logo
ಕನ್ನಡ ಸುದ್ದಿ  /  ಮನರಂಜನೆ  /  ಇನ್ಮುಂದೆ ಆ ಶ್ರೇಷ್ಠಾ ಸಹವಾಸ ಬೇಡ ಅವಳಿಂದ ದೂರ ಇರಿ, ತಾಂಡವ್‌ಗೆ ಭಾಗ್ಯಾ ಖಡಕ್‌ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ

ಇನ್ಮುಂದೆ ಆ ಶ್ರೇಷ್ಠಾ ಸಹವಾಸ ಬೇಡ ಅವಳಿಂದ ದೂರ ಇರಿ, ತಾಂಡವ್‌ಗೆ ಭಾಗ್ಯಾ ಖಡಕ್‌ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Jul 17, 2024 08:42 AM IST

google News

ಇನ್ಮುಂದೆ ಆ ಶ್ರೇಷ್ಠಾ ಸಹವಾಸ ಬೇಡ ಅವಳಿಂದ ದೂರ ಇರಿ, ತಾಂಡವ್‌ಗೆ ಭಾಗ್ಯಾ ಖಡಕ್‌ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 16ರ ಎಪಿಸೋಡ್‌. ಶ್ರೇಷ್ಠಾ ಮದುವೆಗೆ ತಾಂಡವ್‌ 2 ಲಕ್ಷ ರೂ. ಕೊಟ್ಟಿರುವುದನ್ನು ತಿಳಿದ ಭಾಗ್ಯಾ ಇನ್ಮುಂದೆ ಶ್ರೇಷ್ಠಾ ಸಹವಾಸ ಮಾಡದಂತೆ ಗಂಡನಿಗೆ ಎಚ್ಚರಿಕೆ ನೀಡುತ್ತಾಳೆ. 

ಇನ್ಮುಂದೆ ಆ ಶ್ರೇಷ್ಠಾ ಸಹವಾಸ ಬೇಡ ಅವಳಿಂದ ದೂರ ಇರಿ, ತಾಂಡವ್‌ಗೆ ಭಾಗ್ಯಾ ಖಡಕ್‌ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ
ಇನ್ಮುಂದೆ ಆ ಶ್ರೇಷ್ಠಾ ಸಹವಾಸ ಬೇಡ ಅವಳಿಂದ ದೂರ ಇರಿ, ತಾಂಡವ್‌ಗೆ ಭಾಗ್ಯಾ ಖಡಕ್‌ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಶ್ರೇಷ್ಠಾ ಮದುವೆಗೆ ತಾಂಡವ್‌ ಹಾಲ್‌ ಬುಕ್‌ ಮಾಡಲು 2 ಲಕ್ಷ ರೂ. ಕೊಟ್ಟಿರುವ ವಿಚಾರ ಭಾಗ್ಯಾಗೆ ಗೊತ್ತಾಗಿದೆ. ಹಿತಾಳಿಂದ ರಶೀದಿ ಪ್ರಿಂಟ್‌ಔಟ್‌ ಪಡೆದ ಭಾಗ್ಯಾ, ತಾಂಡವ್‌ಗೆ ಕರೆ ಮಾಡಿ ಮನೆಗೆ ಬೇಗ ಬರಲು ಹೇಳುತ್ತಾಳೆ. ತಾಂಡವ್‌ ಕೋಪದಿಂದಲೇ ಮನೆಗೆ ಹೋಗುತ್ತಾನೆ. ಅತ್ತೆ ಮಾವನ ಎದುರು ಭಾಗ್ಯಾ, ತಾಂಡವ್‌ನನ್ನು ಪ್ರಶ್ನಿಸುತ್ತಾಳೆ.

ಭಾಗ್ಯಾ ಪ್ರಶ್ನೆಗಳಿಗೆ ಹೆದರಿ ನಿಂತ ತಾಂಡವ್‌

ನಾನು ಯಾರಿಗೂ ಹಣ ಕೊಟ್ಟಿಲ್ಲ, ಯಾರಿಗೂ ಸಹಾಯ ಮಾಡಿಲ್ಲ ಎಂದು ತಾಂಡವ್‌ ವಾದ ಮಾಡುತ್ತಾನೆ. ಆದರೆ ಭಾಗ್ಯಾ ರೆಸಿಪ್ಟ್‌ ತೋರಿಸಿದ ನಂತರ ತಾಂಡವ್‌ ಶಾಕ್‌ ಆಗುತ್ತಾನೆ. ಭಾಗ್ಯಾಗೆ ಯಾವ ವಿಚಾರ ಗೊತ್ತಾಗಬಾರದು ಎಂದುಕೊಂಡಿದ್ದೇನೋ ಅದು ಗೊತ್ತಾಗುತ್ತಿದೆ ಏನು ಮಾಡೋದು ಎಂದು ತಾಂಡವ್‌ ಭಯ ಪಡುತ್ತಾನೆ. ಆ ಭಯಕ್ಕೆ ಆತನ ಬಾಯಿಂದ ಮಾತುಗಳೇ ಹೊರಡುವುದಿಲ್ಲ. ಯಾರಿಗೂ ಸಹಾಯ ಮಾಡಿಲ್ಲ ಎಂದು ಸುಳ್ಳು ಏಕೆ ಹೇಳುತ್ತಿದ್ದೀರಿ? ಹಾಗಾದರೆ ಹೋಟೆಲ್‌ನವರು ಬೇಕಂತಲೇ ಈ ರೆಸಿಪ್ಟ್‌ ಪ್ರಿಂಟ್‌ ಮಾಡಿಸಿದ್ದಾರಾ? ಶ್ರೇಷ್ಠಾಗೆ 2 ಲಕ್ಷ ರೂ. ಹಣ ಏಕೆ ಕೊಟ್ಟಿದ್ದೀರಿ ಎಂದು ಭಾಗ್ಯಾ ಪ್ರಶ್ನಿಸುತ್ತಾಳೆ. ಕುಸುಮಾ ಕೂಡಾ ಸೊಸೆ ಮಾತಿಗೆ ದನಿಗೂಡಿಸುತ್ತಾಳೆ.

ಸಾವರಿಸಿಕೊಂಡು ಉತ್ತರಿಸುವ ತಾಂಡವ್‌, ಶ್ರೇಷ್ಠಾ ನನ್ನ ಕ್ಲೋಸ್‌ ಫ್ರೆಂಡ್‌, ನಾನು ಸಂಪಾದನೆ ಮಾಡಿದ ಹಣವನ್ನು ಅವಳಿಗೆ ಸಹಾಯ ಮಾಡುತ್ತಿದ್ದೇನೆ. ಮದುವೆಗೆ ಹಣದ ಸಹಾಯ ಮಾಡು ಎಂದು ಅವಳು ಮನವಿ ಮಾಡಿಕೊಂಡಳು ಅದಕ್ಕೆ ಹೆಲ್ಪ್‌ ಮಾಡಿದೆ. ಇದೆಲ್ಲಾ ಗೊತ್ತಾದರೆ ನೀವೆಲ್ಲಾ ಈ ರೀತಿ ಸೀನ್‌ ಕ್ರಿಯೇಟ್‌ ಮಾಡುತ್ತೀರಿ ಎಂದೇ ನಾನು ನಿಮಗೆ ಹೇಳಲಿಲ್ಲ ಎನ್ನುತ್ತಾನೆ. ಬಡವರಿಗೆ ಸಹಾಯ ಮಾಡಿದರೆ ಅದು ನನಗೆ ಸಂತೋಷ, ನನ್ನ ತಂಗಿ ಮದುವೆಯಲ್ಲಿ ಕಳ್ಳನ ಮಾಡಿ ಆ ಹಣವನ್ನು ನನಗೇ ಕೊಟ್ಟ ಆ ಮನೆಹಾಳಿಗೆ ನೀವು ಸಹಾಯ ಮಾಡುವುದು ತಪ್ಪು ಎಂದು ಭಾಗ್ಯಾ ಕೋಪಗೊಳ್ಳುತ್ತಾಳೆ. ಇಲ್ಲಿ ಹೆಂಡತಿ ಬಳಿ ಇಎಂಐ ಕಟ್ಟಿಸಿಕೊಂಡು ಅಲ್ಲಿ ಆ ಕಳ್ಳಿಗೆ ಸಹಾಯ ಮಾಡುತ್ತಿದ್ದೀಯ ಎಂದು ಕುಸುಮಾ ಕೂಡಾ ಪ್ರಶ್ನಿಸುತ್ತಾಳೆ.

ಶ್ರೇಷ್ಠಾಳಿಂದ ದೂರ ಇರುವಂತೆ ತಾಂಡವ್‌ಗೆ ಎಚ್ಚರಿಸಿದ ಭಾಗ್ಯಾ

ಇನ್ಮುಂದೆ ಆ ಶ್ರೇಷ್ಠಾಳಿಂದ ದೂರ ಇದ್ದರೆ ನಿಮಗೂ ಒಳ್ಳೆಯದು, ಆಕೆಗೂ ಒಳ್ಳೆಯದು. ಮನೆಯಲ್ಲಿ ನಾವು ಬೇರೆ ಬೇರೆ ಇರಬಹುದು. ಆದರೆ ಹೊರಗಿನವರ ವಿಚಾರ ಬಂದಾಗ ನಾವೆಲ್ಲಾ ಒಟ್ಟಾಗಿರಬೇಕು. ಇನ್ನು ಮುಂದೆ ನಿಮಗೆ ಆ ಶ್ರೇಷ್ಠಾ ಸಹವಾಸ ಬೇಡ ಎಂದು ಭಾಗ್ಯಾ ತಾಂಡವ್‌ಗೆ ಖಡಕ್‌ ಎಚ್ಚರಿಕೆ ಕೊಡುತ್ತಾಳೆ. ಕುಸುಮಾ ಕೂಡಾ ಸೊಸೆಯನ್ನು ವಹಿಸಿಕೊಂಡು ಮಾತನಾಡುತ್ತಾಳೆ. ಮರುದಿನ ಭಾಗ್ಯಾ ಹೋಟೆಲ್‌ಗೆ ಕೆಲಸಕ್ಕೆ ಹೋಗುವಾಗಲೂ ತಾಂಡವ್‌ಗೆ ಎಚ್ಚರಿಸುತ್ತಾಳೆ.

ನಿನ್ನೆ ಹೇಳಿದ್ದು ನಿಮಗೆ ನೆನಪಿದೆ ತಾನೇ, ಆದಷ್ಟು ಆ ಶ್ರೇಷ್ಠಾಳಿಂದ ದೂರ ಇರಿ ಎನ್ನುತ್ತಾಳೆ. ಭಾಗ್ಯಾ ಮಾತುಗಳಿಗೆ ಕೋಪಗೊಳ್ಳುವ ತಾಂಡವ್‌, ಇವಳಿಗೆ ಇಷ್ಟು ಧೈರ್ಯ ಎಲ್ಲಿಂದ ಬಂತು? ಇವಳನ್ನು ತಡೆಯಲೇಬೇಕು ಎಂದುಕೊಳ್ಳುತ್ತಾನೆ. ಅಷ್ಟರಲ್ಲಿ ಪೂಜಾ ತಾಂಡವ್‌ ರೂಮ್‌ಗೆ ಬಂದು ತಾಂಡವ್‌ಗೆ ರೇಗಿಸುತ್ತಾಳೆ. ಶ್ರೇಷ್ಠಾ ಹಣ ಕದ್ದಿದ್ದಕ್ಕೆ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ ನನ್ನ ಅಕ್ಕ, ಇನ್ನು ಅವಳು ಮದುವೆ ಆಗುತ್ತಿರುವ ಹುಡುಗ ನೀವೇ ಎಂದು ತಿಳಿದರೆ ಏನು ಮಾಡಬಹುದು ಯೋಚಿಸಿ ಎನ್ನುತ್ತಾಳೆ. ಭಾಗ್ಯಾ, ಶ್ರೇಷ್ಠಾಗೆ ಹೊಡೆದಿದ್ದನ್ನೇ ನೆನಪಿಸಿಕೊಳ್ಳುವ ತಾಂಡವ್‌ ಗಾಬರಿಯಾಗುತ್ತಾನೆ.

ಭಾಗ್ಯಾಗೆ ಹೆದರಿ ತಾಂಡವ್‌ ನಿಜಕ್ಕೂ ಶ್ರೇಷ್ಠಾ ಸಹವಾಸ ಬಿಡುತ್ತಾನಾ? ನಿಜ ಏನೆಂದು ಭಾಗ್ಯಾಗೆ ತಿಳಿಯುವುದಾ? ಕಾದು ನೋಡಬೇಕು.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ