logo
ಕನ್ನಡ ಸುದ್ದಿ  /  ಮನರಂಜನೆ  /  Bbk10: ಬಿಗ್‌ ಬಾಸ್‌ ಸೀಸನ್‌ 10ರ ಪ್ರೋಮೋ ರಿಲೀಸ್‌; ನೂರು ದಿನದ ಹಬ್ಬಕ್ಕೆ ವೀಕ್ಷಕರಿಂದಲೇ ಸಿಕ್ತು ಚಾಲನೆ

BBK10: ಬಿಗ್‌ ಬಾಸ್‌ ಸೀಸನ್‌ 10ರ ಪ್ರೋಮೋ ರಿಲೀಸ್‌; ನೂರು ದಿನದ ಹಬ್ಬಕ್ಕೆ ವೀಕ್ಷಕರಿಂದಲೇ ಸಿಕ್ತು ಚಾಲನೆ

Sep 14, 2023 09:03 PM IST

google News

BBK10: ಬಿಗ್‌ ಬಾಸ್‌ ಸೀಸನ್‌ 10ರ ಪ್ರೋಮೋ ರಿಲೀಸ್‌; ನೂರು ದಿನದ ಹಬ್ಬಕ್ಕೆ ವೀಕ್ಷಕರಿಂದಲೇ ಸಿಕ್ತು ಚಾಲನೆ

    • ಬಿಗ್‌ ಬಾಸ್‌ ಸೀಸನ್‌ 10ರ ಎರಡನೇ ಪ್ರೋಮೋ ಬಿಡುಗಡೆ ಆಗಿದೆ. ಕಿಚ್ಚ ಸುದೀಪ್‌ ಬ್ಲಾಕ್‌ ಸೂಟ್‌ನಲ್ಲಿ ಮಿಂಚುಹರಿಸಿದ್ದಾರೆ. ಬನ್ನಿ ಎಲ್ಲರೂ ಸೇರಿ ಹಬ್ಬ ಮಾಡೋಣ ಎಂಬ ಸುಳಿವನ್ನೂ ನೀಡಿದ್ದಾರೆ.
BBK10: ಬಿಗ್‌ ಬಾಸ್‌ ಸೀಸನ್‌ 10ರ ಪ್ರೋಮೋ ರಿಲೀಸ್‌; ನೂರು ದಿನದ ಹಬ್ಬಕ್ಕೆ ವೀಕ್ಷಕರಿಂದಲೇ ಸಿಕ್ತು ಚಾಲನೆ
BBK10: ಬಿಗ್‌ ಬಾಸ್‌ ಸೀಸನ್‌ 10ರ ಪ್ರೋಮೋ ರಿಲೀಸ್‌; ನೂರು ದಿನದ ಹಬ್ಬಕ್ಕೆ ವೀಕ್ಷಕರಿಂದಲೇ ಸಿಕ್ತು ಚಾಲನೆ

Bigg Boss Kannada 10: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿರುವ ಬಿಗ್‌ ರಿಯಾಲಿಟಿ ಶೋ, ಬಿಗ್‌ಬಾಸ್‌ ಸೀಸನ್‌ 10ಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಶೀಘ್ರದಲ್ಲಿ ಶುರು ಎಂಬಂತೆ ವಾಹಿನಿ ಈ ಹಿಂದೆಯೇ ಕಿರು ಪ್ರೋಮೋ ರಿಲೀಸ್‌ ಮಾಡಿತ್ತು. ಆದರೆ, ಯಾವಾಗ ಎಂಬ ಪ್ರಶ್ನೆಯನ್ನು ಹಾಗೆಯೇ ಉಳಿಸಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಕಿಚ್ಚ ಸುದೀಪ್‌ ಇರುವ ಪ್ರೋಮೋ ಝಲಕ್‌ ರಿಲೀಸ್‌ ಮಾಡಿದೆ.

ಸೆ. 2ರ ಸುದೀಪ್‌ ಬರ್ತ್‌ಡೇ ಪ್ರಯುಕ್ತ ಬಿಡುಗಡೆಯಾಗಿದ್ದ ಮೊದಲ ಪ್ರೋಮೋದಲ್ಲಿ ಶೋನ ನಿರೂಪಕ ಕಿಚ್ಚ ಕಾಣಿಸಿರಲಿಲ್ಲ. ಇದೀಗ ಸುದೀಪ್‌ ಅವತಾರವನ್ನು ವಾಹಿನಿ ರಿವೀಲ್‌ ಮಾಡಿದೆ. ವಿಶೇಷ ಪ್ರೋಮೋ ಮೂಲಕ ಹಬ್ಬ ಮಾಡೋಣ ಬನ್ನಿ ಎಂದು ಆಹ್ವಾನಿಸಿದ್ದಾರೆ ಕಿಚ್ಚ ಸುದೀಪ್. ಈ ಮೂಲಕ ಬಿಗ್‌ಬಾಸ್‌ ಅಭಿಮಾನಿಗಳಿಗೆ ಹಬ್ಬದುಡುಗೊರೆ ನೀಡಿದ್ದಾರೆ.

ಏನಿದೆ ಪ್ರೋಮೋದಲ್ಲಿ?

ಬಿಗ್‌ಬಾಸ್‌ನ ಪ್ರತೀ ಸೀಸನ್‌ನ ಘೋಷಣೆಗೆ ರಿಲೀಸ್‌ ಆಗುವ ಪ್ರೋಮೋಗಳೇ ಹೆಚ್ಚು ಗಮನ ಸೆಳೆಯುತ್ತಿರುತ್ತವೆ. ಈ ಸಲವೂ ಸಮ್‌ಥಿಂಗ್‌ ಸ್ಪೆಷಲ್‌ ಅನ್ನೋ ಪರಿಕಲ್ಪನೆಯಲ್ಲಿ ವೀಕ್ಷಕರನ್ನು ಆಕರ್ಷಿಸಲು ಮುಂದಡಿ ಇಟ್ಟಿದೆ. ಅದರಂತೆ ಬಿಡುಗಡೆಯಾದ ಕಿರು ಪ್ರೋಮೋದಲ್ಲಿ ವೀಕ್ಷಕರಿಂದಲೇ ಬಿಗ್‌ಬಾಸ್‌ಗೆ ಚಾಲನೆ ಕೊಡಿಸಿದೆ ವಾಹಿನಿ. "ಏನ್‌ ಸರ್‌ ಹೊಸ ಫೋನಾ? ಎಂದು ಆಫೀಸ್‌ನ ಸೆಕ್ಯೂರಿಟಿಗೆ ಕೇಳುತ್ತಾನೆ ಯುವಕ. ಅದಕ್ಕೆ ಉತ್ತರವೆಂಬಂತೆ, ಹೌದು ಸರ್‌, ಮಗ ಕೊಡಿಸಿದ್ದು ಹಬ್ಬಕ್ಕೆ ಎನ್ನುತ್ತಾನೆ. ಇತ್ತ ಚೆಸ್‌ ಬೋರ್ಡ್‌ ಮುಂದೆ ಬ್ಲಾಕ್‌ ಸೂಟ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ"

"ಅದೇ ಯುವಕ ಆಟೋ ಏರಿ ಮನೆ ಕಡೆ ಹೋಗುವಾಗ, ಆಟೋ ಡ್ರೈವರ್‌ ಕಡೆಯಿಂದ ಹಬ್ಬ ಶುರುವಾಗುತ್ತಿದೆ ಎಂಬ ಉತ್ತರ ಸಿಗುತ್ತದೆ. ಮನೆ ಬಳಿ ಬಂದರೆ, ಇಡೀ ಗಲ್ಲಿ ಹಬ್ಬಕ್ಕೆ ತಯಾರಿ ನಡೆಸಿದೆ. ಆಗಲೂ ಗಲಿಬಿಲಿಗೊಳ್ಳುವ ಆತನಿಗೆ, ಏನಿದು ಎಂಬ ಪ್ರಶ್ನೆ ಕಾಡುತ್ತದೆ. ಇದು ನೂರು ದಿನದ ಹಬ್ಬ ಎಂದು ಮತ್ತೊಬ್ಬ ಹೇಳುತ್ತಾನೆ. ಅಷ್ಟೊತ್ತಿಗೆ ಬಿಗ್‌ ಬಾಸ್‌ ಸೀಸನ್‌ 10 ಲುಕ್‌ ಅನಾವರಣವಾಗುತ್ತದೆ. ಸುದೀಪ್‌ ಕಣ್ಣು ಮಿಟುಕಿಸಿ, ಹ್ಯಾಪಿ ಬಿಗ್‌ಬಾಸ್‌ ಎನ್ನುತ್ತಾರೆ" ಈ ಮೂಲಕ ಊರಹಬ್ಬಕ್ಕೆ ವೀಕ್ಷಕರಿಂದಲೇ ಚಾಲನೆ ಕೊಡಿಸಿದೆ ಕಲರ್ಸ್‌ ಕನ್ನಡ ವಾಹಿನಿ.

ಮಾಸಾಂತ್ಯಕ್ಕೆ ಆರಂಭ?

ಇತ್ತ ಪ್ರೋಮೋ ಏನೋ ರಿಲೀಸ್‌ ಆಯ್ತು. ಇದರ ಜತೆಗೆ ಹತ್ತು ಹಲವು ಜನರ ಹೆಸರುಗಳೂ ಈ ಸಲದ ಬಿಗ್‌ಬಾಸ್‌ ಲಿಸ್ಟ್‌ನಲ್ಲಿವೆ. ಈಗಾಗಲೇ ಒಂದಷ್ಟು ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆಯಾದರೂ, ಪಕ್ಕಾ ಆಗಿಲ್ಲ. ಅಧಿಕೃತವಾಗಿ ಶೋ ಆರಂಭವಾದ ಬಳಿಕವೇ ಆ ಕುತೂಹಲಕ್ಕೆ ಬ್ರೇಕ್‌ ಬೀಳಲಿದೆ. ಹಾಗಾದರೆ ಸೀಸನ್‌ 10 ಶುರುವಾಗುವುದು ಯಾವಾಗ? ಶೀಘ್ರದಲ್ಲಿ ಆ ಪ್ರಶ್ನೆಗೂ ಉತ್ತರ ದಕ್ಕಲಿದೆ. ಕೆಲ ಮೂಲಗಳ ಪ್ರಕಾರ ಈ ಮಾಸಾಂತ್ಯಕ್ಕೆ ಶೋ ಆರಂಭವಾಗಲಿದೆಯಂತೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ