ಬಿಗ್‌ಬಾಸ್ ಕನ್ನಡ ಹೊರತುಪಡಿಸಿ ಬೇರೆ ಏನು ನೋಡಬಹುದು? ಟಿವಿ ಚಾನೆಲ್‌ಗಳ 15ಕ್ಕೂ ಹೆಚ್ಚು ಕಾರ್ಯಕ್ರಮಗಳ ವಿವರ
Oct 19, 2024 11:58 AM IST
ಕನ್ನಡ ಮನರಂಜನೆ ವಾಹಿನಿಗಳ ಕಾರ್ಯಕ್ರಮಗಳ ವಿವರ
- ಬಿಗ್‌ಬಾಸ್ ಹೊರತುಪಡಿಸಿ ಕನ್ನಡ ಮನರಂಜನಾ ವಾಹಿನಿಗಳಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸೀರಿಯಲ್‌ಗಳು, ಅಡುಗೆ, ಸಿನಿಮಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೋಡಬಹುದು. ಇಲ್ಲೊಂದಿಷ್ಟು ಕನ್ನಡ ಟಿವಿಗಳ ಕಾರ್ಯಕ್ರಮಗಳ ವಿವರ ನೀಡಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯ ಬಿಗ್‌ಬಾಸ್ ರಿಯಾಲಿಟಿ ಶೋ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದೆ. ಸ್ವರ್ಗ ನರಕ ವಿವಾದ, ಮನೆಯೊಳಗೆ ಬಳಸಿರುವ ಪದ ಬಳಕೆಗಳು ಸೇರಿದಂತೆ ವಿವಿಧ ಕಾರಣಕ್ಕೆ ಟ್ರೆಂಡಿಂಗ್‌ನಲ್ಲಿದೆ. ಇದೇ ಸಮಯದಲ್ಲಿ ಕಲರ್ಸ್ ಕನ್ನಡದಲ್ಲಿ ಬಿಗ್‌ಬಾಸ್ ಹೊರತುಪಡಿಸಿ ಬೇರೆ ಯಾವೆಲ್ಲ ಕಾರ್ಯಕ್ರಮಗಳು ಇವೆ ಎಂಬ ಮಾಹಿತಿ ಪಡೆಯೋಣ.
ಬಿಗ್‌ಬಾಸ್ ಕನ್ನಡ ಶೋವನ್ನು ಸಾಕಷ್ಟು ಜನರು ನೋಡುತ್ತಾರೆ. ಟಿಆರ್‌ಪಿಯಲ್ಲಿಯೂ ಇದು ದಾಖಲೆ ಮಾಡಿದೆ. ಕಿಚ್ಚ ಸುದೀಪ್ ವೀಕೆಂಡ್ ಶೋಗೆ ಹೆಚ್ಚಿನ ಟಿಆರ್‌ಪಿ ಇದೆ. ಶನಿವಾರ ಮತ್ತು ಭಾನುವಾರ 9 ಗಂಟೆಗೆ ಮತ್ತು ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 9.30 ಗಂಟೆಗೆ ಈ ಕಾರ್ಯಕ್ರಮ ನಡೆಯುತ್ತದೆ.
ಕಲರ್ಸ್ ಕನ್ನಡದ ಕಾರ್ಯಕ್ರಮಗಳು ಮತ್ತು ಪ್ರಸಾರ ಸಮಯ
- ಬೆಳಗ್ಗೆ 7.30 ಗಂಟೆಗೆ ಮಹರ್ಷಿ ವಾಣಿ ಇರುತ್ತದೆ. ಇದು ಸೋಮವಾರದಿಂದ ಶನಿವಾರದ ತನಕ ಇರುವ ಕಾರ್ಯಕ್ರಮವಾಗಿದೆ.
- ಸವಿರುಚಿ ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗುತ್ತದೆ.
- ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 1 ಗಂಟೆಗೆ ಪವಾಡ ಪುರುಷ ಕಾರ್ಯಕ್ರಮ ಇರುತ್ತದೆ.
- ಸಂಜೆ 4 ಗಂಟೆಗೆ (ಸೋಮವಾರ-ಶನಿವಾರ) ತೆನಾಲಿ ರಾಮ ಧಾರಾವಾಹಿ ನೋಡಬಹುದು.
- ಸಂಜೆ 6 ಗಂಟೆಗೆ ಪ್ರಸಾರವಾಗುವ ಕರಿಮಣಿ ಸೀರಿಯಲ್(ಸೋಮವಾರ- ಶುಕ್ರವಾರ) ಕೂಡ ಜನಪ್ರಿಯತೆ ಪಡೆದಿದೆ.
- ದೃಷ್ಟಿಬೊಟ್ಟು ಸೀರಿಯಲ್ ಪ್ರತಿದಿನ ಸಂಜೆ 6.30 ಗಂಟೆಗೆ ಪ್ರಸಾರವಾಗುತ್ತದೆ.
- ಭಾಗ್ಯಲಕ್ಷ್ಮಿ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಇರುತ್ತದೆ.
- ಲಕ್ಷ್ಮಿ ಬಾರಮ್ಮ ಧಾರಾವಾಹಿಯು ಶನಿವಾರ ರಾತ್ರಿ 7.30 ಗಂಟೆಗೆ ಪ್ರಸಾರಗೊಳ್ಳುತ್ತದೆ. ಈ ಸೀರಿಯಲ್ ಕೂಡ ಸೋಮವಾರದಿಂದ ಶನಿವಾರದವರೆಗೆ ಇರುತ್ತದೆ.
- ಶ್ರೀಗೌರಿ ಸೀರಿಯಲ್ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30 ಗಂಟೆಗೆ ಇರುತ್ತದೆ.
- ರಾಮಚಾರಿ ಸೀರಯಲ್ ಸೋಮವಾರದಿಂದ ಶುಕ್ರವಾರದವರಗೆ ಪ್ರತಿರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ.
ಬಿಗ್‌ಬಾಸ್ ಕನ್ನಡದ ಇತ್ತೀಚಿನ ಅಪ್‌ಡೇಟ್‌ಗಳು
ಕಲರ್ಸ್ ಕನ್ನಡದ ಈ ಶೋ ಎಲ್ಲಾ ನೋಡ್ತಿವಿ, ಝೀ ಕನ್ನಡದಲ್ಲಿ ಏನಿದೆ ಎಂದು ಕೇಳುವಿರಾ?
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್: ಬೆಳಗ್ಗೆ 10 ಗಂಟೆಯಿಂದ 11.30 ಗಂಟೆಗೆ ಮತ್ತು ರಾತ್ರಿ 11 ಗಂಟೆಯಿಂದ 12 ಗಂಟೆಯವರೆಗೆ
ಕಾಮಿಡಿ ಕಿಲಾಡಿಗಳು: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ರಾತ್ರಿ 9 ಗಂಟೆಯಿಂದ 11 ಗಂಟೆಯವರೆಗೆ ನೋಡಬಹುದು.
ಸೀರಿಯಲ್‌ಗಳು: ಲಕ್ಷ್ಮಿ ನಿವಾಸ, ಅಮೃತಧಾರೆ, ಶ್ರೀರಸ್ತು ಶುಭಮಸ್ತು, ಪುಟ್ಟಕ್ಕನ ಮಕ್ಕಳು, ಬ್ರಹ್ಮಗಂಟು, ಶ್ರಾವಣಿಸುಬ್ರಹ್ಮಣ್ಯ ಸೇರಿದಂತೆ ಹಲವು ಧಾರಾವಾಹಿಗಳನ್ನು ನೋಡಬಹುದು.
ಇದಲ್ಲದೆ ಜೀ ಕನ್ನಡ ಕುಟುಂಬ ಅವಾರ್ಡ್ ನಡೆಯುತ್ತಿದೆ. ಜೀ ಕನ್ನಡ ಕುಟುಂಬ ಅವಾರ್ಡ್ಸ್-2024 'Nomination Event ಶನಿ-ಭಾನು ಸಂಜೆ 5:30ರಿಂದ 7:30ರವರೆಗೆ ನಡೆಯುತ್ತದೆ. ಇದು ಕೂಡ ಈ ವೀಕೆಂಡ್‌ಗೆ ಖುಷಿ ನೀಡಬಹುದು.
ಸುವರ್ಣ ಸೆಲೆಬ್ರಿಟಿ ಲೀಗ್
ಇದಲ್ಲದೆ ಸ್ಟಾರ್ ಸುವರ್ಣ, ಉದಯ ಟಿವಿ ಸೇರಿದಂತೆ ವಿವಿಧ ಚಾನೆಲ್‌ಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ಸದ್ಯ ಸುವರ್ಣ ಸೆಲೆಬ್ರಿಟಿ ಲೀಗ್ ಕಾರ್ಯಕ್ರಮ ಸಾಕಷ್ಟು ಕುತೂಹಲ ಕೆರಳಿಸಿದೆ. ಇಲ್ಲೂ ಹಳೆಯ ಬಿಗ್‌ಬಾಸ್ ಸ್ಪರ್ಧಿಗಳಿದ್ದು, ಬಿಗ್‌ಬಾಸ್ ಕನ್ನಡ ಸೀಸನ್ 11 ಜಗಳ ಬೋರ್ ಹೊಡೆದರೆ ಈ ಚಾನೆಲ್ ನೀಡಬಹುದು. ಒಟ್ಟಾರೆ, ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹಲವು ಮನರಂಜನೆ ವಾಹಿನಿಗಳು ಭರಪೂರ ಮನರಂಜನೆಯ ರಸದೌತಣ ನೀಡುತ್ತಿವೆ ಎಂದರೆ ತಪ್ಪಾಗದು.