆ ಗಮನ ಕೊಡು ಎಂದು ಬುದ್ಧಿ ಹೇಳುತ್ತಾಳೆ. ತಾಂಡವ್‌ ಹಾಗೂ ಸುಂದರಿ ಮಾತು ಶ್ರೇಷ್ಠಾಗೆ ಇನ್ನಷ್ಟು ಗಾಬರಿ ಉಂಟು ಮಾಡುತ್ತದೆ. 3 ವರ್ಷಗಳವರೆಗೂ ಕಾಯಲು ಆಗುವುದಿಲ್ಲ. ಆದಷ್ಟು ಬೇಗ ಮದುವೆ ಆಗಬೇಕು. ಭಾಗ್ಯಾ, ಕುಸುಮಾ ಇಬ್ಬರಿಗೂ ಬುದ್ಧಿ ಕಲಿಸಬೇಕು ಎಂದುಕೊಳ್ಳುತ್ತಾಳೆ.

ಧರ್ಮರಾಜ್‌ ಹೃದಯಾಘಾತದಿಂದ ಚೇತರಿಸಿಕೊಳ್ಳುವರಾ? ಶ್ರೇಷ್ಠಾ, ಹೆತ್ತವರಿಗೆ ಹೇಳಿ ಬೇಗ ಮದುವೆ ದಿನಾಂಕ ಫಿಕ್ಸ್‌ ಮಾಡುವಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ