Bhagyalakshmi Serial: ಅತ್ತೆಯೊಂದಿಗೆ ಸ್ಕೂಲ್‌ಗೆ ಹೊರಟ ಭಾಗ್ಯ; ಮಕ್ಕಳ ಜೊತೆ ನಾಡಗೀತೆ ಹಾಡುವಂತೆ ಸೊಸೆಗೆ ಒತ್ತಾಯಿಸುವ ಕುಸುಮ
Jul 26, 2023 10:11 AM IST
ಭಾಗ್ಯಲಕ್ಷ್ಮಿ ಧಾರಾವಾಹಿ ದೃಶ್ಯ
ಸ್ಕೂಲ್‌ನಲ್ಲಿ ಮಕ್ಕಳು ನಾಡಗೀತೆ ಹಾಡುವುದನ್ನು ನೋಡಿ, ನೀನೂ ಹಾಡು ಎಂದು ಕುಸುಮಾ ಸೊಸೆಗೆ ಹೇಳುತ್ತಾರೆ. ಮಗಳು ತನ್ವಿ ವಿರುದ್ಧ ಕಂಪ್ಲೇಂಟ್ ಮಾಡಲು ಅತ್ತೆ ಬಹುಶ: ನನ್ನನ್ನು ಇಲ್ಲಿಗೆ ಕರೆ ತಂದಿರಬಹುದು ಎಂದುಕೊಳ್ಳುವ ಭಾಗ್ಯಾಗೆ ಅತ್ತೆಯ ವರ್ತನೆ ಗೊಂದಲ ಉಂಟು ಮಾಡುತ್ತದೆ.
ಸಂಜೆ 7 ಗಂಟೆ ಆಗುವುದೇ ತಡ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಲು ಕಿರುತೆರೆಪ್ರಿಯರು ಕುಟುಂಬದೊಂದಿಗೆ ಟಿವಿ ಮುಂದೆ ಹಾಜರಿರುತ್ತಾರೆ. ಮುಗ್ಧ ಭಾಗ್ಯಳ ಅವಸ್ಥೆ ಕಂಡು ಮರುಗುತ್ತಾರೆ. ಮದುವೆ ಆಗಿ ಮಕ್ಕಳಿದ್ದರೂ ಶ್ರೇಷ್ಠ ಜೊತೆ ಲವ್ವಿ ಡವ್ವಿ ಮಾಡುತ್ತಿರುವ ತಾಂಡವ್‌ಗೆ ಹಿಡಿ ಶಾಪ ಹಾಕುತ್ತಾರೆ. ಒಟ್ಟಿನಲ್ಲಿ ಒಂದು ಎಪಿಸೋಡ್‌ಗಿಂತ ಮತ್ತೊಂದು ಎಪಿಸೋಡ್ ಚೆನ್ನಾಗಿರುತ್ತದೆ.
ಸೊಸೆಗೆ ಧೈರ್ಯ ತುಂಬಿದ ಕುಸುಮಾ
ಭಾಗ್ಯ ಬಟ್ಟೆ ಒಗೆಯುತ್ತಾ ಮಳೆಯಲ್ಲಿ ನೆನೆಯುವುದನ್ನು ನೋಡಿದ ಅತ್ತೆ ಬೇಸರ ವ್ಯಕ್ತಪಡಿಸುತ್ತಾಳೆ. ಸೊಸೆಯ ಅಳು ನೋಡಿ ತಾನೂ ಅಳುತ್ತಾಳೆ. ಮಗಳ ಮಾತಿಗೆಲ್ಲಾ ಬೇಸರ ಮಾಡಿಕೊಳ್ಳಬೇಡ ಅವರಿಗೆ ಬುದ್ಧಿ ಕಲಿಸೋಕೆ ನಿಮಿಷ ಸಾಕು, ತಾಂಡವ್ ನೋಡು, ನಾನು ಬುದ್ಧಿ ಹೇಳಿದ ಕೂಡಲೇ ಅವನು ತಿದ್ದಿಕೊಂಡ ಎನ್ನುತ್ತಾಳೆ. ನಿಮ್ಮ ಮಗ ಬದಲಾಗಿಲ್ಲ, ಅವರು ನಾಟಕ ಆಡುತ್ತಿರುವುದು ಇದನ್ನು ನಿಮಗೆ ಹೇಗೆ ಅರ್ಥ ಮಾಡಿಸುವುದು ಎಂದು ಭಾಗ್ಯ ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ. ನಿನಗೆ ಎಲ್ಲರೂ ಗೌರವ ಕೊಡುವಂತೆ ಮಾಡುತ್ತೇನೆ ಬೇಗ ರೆಡಿ ಆಗು ಎಂದು ಕುಸುಮಾ ಭಾಗ್ಯಳಿಗೆ ಹೇಳುತ್ತಾರೆ.
ಅತ್ತೆ ಜೊತೆ ಸ್ಕೂಲ್‌ಗೆ ಹೊರಟ ಭಾಗ್ಯ
ಅತ್ತೆ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ ಎಂದು ಭಾಗ್ಯಳಿಗೆ ಗೊತ್ತಿಲ್ಲ, ಗೊಂದಲದಲ್ಲೇ ಸಿದ್ಧಳಾಗಿ ಬರುತ್ತಾಳೆ. ಅತ್ತೆ ಸೂಚನೆಯಂತೆ ಮಾವನ ಆಶೀರ್ವಾದ ಪಡೆದು ಅತ್ತೆಯೊಂದಿಗೆ ಆಟೋ ಹತ್ತುತ್ತಾಳೆ. ನಂತರ ದೊಡ್ಡ ಸ್ಕೂಲ್ ಮುಂದೆ ಬರುತ್ತಾರೆ. ಅಲ್ಲಿ ಮಕ್ಕಳು ನಾಡಗೀತೆ ಹಾಡುವುದನ್ನು ನೋಡಿ, ನೀನೂ ಹಾಡು ಎಂದು ಕುಸುಮಾ ಸೊಸೆಗೆ ಹೇಳುತ್ತಾರೆ. ಮಗಳು ತನ್ವಿ ವಿರುದ್ಧ ಕಂಪ್ಲೇಂಟ್ ಮಾಡಲು ಅತ್ತೆ ಬಹುಶ: ನನ್ನನ್ನು ಇಲ್ಲಿಗೆ ಕರೆ ತಂದಿರಬಹುದು ಎಂದುಕೊಳ್ಳುವ ಭಾಗ್ಯಾಗೆ ಅತ್ತೆಯ ವರ್ತನೆ ಗೊಂದಲ ಉಂಟು ಮಾಡುತ್ತದೆ. ಆ ಗೊಂದಲದಿಂದಲೇ ಮಕ್ಕಳೊಂದಿಗೆ ನಾಡ ಗೀತೆ ಹಾಡಲು ಶುರು ಮಾಡುತ್ತಾಳೆ.
ಶ್ರೇಷ್ಠ ತಂದೆ-ತಾಯಿ ನೋಡಿ ಶಾಕ್ ಆದ ತಾಂಡವ್
ಇತ್ತ ತಾಂಡವ್, ಮಗಳಿಗಾಗಿ ಐಸ್‌ಕ್ರೀಮ್ ತರಲು ಕಾರಿನಿಂದ ಇಳಿದುಹೋದಾಗ ಶ್ರೇಷ್ಠ ಮತ್ತೆ ಕಾಲ್ ಮಾಡುತ್ತಾಳೆ. ತನ್ವಿ ಕಾಲ್ ರಿಸೀವ್ ಮಾಡುತ್ತಾಳೆ. ಅದನ್ನು ತಿಳಿಯದ ಶ್ರೇಷ್ಠ, ನಿನ್ನ ಭೀಮನ ಅಮವಾಸ್ಯೆ ಪೂಜೆ ಮುಗಿತಾ? ಪತ್ನಿ ಎದುರು ನಾಟಕ ಮುಗಿದಿದ್ರೆ ಬೇಗ ನನ್ನನ್ನು ಮೀಟ್ ಮಾಡು ಎಂದು ಪೋನ್ ಇಡುತ್ತಾಳೆ. ಅಪ್ಪ ಮಾಡುತ್ತಿರುವುದು ನಾಟಕ, ಅವರಿಗೂ ಅಮ್ಮ ಓದುವುದು ಇಷ್ಟವಿಲ್ಲ ಎಂದು ತಿಳಿದು ತನ್ವಿ ಖುಷಿ ಪಡುತ್ತಾಳೆ. ತನ್ನ ತಂದೆ ತಾಯಿ ತಾಂಡವ್‌ನನ್ನು ಭೇಟಿ ಆಗಲು ಬಂದಿರುವ ವಿಚಾರವನ್ನು ಶ್ರೇಷ್ಠ ತಾಂಡವ್‌ನಿಂದ ಮುಚ್ಚಿಡುತ್ತಾಳೆ. ಕಾರು ಇಳಿಯುತ್ತಿದ್ದಂತೆ ಶ್ರೇಷ್ಠ ತಂದೆ ತಾಯಿಯನ್ನು ನೋಡಿ ತಾಂಡವ್ ಶಾಕ್ ಆಗುತ್ತಾನೆ.
ಅತ್ತೆಯ ಮಾತು ಕೇಳಿ ಭಾಗ್ಯ ಸ್ಕೂಲ್‌ಗೆ ಹೋಗಲು ಒಪ್ಪುತ್ತಾಳಾ? ಆಕೆಯ ವಿದ್ಯಾಭ್ಯಾಸ ಹೇಗಿರುತ್ತದೆ? ಶ್ರೇಷ್ಠ ತಂದೆ ತಾಯಿಯನ್ನು ತಾಂಡವ್ ಹೇಗೆ ಸಂಭಾಳಿಸುತ್ತಾನೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.