logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ನೀವಿಬ್ಬರೇನಾ, ನಿಮ್ಮ ಗಂಡನಿಗೇನಾಯ್ತು? ಸೀತಾಳ ವೈಯಕ್ತಿಕ ವಿಚಾರ ಕೆದಕಿದ ರಾಮ

Seetha Rama: ನೀವಿಬ್ಬರೇನಾ, ನಿಮ್ಮ ಗಂಡನಿಗೇನಾಯ್ತು? ಸೀತಾಳ ವೈಯಕ್ತಿಕ ವಿಚಾರ ಕೆದಕಿದ ರಾಮ

Sep 01, 2023 09:40 AM IST

google News

Seetha Rama: ನೀವಿಬ್ಬರೇನಾ, ನಿಮ್ಮ ಗಂಡನಿಗೇನಾಯ್ತು? ಸೀತಾಳ ವೈಯಕ್ತಿಕ ವಿಚಾರ ಕೆದಕಿದ ರಾಮ

    • ಸಿಹಿ ಜತೆಗೆ ಸುತ್ತಾಟದಲ್ಲಿರುವ ರಾಮ್‌ಗೆ, ನೀವೇಕೆ ಮದುವೆ ಆಗಬಾರದು ಎಂದು ಸೀತಾ ಕೇಳಿದ್ದಾಳೆ. ಇದೇ ವೇಳೆ ಸೀತಾಳ ವೈಯಕ್ತಿಕ ವಿಚಾರವನ್ನೂ ರಾಮ್‌ ಕೆದಕಿದ್ದಾನೆ. ಸೀತಾಳ ಗಂಡನ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ರಾಮನ ಮಾತಿಗೆ ಸೀತಾ ಮೌನಕ್ಕೆ ಜಾರಿದ್ದಾಳೆ. 
Seetha Rama: ನೀವಿಬ್ಬರೇನಾ, ನಿಮ್ಮ ಗಂಡನಿಗೇನಾಯ್ತು? ಸೀತಾಳ ವೈಯಕ್ತಿಕ ವಿಚಾರ ಕೆದಕಿದ ರಾಮ
Seetha Rama: ನೀವಿಬ್ಬರೇನಾ, ನಿಮ್ಮ ಗಂಡನಿಗೇನಾಯ್ತು? ಸೀತಾಳ ವೈಯಕ್ತಿಕ ವಿಚಾರ ಕೆದಕಿದ ರಾಮ

Seetha Rama: ಹೊಟೇಲ್‌ನಲ್ಲಿ ಸಿಹಿಯ ತುಂಟಾಟ ಮುಂದುವರಿದಿದೆ. ಅದ್ಯಾವುದಕ್ಕೂ ಚೂರೂ ಬೇಸರ ಮಾಡಿಕೊಳ್ಳದ ರಾಮ, ಸಿಹಿಯ ಅಣತಿಯಂತೆ ಎಲ್ಲವನ್ನೂ ಮಾಡುತ್ತಿದ್ದಾನೆ. ಸಿಹಿ ಹೇಳೋದನ್ನು ಎಲ್ಲವನ್ನೂ ಮಾಡ್ತಿದ್ದೀರಲ್ಲ ಎನ್ನುತ್ತಾಳೆ ಸೀತಾ. ಇತ್ತ ವೆಸ್ಟರ್ನ್‌ ಸ್ಟೈಲ್‌ನಲ್ಲಿ ಚಾಪ್‌ ಸ್ಟಿಕ್‌ನಲ್ಲಿ ನೂಡಲ್ಸ್‌ ತಿನ್ನುವ ರಾಮನನ್ನು ನೋಡಿದ ಸೀತಾ ಮತ್ತು ಸಿಹಿ ಇಬ್ಬರಿಗೂ ಅಚ್ಚರಿಯಾಗುತ್ತದೆ. ಅದ್ಹೇಗೆ ಅಷ್ಟೊಂದು ಸಲೀಸಾಗಿ ತಿಂತೀರಾ ನೀವು ಎನ್ನುತ್ತಾಳೆ ಸೀತಾ. ಚಿಕ್ಕಂದಿನಿಂದಲೇ ಕಾನ್ವೆಂಟ್‌, ಬೋರ್ಡಿಂಗ್‌ ಸ್ಕೂಲ್‌ನಲ್ಲಿ ಬೆಳೆದೆ ಹಾಗಾಗಿ ಆಗಿನಿಂದಲೇ ರೂಢಿ ಆಗಿದೆ ಎನ್ನುತ್ತಾನೆ ರಾಮ.

ಅಪ್ಪ ಅಮ್ಮನಿಗೆ ಚಿಕ್ಕಂದಿನಲ್ಲೇ ನೀವು ಕಾಟ ಕೊಟ್ಟಿದ್ರಾ, ಅದಕ್ಕೆ ಬೋರ್ಡಿಂಗ್‌ ಶಾಲೆಗೆ ಹಾಕಿದ್ರಾ ಎಂದು ಸಿಹಿ ರಾಮನಿಗೆ ಕೇಳುತ್ತಾಳೆ. ಆಗ ರಾಮ, ಚಿಕ್ಕಂದಿನಲ್ಲಿಯೇ ಅಪ್ಪ ಅಮ್ಮ ದೇವರ ಹತ್ರ ಹೋದರು ಹಾಗಾಗಿ ಅಲ್ಲಿ ಇದ್ದೆ ಎನ್ನುತ್ತಾನೆ. ರಾಮನ ಈ ಮಾತು ಕೇಳಿ ಇಬ್ಬರಿಗೂ ಬೇಸರವಾಗುತ್ತದೆ. ರಾಮನ ಬಳಿ Sorry.. ಎಂದೂ ಕೇಳುತ್ತಾರೆ. ಇದೆಲ್ಲ ನನಗೆ ಅಭ್ಯಾಸ ಆಗಿದೆ ಎನ್ನುತ್ತಾನೆ ರಾಮ. ಈ ಊರಲ್ಲಿ ನಿಮಗೆ ಬೇರೆ ಸ್ನೇಹಿತರು ಇಲ್ವಾ ಎನ್ನುವ ಸೀತಾಗೆ, ನೀವೇ ಇದ್ದೀರಲ್ಲ ಎನ್ನುತ್ತಾನೆ. ಆದಷ್ಟು ಬೇಗ ಮದುವೆಯಾಗಿ ಎಂದೂ ಹೇಳುತ್ತಾಳೆ.

ನೀವಾಗಿಯೇ ಮದುವೆಯನ್ನು ಮುಂದೂಡುತ್ತಿದ್ದೀರಾ? ನಿಮ್ಮನ್ನು ಕೈ ಹಿಡಿಯುವ ಹುಡುಗಿ ಅದೃಷ್ಟ ಮಾಡಿರ್ತಾಳೆ ಎನ್ನುತ್ತಾಳೆ. ಇದೆಲ್ಲವನ್ನು ಕಂಡ ರಾಮ ವ್ಯಂಗ್ಯವಾಗಿಯೇ ನಮಸ್ಕಾರ ಮಾಡುತ್ತಾನೆ. ನನಗೆ ಇದಕ್ಕೆಲ್ಲ ರಿಯಾಕ್ಟ್‌ ಮಾಡೋದು ಗೊತ್ತಾಗಲ್ಲ ಎನ್ನುತ್ತಾನೆ. ಇದೇ ವೇಳೆ ಹಳೇ ನೆನಪುಗಳ ಬಗ್ಗೆ ರಾಮ ಮಾತನಾಡುತ್ತಾನೆ. ಲೈಫ್‌ನಲ್ಲಿ ಸಿಕ್ಕಾಪಟ್ಟೆ ಬಾರವಾಗಿರುವುದು ನೆನಪುಗಳೇ ಎನ್ನುವ ರಾಮನ ಮಾತಿಗೆ, ಅವುಗಳನ್ನು ಫ್ರೀಯಾಗಿ ಹಾರಾಡಲು ಬಿಡಬೇಕು ಎನ್ನುತ್ತಾಳೆ.

ಹಳೇ ನೆನಪುಗಳನ್ನು ಮರೆಸುವ ಹುಡುಗಿ ನಿಮ್ಮ ಸುತ್ತಾನೇ ಇರ್ತಾಳೆ ನೀವು ನೋಡಬೇಕಷ್ಟೇ ಎನ್ನುತ್ತಾಳೆ. ರಾಮ ಒಳಗೊಳಗೆ ನೀವೇ ಎನ್ನುವಂತೆ ಸೀತಾಳನ್ನು ನೋಡುತ್ತಾನೆ. ಈ ಮಾತುಗಳು ನಿಮಗೂ ಅನ್ವಯಿಸುತ್ತದೆ ಅಲ್ಲವೇ ಎನ್ನುತ್ತಾನೆ. ನೀವು ಒಬ್ಬರೇ ಇದ್ದೀರಾ ಹಾಗಾಗಿ ಹೇಳಿದೆ ಎನ್ನುತ್ತಾನೆ. ಏನೇ ಆಗಲಿ ಆದಷ್ಟು ಬೇಗ ಮದುವೆ ಆಗಿ ಎಂದು ರಾಮನಿಗೆ ಸಲಹೆ ನೀಡುತ್ತಾಳೆ ಸೀತಾ. ಇತ್ತ ಹೊಟೇಲ್‌ ಬಿಲ್‌ ಕೈಗೆ ಬಂದ ಬಳಿಕ ಕೊಂಚ ಗಲಿಬಿಲಿಗೊಳ್ಳುವ ರಾಮ, ನೇರವಾಗಿ ಅಶೋಕನಿಗೆ ಮೆಸೆಜ್‌ ಮಾಡಿ, ಬಿಲ್‌ ಸೆಟಲ್‌ ಮಾಡುವಂತೆ ಹೇಳುತ್ತಾನೆ. ಹೋಟೇಲ್‌ ಕಡೆಯಿಂದ ಕಾಂಪ್ಲಿಮೆಂಟರಿ ಅನ್ನೋದನ್ನೂ ಹೇಳಿಸುತ್ತಾನೆ. ಬಳಿಕ ಸಿಹಿಯನ್ನು ಚಿಕ್ಕ ಮಕ್ಕಳು ಆಟವಾಡೋ ಗಾರ್ಡನ್‌ಗೆ ಕರೆದೊಯ್ಯುತ್ತಾನೆ.

ಇತ್ತ ಸೀತಾಳ ಅತ್ತಿಗೆ ಸುಲೋಚನಾ ಸೀತಾಳ ಮನೆಗೆ ಬಂದು ಕೂಗಾಡುತ್ತಾಳೆ. ಪಕ್ಕದ ಮನೆಯ ಅಜ್ಜಿಯೊಂದಿಗೆ ಮಾತಿಗಿಳಿಯುತ್ತಾಳೆ. ಒಳ್ಳೆ ಸಂಬಂಧ ಬಂದಿದೆ. ದೊಡ್ಡ ಲಾಯರ್‌, ಚೆನ್ನಾಗಿ ಸಂಪಾದನೆ ಮಾಡ್ತಾರೆ. ಮದುವೆ ಆಗಲು ಸೀತಾಳಿಗೇನಾಗಿದೆ ಎನ್ನುತ್ತಾಳೆ. ಸುಲೋಚನಾಳ ಮಾತು ಕೇಳಿ, ನಾನೇ ಸೀತಾ ಜತೆ ಮಾತನಾಡಿ, ಅವಳನ್ನು ಒಪ್ಪಿಸುತ್ತೇನೆ ಎನ್ನುತ್ತಾಳೆ. ಒಟ್ಟಿನಲ್ಲಿ ಸೀತಾಳಿಗೆ ಒಳ್ಳೆಯ ಹುಡುಗ ಸಿಕ್ಕರೆ ಸಾಕು ಎಂದು ಬೇಡುತ್ತಾಳೆ ಶಾಂತಜ್ಜಿ.

ಗಾರ್ಡನ್‌ನಲ್ಲಿ ಸೀತಾಳ ವೈಯಕ್ತಿಕ ವಿಚಾರಗಳ ಬಗ್ಗೆಯೂ ರಾಮ ಕೆದಕುತ್ತಾನೆ. ನಾನು ಯಾರಿಗೂ ಹತ್ತಿರ ಆಗೋನಲ್ಲ. ನಿಮಿಬ್ಬರನ್ನು ತುಂಬ ಹತ್ತಿರದಿಂದ ನೋಡುತ್ತಿದ್ದೇನೆ ಎನ್ನುತ್ತಾನೆ. ನೀವು ಸಿಹಿ ಇಬ್ಬರೇ ಇದ್ದೀರ, ನಿಮ್ಮ ಪತಿಗೇನಾಯ್ತು? ಎಂದು ರಾಮ್‌ ಕೇಳುತ್ತಾನೆ. ಸೀತಾ ಮೌನಕ್ಕೆ ಜಾರುತ್ತಾಳೆ. ಇಷ್ಟು ದಿನ ಬಚ್ಚಿಟ್ಟಿದ್ದ ವಿಚಾರವನ್ನು ಸೀತಾ ರಾಮನ ಮುಂದೆ ಹೇಳುತ್ತಾಳಾ? ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ