logo
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಕ್ರೇನ್‌ನಲ್ಲಿ ಇಳಿದು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಮುಸುಕುಧಾರಿಗಳು; ಆತಂಕದಲ್ಲಿ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ 11: ಕ್ರೇನ್‌ನಲ್ಲಿ ಇಳಿದು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಮುಸುಕುಧಾರಿಗಳು; ಆತಂಕದಲ್ಲಿ ಸ್ಪರ್ಧಿಗಳು

Rakshitha Sowmya HT Kannada

Oct 11, 2024 02:58 PM IST

google News

ಬಿಗ್‌ಬಾಸ್‌ ಕನ್ನಡ 11 ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ವಾಹಿನಿ 12ನೇ ದಿನದ ಪ್ರೋಮೋ ಹಂಚಿಕೊಂಡಿದ್ದು, ಕ್ರೇನ್‌ನಲ್ಲಿ ಕೆಲವು ಮುಸುಕುಧಾರಿಗಳು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾರೆ.

  • ಕಲರ್ಸ್‌ ಕನ್ನಡ ವಾಹಿನಿ ಇಂದು ಹಂಚಿಕೊಂಡಿರುವ ಪ್ರೋಮೋದಲ್ಲಿ ಬಿಗ್‌ಬಾಸ್‌ ಮನೆಯೊಳಗೆ ಕ್ರೇನ್‌ನಲ್ಲಿ ಇಳಿದುಬರುವ ಮುಸುಕುಧಾರಿಗಳು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಮಧ್ಯದಲ್ಲಿರುವ ಗ್ರಿಲ್‌ ತೆಗೆಯುತ್ತಾರೆ. ಬಹುಶ: ಇಂದಿಗೆ ಸ್ವರ್ಗ-ನರಕದ ಕಾನ್ಸೆಪ್ಟ್‌ ಮುಗಿಯಬಹುದು ಎನ್ನಲಾಗುತ್ತಿದೆ. 

ಬಿಗ್‌ಬಾಸ್‌ ಕನ್ನಡ 11 ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ವಾಹಿನಿ 12ನೇ ದಿನದ ಪ್ರೋಮೋ ಹಂಚಿಕೊಂಡಿದ್ದು, ಕ್ರೇನ್‌ನಲ್ಲಿ ಕೆಲವು ಮುಸುಕುಧಾರಿಗಳು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾರೆ.
ಬಿಗ್‌ಬಾಸ್‌ ಕನ್ನಡ 11 ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ವಾಹಿನಿ 12ನೇ ದಿನದ ಪ್ರೋಮೋ ಹಂಚಿಕೊಂಡಿದ್ದು, ಕ್ರೇನ್‌ನಲ್ಲಿ ಕೆಲವು ಮುಸುಕುಧಾರಿಗಳು ನರಕದಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾರೆ. (PC: Colors Kannada)

ಬಿಗ್‌ಬಾಸ್‌ ಸೀಸನ್‌ 11 ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್‌ ಆಗಿ ಮನೆಯಿಂದ ಹೊರ ಹೋಗಿದ್ದಾರೆ. ಎರಡನೇ ವಾರ ಟಾಸ್ಕ್‌ ರೂಲ್ಸ್‌ ಬ್ರೇಕ್‌ ಮಾಡಿ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಈ ಬಾರಿ ಮನೆಯಿಂದ ಯಾರು ಹೋಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಶಾಕಿಂಗ್‌ ಪ್ರೋಮೋ ಹಂಚಿಕೊಂಡ ವಾಹಿನಿ

ಈ ಬಾರಿ ಜಿಯೋದಲ್ಲಿ 24x7 ಪ್ರಸಾರ ಇಲ್ಲದಿದ್ದರೂ ಹಿಂದಿನ ದಿನದ ಫುಲ್‌ ಎಪಿಸೋಡ್‌ ಜಿಯೋದಲ್ಲಿ ಲಭ್ಯವಿದೆ. ಜೊತೆಗೆ ವಾಹಿನಿಯು ಅಧಿಕೃತ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಅಯಾ ದಿನದ ಪ್ರೋಮೋವನ್ನು ಹಂಚಿಕೊಳ್ಳುತ್ತಾ ಬಂದಿದೆ. ಇಂದು ಬೆಳಗ್ಗೆ ವಾಹಿನಿ ಹಂಚಿಕೊಂಡಿರುವ ಪ್ರೋಮೋ ನೋಡಿ ವೀಕ್ಷಕರು ಕೂಡಾ ಶಾಕ್‌ ಆಗಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯು ಈ ಬಾರಿಯ ಬಿಗ್‌ಬಾಸ್‌ ಪ್ರೋಮೋ ಹೊರ ಬರುತ್ತಿದ್ದಂತೆ 11ನೇ ಸೀಸನ್‌ನಲ್ಲಿ ಏನೋ ವಿಶೇಷ ಇರೋದು ಪಕ್ಕಾ ಎಂದು ಎಲ್ಲರಿಗೂ ಅನ್ನಿಸಿತ್ತು. ಅದರಂತೆ ಸ್ವರ್ಗ ಹಾಗೂ ನರಕದ ಪ್ರೊಮೋ ನೋಡಿ, ಕೆಲವು ಸ್ಪರ್ಧಿಗಳು ಸ್ವರ್ಗದಲ್ಲಿ, ಕೆಲವರು ನರಕದಲ್ಲಿ ವಾಸಿಸಬಹುದು, ಅವರಿಗೆ ಕಷ್ಟದ ಟಾಸ್ಕ್‌ಗಳನ್ನು ನೀಡಬಹುದು ಎಂದೇ ನೋಡುಗರು ಮಾತನಾಡಿಕೊಂಡಿದ್ದರು.

ಬಿಗ್‌ಬಾಸ್‌ ಮನೆಯಲ್ಲಿ ಎಮರ್ಜೆನ್ಸಿ

ಬಿಗ್‌ಬಾಸ್‌ ಮೊದಲ ದಿನವೇ 10 ಸ್ಪರ್ಧಿಗಳನ್ನು ಸ್ವರ್ಗಕ್ಕೂ, 7 ಸ್ಪರ್ಧಿಗಳನ್ನು ನರಕಕ್ಕೂ ಕಳಿಸಲಾಯ್ತು. ನಡುವೆ ಟಾಸ್ಕ್‌ನಲ್ಲಿ ಸೋತವರು, ಕ್ಯಾಪ್ಟನ್‌ ನಿರ್ಧಾರದಿಂದ ಸ್ವರ್ಗದಲ್ಲಿರುವ ಇಬ್ಬರು ನರಕಕ್ಕೂ, ಅಲ್ಲಿರುವ ಇಬ್ಬರನ್ನೂ ಸ್ವರ್ಗಕ್ಕೆ ಅದಲು ಬದಲು ಮಾಡಲಾಗಿತ್ತು. ಆದರೆ ಇದೀಗ ನರಕವೇ ನಾಶವಾಗಿದೆ. ವಾಹಿನಿ ಇಂದು ಹಂಚಿಕೊಂಡಿರುವ ಪ್ರೋಮೋದಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಇದ್ದಕ್ಕಿದ್ದಂತೆ ಕೆಂಪು ಸೈರನ್‌ಗಳು ಸದ್ದು ಮಾಡಲು ಆರಂಭಿಸುತ್ತವೆ. ಅದನ್ನು ಕಂಡು ಕೆಲವು ಸ್ಪರ್ಧಿಗಳು ಗಾಬರಿಯಿಂದ ಅರಚುತ್ತಾರೆ. ಎಲ್ಲರೂ ಹೆದರಿಕೆಯಿಂದ ಹೊರ ಬಂತು ನೋಡುವಾಗ ಕ್ರೇನ್‌ ಒಂದು ಬಿಗ್‌ಬಾಸ್‌ ಅಂಗಳದಲ್ಲಿ ಇಳಿಯುತ್ತದೆ.

ನರಕದಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿ

ಸ್ಪರ್ಧಿಗಳು ನೋಡುತ್ತಿದ್ದಂತೆ ಕೆಲವು ಮುಸುಕುಧಾರಿಗಳು ಮನೆಯೊಳಗೆ ಇಳಿದು ಬಂದು ಸಾಲಾಗಿ ನಿಲ್ಲುತ್ತಾರೆ. ತಮ್ಮ ಬಳಿ ಇರುವ ಆಯುಧದಿಂದ ನರಕದಲ್ಲಿರುವ ವಸ್ತುವನ್ನು ಚೆಲ್ಲಾಪಿಲ್ಲಿ ಮಾಡುತ್ತಾರೆ. ನಮಗೆ ಏನೋ ಶಿಕ್ಷೆ ಕಾದಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಮುಸುಕುಧಾರಿಗಳು ಸ್ವರ್ಗ, ನರಕದ ನಡುವೆ ಇದ್ದ ಸರಳುಗಳನ್ನು ತೆಗೆಯುತ್ತಾರೆ. ನಂತರ ಕ್ರೇನ್‌ ಮೂಲಕ ಅದನ್ನು ಮನೆಯಿಂದ ಹೊರಕ್ಕೆ ಕಳಿಸಲಾಗುತ್ತದೆ. ಈ ಪ್ರೊಮೋ ನೋಡಿದವರು ಬಹುಶ: ಇಂದಿನಿಂದ ಸ್ವರ್ಗ ಹಾಗೂ ನರಕ ಕಾನ್ಸೆಪ್ಟ್‌ ಮುಗಿಯುತ್ತಿದೆ, ಅದನ್ನು ಈ ರೀತಿ ಎಂಡ್‌ ಮಾಡಲಾಗುತ್ತಿದೆ. ಸ್ಪರ್ಧಿಗಳಿಗೆ ಮೊದಲು ಶಾಕ್‌ ಕೊಟ್ಟು ನಂತರ ಬಿಗ್‌ಬಾಸ್‌ ಈ ವಿಚಾರ ತಿಳಿಸಬಹುದು ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ