logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಿಹಿಗೆ ಅಪ್ಪನ ಚಿಂತೆಯಾದ್ರೆ, ಮೌನಕ್ಕೆ ಜಾರಿದ್ದಾಳೆ ಸೀತಾ, ಮತ್ತೊಂದೆಡೆ ರಾಮ ಕಣ್ಣಲ್ಲಿ ಆನಂದಭಾಷ್ಪ!

Seetha Rama Serial: ಸಿಹಿಗೆ ಅಪ್ಪನ ಚಿಂತೆಯಾದ್ರೆ, ಮೌನಕ್ಕೆ ಜಾರಿದ್ದಾಳೆ ಸೀತಾ, ಮತ್ತೊಂದೆಡೆ ರಾಮ ಕಣ್ಣಲ್ಲಿ ಆನಂದಭಾಷ್ಪ!

Dec 15, 2023 06:30 AM IST

google News

Seetha Rama Serial: ಸಿಹಿಗೆ ಅಪ್ಪನ ಚಿಂತೆಯಾದ್ರೆ, ಮೌನಕ್ಕೆ ಜಾರಿದ್ದಾಳೆ ಸೀತಾ, ಮತ್ತೊಂದೆಡೆ ರಾಮ ಕಣ್ಣಲ್ಲಿ ಆನಂದಭಾಷ್ಪ!

    • Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಡಿಸೆಂಬರ್‌ 5ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ರುದ್ರಪ್ರತಾಪ್‌ಗೆ ಇಂಟರ್‌ವ್ಯೂವ್‌ ತೆಗೆದುಕೊಂಡಿದ್ದಾಳೆ ಸಿಹಿ. ಆ ಸಂದರ್ಶನದಲ್ಲಿ ಲಾಯರ್ ಪಾಸ್‌ ಆದ್ನಾ?
Seetha Rama Serial: ಸಿಹಿಗೆ ಅಪ್ಪನ ಚಿಂತೆಯಾದ್ರೆ, ಮೌನಕ್ಕೆ ಜಾರಿದ್ದಾಳೆ ಸೀತಾ, ಮತ್ತೊಂದೆಡೆ ರಾಮ ಕಣ್ಣಲ್ಲಿ ಆನಂದಭಾಷ್ಪ!
Seetha Rama Serial: ಸಿಹಿಗೆ ಅಪ್ಪನ ಚಿಂತೆಯಾದ್ರೆ, ಮೌನಕ್ಕೆ ಜಾರಿದ್ದಾಳೆ ಸೀತಾ, ಮತ್ತೊಂದೆಡೆ ರಾಮ ಕಣ್ಣಲ್ಲಿ ಆನಂದಭಾಷ್ಪ!

Seetha Rama Serial: ತನ್ನೆದೆಯಲ್ಲಿನ ನೋವು ಬಚ್ಚಿಟ್ಟು ಸೀತಾ ಮತ್ತು ರುದ್ರಪ್ರತಾಪ್‌ ಮದುವೆ ಮಾಡಿಸಲು ಮುಂದಾಗಿದ್ದಾನೆ ರಾಮ. ರುದ್ರಪ್ರತಾಪ್‌ನನ್ನು ಕಂಡರೆ ಆಗದ ಸಿಹಿ ಮನದಲ್ಲೂ ಆತನ ಮೇಲೆ ಒಳ್ಳೆಯ ಭಾವ ಮೂಡಿಸಲು ಶ್ರಮಿಸುತ್ತಿದ್ದಾನೆ. ಸಿಹಿಯ ಮನವೊಲಿಸಲು ಪ್ಯಾಲೆಸ್‌ ಮಾಡಿ ಕೊಟ್ಟಿದ್ದಾನೆ. ಆದರೆ, ಇದ್ಯಾವುದಕ್ಕೂ ಓಕೆ ಎನ್ನುತ್ತಿಲ್ಲ ಸಿಹಿ. ಮುಂದುವರಿದು ಪರೀಕ್ಷೆ ಇಡ್ತಿನಿ, ಅದ್ರಲ್ಲಿ ಪಾಸ್‌ ಆದ್ರೆ ಓಕೆ ಎನ್ನುತ್ತಾಳೆ. ಅದರಂತೆ, ರುದ್ರಪ್ರತಾಪ್‌ನನ್ನೂ ರಾಮ್‌ ಬರುವಂತೆ ಹೇಳಿದ್ದಾನೆ.

ಇತ್ತ ನನ್ನನ್ನೇ ಇಂಟವ್ಯೂವ್‌ ಮಾಡ್ತಾಳಾ ಅವಳು ಎಂದು ಕಡು ಕೋಪದಲ್ಲಿ ಸೀತಾಳ ಅಣ್ಣನ ಮೇಲೆ ಕಿಡಿ ಕಾರಿದ್ದಾನೆ ರುದ್ರಪ್ರತಾಪ್‌. ಮದುವೆ ಆಗಲಿ, ಆ ಸಿಹಿಗೆ ಚೆನ್ನಾಗಿಯೇ ಪಾಠ ಕಲಿಸುತ್ತೇನೆ ಎಂದಿದ್ದಾನೆ. ಅದರಂತೆ, ಶಾಂತಮ್ಮನ ವಠಾರಕ್ಕೆ ಬಂದಿದ್ದಾನೆ ರುದ್ರಪ್ರತಾಪ್.‌ ನಾನೊಬ್ಬಳೇ ಇಂಟರ್‌ವ್ಯೂವ್‌ ಮಾಡ್ತಿನಿ ಎಂದ ಸಿಹಿ ಮಾತಿಗೆ ಓಕೆ ಎಂದಿದ್ದಾನೆ ಲಾಯರ್.‌ ಬಗೆಬಗೆ ಪ್ರಶ್ನೆಗಳನ್ನು ಕೇಳಿ ಲಾಯರ್‌ನ ತಲೆ ತಿಂದಿದ್ದಾಳೆ ಸಿಹಿ.

ಹೀಗೆ ಸಂದರ್ಶನ ನಡೆಯುತ್ತಿದ್ದ ವೇಳೆಯೇ ಸೀತಮ್ಮನ ಆಗಮನವಾಗಿದೆ. ನಾನು ಮಾಡಿದ ಟೆಸ್ಟ್‌ನಲ್ಲಿ ಹೊಸ ಫ್ರೆಂಡ್‌ ಪಾಸ್‌ ಆದ್ರು. ಎಲ್ಲ ಸರಿಯಾದ ಉತ್ತರಗಳನ್ನೇ ನೀಡಿದ್ದಾರೆ. ಸೀತಮ್ಮ ನನಗೆ ಹೊಸ ಅಪ್ಪ ಸಿಕ್ಕಿದರು ಎಂದು ಖುಷಿಯಿಂದ ಹೇಳಿಕೊಳ್ಳುತ್ತಿದ್ದಾಳೆ ಸಿಹಿ. ಸಿಹಿಯ ಮಾತಿಗೆ ಸೀತಾ ಮೂಖವಿಸ್ಮಿತಳಾಗಿದ್ದಾಳೆ. ಇತ್ತ ರಾಮ ಎಲ್ಲವೂ ಮುಗೀತು ಅಂತ ಮೌನಕ್ಕೆ ಜಾರಿದ್ದಾನೆ. ಸಿಹಿಯಿಂದ ಸಮ್ಮತಿ ಸಿಕ್ಕಿದೆ. ನೀವೊಬ್ಬರು ಈ ಸಂಬಂಧ ಒಪ್ಪಿದರೆ, ಹೊಸ ಜೀವನ ಸಿಕ್ಕಷ್ಟೇ ಖುಷಿ ಎಂದಿದ್ದಾನೆ ಲಾಯರ್.‌

ಆದರೆ, ಇದ್ಯಾವುದಕ್ಕೂ ಸೀತಾ ಮಾತನಾಡಿಲ್ಲ. ಸೀತಾಳ ಸ್ಥಿತಿ ನೋಡಿ ಮೌನಂ ಸಮ್ಮತಿ ಲಕ್ಷಣಂ ಎಂದಿದ್ದಾನೆ ತಾತ. ನಾನಿನ್ನು ಹೊರಡುವೆ ಎಂದು ಜಾಗ ಖಾಲಿ ಮಾಡಿದ್ದಾನೆ ರುದ್ರಪ್ರತಾಪ್.‌ ಆಫೀಸ್‌ಗೆ ಬಂದು ಸೀತಾಳ ಅಣ್ಣ ಮತ್ತು ಅತ್ತಿಗೆ ಹತ್ತಿರ ಈ ವಿಚಾರವನ್ನು ಹೇಳಿ, ಮದುವೆ ಬಗ್ಗೆಯೂ ಪ್ರಸ್ತಾಪಿಸುತ್ತಾನೆ. ಮನೆಗೆ ಪುರೋಹಿತರನ್ನು ಕರೆತರುವಂತೆಯೂ ಅವರಿಗೆ ಆದೇಶಿಸುತ್ತಾನೆ. ಇತ್ತ ಸೀತಾಜೀ ಅಂತೂ ಇಂತೂ ನಾವಿಬ್ಬರೂ ಒಂದಾಗುತ್ತಿದ್ದೇವೆ ಎಂದು ಕುಹಕ ನಗು ಬೀರಿದ್ದಾನೆ ಲಾಯರ್.‌

ಮನಸ್ಸಲ್ಲಿ ನೋವಿಟ್ಟುಕೊಂಡು, ಸಿಹಿ ಜತೆ ಮಾತನಾಡುತ್ತಿದ್ದಾನೆ ರಾಮ. ಇನ್ಮೇಲೆ ಸೀತಾ ಖುಷಿಯಾಗಿರುತ್ತಾಳೆ ಅಲ್ವ? ಇನ್ಮೇಲೆ ಸೀತಮ್ಮ ಅಳಲ್ಲ ಅಲ್ವಾ ಎಂದಿದ್ದಾಳೆ. ಹೌದು ಎನ್ನುತ್ತಲೇ ರಾಮ ಕಣ್ಣೀರು ಹಾಕಿದ್ದಾನೆ. ಸಿಹಿಯೂ ನೋಡಿ, ಫ್ರೆಂಡ್‌ ನೀನೇಕೆ ಅಳುತ್ತದ್ದೀಯಾ ಎಂದಿದ್ದಾಳೆ. ಆನಂದಕ್ಕೆ ಎಂದಿದ್ದಾನೆ ರಾಮ. ಮತ್ತೊಂದು ಕಡೆ ಸೀತಾ ಸಹ ಕಣ್ಣೀರು ಸುರಿಸುತ್ತಿದ್ದಾಳೆ. ಹಾಗಾದರೆ ಲಾಯರ್‌ಗೆ ಒಪ್ಪಿಗೆ ಸೂಚಿಸುತ್ತಾಳಾ ಸೀತಾ? ಕಾದು ನೋಡಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ