logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಸಿಹಿಯ ಕನಸನ್ನು ಶ್ರೀರಾಮ ನೆರವೇರಿಸಿದ್ರೆ; ದೇವರನ್ನು ಮೆಚ್ಚಿಸಲು ಸೀತಮ್ಮನ ಕಣ್ತಪ್ಪಿಸಿ ಉಪವಾಸ ಮಾಡ್ತಿದ್ದಾಳೆ ಸಿಹಿ

Seetha Rama: ಸಿಹಿಯ ಕನಸನ್ನು ಶ್ರೀರಾಮ ನೆರವೇರಿಸಿದ್ರೆ; ದೇವರನ್ನು ಮೆಚ್ಚಿಸಲು ಸೀತಮ್ಮನ ಕಣ್ತಪ್ಪಿಸಿ ಉಪವಾಸ ಮಾಡ್ತಿದ್ದಾಳೆ ಸಿಹಿ

Sep 22, 2023 06:30 AM IST

google News

Seetha Rama: ಸಿಹಿಯ ಕನಸನ್ನು ಶ್ರೀರಾಮ ನೆರವೇರಿಸಿದ್ರೆ; ದೇವರನ್ನು ಮೆಚ್ಚಿಸಲು ಸೀತಮ್ಮನ ಕಣ್ತಪ್ಪಿಸಿ ಉಪವಾಸ ಮಾಡ್ತಿದ್ದಾಳೆ ಸಿಹಿ

    • ಗಣೇಶ ಹಬ್ಬಕ್ಕೆ ಸೀತಾಳ ಕಷ್ಟ ಪರಿಹಾರಕ್ಕೆ, ತನ್ನ ಆಸೆ ನೆರವೇರಿಕೆಗೆ ದೇವರಲ್ಲಿ ಉಪವಾಸ ವ್ರತ ಕೈಗೊಂಡಿದ್ದಾಳೆ ಸಿಹಿ. ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಿಹಿಯ ಕನಸನ್ನೂ ನೆರವೇರಿಸಿದ್ದಾನೆ ರಾಮ್.‌ 
Seetha Rama: ಸಿಹಿಯ ಕನಸನ್ನು ಶ್ರೀರಾಮ ನೆರವೇರಿಸಿದ್ರೆ; ದೇವರನ್ನು ಮೆಚ್ಚಿಸಲು ಸೀತಮ್ಮನ ಕಣ್ತಪ್ಪಿಸಿ ಉಪವಾಸ ಮಾಡ್ತಿದ್ದಾಳೆ ಸಿಹಿ
Seetha Rama: ಸಿಹಿಯ ಕನಸನ್ನು ಶ್ರೀರಾಮ ನೆರವೇರಿಸಿದ್ರೆ; ದೇವರನ್ನು ಮೆಚ್ಚಿಸಲು ಸೀತಮ್ಮನ ಕಣ್ತಪ್ಪಿಸಿ ಉಪವಾಸ ಮಾಡ್ತಿದ್ದಾಳೆ ಸಿಹಿ

Seetha Rama: Serial 50th Episode: ಸೀತಾಳ ಮನೆಯಲ್ಲಿ ಗಣೇಶನ ಹಬ್ಬದ ಸಡಗರ ಜೋರಾಗಿದೆ. ಮಾವನಿಂದ ಹಣ ಕಳೆದುಕೊಂಡು ಚಿಂತೆಗೀಡಾದ ಸಿಹಿಗೆ ಫ್ರೆಂಡ್‌ ರಾಮ ಭರವಸೆ ನೀಡಿದ್ದಾನೆ. ವಠಾರದ ಪುಟಾಣಿಗಳೂ ಮಣ್ಣಿನ ಗಣೇಶ ಮಾಡಲು ಮುಂದಾಗಿದ್ದಾರೆ. ಮಕ್ಕಳ ಗಣೇಶ ಚೌತಿಗೆ, ಸೀತಾ ಸಹ ಸಾಥ್‌ ನೀಡಲು ಮುಂದಾಗಿದ್ದಾಳೆ.

ಇತ್ತ ಫೈಲ್‌ನಲ್ಲೇನಿದೆ ಎಂಬುದನ್ನು ನೋಡುತ್ತ ನಿಂತ ಅಶೋಕನನ್ನು ಕೆಕ್ಕರಿಸಿಕೊಂಡು ನೋಡುತ್ತ ಕಾಫಿ ಕೊಡುವ ನೆಪದಲ್ಲಿ ಆಗಮಿಸಿದ್ದಾಳೆ ಭಾರ್ಗವಿ. ಇನ್ನೇನು ಫೈಲ್‌ ವಿಚಾರವಾಗಿ ಪ್ರಶ್ನೆ ಮಾಡಬೇಕು ಎನ್ನುವಷ್ಟರಲ್ಲಿ ವಿಶ್ವನ ಆಗಮನವಾಗಿದೆ. ಓಹ್..‌ ಈ ಫೈಲ್‌ ಸಹಿ ಇನ್ನೂ ಆಗಿಲ್ವ ಎಂದಿದ್ದಾನೆ ವಿಶ್ವ. ವಿಶ್ವನ ಮಾತು ಕೇಳಿ, ಅಶೋಕನಲ್ಲಿನ ಅನುಮಾನ ಮತ್ತಷ್ಟು ಹೆಚ್ಚಾಗಿದೆ.

ರಾಮ್‌ಗೆ ಫೋನ್‌ ಮಾಡಿ, ತಾನು ಮಣ್ಣಿನ ಗಣೇಶನನ್ನೇ ಮಾಡ್ತಿನಿ ಎಂದು ಫೋನ್‌ ಮಾಡಿ ಹೇಳಿದ್ದಾಳೆ ಸಿಹಿ. ಸಿಹಿಯ ಈ ಮಾತು ಕೇಳಿ, ಇದನ್ನು ಅವರಮ್ಮ ಸೀತಾ ಹೇಳಿಸಿರಬೇಕು ಎಂಬುದು ರಾಮನ ಊಹೆ. ಆದರೂ ನನಗೆ ಸಿಹಿ ಖುಷಿನೇ ಮುಖ್ಯ ಅಂತ ಹೊಸ ಐಡಿಯಾ ಮಾಡಿದ್ದಾನೆ ರಾಮ್.‌

ವಠಾರದಲ್ಲಿ ಮಣ್ಣಿನ ಗಣೇಶ ಮಾಡೋದ್ರಲ್ಲಿ ಸಿಹಿ ಬಿಜಿಯಾಗಿದ್ದಾಳೆ. ಅಷ್ಟೇ ಅಲ್ಲ ಹೆಲಿಕಾಪ್ಟರ್‌ನಲ್ಲಿ ಹೋಗಬೇಕು ಎಂಬ ಕನಸು ಕಂಡು ಗಣೇಶನನ್ನು ಬೇಡಿಕೊಂಡು ಉಪವಾಸ ವ್ರತ ಬೇರೆ ಆರಂಭಿಸಿದ್ದಾಳೆ. ಸೀತಮ್ಮನಿಗೆ ಒಳ್ಳೆಯದಾಗಲಿ ಎಂದೂ ದೇವರ ಮೊರೆ ಹೋಗಿದ್ದಾಳೆ. ಕೈಯಲ್ಲಿ ಹಾಕಿಕೊಟ್ಟ ತಿಂಡಿಯನ್ನು ಸ್ನೇಹಿತರಿಗೆ ಹಾಕಿ ಉಪವಾಸ ಮುಂದುವರಿಸಿದ್ದಾಳೆ. ಸಿಹಿಯ ಈ ನಡೆ ಸೀತಾಗೂ ಅನುಮಾನ ಮೂಡಿಸಿದೆ.

ಸಿಹಿಯ ಆಸೆಯಂತೆ ಗಣೇಶನನ್ನು ಕೂರಿಸಲು ಮುಂದಾಗಿದ್ದಾನೆ ರಾಮ್.‌ ರಾಮನ ನಿರ್ಧಾರಕ್ಕೆ ಸೀತಾ ಅಡ್ಡಗಾಲಾಗಿದ್ದಾಳೆ. ಹಣ ಖರ್ಚು ಮಾಡಿ ಗಣೇಶ ಕೂರಿಸುವ ಅವಶ್ಯಕತೆ ಇಲ್ಲ ಎಂದಿದ್ದಾಳೆ. ಅದಕ್ಕೆ ಮತ್ತೊಮ್ಮೆ ಹಣ ಸಂಗ್ರಹಿಸಿ ಗಣೇಶನ ಪ್ರತಿಷ್ಠಾಪನೆಗೆ ಮುಂದಾಗಿದ್ದಾನೆ ರಾಮ್.‌ ಆಗಲೇ ಹೇಳಿದಂತೆ, ತಲೆ ಉಪಯೋಗಿಸಿ ಹಣ ಸಂಗ್ರಹಿಸಿದ್ದಾನೆ.

ವಠಾರದ ಮುಂಭಾಗದಲ್ಲಿ ಒಂದಷ್ಟು ಜನರ ಕೈಯಲ್ಲಿ ತಾನೇ ದುಡ್ಡು ಕೊಟ್ಟು, ಅದನ್ನೇ ಚಂದಾ ರೀತಿಯಲ್ಲಿ ಸಂಗ್ರಹಿಸಿದ್ದಾರೆ. ಮೊದಲಿಗಿಂತ ಹೆಚ್ಚು ಹಣ ನೋಡಿ ಸಿಹಿ ಮತ್ತವರ ಸ್ನೇಹಿತರು ಖುಷಿಯಲ್ಲಿದ್ದಾರೆ. ಇತ್ತ ಟ್ರ್ಯಾಕ್ಟರ್‌ ಮೇಲೆ ಅದ್ದೂರಿಯಾಗಿ ಗಣೇಶನ ಆಗಮನವೂ ಆಗಿದೆ. ಬೇಸರದಲ್ಲಿದ್ದ ಸಿಹಿ ಮೊಗದಲ್ಲಿ ಫ್ರೆಂಡ್‌ ರಾಮ್‌ನಿಂದಾಗಿ ಮತ್ತೆ ನಗು ಮೂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ