logo
ಕನ್ನಡ ಸುದ್ದಿ  /  ಮನರಂಜನೆ  /  ಡ್ರಾಮಾ ಜೂನಿಯರ್ಸ್‌ ವೇದಿಕೆಗೆ ಪ್ರಕಾಶ್‌ ರಾಜ್‌ ಆಗಮನ; ‘ಈ ಶೋಗೆ ಇವ್ರು ಬೇಕಿತ್ತಾ?’ ಜಾಲತಾಣದಲ್ಲಿ ಹೀಗೊಂದು ಚರ್ಚೆ

ಡ್ರಾಮಾ ಜೂನಿಯರ್ಸ್‌ ವೇದಿಕೆಗೆ ಪ್ರಕಾಶ್‌ ರಾಜ್‌ ಆಗಮನ; ‘ಈ ಶೋಗೆ ಇವ್ರು ಬೇಕಿತ್ತಾ?’ ಜಾಲತಾಣದಲ್ಲಿ ಹೀಗೊಂದು ಚರ್ಚೆ

Feb 29, 2024 06:50 AM IST

google News

ಡ್ರಾಮಾ ಜೂನಿಯರ್ಸ್‌ ವೇದಿಕೆಗೆ ಪ್ರಕಾಶ್‌ ರಾಜ್‌ ಆಗಮನ; ‘ಈ ಶೋಗೆ ಇವ್ರು ಬೇಕಿತ್ತಾ?’ ಜಾಲತಾಣದಲ್ಲಿ ಹೀಗೊಂದು ಚರ್ಚೆ

    • ರಾಷ್ಟ್ರ ಪ್ರಶಸ್ತಿ ವಿಜೇತ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಇದೀಗ ಕಿರುತೆರೆಯ ವೇದಿಕೆಗೆ ಆಗಮಿಸಿದ್ದಾರೆ. ಡ್ರಾಮಾ ಜೂನಿಯರ್ಸ್‌ ಸೀಸನ್‌ 5ರಲ್ಲಿ ಪುಟಾಣಿಗಳ ಕಲೆಯನ್ನು ಕಣ್ತುಂಬಿಕೊಂಡಿದ್ದಾರೆ. ಮತ್ತೊಂದು ಕಡೆ, ಸೋಷಿಯಲ್‌ ಮೀಡಿಯಾದಲ್ಲಿ ಇವರ ಆಗಮನಕ್ಕೆ ಕಟು ಟೀಕೆ ವ್ಯಕ್ತವಾಗಿದೆ. ಇವರನ್ನೇಕೆ ಕರೆಸಿದ್ರಿ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಡ್ರಾಮಾ ಜೂನಿಯರ್ಸ್‌ ವೇದಿಕೆಗೆ ಪ್ರಕಾಶ್‌ ರಾಜ್‌ ಆಗಮನ; ‘ಈ ಶೋಗೆ ಇವ್ರು ಬೇಕಿತ್ತಾ?’ ಜಾಲತಾಣದಲ್ಲಿ ಹೀಗೊಂದು ಚರ್ಚೆ
ಡ್ರಾಮಾ ಜೂನಿಯರ್ಸ್‌ ವೇದಿಕೆಗೆ ಪ್ರಕಾಶ್‌ ರಾಜ್‌ ಆಗಮನ; ‘ಈ ಶೋಗೆ ಇವ್ರು ಬೇಕಿತ್ತಾ?’ ಜಾಲತಾಣದಲ್ಲಿ ಹೀಗೊಂದು ಚರ್ಚೆ

Drama Juniors Season 5: ಭಾರತ ಕಂಡ ಶ್ರೇಷ್ಠ ನಟರಲ್ಲಿ ಕನ್ನಡದ ಪ್ರಕಾಶ್‌ ರಾಜ್‌ (Prakash Raj) ಸಹ ಒಬ್ಬರು. ಒಂದೇ ಚಿತ್ರರಂಗಕ್ಕೆ ಸೀಮಿತವಾಗದ ಈ ನಟ, ಎಲ್ಲ ಭಾಷಿಕರಿಗೂ ಇಷ್ಟ. ಅದಕ್ಕೆ ಕಾರಣ; ಅವರ ನಟನೆ. ವಿವಾದ, ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿರುವ ಪ್ರಕಾಶ್‌ ರಾಜ್‌, ಇತ್ತೀಚೆಗಷ್ಟೇ ಕನ್ನಡದ ಫೋಟೋ ಹೆಸರಿನ ಸಿನಿಮಾ ನೋಡಿ, ಅದನ್ನು ಮನದುಂಬಿ ಪ್ರಸೆಂಟ್‌ ಮಾಡುತ್ತಿದ್ದಾರೆ. ಇದೀಗ ಗ್ಯಾಪ್‌ನಲ್ಲಿಯೇ ಕಿರುತೆರೆ ವೇದಿಕೆ ಡ್ರಾಮಾ ಜೂನಿಯರ್ಸ್‌ ಶೋಗೆ (Drama Juniors Season 5) ಆಗಮಿಸಿ, ಹಳೇ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಭಾವುಕರಾಗಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ಸ್‌ ಸೀಸನ್‌ 5ರಲ್ಲಿ ತೀರ್ಪುಗಾರರಾದ ಜೂಲಿ ಲಕ್ಷ್ಮೀ, ರವಿಚಂದ್ರನ್‌ ಮತ್ತು ರಚಿತಾ ರಾಮ್‌ ಜತೆಗೆ ವೇದಿಕೆ ಹಂಚಿಕೊಂಡಿದ್ದಾರೆ ಪ್ರಕಾಶ್‌ ರಾಜ್.‌ ಪ್ರಕಾಶ್‌ ರಾಜ್‌ ಎಂಟ್ರಿಯಾಗ್ತಿದ್ದಂತೆ, ಟ್ಯಾಲೆಂಟ್‌ನ ಬಂಡಲ್‌ ಇದು ಎಂದು ರವಿಚಂದ್ರನ್‌ ಹೇಳಿದರೆ, ನಾನು ನಿಮ್ಮ ದೊಡ್ಡ ಅಭಿಮಾನಿ ಅಂದ್ರು ರಚಿತಾ ರಾಮ್.‌ ಬಳಿಕ ಪ್ರಕಾಶ್‌ ಸರ್‌ ಎಂದು ಲಕ್ಷ್ಮೀ ಹೇಳುತ್ತಿದ್ದಂತೆ, ಅಯ್ಯಯ್ಯೋ ಪ್ರಕಾಶ ಅನ್ನಬಾರದೇ ಎಂದು ಲಕ್ಷ್ಮೀ ಅವರಿಗೆ ಕಿಂಡಲ್‌ ಮಾಡಿದ್ದಾರೆ ಪ್ರಕಾಶ್‌ ರಾಜ್.‌ ಕಷ್ಟದ ದಿನಗಳಲ್ಲಿ ನಿರಂತರ ಪ್ರೀತಿಯನ್ನು ಕೊಟ್ಟವರು ರವಿ ಸರ್‌ ಎಂದೂ ಸ್ಮರಿಸಿಕೊಂಡಿದ್ದಾರೆ.

ನಾಗಮಂಡಲ ರೀ ಕ್ರಿಯೇಟ್‌: ಪ್ರಕಾಶ್‌ ರಾಜ್‌ ಅತಿಥಿಯಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಅವರ ಸಿನಿಮಾದ ತುಣುಕುಗಳನ್ನೇ ವೇದಿಕೆ ಮೇಲೆ ಸ್ಕಿಟ್‌ ಮೂಲಕ ಪುಟಾಣಿಗಳು ಪ್ರದರ್ಶಿಸಿದರು. ಆ ಪೈಕಿ ಕ್ಲಾಸಿಕ್‌ ಸಿನಿಮಾ ನಾಗಮಂಡಲದ ಸ್ಕಿಟ್‌ ಪ್ರಕಾಶ್‌ ರಾಜ್‌ ಅವರ ಗಮನ ಸೆಳೆಯಿತು. ನಾನು ನಾಗಮಂಡಲ ಮಾಡಿದೆ, ಆದರೆ ಆ ಸಿನಿಮಾ ಶಂಕರ್‌ನಾಗ್‌ಗೆ ಅರ್ಪಣೆ ಎಂದರು. ಬಳಿಕ ಸಾಧನಕೇರಿಯ ಸಂತ, ಅಂಬಿಕಾತನಯದತ್ತ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆ ಜೀವನ ಡ್ರಾಮಾ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ಪ್ರಕಾಶ್ ರಾಜ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ 'ಕಾಂಚೀವರಂ' ಚಿತ್ರವನ್ನು ಸ್ವದೇಶ್, ಸಾನಿಧ್ಯ, ವಿಷ್ಣು ಮತ್ತವರ ತಂಡ ಮರುಸೃಷ್ಟಿಸಿತು. ಇದನ್ನು ನೋಡಿ ಭಾವುಕರಾದರು ಪ್ರಕಾಶ್‌ ರಾಜ್. ‌

ಪ್ರಕಾಶ್‌ ರಾಜ್‌ ಆಗಮನದಿಂದ ಟೀಕೆ

ತಮ್ಮ ಹೇಳಿಕೆಗಳು, ನಿಲುವು, ಸ್ಪಷ್ಟವಾದ ಮಾತು ಮತ್ತು ಬರಹಗಳಿಂದಲೇ ಪ್ರಕಾಶ್‌ ರಾಜ್‌ ಸದಾ ಸದ್ದಿಯಲ್ಲಿರುತ್ತಾರೆ. ಮೋದಿ ನೇತೃತ್ವದ ಕೇಂದ್ರದ ನಡೆಯನ್ನು ಸದಾ ಪ್ರಶ್ನಿಸುತ್ತ, ಬಿಜೆಪಿ ಬಗ್ಗೆ ಪ್ರಸ್ತುತ ವಿಚಾರಗಳನ್ನಿಟ್ಟುಕೊಂಡು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜತೆಗೆ ಅಷ್ಟೇ ಪ್ರಮಾಣದ ಟೀಕೆಗೂ ಅವರು ಗುರಿಯಾಗುತ್ತಾರೆ. ಇದೀಗ ಡ್ರಾಮಾ ಜೂನಿಯರ್ಸ್‌ ವೇದಿಕೆಗೂ ಪ್ರಕಾಶ್‌ ರಾಜ್‌ ಅವರ ಆಗಮನವಾಗಿದೆ. ಜೀ ಕನ್ನಡ ಈವರೆಗೂ ಮೂರು ಪ್ರೋಮೋಗಳನ್ನು ಬಿಡುಗಡೆ ಮಾಡಿದೆ. ಕಾಮೆಂಟ್‌ ಬಾಕ್ಸ್‌ನಲ್ಲಿಯೂ ಪ್ರಕಾಶ್‌ ರಾಜ್‌ ಬಗ್ಗೆ ಕಟು ಟೀಕೆ ವ್ಯಕ್ತವಾಗಿದೆ.

"ಬೇರೆ ಯಾರೂ ಸಿಗಲಿಲ್ವಾ ನಿಮಗೆ"

"ಕಲೆಗೆ ಬೆಲೆ ಇದೆ, ಆದರೆ ಇವನಿಗಿಲ್ಲ", "ನಿಮಗೆ ಕರಿಸೋಕೆ ಬೇರೆ ಯಾರು ಸಿಗಲಿಲ್ವಾ", "ಬೇರೆ ಯಾರು ಸಿಕ್ಕಿಲ್ವಾ ಹೋಗಿ ಹೋಗಿ ಇವರನ್ನ ಕರಿಸಿ ಒಂದು ಸ್ಟೇಜ್ ಗೆ ಅವಮಾನ ಮಾಡಿದ ಹಾಗೆ ಆಯಿತು", "ಪ್ರಕಾಶ್ ರೈ ಯವರೆ ನೀವು ಒಳ್ಳೆಯ ಕಾಲವಿದ ಎಂಬುದರಲ್ಲಿ ಬೇರೆ ಮಾತಿಲ್ಲ.... ಆದರೆ ಯಾಕೆ ನಿಮಗೆ ಈ ಹಾಳು ರಾಜಕೀಯ ಯಾಕೆ ಎಂದು ಗೊತ್ತಾಗಲಿಲ್ಲ", "ಸಮಾನತೆ ಬಗ್ಗೆ ದ್ವನಿ ಎತ್ತುವ ಮನುಷ್ಯ" - ಹೀಗೆ ಬಗೆ ಬಗೆ ರೀತಿಯಲ್ಲಿ ನೆಟ್ಟಿಗರು ಕಾಮೆಂಟ್‌ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಹುತೇಕ ಈ ಶೋಗೆ ಪ್ರಕಾಶ್‌ ರೈ ಅವರನ್ನೇಕೆ ಕರೆಸಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ಈ ಶೋ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com/entertainment

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ