logo
ಕನ್ನಡ ಸುದ್ದಿ  /  ಮನರಂಜನೆ  /  Shambhavi Serial: 100 ಸಂಚಿಕೆ ಪೂರೈಸಿದ ಶಾಂಭವಿ ಧಾರಾವಾಹಿ; ಅನಾಥಾಶ್ರಮದ ಮಕ್ಕಳ ಜತೆ ಸಿಂಪಲ್‌ ಸುನಿ ತಂಡದ ಸಂಭ್ರಮ

Shambhavi Serial: 100 ಸಂಚಿಕೆ ಪೂರೈಸಿದ ಶಾಂಭವಿ ಧಾರಾವಾಹಿ; ಅನಾಥಾಶ್ರಮದ ಮಕ್ಕಳ ಜತೆ ಸಿಂಪಲ್‌ ಸುನಿ ತಂಡದ ಸಂಭ್ರಮ

Jan 11, 2024 11:09 AM IST

google News

Shambhavi Serial: 100 ಸಂಚಿಕೆ ಪೂರೈಸಿದ ಶಾಂಭವಿ ಧಾರಾವಾಹಿ; ಅನಾಥಾಶ್ರಮದ ಮಕ್ಕಳ ಜತೆ ಸಿಂಪಲ್‌ ಸುನಿ ಮತ್ತವರ ತಂಡದ ಸಂಭ್ರಮ

    • ಸಿನಿಮಾ ನಿರ್ದೇಶಕ ಸಿಂಪಲ್‌ ಸುನಿ ನಿರ್ದೇಶನದ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಸೀರಿಯಲ್‌ ಇದೀಗ 100 ಸಂಚಿಕೆಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇಡೀ ತಂಡ ಅನಾಥಾಶ್ರಮದಲ್ಲಿ ಈ ಖುಷಿಯ ಕ್ಷಣವನ್ನು ಸಂಭ್ರಮಿಸಿದೆ. 
Shambhavi Serial: 100 ಸಂಚಿಕೆ ಪೂರೈಸಿದ ಶಾಂಭವಿ ಧಾರಾವಾಹಿ; ಅನಾಥಾಶ್ರಮದ ಮಕ್ಕಳ ಜತೆ ಸಿಂಪಲ್‌ ಸುನಿ ಮತ್ತವರ ತಂಡದ ಸಂಭ್ರಮ
Shambhavi Serial: 100 ಸಂಚಿಕೆ ಪೂರೈಸಿದ ಶಾಂಭವಿ ಧಾರಾವಾಹಿ; ಅನಾಥಾಶ್ರಮದ ಮಕ್ಕಳ ಜತೆ ಸಿಂಪಲ್‌ ಸುನಿ ಮತ್ತವರ ತಂಡದ ಸಂಭ್ರಮ

Shambhavi Serial: ಸಿಂಪಲ್ ಆಗಿ ಒಂದು ಲವ್ ಸ್ಟೋರಿ’ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಹೊಸ ಅನುಭವ ಎನ್ನುವಂತೆ ’ಶಾಂಭವಿ’ ಧಾರವಾಹಿಯನ್ನು ಸುನಿ ಸಿನಿಮಾಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡುವುದರೊಂದಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ರವಿತೇಜ ನಿರ್ದೇಶನದಲ್ಲಿ ಧಾರವಾಹಿಯು ಯಶಸ್ವಿ 100 ಕಂತುಗಳನ್ನು ಪೂರೈಸಿ ಮುನ್ನುಗುತ್ತಿದೆ.

ಇದರನ್ವಯ ತಂಡವು ಹಸೆರುಘಟ್ಟದಲ್ಲಿರುವ ’ಕಾವೇರಿ ವನಿತಾ ಸೇವಾ ಶ್ರಮ’ಕ್ಕೆ ಭೇಟಿ ನೀಡಿ ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಕಲಾವಿದರು ಸಂತಸವನ್ನು ಹಂಚಿಕೊಂಡರು. ಅಲ್ಲದೆ ಕನ್ನಡದ ಸೀರಿಯಲ್ ತೆಲುಗುದಲ್ಲಿ ’ಭೈರವಿ’ ಮತ್ತು ಮರಾಠಿ ಭಾಷೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಿಮೇಕ್ ಆಗುತ್ತಿರುವುದು ವಿಶೇಷ.

ಕಥೆಯ ಕುರಿತು ಹೇಳುವುದಾದರೆ ಶಿವಗಾಮಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಅಗರ್ಭ ಶ್ರೀಮಂತೆ. ಈಕೆಯ ಸಂಸ್ಥೆಗೆ ಶಿಕ್ಷಕನಾಗಿ ಸೇರುವ ನಾಯಕ ಅಶೋಕನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಇಬ್ಬರಿಗೂ ಹುಟ್ಟಿದ ಆರು ವರ್ಷದ ಮಗುವೇ ಶಾಂಭವಿ. ತರುವಾಯ ಮಗು ಕಾಣೆಯಾಗುತ್ತದೆ. ಇದರಿಂದ ಅಮ್ಮ ಹುಚ್ಚಿಯಾಗುತ್ತಾಳೆ. ಅದೇ ಸಮಯಕ್ಕೆ ದೇವಿಯ ಪ್ರತಿಷ್ಠಾಪನೆ ಆಗುತ್ತದೆ. ಕಾಣೆಯಾದ ಮಗುವಿಗೂ ದೇವಿ ಇರುವ ಜಾಗಕ್ಕೂ ಸಂಬಂಧವಿರುತ್ತದೆ. ಮುಂದೇ ಅನೇಕ ತಿರುವುಗಳು ಪಡೆದುಕೊಳ್ಳುತ್ತದೆ. ಅದೇನೆಂದು ತಿಳಿಯಲು ಧಾರವಾಹಿ ವೀಕ್ಷಿಸಬೇಕು.

ಶಾಂಭವಿ ಮತ್ತು ಭೈರವಿ ಹೀಗೆ ಎರಡು ಪಾತ್ರದಲ್ಲಿ ಬೇಬಿ ರಚನಾ.ಟಿ.ಬಿ, ಅಮ್ಮನಾಗಿ ಐಶ್ವರ್ಯ ಸಿಂಧೋಗಿ, ಖಳನಾಗಿ ಚೇತನ್ ಗಂಧರ್ವ ಇವರೊಂದಿಗೆ ಸೋನಂ ರೈ, ಅಂಬುಜಾಕ್ಷಿ, ಪೂಜಿತಾ, ಡಾಲಿ ರಾಜೇಶ್, ಸೂರ್ಯ ಕುಂದಾಪುರ, ರೋಹಿತ್ ನಾಯರ್, ಶ್ಯಾಮಲಮ್ಮ ಮುಂತಾದವರು ನಟಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಡಾ.ವಿ. ನಾಗೇಂದ್ರಪ್ರಸಾದ್, ವೈಬಿಆರ್. ಮನು ಛಾಯಾಗ್ರಹಣ, ಪರಂ ಸಂಕಲನ, ಪುಗಳ್ಮಣಿ ರಚನೆ- ಚಿತ್ರಕಥೆ, ರಾಧಾ ವೆಂಕಟ್ ಸಂಭಾಷಣೆ ಇರಲಿದೆ. ಶಾಂಭವಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ’ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ