logo
ಕನ್ನಡ ಸುದ್ದಿ  /  ಮನರಂಜನೆ  /  Sathya Serial End: ಸತ್ಯ ಸೀರಿಯಲ್‌ ಅಂತ್ಯವಾಗ್ತಿದ್ದಂತೆ ವೀಕ್ಷಕರಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ ಜೀ ಕನ್ನಡ

Sathya Serial End: ಸತ್ಯ ಸೀರಿಯಲ್‌ ಅಂತ್ಯವಾಗ್ತಿದ್ದಂತೆ ವೀಕ್ಷಕರಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ ಜೀ ಕನ್ನಡ

Aug 11, 2024 12:40 PM IST

google News

Sathya Serial End: ಸತ್ಯ ಸೀರಿಯಲ್‌ ಅಂತ್ಯವಾಗ್ತಿದ್ದಂತೆ ವೀಕ್ಷಕರಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ ಜೀ ಕನ್ನಡ

    • ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿ ಅಂತ್ಯಗೊಂಡಿದೆ. ಈ ಸೀರಿಯಲ್‌ ಮುಕ್ತಾಯದ ಬೆನ್ನಲ್ಲೇ ವಿಶೇಷ ಪತ್ರವೊಂದನ್ನು ವೀಕ್ಷಕರಿಗೆ ಬರೆದಿದೆ ಜೀ ಕನ್ನಡ. 
Sathya Serial End: ಸತ್ಯ ಸೀರಿಯಲ್‌ ಅಂತ್ಯವಾಗ್ತಿದ್ದಂತೆ ವೀಕ್ಷಕರಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ ಜೀ ಕನ್ನಡ
Sathya Serial End: ಸತ್ಯ ಸೀರಿಯಲ್‌ ಅಂತ್ಯವಾಗ್ತಿದ್ದಂತೆ ವೀಕ್ಷಕರಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ ಜೀ ಕನ್ನಡ (Image\ Zee5)

Sathya Serial End: ಸುದೀರ್ಘ ನಾಲ್ಕು ವರ್ಷಗಳ ಸನಿಹ ಪ್ರಸಾರವಾದ ಸತ್ಯ ಸೀರಿಯಲ್‌ ಇದೀಗ ಕೊನೆಗೊಂಡಿದೆ. ಶನಿವಾರ (ಆಗಸ್ಟ್‌ 10) ಕೊನೇ ಸಂಚಿಕೆ ಪ್ರಸಾರವಾಗಿ, ಸುಖಾಂತ್ಯದ ಮೂಲಕ ಧಾರಾವಾಹಿ ಮುಕ್ತಾಯವಾಗಿದೆ. ಗೌತಮಿ ಜಾಧವ್ ಮತ್ತು ಸಾಗರ್ ಬಿಳಿಗೌಡ ಮುಖ್ಯಭೂಮಿಕೆಯಲ್ಲಿದ್ದ ಸತ್ಯ ಸೀರಿಯಲ್‌ ಶುರುವಾದ ದಿನದಿಂದಲೂ ವೀಕ್ಷಕರನ್ನು ಸೆಳೆದಿತ್ತು. ಬಹುತಾರಾಗಣದ ಈ ಸೀರಿಯಲ್‌ಅನ್ನು ಸ್ವಪ್ನ ಕೃಷ್ಣ ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದರು. ಸೀರಿಯಲ್‌ ಹೀಗೆ ಕೊನೆಯಾಗುತ್ತಿದ್ದಂತೆ, ಜೀ ಕನ್ನಡ ವಾಹಿನಿ ಸುದೀರ್ಘ ಪತ್ರದ ಮೂಲಕ ಧನ್ಯವಾದ ತಿಳಿಸಿದೆ.

ಹೆಣ್ಣೆಂದರೆ ಹೀಗೇ ಇರಬೇಕು ಅನ್ನೋ ಕಟ್ಟುಪಾಡುಗಳನ್ನು ಮೀರಿ, ಹೆಣ್ಣು ಅಬಲೆಯಲ್ಲ, ಸಬಲೆ ಅಂತ ತೋರಿಸಿಕೊಟ್ಟಿದ್ದು ಸತ್ಯ ಧಾರಾವಾಹಿ. ತಂದೆಯನ್ನು ಕಳೆದುಕೊಂಡು ಮೆಕ್ಯಾನಿಕ್ ಕೆಲಸ ಮಾಡೋ ಹೆಣ್ಣುಮಗಳೊಬ್ಬಳು, ಶ್ರೀಮಂತ ಕುಟುಂಬದ ಕಾರ್ತಿಕ್‌ನ ಕೈ ಹಿಡಿದು ಪೊಲೀಸ್ ಅಧಿಕಾರಿ ಆದ ಪಯಣ ಎಲ್ಲರಿಗೂ ಸ್ಫೂರ್ತಿಯಾಗಿತ್ತು. ಅಷ್ಟೇ ಅಲ್ಲ ಸತ್ಯಾಳ ಸಾಹಸ ಸನ್ನಿವೇಶಗಳ ಮೂಲಕ ಮನರಂಜನೆಗೆ ಹೊಸ ಆಯಾಮ ಕೊಟ್ಟು, ಕಥೆಯ ಜೊತೆಗೆ ಹಲವಾರು ಸಾಮಾಜಿಕ ವಿಷಯಗಳ ಕುರಿತು ಹೇಳುತ್ತಾ ಬಂದು, ಪ್ರೀತಿ ಗಳಿಸಿತ್ತು ಸತ್ಯ ಸೀರಿಯಲ್.‌ ಇದೀಗ ಇದೇ ಸೀರಿಯಲ್‌ ಅಂತ್ಯವಾಗ್ತಿದ್ದಂತೆ, ವಾಹಿನಿ ಬರೆದ ಪತ್ರ ಹೀಗಿದೆ.

ಹೆಣ್ಣು ಅಬಲೆಯಲ್ಲ ಸಬಲೆ

"ಯಾವನೋ ಅಲ್ಲ ಕಣೋ, ಯಾವಳೋ ಅಂತ, ಡಿಸೆಂಬರ್ 7, 2020ರಂದು ಕಿರುತೆರೆಗೆ ಕಾಲಿಟ್ಟು ಕರ್ನಾಟಕದಾದ್ಯಂತ ಮನೆಮಾತಾದ ಧಾರಾವಾಹಿ 'ಸತ್ಯ'. ಹೆಣ್ಣಂದ್ರೆ ಹೀಗೇ ಇರಬೇಕು ಅನ್ನೋ ಕಟ್ಟುಪಾಡುಗಳನ್ನು ಮೀರಿ, ಹೆಣ್ಣು ಅಬಲೆಯಲ್ಲ, ಸಬಲೆ ಅಂತ ತೋರಿಸಿಕೊಟ್ಟಿದ್ದು 'ಸತ್ಯ'. ಕುಟುಂಬಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ಸಮಾಜದ ಮುಂದೆ ತಲೆ ಎತ್ತಿ ಬದುಕುತ್ತಿರೋ ಅದೆಷ್ಟೋ ಹೆಣ್ಣು ಮಕ್ಕಳನ್ನು ಪ್ರತಿನಿಧಿಸಿದ ಪಾತ್ರ ಇದು"

ಜೀರೋ ಟು ಹೀರೋ ಆದ ಸತ್ಯ ಕಥೆ..

"ಕಷ್ಟ-ನಷ್ಟ, ನೋವು-ನಲಿವುಗಳ ನಡುವೆಯೂ ದೃಢ ಮನಸಿನಿಂದ ಗೆಲ್ಲೋದು ಸಾಧ್ಯ ಅಂತ ತೋರಿಸಿದ ಕಥೆ ಇದು. ತಂದೆಯನ್ನು ಕಳೆದುಕೊಂಡು ಮೆಕ್ಯಾನಿಕ್ ಕೆಲಸ ಮಾಡೋ ಹೆಣ್ಣುಮಗಳೊಬ್ಬಳು, ಶ್ರೀಮಂತ ಕುಟುಂಬದ ಕಾರ್ತಿಕ್‌ನ ಕೈ ಹಿಡಿದು ಪೊಲೀಸ್ ಅಧಿಕಾರಿ ಆದ ಪಯಣ ಎಲ್ಲರಿಗೂ ಸ್ಫೂರ್ತಿ. ಅತ್ತೆ-ಸೊಸೆ ಲವ್ ಸ್ಟೋರಿ ಮೂಲಕ ಮನುಷ್ಯ ಸಂಬಂಧದ ಹೊಸ ಬಾಗಿಲು ತೆರೆದಿದ್ದೂ ಈ ಧಾರಾವಾಹಿ"

ಹಾರೈಸಿದ ಕರ್ನಾಟಕದ ಜನತೆಗೆ ಧನ್ಯವಾದ.

"ಸತ್ಯಾಳ ಸಾಹಸ ಸನ್ನಿವೇಶಗಳ ಮೂಲಕ ಮನರಂಜನೆಗೆ ಹೊಸ ಆಯಾಮ ಕೊಟ್ಟು, ಕಥೆಯ ಜೊತೆಗೆ ಹಲವಾರು ಸಾಮಾಜಿಕ ವಿಷಯಗಳ ಕುರಿತು ಹೇಳುತ್ತಾ ಬಂದು, ನಿಮ್ಮೆಲ್ಲರ ಪ್ರೀತಿ ಗಳಿಸಿದ್ದ 'ಸತ್ಯ' ಧಾರಾವಾಹಿ ಪ್ರಯಾಣ ಇಂದು ಕೊನೆಗೊಳ್ಳುತ್ತಿದೆ. ವಾಹಿನಿಯ ಈ ಪ್ರಯತ್ನವನ್ನು ಇಷ್ಟು ದಿನ ಹರಸಿ, ಹಾರೈಸಿದ ಕರ್ನಾಟಕದ ಜನತೆಗೆ ತುಂಬು ಹೃದಯದ ಧನ್ಯವಾದಗಳು" ಎಂದು ಜೀ ಕನ್ನಡ ವಾಹಿನಿ ಪೋಸ್ಟ್‌ ಹಂಚಿಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ