logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಚಿಕ್ಕಿ ಭಾರ್ಗವಿ ಮಾತನ್ನೇ ಧಿಕ್ಕರಿಸಿ ಮುದ್ದು ಸಿಹಿ ಕೃಷ್ಣನ ಕಾಣಲು ಓಡೋಡಿ ಬಂದ ಶ್ರೀರಾಮ!

Seetha Rama: ಚಿಕ್ಕಿ ಭಾರ್ಗವಿ ಮಾತನ್ನೇ ಧಿಕ್ಕರಿಸಿ ಮುದ್ದು ಸಿಹಿ ಕೃಷ್ಣನ ಕಾಣಲು ಓಡೋಡಿ ಬಂದ ಶ್ರೀರಾಮ!

Sep 09, 2023 06:30 AM IST

google News

Seetha Rama: ಚಿಕ್ಕಿ ಭಾರ್ಗವಿ ಮಾತನ್ನೇ ಧಿಕ್ಕರಿಸಿ ಮುದ್ದು ಸಿಹಿ ಕೃಷ್ಣನ ಕಾಣಲು ಓಡೋಡಿ ಬಂದ ಶ್ರೀರಾಮ!

    • ಸೀತಾ ರಾಮರ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಹಬ್ಬದ ದಿನವೇ ಅಶೋಕನ ಮನಸು ನೋಯಿಸಿದ್ದಾಳೆ ಭಾರ್ಗವಿ. ನೀನು ಬಂದ್ರೇ ನಾನು ಡಾನ್ಸ್‌ ಮಾಡೋದು ಎಂದು ರಾಮನಿಗೆ ಆಹ್ವಾನಿಸಿದ್ದಾಳೆ ಸಿಹಿ. ಹಾಗಾದರೆ ಚಿಕ್ಕಿ ಮಾತು ಧಿಕ್ಕರಿಸಿ ರಾಮನ ಆಗಮನವಾಗುತ್ತಾ?
Seetha Rama: ಚಿಕ್ಕಿ ಭಾರ್ಗವಿ ಮಾತನ್ನೇ ಧಿಕ್ಕರಿಸಿ ಮುದ್ದು ಸಿಹಿ ಕೃಷ್ಣನ ಕಾಣಲು ಓಡೋಡಿ ಬಂದ ಶ್ರೀರಾಮ!
Seetha Rama: ಚಿಕ್ಕಿ ಭಾರ್ಗವಿ ಮಾತನ್ನೇ ಧಿಕ್ಕರಿಸಿ ಮುದ್ದು ಸಿಹಿ ಕೃಷ್ಣನ ಕಾಣಲು ಓಡೋಡಿ ಬಂದ ಶ್ರೀರಾಮ!

Seetha Rama: ಸಿಹಿ ಕೃಷ್ಣನ ವೇಷದಲ್ಲಿ ಕಂಗೊಳಿಸುತ್ತಿದ್ದಾಳೆ. ವಠಾರದ ಮಕ್ಕಳೆಲ್ಲ ಕೃಷ್ಣ ರಾಧೆಯರ ವೇಷದಲ್ಲಿ ವೇದಿಕೆ ಮೇಲೆ ಆಟವಾಡುತ್ತಿದ್ದಾರೆ. ಮಕ್ಕಳ ತುಂಟಾಟವನ್ನು ಹೆತ್ತವರು ಕಣ್ತುಂಬಿಕೊಳ್ಳುತ್ತಿದ್ದಾರೆ. ವಠಾರದಲ್ಲಿ ಜನ್ಮಾಷ್ಟಮಿ ನಿಮಿತ್ತ ಸೀತಾಗೂ ಯಶೋದೆ ವೇಷ ಹಾಕಲಾಗಿದೆ. ಇತ್ತ ರಾಮನ ಮನೆಯಲ್ಲೂ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಜೋರಾಗಿದೆ. ಇದೇ ನೆಪದಲ್ಲಿ ಆಫೀಸ್‌ನಲ್ಲಿನ ವ್ಯವಹಾರಗಳನ್ನು ಕ್ಲಿಯರ್‌ ಮಾಡುವಂತೆ ಮ್ಯಾನೇಜರ್‌ಗೆ ಆರ್ಡರ್‌ ಮಾಡುತ್ತಿದ್ದಾಳೆ ಭಾರ್ಗವಿ.

ಭಾರ್ಗವಿಯ ಮಾತುಗಳನ್ನು ಅಶೋಕ ಕೇಳಿಸಿಕೊಳ್ಳುತ್ತಿದ್ದಾನೆ. ಇದನ್ನು ನೋಡಿದ ಭಾರ್ಗವಿ, ಇನ್ನೂ ಯಾಕೆ ಆಫೀಸ್‌ಗೆ ಹೋಗಿಲ್ಲ ಅಶೋಕ್‌ ಎಂದು ಕೇಳಿದ್ದಾಳೆ. ಅದಕ್ಕೆ ನನ್ನಿಂದ ನಿಮಗೆ ಏನಾದ್ರೂ ಬೇಜಾರು ಆಗಿದ್ಯಾ ಚಿಕ್ಕಿ. ಯಾವಾಗ್ಲೂ ಕಳಿಸೋಕೆ ನೋಡ್ತಿರ್ತಿರಾ ಎನ್ನುತ್ತಾನೆ. ರಾಮ್‌ ಬಿಟ್ಟು ಬೇರೆ ಯಾರೇ ನನ್ನನ್ನು ಚಿಕ್ಕಿ ಅಂದ್ರೆ ನನಗೆ ಇಷ್ಟ ಆಗಲ್ಲ ಎನ್ನುತ್ತಾಳೆ ಭಾರ್ಗವಿ.

ಯಾವಾಗ್ಲೂ ಭಾರ್ಗವಿ ನಿನ್ನನ್ನು ಮನೆಯಿಂದ ಹೊರಗೆ ಹಾಕ್ತಾಳೆ ಎಂದುಕೊಳ್ಳಬೇಡ. ದೇವಸ್ಥಾನದ ಹುಂಡೀಲಿ ನೋಟೂ ಇರುತ್ವೆ, ಚಿಲ್ಲರೇನೂ ಇರುತ್ವೆ. ಈ ಮನೆ ದೇವಸ್ಥಾನ ಇದ್ದ ಹಾಗೆ ಎಂದು ಪರೋಕ್ಷವಾಗಿ ಅಶೋಕನ ಮನಸ್ಸು ನೋಯಿಸುತ್ತಾಳೆ ಭಾರ್ಗವಿ. ಇತ್ತ ಆಫೀಸ್‌ಗೆ ಫೋನ್‌ ಮಾಡಿ, ಮ್ಯಾನೇಜರ್‌ ಚರಣ್‌ಗೆ ನಾನು ಬರ್ತಾಯಿದ್ದೇನೆ, ಕೊಂಚ ತಡವಾಗುತ್ತೆ ಎಂದು ಹೇಳುತ್ತಾನೆ ಅಶೋಕ.

ರಾಮನ ಮನೆಯಲ್ಲಿ ಪೂಜೆ ಶುರುವಾಗಿದೆ. ಹೀಗಿರುವಾಗಲೇ ಸಿಹಿ ಕಡೆಯಿಂದ ರಾಮ್‌ಗೆ ಫೋನ್‌ ಬಂದಿದೆ. ಭಾರ್ಗವಿಯೇ ರಾಮನಿಗೆ ಫೋನ್‌ ನೀಡಿ, ಯಾರಿದು ಫ್ರೆಂಡ್‌ ಎಂದು ಪ್ರಶ್ನೆ ಮಾಡಿದ್ದಾಳೆ. ಅಷ್ಟೊತ್ತಿಗೆ ಚಿಕ್ಕಿ ಕೈಯಲ್ಲಿನ ಫೋನ್‌ ಕಸಿದುಕೊಂಡು ಜಾಗ ಖಾಲಿ ಮಾಡಿದ್ದಾನೆ ರಾಮ. ರಾಮನ ಈ ನಡೆ ಕಂಡು, ಕದ್ದುಮುಚ್ಚಿ ಮಾತನಾಡುವ ಫ್ರೆಂಡ್‌ ಯಾರಿರಬಹುದು ಎಂಬ ಅನುಮಾನ ಭಾರ್ಗವಿಗೆ ಮೂಡಿದೆ.

ಫ್ರೆಂಡ್‌ ರಾಮ್‌ಗೆ ವಿಡಿಯೋ ಕಾಲ್‌ ಮಾಡಿದ ಸಿಹಿ, ಕೃಷ್ಣ ವೇಷ ತೋರಿಸಿ ನನ್ನದು ಡಾನ್ಸ್‌ ಇದೆ, ಆದಷ್ಟು ಬೇಗ ಬಾ ಫ್ರೆಂಡ್‌ ಎಂದು ಹೇಳುತ್ತಾಳೆ. ಫ್ರೆಂಡ್‌ ಬರೋವರೆಗೂ ನಾನು ಡಾನ್ಸ್‌ ಮಾಡಲ್ಲ ಎಂದು ಹಟ ಹಿಡಿದಿದ್ದಾಳೆ ಸಿಹಿ. ಚಿಕ್ಕಿಯ ಮಾತನ್ನೂ ಮೀರಿ ರಾಮನ ಸ್ಥಿತಿ ಕಂಡು, ಸಿಹಿ ಬಳಿ ಕರೆದೊಯ್ದಿದ್ದಾನೆ ಅಶೋಕ. ಇತ್ತ ಯಾರು ಆ ಫ್ರೆಂಡ್‌ ಎಂಬ ಅನುಮಾನ ಭಾರ್ಗವಿ ತಲೆಯಲ್ಲಿ ಕೊರೆಯುತ್ತಿದೆ. ಈ ಕಡೆ ಯಶೋದೆಯಾದ ಸೀತಾ, ಸಿಹಿ ಜತೆಗೆ ಕೃಷ್ಣನ ಹಾಡಿಗೆ ಹೆಜ್ಜೆಹಾಕಿದ್ದಾಳೆ. ರಾಮನ ಎಂಟ್ರಿ ಆಗುತ್ತಾ?

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ