logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಅನಾಥ ಅಶೋಕನನ್ನು ಚಪ್ಪಲಿಗೆ ಹೋಲಿಸಿ, ಸೀತಾಳ ಸ್ಯಾಲರಿಗೆ ಅಡ್ಡಗಾಲು ಹಾಕಿ ಬೀಗಿದ ಭಾರ್ಗವಿ!

Seetha Rama: ಅನಾಥ ಅಶೋಕನನ್ನು ಚಪ್ಪಲಿಗೆ ಹೋಲಿಸಿ, ಸೀತಾಳ ಸ್ಯಾಲರಿಗೆ ಅಡ್ಡಗಾಲು ಹಾಕಿ ಬೀಗಿದ ಭಾರ್ಗವಿ!

Sep 27, 2023 06:30 AM IST

google News

Seetha Rama: ಅನಾಥ ಅಶೋಕನನ್ನು ಚಪ್ಪಲಿಗೆ ಹೋಲಿಸಿ, ಸೀತಾಳ ಸ್ಯಾಲರಿಗೆ ಅಡ್ಡಗಾಲು ಹಾಕಿ ಬೀಗಿದ ಭಾರ್ಗವಿ!

    • ಬಹುದಿನಗಳ ಬಳಿಕ ಸೀತಾ ಮತ್ತು ಭಾರ್ಗವಿಯ ಮುಖಾಮುಖಿಯಾಗಿದೆ. ಇತ್ತ ಬಾಸ್‌ ಕುರ್ಚಿ ಮೇಲೆ ಕೂತಿದ್ದ ಅಶೋಕನನ್ನು ನೋಡಿ, ಆತನನ್ನು ಕೆಣಕಿದ್ದಾಳೆ. ಚಪ್ಪಲಿಯನ್ನು ಎಲ್ಲಿಡಬೇಕೋ ಅಲ್ಲಿಯೇ ಇಡಬೇಕು ಎಂದು ಅಶೋಕನನ್ನು ಚಪ್ಪಲಿಗೆ ಹೋಲಿಸಿ, ಅವನನ್ನು ಹೊರಕಳಿಸಿದ್ದಾಳೆ ಭಾರ್ಗವಿ.
Seetha Rama: ಅನಾಥ ಅಶೋಕನನ್ನು ಚಪ್ಪಲಿಗೆ ಹೋಲಿಸಿ, ಸೀತಾಳ ಸ್ಯಾಲರಿಗೆ ಅಡ್ಡಗಾಲು ಹಾಕಿ ಬೀಗಿದ ಭಾರ್ಗವಿ!
Seetha Rama: ಅನಾಥ ಅಶೋಕನನ್ನು ಚಪ್ಪಲಿಗೆ ಹೋಲಿಸಿ, ಸೀತಾಳ ಸ್ಯಾಲರಿಗೆ ಅಡ್ಡಗಾಲು ಹಾಕಿ ಬೀಗಿದ ಭಾರ್ಗವಿ!

Seetha Rama: Serial 53th Episode: ಕಂಪನಿಯಿಂದ ಅಡ್ವಾನ್ಸ್‌ ಸ್ಯಾಲರಿ ಸಿಗ್ತಿದೆ. ಆಲ್ಮೋಸ್ಟ್‌ ಎಲ್ಲವೂ ರೆಡಿಯಾಗಿದೆ ಎಂದು ಲಾಯರ್‌ಗೆ ಹೇಳಿದ್ದಾಳೆ ಸೀತಾ. ಇನ್ನೇನು ಮುಂಗಡ ಸಂಬಳ ಕೈಗೆ ಸಿಗುತ್ತಿದ್ದಂತೆ, ಬ್ಯಾಂಕ್‌ನವರ ಸಾಲ ತೀರಿಸಿ ಮನೆ ಉಳಿಸಿಕೊಳ್ಳಲು ಪ್ಲಾನ್‌ ಮಾಡಿದ್ದಾಳೆ. ಇತ್ತ ಎಷ್ಟು ಸಾಧ್ಯವೋ ಅಷ್ಟು ಬೇಗ ಹಣ ರೆಡಿಮಾಡಿಟ್ಟುಕೊಳ್ಳಿ ಎಂದಿದ್ದಾನೆ ಲಾಯರ್‌ ರುದ್ರಪ್ರತಾಪ್.

ಇತ್ತ ರಾಮನ ಫೋನ್‌ ಸ್ವಿಚ್‌ ಆಫ್‌ ಮಾಡಿ, ಗಂಡ ವಿಶ್ವಜಿತ್‌ನನ್ನು ಕರೆದುಕೊಂಡು ಆಫೀಸ್‌ಗೆ ಹೊರಟುನಿಂತಿದ್ದಾಳೆ ಭಾರ್ಗವಿ. ಮಾವಯ್ಯನ ಮುಂದೆ ಎಂದಿನಂತೆ ತನ್ನ ನಾಟಕವನ್ನಾಡಿ, ತಾನೆಷ್ಟು ಒಳ್ಳೆಯವಳೆಂದು ತೋರಿಸಿದ್ದಾಳೆ. ಈ ಇಬ್ಬರೂ ಆಫೀಸ್‌ಗೆ ಹೋಗುವ ವಿಚಾರವನ್ನು ಸಾಧನಾ ತನ್ನ ಗಂಡನ ಗಮನಕ್ಕೆ ತಂದಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ, ಎದ್ನೋ ಬಿದ್ನೋ ಅಂತ ದೇವಸ್ಥಾನಕ್ಕೆ ಓಡಿದ್ದಾನೆ ಚಿಕ್ಕಪ್ಪ.

ಬಹುದಿನಗಳ ಬಳಿಕ ಒಂದು ದೊಡ್ಡ ಪ್ಲಾನ್‌ ಹಾಕಿಕೊಂಡೇ ಆಫೀಸ್‌ಗೆ ಎಂಟ್ರಿಕೊಟ್ಟಿದ್ದಾಳೆ ಭಾರ್ಗವಿ. ಬೇಕು ಅಂತಲೇ ರಾಮನ ಫೋನ್‌ ಆಫ್‌ ಮಾಡಿ, ಅವನಿಲ್ಲದ ಹೊತ್ತಲ್ಲೇ ಯಾರಿಗೂ ಹೇಳದೇ ದಿಢೀರ್‌ ಭೇಟಿ ನೀಡಿದ್ದಾಳೆ. ಇತ್ತ ಭಾರ್ಗವಿಯ ಆಗಮನದ ಸಣ್ಣ ಸುಳಿವೂ ಇಲ್ಲದೇ ಎಂದಿನಂತೆ ಬಾಸ್‌ ಚೇಂಬರ್‌ನಲ್ಲಿ ಕೂತಿದ್ದಾನೆ ಅಶೋಕ. ತನ್ನ ಕೆಲಸದಲ್ಲಿ ಮಗ್ನನಾಗಿದ್ದಾನೆ. ರಾಮ್‌ ಬಾರದಿದ್ದಕ್ಕೆ ಫೋನ್‌ ಮಾಡಿಯೂ ಟ್ರೈ ಮಾಡಿದ್ದಾನೆ ಅಶೋಕ.

ಬಹುದಿನಗಳ ಬಳಿಕ ಸೀತಾ ಮತ್ತು ಭಾರ್ಗವಿಯ ಮುಖಾಮುಖಿಯಾಗಿದೆ. ಸೀತಾ ಅಷ್ಟೇ ನಯವಾಗಿ ಗುಡ್‌ ಮಾರ್ನಿಂಗ್‌ ಎಂದರೆ, ಅದೇ ಗತ್ತಲ್ಲಿ ಭಾರ್ಗವಿ ಆಫೀಸ್‌ ಚೇಂಬರ್‌ ಪ್ರವೇಶಿಸಲು ಮುಂದಾಗಿದ್ದಾಳೆ. ಇನ್ನೊಂದೆಡೆ ರಾಮನಿಗಾಗಿ ದೇವಸ್ಥಾನಕ್ಕೆ ತೆರಳಿ ಹುಡುಕಾಟಕ್ಕಿಳಿದಿದ್ದಾನೆ ಚಿಕ್ಕಪ್ಪ. ಇಡೀ ದೇವಸ್ಥಾನ ಹುಡುಕಿದರೂ ಆತನ ಸುಳಿವೇ ಸಿಗದಿದ್ದಕ್ಕೆ ಪರದಾಡಿದ್ದಾನೆ.

ರಾಮ್‌ ಇನ್ನೂ ಬಂದಿರಲಿಲ್ಲ. ಹಾಗಾಗಿ ಒಂದಷ್ಟು ಕೆಲಸ ಇತ್ತು ಎಂದು ಅಶೋಕ ಹೇಳುತ್ತಿದ್ದಂತೆ, ಅವನಿಲ್ಲ ಅಂದರೆ, ಅವನ ಖುರ್ಚಿಯಲ್ಲಿ ನೀನು ಕೂತುಬಿಡ್ತಿಯಾ ಎಂದು ಪ್ರಶ್ನಿಸಿದ್ದಾಳೆ. ಭಾರ್ಗವಿ ಮಾತಿಗೆ ಕೊಂಚ ತಡಬಡಾಯಿಸಿದ್ದಾನೆ ಅಶೋಕ. ನಿನ್ನ ಬೆಸ್ಟ್‌ ಫ್ರೆಂಡ್‌ ಸಿಂಹಾಸನಕ್ಕೇ ಕಣ್ಣಾಕಿದಿಯ ಅಶೋಕ ಎಂದಿದ್ದಾಳೆ.

ನಿನಗೆ ನೀನ್ಯಾರು, ನಿನ್ನ ಅಪ್ಪ ಅಮ್ಮ ಯಾರು ಒಂದೂ ಗೊತ್ತಿಲ್ಲ. ನಿನಗೆ ದೇಸಾಯಿ ಮನೆತನದ ಗೌರವ ಬೇಕಾ? ಮಾವಯ್ಯನ ಮುಂದೆ ನೀನು ಫ್ಯಾಮಿಲಿ ಮೆಂಬರ್‌ ಎಂದು ಅಕ್ಸೆಪ್ಟ್‌ ಮಾಡಿದ್ದು, ಅವರ ಮೇಲಿನ ಗೌರವಕ್ಕೆ ವಿನಃ, ನಿನ್ನ ಮೇಲಿನ ಅಕ್ಕರೆಯಿಂದಲ್ಲ. ಚಪ್ಪಲಿಯನ್ನು ಎಲ್ಲಿಡಬೇಕೋ ಅಲ್ಲಿಯೇ ಇಡಬೇಕು ಎಂದು ಅಶೋಕನನ್ನು ಚಪ್ಪಲಿಗೆ ಹೋಲಿಸಿದ ಭಾರ್ಗವಿ, ಅವನನ್ನು ಹೊರಕಳಿಸಿದ್ದಾಳೆ. ಇತ್ತ ಸೀತಾಳನ್ನು ಚೇಂಬರ್‌ಗೆ ಕರೆಸಿಕೊಂಡು, ಅಡ್ವಾನ್ಸ್‌ ಸ್ಯಾಲರಿಯನ್ನು ಕ್ಯಾನ್ಸಲ್‌ ಮಾಡಿ ಬೀಗಿದ್ದಾಳೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ