Kannada Serial TRP: ಟಿಆರ್‌ಪಿ ಲೆಕ್ಕಾಚಾರದಲ್ಲಿ ಧಾರಾವಾಹಿಗಳ ಪೈಪೋಟಿ; ಸೀತಾ ರಾಮ, ಗಟ್ಟಿಮೇಳ ನಡುವೆ ತುರುಸಿನ ಸ್ಪರ್ಧೆ
Oct 13, 2023 02:56 PM IST
Kannada Serial TRP: ಟಿಆರ್‌ಪಿ ಲೆಕ್ಕಾಚಾರದಲ್ಲಿ ಧಾರಾವಾಹಿಗಳ ಪೈಪೋಟಿ; ಸೀತಾ ರಾಮ, ಗಟ್ಟಿಮೇಳ ನಡುವೆ ತುರುಸಿನ ಸ್ಪರ್ಧೆ
- Kannada Serials TRP This Week: ಈ ವಾರದ ಸೀರಿಯಲ್ ಟಿಆರ್‌ಪಿ ಹೊರಬಿದ್ದಿದೆ. ಪುಟ್ಟಕ್ಕನ ಮಕ್ಕಳು ಯಥಾಸ್ಥಿತಿಯಲ್ಲಿದ್ದರೆ, ಸೀತಾ ರಾಮ ಮತ್ತು ಗಟ್ಟಿಮೇಳ ನಡುವೆ ಪೈಪೋಟಿ ನಡೆಯುತ್ತಿದೆ. ಟಾಪ್ ಐದು ಧಾರಾವಾಹಿಗಳ ಕುರಿತು ಇಲ್ಲಿದೆ ಮಾಹಿತಿ.
Kannada Serial TRP: ಕನ್ನಡ ಕಿರುತೆರೆಯಲ್ಲಿ ವೀಕ್ಷಕರನ್ನು ಸೆಳೆಯಲು ಬಿಗ್‌ಬಾಸ್ ರಿಯಾಲಿಟಿ ಶೋ ಸಹ ಎಂಟ್ರಿಯಾಗಿದೆ. ಸಮ್‌ಥಿಂಗ್ ಸ್ಪೇಷಲ್ ಎನ್ನುತ್ತಲೇ ನೋಡುಗರನ್ನು ಆಕರ್ಷಿಸಿರುವ ಈ ಶೋ ನಡುವೆಯೂ ಸೀರಿಯಲ್‌ಗಳೂ ವೀಕ್ಷಣೆಯಲ್ಲಿ ಮುಂದಿವೆ. ಟಿಆರ್‌ಪಿ ವಿಚಾರದಲ್ಲಿಯೂ ನೋಡುಗ ವರ್ಗವನ್ನು ಸೆಳೆದು, ನಂಬರ್ಸ್ ಹೆಚ್ಚು ಮಾಡಿಕೊಳ್ಳುತ್ತಿವೆ.
ವಿನೂತನ ಪ್ರಯೋಗಗಳ ಮೂಲಕ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿವೆ ಸಾಕಷ್ಟು ಧಾರಾವಾಹಿಗಳು. ಜಿದ್ದಿಗೆ ಬಿದ್ದಂತೆ, ತಮ್ಮ ವೀಕ್ಷಕ ವರ್ಗಕ್ಕೆ ಹೊಸತೆನಿಸುವ ಹೊಸದನ್ನೇ ನೀಡುವ ತುಡಿತದಲ್ಲಿವೆ. ಮೇಕಿಂಗ್ ವಿಚಾರದಲ್ಲಿಯೋ, ಆಕರ್ಷಕ ಕಥೆಯಿಂದಲೂ ವೀಕ್ಷಕರ ಮನಸೆಳೆಯುತ್ತಿವೆ. ಅದೇ ರೀತಿ ಈ ವಾರದ ಟಿಆರ್‌ಪಿ ಸಹ ಇದೀಗ ಹೊರಬಿದ್ದಿದೆ. ಹಾಗಾದರೆ ಈ ವಾರದ ಟಾಪ್ 5 ಧಾರಾವಾಹಿಗಳು ಯಾವವು?
ಈ ವಾರ ಟಿಆರ್‌ಪಿಯಲ್ಲಿ ಹೊಸ ಬದಲಾವಣೆಗಳೇನೂ ಆಗಿಲ್ಲ. ಸಣ್ಣ ಸಣ್ಣ ಅಂಕಿ ಅಂಶಗಳಲ್ಲಿ ಒಂದಷ್ಟು ಏರಿಳಿತ ಕಾಣಿಸಿದೆ. ಈ ಹಿಂದಿದ್ದ ಸ್ಥಾನಗಳನ್ನೇ ಕೆಲವು ಸೀರಿಯಲ್‌ಗಳು ಭದ್ರಪಡಿಸಿಕೊಂಡಿವೆ. ಹಾಗಾದರೆ, ಈ ವಾರ ಯಾವೆಲ್ಲ ಧಾರಾವಾಹಿಗಳು ಯಾವ್ಯಾವ ಸ್ಥಾನದಲ್ಲಿವೆ, ವೀಕ್ಷಕ ಯಾವ ಸೀರಿಯಲ್‌ನ್ನು ಹೆಚ್ಚು ನೋಡಿದ್ದಾನೆ? ಇಲ್ಲಿದೆ ಮಾಹಿತಿ.
ಪುಟ್ಟಕ್ಕನ ಮಕ್ಕಳು
ಕಳೆದ ಕೆಲ ತಿಂಗಳಿಂದ ಟಿಆರ್‌ಪಿ ವಿಚಾರದಲ್ಲಿ ಮೊದಲ ಸ್ಥಾನದಲ್ಲಿ ಗಟ್ಟಿಯಾಗಿ ನೆಲೆಯೂರಿರುವುದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಬೇರಾವ ಸೀರಿಯಲ್‌ಗಳ ಪೈಪೋಟಿಗೂ ಇದು ನಿಲುಕುತ್ತಿಲ್ಲ. ಆ ಮಟ್ಟಿಗೆ ಟಿಆರ್‌ಪಿಯಲ್ಲಿ ಮುನ್ನೆಡೆ ಸಾಧಿಸಿದೆ. ಈ ವಾರವೂ ಮೊದಲ ಸ್ಥಾನದಲ್ಲಿದೆ.
ಸೀತಾ ರಾಮ
ಅದೇ ರೀತಿ ನೋಡುಗ ವರ್ಗವನ್ನು ದಿನದಿಂದ ದಿನಕ್ಕೆ ದ್ವಿಗುಣಗೊಳಿಸಿಕೊಳ್ಳುತ್ತಿರುವ ಜೀ ಕನ್ನಡದ ಮತ್ತೊಂದು ಧಾರಾವಾಹಿ ಎಂದರೆ ಅದು ಸೀತಾ ರಾಮ. ರೋಚಕ ಟ್ವಿಸ್ಟ್ ಮೂಲಕ ನೋಡುಗರನ್ನು ಸೆಳೆಯುತ್ತಿರುವ ಈ ಸೀರಿಯಲ್, ಸದ್ಯ ಸೀತಾ ರಾಮರ ನಡುವಿನ ಭಾಂದವ್ಯವನ್ನು ಮತ್ತಷ್ಟು ಗಟ್ಟಿ ಮಾಡುತ್ತಿದೆ. ಈ ಧಾರಾವಾಹಿ ಸದ್ಯ ಟಾಪ್ ಎರಡಲ್ಲಿದೆ.
ಗಟ್ಟಿಮೇಳ
ಈ ಹಿಂದೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಟ್ಟಿಮೇಳ ಜತೆಯಾಗಿಯೇ ಸಾಗುತ್ತಿತ್ತು. ಸೀತಾ ರಾಮ ಪ್ರಸಾರ ಆರಂಭವಾದ ಬಳಿಕ ನಿಧಾನಕ್ಕೆ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿಯಿತು. ಇದೀಗ ಈ ಸೀರಿಯಲ್ ಈ ವಾರ ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ. ಈ ಮೂಲಕ ಸೀತಾ ರಾಮ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ಕಳೆದ ವಾರ ಈ ಸೀರಿಯಲ್ ಮೂರನೇ ಸ್ಥಾನದಲ್ಲಿತ್ತು.
ಶ್ರೀರಸ್ತು ಶುಭಮಸ್ತು
ಕಳೆದ ವಾರ ಆರನೇ ಸ್ಥಾನದಲ್ಲಿದ್ದ ಜೀ ಕನ್ನಡದ ಶ್ರೀ ರಸ್ತು ಶುಭ ಮಸ್ತು ಸೀರಿಯಲ್, ಇದೀಗ ಈ ವಾರ ನೇರವಾಗಿ ಮೇಲ್ಮುಖವಾಗಿ ಜಿಗಿದಿದೆ. ಅಂದರೆ, ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ಅಜಿತ್ ಹಂದೆ ಮತ್ತು ಸುಧಾರಾಣಿ ಮದುವೆ ಬಳಿಕ ಈ ಸೀರಿಯಲ್ ಹೆಚ್ಚೆಚ್ಚು ವೀಕ್ಷಕ ವರ್ಗವನ್ನು ಸೃಷ್ಟಿಸಿಕೊಳ್ಳುವುದರ ಜತೆಗೆ ಟಿಆರ್‌ಪಿಯಲ್ಲೂ ಕಮಾಲ್ ಮಾಡುತ್ತಿದೆ.
ಸತ್ಯ
ಕಳೆದ ಸಲವೂ ನಾಲ್ಕನೇ ಸ್ಥಾನದಲ್ಲಿ ತಟಸ್ಥವಾಗಿದ್ದ ಸತ್ಯ ಸೀರಿಯಲ್ ಈ ವಾರವೂ ಅದೇ ಸ್ಥಾನದಲ್ಲಿದೆ. ನೋಡುಗ ವರ್ಗವನ್ನು ಸೆಳೆಯುವಲ್ಲಿ ಈ ಸೀರಿಯಲ್ ಸಹ ಮುಂಚೂಣಿಯಲ್ಲಿದ್ದು, ಟಿಆರ್‌ಪಿಯಲ್ಲೂ ಕಳೆದ ಬಾರಿಗಿಂತ ಕೊಂಚ ಏರಿಕೆಯನ್ನೇ ಕಂಡಿದೆ.
ಅಮೃತಧಾರೆ
ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ನಟನೆಯ ಅಮೃತಧಾರೆ ಸೀರಿಯಲ್, ಮೇಕಿಂಗ್ ಮತ್ತು ಕಥೆಯ ಮೂಲಕ ನೋಡುಗರನ್ನು ಸೆಳೆಯುತ್ತಿದೆ. ಈ ಸೀರಿಯಲ್ ಸಹ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ವಾರದಂತೆ ಐದನೇ ಸ್ಥಾನದಲ್ಲಿ ಉಳಿದುಕೊಂಡಿದ್ದ ಈ ಧಾರಾವಾಹಿ, ಈ ವಾರವೂ ಐದನೇ ಸ್ಥಾನದಲ್ಲಿಯೇ ಮುಂದುವರಿದೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ