Seetha Rama Serial: ಮಾವ ಸೂರ್ಯ ಪ್ರಕಾಶ್ ಹತ್ಯೆಗೆ ಭಾರ್ಗವಿ ಸಂಚು! ಚಿಕ್ಕಿಯ ಅಸಲಿಯತ್ತು ಹೊರ ಬೀಳುವಷ್ಟರಲ್ಲಿ ಓಡೋಡಿ ಬಂದ ಶ್ರೀರಾಮ
Jan 11, 2024 03:43 PM IST
Seetha Rama Serial: ಮಾವ ಸೂರ್ಯ ಪ್ರಕಾಶ್ ಹತ್ಯೆಗೆ ಭಾರ್ಗವಿ ಸಂಚು! ಚಿಕ್ಕಿಯ ಅಸಲಿಯತ್ತು ಹೊರಬೀಳುವಷ್ಟರಲ್ಲಿ ಓಡೋಡಿ ಬಂದ ಶ್ರೀರಾಮ
- Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್ ರೋಚಕತೆಯ ಜತೆ ನೋಡಿಸಿಕೊಂಡು ಹೋಗುತ್ತಿದೆ. ಆಫೀಸ್ನ ಅವ್ಯವಹಾರ ಬಯಲಿಗೆಳೆಯಲು ರಾಮ ಮುಂದಾಗುತ್ತಿದ್ದಂತೆ, ಆತನ ಪ್ಲಾನ್ ಉಲ್ಟಾ ಮಾಡುತ್ತಿದ್ದಾಳೆ ಭಾರ್ಗವಿ. ಮಾವ ಜೀವಕ್ಕೂ ಕಂಟಕವಾಗಿದ್ದಾಳೆ.
Seetha Rama Serial: ಸೀತಾ ರಾಮ ಧಾರಾವಾಹಿ ರೋಚಕತೆಯ ಓಟಕ್ಕೆ ಇಳಿದಿದೆ. ದಿನದಿಂದ ದಿನಕ್ಕೆ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತ ಸಾಗುತ್ತಿದೆ. ಕಳೆದ ವರ್ಷದ ಕೊನೆಯಲ್ಲಿ ಸೀತಾ ಮತ್ತು ರುದ್ರಪ್ರತಾಪ್ ಮದುವೆ ತಡೆದ ಶ್ರೀರಾಮ, ಅದಾದ ಬಳಿಕ ತನ್ನ ವರಸೆಯನ್ನೇ ಬದಲಿಸಿದ್ದಾನೆ. ಅಕ್ಷರಶಃ ಏಪಿಸೋಡ್ನಿಂದ ಏಪಿಸೋಡ್ಗೆ ಕುತೂಹಲಕ್ಕೆ ಒಗ್ಗರಣೆ ಹಾಕುತ್ತಿದ್ದಾರೆ ನಿರ್ದೇಶಕ ಮಧುಸೂದನ್. ಇದೀಗ ಆ ಕೌತುಕ ಮತ್ತೊಂದು ಘಟ್ಟ ತಲುಪಿದೆ.
ಸೀತಾಳಿಂದ ಕಡೆಗಣನೆಗೆ ಒಳಗಾಗಿರುವ ರಾಮ್, ಆ ನೋವಲ್ಲೂ ಆಫೀಸ್ಗೆ ಶ್ರೀರಾಮ ದೇಸಾಯಿಯಾಗಿ ಎಂಟ್ರಿಕೊಟ್ಟಿದ್ದಾನೆ. ಆಫೀಸ್ನ ಅವ್ಯವಹಾರದ ಕೆಲಸ ನಿಲ್ಲಿಸುವ ಉದ್ದೇಶಕ್ಕೆ ಅಶೋಕ ಜತೆ ಸೇರಿ ಹಣ ಲಪಟಾಯಿಸುವವರ ಹುಡುಕಾಟಕ್ಕೆ ಇಳಿದಿದ್ದಾನೆ. ಮೊದಲಿಗೆ ಬಲಿ ಕಾ ಬಕ್ರಾ ಆಗಿದ್ದೇ ಮ್ಯಾನೇಜರ್ ಚರಣ್ ಡಿ. ಆಫೀಸ್ನಲ್ಲಿ ಏನೆಲ್ಲ ನಡೀತಿದೆ. ಈ ಅವ್ಯವಹಾರದ ಹಿಂದೆ ಯಾರೆಲ್ಲ ಇದ್ದಾರೆ ಎಂದು ಚರಣ್ ಬಳಿ ಪ್ರಶ್ನೆಗಳ ಸುರಿಮಳೆಯೇ ಸುರಿದಿದೆ. ಇನ್ನೇನು ಅಸಲಿ ವಿಚಾರ ಹೇಳಬೇಕೆನ್ನುವಷ್ಟರಲ್ಲಿ ಎಡವಟ್ಟಾಗಿದೆ.
ಮನೆಯಿಂದ ಚಿಕ್ಕಿ ಭಾರ್ಗವಿಯಿಂದ ರಾಮ್ಗೆ ಫೋನ್ ಬಂದಿದೆ. ಫೋನ್ ಬರುತ್ತಿದ್ದಂತೆ, ಮ್ಯಾನೇಜರ್ ಚರಂಡಿಯನ್ನು ಅಲ್ಲಿಗೆ ಕೈ ಬಿಟ್ಟು, ತಾತ ಸೂರ್ಯ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿರುವ ವಿಚಾರ ತಿಳಿದು ರಾಮ ಮತ್ತು ಅಶೋಕ ಇಬ್ಬರೂ ಮನೆಗೆ ಓಡೋಡಿ ಬಂದಿದ್ದಾರೆ. ಚಿಕ್ಕಿ ಭಾರ್ಗವಿ ನಡೆದ ವಿಚಾರವನ್ನು ವಿವರಿಸಿದ್ದಾಳೆ. ತಾತನ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಇತ್ತ ಮತ್ತೊಂದು ಕಡೆ ನಿನ್ನ ತಾತನ ಜೀವ ನನ್ನ ಕೈಯಲ್ಲಿದೆ ಎಂದು ಮಾತ್ರೆಗಳನ್ನು ಹಿಡಿದು ಹಲ್ಲು ಮಸಿದಿದ್ದಾಳೆ ಭಾರ್ಗವಿ.
ಇದೇ ಸಮಯಕ್ಕೆ ನೇರವಾಗಿ ಮ್ಯಾನೇಜರ್ ಚರಣ್ಗೆ ಕರೆ ಮಾಡಿದ ಭಾರ್ಗವಿ, ಆಫೀಸ್ನಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದ್ದಾಳೆ. ಆಗ ನಡೆದ ವಿಚಾರವನ್ನು ವಿವರಿಸಿದ್ದಾರೆ. ನಾನು ಹೇಳುವವರೆಗೂ ಏನೂ ಮಾಡಬೇಡ ಎಂದು ಫೋನ್ ಇಟ್ಟಿದ್ದಾಳೆ ಭಾರ್ಗವಿ. ನೀನು ಏನೇ ಪ್ರಯತ್ನಪಟ್ಟರು, ನಿನ್ನಿಂದ ಏನೂ ಮಾಡಿಕೊಳ್ಳಲ್ಲ ರಾಮ ಎಂದಿದ್ದಾಳೆ ಭಾರ್ಗವಿ. ನೀನು ನನ್ನ ದಾರಿಗೆ ಅಡ್ಡ ಬಂದಷ್ಟು, ನಿನ್ನ ತಾತನಿಗೆ ಅಪಾಯ ತಪ್ಪಿದ್ದಲ್ಲ ಎಂದೂ ಮನದಲ್ಲಿಯೇ ಕಡುಕೋಪ ಹೊರಹಾಕಿದ್ದಾಳೆ. ಮುದಿ ಜೀವ ನನ್ನ ಕೈಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡ್ತಿದೆ ಎಂದಿದ್ದಾಳೆ.
ಇತ್ತ ರಾಮನ ಸಹವಾಸವೇ ಸಾಕು ಎಂದು ಆತನನ್ನು ದೂರವಿಟ್ಟಿರುವ ಸೀತಾಗೆ ಆಫೀಸ್ನಲ್ಲಿ ಚುಚ್ಚು ಮಾತುಗಳೇ ಹೆಚ್ಚಾಗಿವೆ. ನಿನ್ನ ಸ್ನೇಹಿತ ರಾಮ್ನನ್ನು ಮಿಸ್ ಮಾಡಿಕೊಳ್ತಿದ್ದೀಯಾ ಎಂದು ಕೆಲವರು ಕೇಳಿದರೆ, ನಮ್ಮೆಲ್ಲರಿಗಿಂತ ನಿನಗೆ ಅವರು ಹೆಚ್ಚು ಕ್ಲೋಸ್ ಆಗಿದ್ದು, ಅವರು ಬಾಸ್ ಅಂತ ನಿನಗೆ ಮೊದಲೇ ಗೊತ್ತಿತ್ತು ಅಲ್ವಾ? ನಿಮ್ಮ ಮನೆಗೆಲ್ಲ ಬಂದೂ ಹೋಗಿ ಮಾಡ್ತಿದ್ರಂತೆ ಎಂದೂ ಸೀತಾಳ ಮನಸ್ಸನ್ನು ಘಾಸಿಗೊಳಿಸಿದ್ದಾರೆ. ರಾಮನ ಸ್ನೇಹವೇ ಸೀತೆಗೆ ಹೊರೆಯಾಗ್ತಿದೆ. ಒಂಟಿ ಹೆಣ್ಣಿಗೆ ಕೊಂಕು ಮಾತುಗಳೇ ಬರೆಯಾಗ್ತಿದೆ! ಇತ್ತ ಚರಣ್ ಕಡೆಯಿಂದ ಸತ್ಯ ಹೊರಬರುತ್ತಾ? ರಾಮನ ಮುಂದಿನ ನಡೆ ಏನು? ಇದಕ್ಕೆ ಮುಂದಿನ ಏಪಿಸೋಡ್ನಲ್ಲಿಯೇ ಉತ್ತರ ಸಿಗಲಿದೆ.