Dr Bro: ಶೀಘ್ರದಲ್ಲಿ ಮತ್ತೆ ಯೂಟ್ಯೂಬ್ ಅಖಾಡಕ್ಕೆ ಡಾ ಬ್ರೋ! ಯೂಟ್ಯೂಬರ್ ಮಹಾಬಲ ಕಡೆಯಿಂದ ಬಂತು ಸುಳಿವು
Dec 22, 2023 02:35 PM IST
Dr Bro: ಶೀಘ್ರದಲ್ಲಿ ಮತ್ತೆ ಯೂಟ್ಯೂಬ್ ಅಖಾಡಕ್ಕೆ ಡಾ. ಬ್ರೋ! ಯೂಟ್ಯೂಬರ್ ಮಹಾಬಲ ಕಡೆಯಿಂದ ಬಂತು ಸುಳಿವು
- ಯೂಟ್ಯೂಬ್‌ನಲ್ಲಿ ಡಾ. ಬ್ರೋ ಕಾಣಿಸಿಕೊಳ್ಳದೆ ಒಂದು ತಿಂಗಳ ಮೇಲಾಯಿತು. ಸಾರ್ವಜನಿಕವಾಗಿಯೂ ಎಲ್ಲಿಯೂ ಕಾಣಿಸಿಕೊಳ್ಳದ ಗಗನ್ ಶ್ರೀನಿವಾಸ್ ಎಲ್ಲಿದ್ದಾರೆ? ಈ ಬಗ್ಗೆ ಗ್ಲೋಬಲ್ ಕನ್ನಡಿಗ ಯೂಟ್ಯೂಬ್‌ನ ಮಹಾಬಲ ಮಾತನಾಡಿದ್ದಾರೆ.
Dr Bro Kannada Youtube: ಖ್ಯಾತ ಯೂಟ್ಯೂಬರ್ ಡಾ. ಬ್ರೋ ಕಳೆದ ಕೆಲ ತಿಂಗಳಿಂದ ಯೂಟ್ಯೂಬ್‌ನಲ್ಲಿ ಕಂಡಿಲ್ಲ. ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟರ್‌ನಿಂದಲೂ ಅವರು ಅಂತರ ಕಾಯ್ದುಕೊಂಡಿದ್ದಾರೆ. ಇತ್ತ ಎಲ್ಲೋದ್ರು ಡಾ. ಬ್ರೋ ಎಂದು ಅವರ ವಿಡಿಯೋ ವೀಕ್ಷಕರು ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಆದರೆ, ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಯಾರ ಕಣ್ಣಿಗೂ ಬಿದ್ದಿಲ್ಲ, ಯಾರ ಕೈಗೂ ಸಿಕ್ಕಿಲ್ಲ. ಹಾಗಾದ್ರೆ ಎಲ್ಲಿದ್ದಾರೆ ಡಾ. ಬ್ರೋ?
ನವೆಂಬರ್ 14ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳ ಜತೆಗೆ ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಡಾ. ಬ್ರೋ ಪೋಸ್ಟ್ ಮಾಡಿದ್ದರು. ಅದಾದ ಬಳಿಕ ಚೀನಾ ದೇಶದ ಕೆಲ ವಿಶೇಷ ಸ್ಥಳಗಳನ್ನು ನೋಡುಗರಿಗೆ ವಿಡಿಯೋ ಮೂಲಕ ಪರಿಚಯಿಸಿದ್ದರು ಡಾ. ಬ್ರೋ. ಆ ವಿಡಿಯೋ ನವೆಂಬರ್ 29ರಂದು ಅಪ್‌ಲೋಡ್ ಆಗಿತ್ತು. ಅದಾದ ಮೇಲೆ ಗಗನ್ ಅವರ ಬೇರಾವ ವಿಡಿಯೋ ಅವರ ಯೂಟ್ಯೂಬ್ ಖಾತೆಯಲ್ಲಿ ಅಪ್‌ಲೋಡ್ ಆಗಿರಲಿಲ್ಲ.
ವಾರಕ್ಕೆ ಒಂದರಂತೆ ವಿಡಿಯೋ ಹಾಕ್ತಿದ್ದ ಡಾ. ಬ್ರೋ, ಯಾವಾಗ ವಿಡಿಯೋಗಳು ಮಿಸ್ ಆದವೋ, ಅವರ ಆಪ್ತ ಸ್ನೇಹಿತರ ಯೂಟ್ಯೂಬರ್‌ಗಳ ವಿಡಿಯೋಗಳಿಗೆ ಡಾ. ಬ್ರೋ ಎಲ್ಲಿ ಎಂದು ಕಾಮೆಂಟ್ ಮಾಡಿದ್ದರು ಅವರ ಫಾಲೋವರ್ಸ್. ಆ ಪೈಕಿ ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್‌ನ ಮಹಾಬಲ ಅವರಿಗೂ ಡಾ. ಬ್ರೋ ಕುರಿತು ಸಾಕಷ್ಟು ಕಾಮೆಂಟ್‌ಗಳು ಸಂದಾಯವಾಗಿದ್ದವು. ಅದರಂತೆ 10 ದಿನಗಳ ಹಿಂದಷ್ಟೇ ತಾವೇ ವಿಡಿಯೋ ಮಾಡಿ ಮಾಹಿತಿ ನೀಡಿದ್ದರು ಮಹಾಬಲ.
ಇದೀಗ ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ಜತೆಗೆ ಮಹಾಬಲ ವಿಶೇಷ ಸಂದರ್ಶನ ನೀಡಿದ್ದಾರೆ. ಆ ಸಂದರ್ಶನದಲ್ಲಿ ಡಾ. ಬ್ರೋ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ? ಮತ್ತೆ ಯಾವಾಗ ಯೂಟ್ಯೂಬ್‌ಗೆ ಬರ್ತಾರೆ? ಎಂಬ ಬಗ್ಗೆ ವಿವರ ನೀಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಅಸೈನ್‌ಮೆಂಟ್‌ಗಳಲ್ಲಿ ಡಾ. ಬ್ರೋ ಬಿಜಿಯಾಗಿದ್ದಾರೆ. ಇನ್ನೇನು ಶೀಘ್ರದಲ್ಲಿ ಮತ್ತೆ ಬರ್ತಾರೆ ಎಂದಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕೆಲಸ ಮುಗೀತು
"ಸ್ಟಾರ್ ಸ್ಪೋರ್ಟ್ಸ್ ಕನ್ನಡಕ್ಕೆ ಅಸೈನ್‌ಮೆಂಟ್‌ಗಳಲ್ಲಿ ಡಾ. ಬ್ರೋ ಬಿಜಿಯಾಗಿದ್ದಾರೆ. ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಿಜಿಯಾಗಿದ್ದರು. ಆ ಅವಕಾಶ ಎಲ್ಲ ಯೂಟ್ಯೂಬರ್‌ಗಳಿಗೂ ಸಿಗಲ್ಲ. ಅದು ಡಾ. ಬ್ರೋಗೆ ಸಿಕ್ಕಿತ್ತು. ಅಷ್ಟೇ ಚೆನ್ನಾಗಿ ಅದನ್ನು ನಿಭಾಯಿಸಿದ್ದಾರೆ. ದೇಶದಲ್ಲಿ ಎಲ್ಲೆಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುತ್ತವೆಯೋ ಅಲ್ಲೆಲ್ಲ ಹೋಗಿ ವಿಡಿಯೋ ಮಾಡಿದ್ದರು. ಆ ಅಸೈನ್‌ಮೆಂಟ್ ಮೇಲೆ ಹೋಗಿದ್ದರಿಂದ ಟೈಮ್ ಸಿಕ್ಕಿರಲಿಲ್ಲ. ಹಾಗಂತ ಅವರೇ ನನಗೆ ಹೇಳಿದ ಮಾತಿದು. ಅದನ್ನು ಬಿಟ್ಟರೆ, ಒಮ್ಮಿಂದೊಮ್ಮೆ ಹೊಸ ಸಿರೀಸ್ ಪ್ಲಾನ್ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.
ಹೊಸ ದೇಶಕ್ಕೆ ಹೋಗಬೇಕು. ವೀಸಾ ತೆಗೆದುಕೊಳ್ಳಬೇಕು, ಯಾವ ದೇಶಕ್ಕೆ ಹೋಗಬೇಕು ಅಲ್ಲಿನ ಸ್ಥಿತಿಗತಿ ಹೇಗಿದೆ ಎಲ್ಲವನ್ನೂ ಗಮನಿಸಬೇಕು. ನೂರಾರು ರಿಸರ್ಚ್‌ಗಳು ಇರುತ್ತವೆ. ಬೆಳೀತಾ ಬೆಳೀತಾ ಬೇಕಾಬಿಟ್ಟಿ ಮಾಡೋಕೆ ಆಗಲ್ಲ. ಡೀಪ್ ಆಗಿಯೇ ಮಾಡಬೇಕಾಗುತ್ತದೆ. ಆ ಥರದ ಒಂದು ಪ್ರಯತ್ನದಲ್ಲಿ ಅವರಿದ್ದಾರೆ. ಇದೆಲ್ಲದರ ನಡುವೆ ಅವರಿಗೂ ಫ್ಯಾಮಿಲಿ ಇದೆ. ಅದಕ್ಕೂ ಟೈಮ್ ಕೊಡಬೇಕು. ಹಾಗಾಗಿ ಇನ್ನೇನು ಶೀಘ್ರದಲ್ಲಿ ಬರ್ತಾರೆ, ಯಾವ ದೇಶ, ಎಲ್ಲಿಗೆ ಪಯಣ ಎಲ್ಲವನ್ನೂ ತಿಳಿಸ್ತಾರೆ" ಎಂದಿದ್ದಾರೆ ಮಹಾಬಲ.
HT Kannadaಕ್ಕೆ ಈ ಹಿಂದೆ ಡಾ. ಬ್ರೋ ನೀಡಿದ ಸಂದರ್ಶನದ ಕೊಂಡಿ
ವಿಭಾಗ