logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಿಹಿಯೇ ಸರ್ವಸ್ವ ಅನ್ನೋ ಸೀತಮ್ಮನಿಗೆ ಇದೆಂಥಾ ಅಗ್ನಿಪರೀಕ್ಷೆ! ಕೊನೆಗೂ ಬಯಲಾಯ್ತು ಕಟು ಸತ್ಯ

Seetha Rama Serial: ಸಿಹಿಯೇ ಸರ್ವಸ್ವ ಅನ್ನೋ ಸೀತಮ್ಮನಿಗೆ ಇದೆಂಥಾ ಅಗ್ನಿಪರೀಕ್ಷೆ! ಕೊನೆಗೂ ಬಯಲಾಯ್ತು ಕಟು ಸತ್ಯ

Oct 09, 2024 11:36 AM IST

google News

ಸೀತಾ ರಾಮ ಧಾರಾವಾಹಿಯಲ್ಲಿ ಕೊನೆಗೂ ಬಯಲಾಯ್ತು ಕಟು ಸತ್ಯ

    • ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹುಟ್ಟಿನ ರಹಸ್ಯ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಈಗ ಇದೇ ಕುತೂಹಲಕ್ಕೆ ತೆರೆಬಿದ್ದಿದೆ. ಯಾವ ವಿಚಾರ ಸೀತಾಗೆ ತಿಳಿಯಬಾರದಿತ್ತೋ ಅದೇ ಸತ್ಯ ಗೊತ್ತಾಗಿದೆ. ಇನ್ನೇನಿದ್ದರೂ ಸಿಹಿಗಾಗಿ ಮತ್ತೊಂದು ಹೋರಾಟಕ್ಕೆ ಸೀತಾ ಸಿದ್ಧಳಾಗಿದ್ದಾಳೆ. 
ಸೀತಾ ರಾಮ ಧಾರಾವಾಹಿಯಲ್ಲಿ ಕೊನೆಗೂ ಬಯಲಾಯ್ತು ಕಟು ಸತ್ಯ
ಸೀತಾ ರಾಮ ಧಾರಾವಾಹಿಯಲ್ಲಿ ಕೊನೆಗೂ ಬಯಲಾಯ್ತು ಕಟು ಸತ್ಯ (Image\ Zee5)

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾಗೆ ಯಾವ ವಿಷಯ ಗೊತ್ತಾಗಬಾರದಿತ್ತೋ, ಈಗ ಅದೇ ಸತ್ಯ ತಿಳಿದಿದೆ. ಇಲ್ಲಿಯವರೆಗೂ ರಾಮ್‌ ಸ್ನೇಹಿತರಾಗಿದ್ದ ಶ್ಯಾಮ್‌ ಮತ್ತು ಶಾಲಿನಿ ದಂಪತಿಯ ಸಿಹಿಯ ನಿಜವಾದ ಅಪ್ಪ ಅಮ್ಮ ಅನ್ನೋ ಕಟು ಸತ್ಯ ಸೀತಾಳಿಗೆ ಗೊತ್ತಾಗಿದೆ. ಮೊದಲೇ ಸಿಹಿ ಎಲ್ಲಿ ನನ್ನ ಕೈತಪ್ಪಿ ಹೋಗುತ್ತಾಳೆ ಎಂಬ ಭಯದಲ್ಲಿದ್ದ ಸೀತಾ, ಇದೀಗ ಮತ್ತಷ್ಟು ಕುಸಿದಿದ್ದಾಳೆ. ಮತ್ತೊಂದು ಕಡೆ ಶ್ಯಾಮ್‌ಗೆ ಮಗುವನ್ನು ಹುಡುಕಿಕೊಡುವ ಪಣತೊಟ್ಟ ರಾಮ್‌ ನಡೆಯೂ ಸೀತಾಗೆ ಬೇಸರ ತರಿಸಿದೆ.

ಶ್ಯಾಮ್‌ ಇದೀಗ ಬೇರೆ ಮನೆ ಮಾಡಿ ಅಲ್ಲಿಗೆ ಶಿಫ್ಟ್‌ ಆಗಿದ್ದಾನೆ. ಈ ನಡುವೆ ಸಿಹಿಯನ್ನೂ ಆ ಮನೆಗೆ ಕರೆದೊಯ್ದಿದ್ದಾನೆ. ಸಿಹಿಯನ್ನು ಕರೆತಂದಿದ್ದಕ್ಕೆ ಶಾಲಿನಿ ಸಹ ಕುಪಿತಗೊಂಡಿದ್ದಾಳೆ. ಇತ್ತ ಸಿಹಿ ಶ್ಯಾಮ್‌ ಮನೆಗೆ ಹೋಗಿದ್ದಕ್ಕೆ ಸೀತಾಗೆ ಅಳುಕು ಶುರುವಾಗಿದೆ. ಹಾಗಾಗಿ ಸಿಹಿಯನ್ನು ಕರೆಯಲು ನೇರವಾಗಿ ಶ್ಯಾಮ್‌ ಮನೆಗೆ ಹೋಗಿದ್ದಾಳೆ ಸೀತಾ. ಇತ್ತ ಸಿಹಿ ಮತ್ತು ಶ್ಯಾಮ್‌ ನಡುವೆ ಮಾತುಕತೆ ನಡೆದಿದೆ. ನಾನು ಸೀತಮ್ಮನ ಮಗಳು, ರಾಮ್‌ ಜತೆ ಮದುವೆ ಆದಮೇಲೆ ಅವರೇ ನನಗೆ ಅಪ್ಪ ಆದ್ರು ಎಂದಿದ್ದಾಳೆ. ಸಿಹಿ ಮಾತು ಕೇಳಿ ಶ್ಯಾಮ್‌ ಸಹ ಅಚ್ಚರಿಗೊಳಗಾಗಿದ್ದಾನೆ.

ಮಗುವಿನ ವಿಚಾರಕ್ಕೆ ಶಾಲಿನಿ ಜತೆ ಶ್ಯಾಮ್‌ ಮಾತಿಗಿಳಿದಿದ್ದಾನೆ. ಸಿಹಿ ಅಪ್ಪನಿಗಾಗಿ ಕಾದಾಗ, ರಾಮ್‌ ಬಂದ. ಅದೇ ರೀತಿ ನಮ್ಮ ಮಗುನೂ ನಮಗಾಗಿ ಕಾಯ್ತಿರಬಹುದಲ್ವ? ಎಂದು ಶ್ಯಾಮ್‌ ಹೇಳಿದ್ದಾನೆ. ಹಾಗಾಗಿ ಡಾ. ಅನಂತಲಕ್ಷ್ಮೀ ಅವರನ್ನು ನಾಳೆನೇ ಭೇಟಿ ಮಾಡೋಣ. ಮಗು ಬಗ್ಗೆ ಅವರು ಏನೂ ಹೇಳುತ್ತಿಲ್ಲ. ಇದೆಲ್ಲದಕ್ಕೂ ನಾಳೆಯೇ ಉತ್ತರ ಪಡೆದುಕೊಳ್ತೀನಿ ಎಂದಿದ್ದಾನೆ ಶ್ಯಾಮ್. ಸಿಹಿಯನ್ನು ಕರೆಯಲು ಬಂದ ಸೀತಾ, ಶ್ಯಾಮ್‌ ಮನೆಯ ‌ಬಾಗಿಲ ಮುಂದೆ ನಿಂತು ಎಲ್ಲ ಮಾತನ್ನು ಕೇಳಿಸಿಕೊಂಡಿದ್ದಾಳೆ.

ಸತ್ಯ ಒಪ್ಪಿಕೊಂಡ ಶಾಲಿನಿ

ಶ್ಯಾಮ್‌ನ ಮಾತಿಗೆ ಒಪ್ಪದ ಶಾಲಿನಿ, ಶ್ಯಾಮ್‌ ನಾವು ಯಾರನ್ನೂ ಮೀಟ್‌ ಮಾಡ್ತಿಲ್ಲ ಎಂದಿದ್ದಾಳೆ. ಮಗು ಬಗ್ಗೆ ಮಾತನಾಡಿದಾಗಲೆಲ್ಲ ಬೇಡ ಅಂತಿಯಾ. ಏನಿದರ ಅರ್ಥ ಎಂದು ಕೋಪದಲ್ಲಿ ಹೇಳುತ್ತಾನೆ ಶ್ಯಾಮ್.‌ ಅದಕ್ಕೆ ಉತ್ತರಿಸಿದ ಶಾಲಿನಿ, ಯಾಕಂದ್ರೆ ಮಗು ಸತ್ತಿದೆ ಅಂತ ಹೇಳಿದ್ದು ಅನಂತಲಕ್ಷ್ಮೀ ಅಲ್ಲ, ನಾನು.. ಶಾಲಿನಿ ಮಾತಿಗೆ ಶ್ಯಾಮ್‌ ಶಾಕ್‌ ಆಗಿದ್ದಾನೆ. ನನಗೆ ಬೇರೆ ದಾರಿ ಇರಲಿಲ್ಲ. ನೀನು ಸ್ಟಡೀಸ್‌ಗೋಸ್ಕರ ಲಂಡನ್‌ಗೆ ಹೋದೆ. ನಾನು ಒಬ್ಬಳೇ ಇಲ್ಲಿ ಮಗು ನೋಡಿಕೊಳ್ಳಲು ಆಗಲ್ಲ. ನನಗೂ ಲಂಡನ್‌ಗೆ ಬರಬೇಕಿತ್ತು. ಅದಕ್ಕೆ ಆ ಮಗು ಇಲ್ಲ ಸತ್ತೋಯ್ತು ಅಂತ ಸುಳ್ಳು ಹೇಳಿದೆ.

ಸೀತಾಗೆ ಗೊತ್ತಾಯ್ತು ಕಟು ಸತ್ಯ

ಆವತ್ತು ಅನಂತಲಕ್ಷ್ಮೀ ನಮಗಾಗಿ ಕಾದಿರುತ್ತಾರೆ. ಜುಲೈ 17 ಆ ದಿನಾಂಕವನ್ನು ನಾನು ಯಾವತ್ತೂ ಮರೆಯಲ್ಲ. ಆ ಮಗುನೇ ಇಲ್ಲ ಅಂದ ಮೇಲೆ ಅವರ ಜತೆಗೆ ಯಾಕೆ ಮಾತನಾಡಬೇಕು ಎಂದು ಅವರನ್ನು ಅವಾಯ್ಡ್‌ ಮಾಡಿದೆ ಎಂದಿದ್ದಾಳೆ ಶಾಲಿನಿ. ಇಷ್ಟು ದಿನ ನನ್ನ ಮಗು ದೂರ ಆಗಲು ಕಾರಣ ನೀನಾ ಅಂತ ಶಾಲಿನಿ ಮೇಲೆ ಸಿಟ್ಟಾಗಿದ್ದಾನೆ ಶ್ಯಾಮ್‌. ನನ್ನ ಮಗು ನನಗೆ ಬೇಕು. ಆ ಬಾಡಿಗೆ ತಾಯಿಯನ್ನು ನಾನು ಹುಡುಕೇ ಹುಡುಕುತ್ತೇನೆ ಎಂದಿದ್ದಾನೆ ಶ್ಯಾಮ್.‌ ಅಲ್ಲಿಗೆ ಇವರೇ ಸಿಹಿಯ ನಿಜವಾದ ಅಪ್ಪ ಅನ್ನೋ ಸತ್ಯ ಸೀತಾಗೆ ಗೊತ್ತಾಗಿದೆ. ಆಗಬಾರದೇ ಇರೋರು, ಈಗ ಬಂದಿದ್ದಾರಾ? ಎಂದಿದ್ದಾಳೆ.

ಅನಂತಲಕ್ಷ್ಮೀಯನ್ನು ಭೇಟಿ ಮಾಡಿದ ಸೀತಾ

ಇತ್ತ ನೇರವಾಗಿ ಡಾ, ಅನಂತಲಕ್ಷ್ಮೀಯನ್ನು ಭೇಟಿ ಮಾಡಿದ ಸೀತಾ, ಶ್ಯಾಮ್‌ ಮತ್ತೆ ಶಾಲಿನಿ ಅವರೇ ಅಲ್ವ ಸಿಹಿಯ ಬಯಾಲಜಿಕಲ್‌ ಅಪ್ಪ ಅಮ್ಮ ಎಂದಿದ್ದಾಳೆ. ಮಗುವನ್ನು ಇಗ್ನೋರ್‌ ಮಾಡಿ ಹೋದ ಆ ಪೇರೆಂಟ್ಸ್‌ ಜತೆಗೆ ಯಾವ ಮಗುನೂ ಇರಬಾರದು. ನಾನೇ ಸಿಹಿ ಅಮ್ಮ, ರಾಮ್‌ ಅಪ್ಪ. ಇದೇ ಸತ್ಯ ಡಾಕ್ಟರ್‌ ಎಂದಿದ್ದಾಳೆ. ಇತ್ತ ಡಾಕ್ಟರ್‌ ಅನಂತಲಕ್ಷ್ಮೀ ಅಪಾಯಿಂಟ್‌ಮೆಂಟ್‌ ಪಡೆದ ರಾಮ್‌, ಶ್ಯಾಮ್‌ ಮಗುವಿನ ಹುಡುಕಾಟದಲ್ಲಿದ್ದಾನೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಮೇಘಶ್ಯಾಮ- ನಾಗಾರ್ಜುನ್‌ ಬಿ.ಆರ್‌

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ