Instagram Reels: ನೆಂಜಿಲ್ ಜಿಲ್ ಜಿಲ್.. ವೈರಲ್ ಆಗ್ತಿರೋ ಈ ರೀಲ್ಸ್‌ನ ಹಾಡು ಯಾವ ಚಿತ್ರದ್ದು ಗೊತ್ತಾ..ಇಲ್ಲಿದೆ ನೋಡಿ ಫುಲ್ ಡೀಟೆಲ್ಸ್
Apr 10, 2023 01:20 PM IST
ವೈರಲ್ ಆಗುತ್ತಿರುವ ಇನ್‌ಸ್ಟಾಗ್ರಾಮ್ ರೀಲ್ಸ್
- ನೆಂಜಿಲ್ ಜಿಲ್ ಜಿಲ್ ಜಿಲ್.... ಕಾದಿಲ್ ದಿಲ್ ದಿಲ್ ದಿಲ್ ದಿಲ್.. ಕನ್ನತ್ತಿಲ್ ಮುತ್ತಮಿತ್ತಾಲ್.... ಮತ್ತೆ ಮತ್ತೆ ಕೇಳಬೇಕೆನಿಸುವ ಈ ಹಾಡು ತಮಿಳು ಸಿನಿಮಾದ್ದು. ಚಿತ್ರವನ್ನು ನಿರ್ಮಿಸಿದ್ದು ಮಣಿರತ್ನಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದರು.
ಯಾರೆಲ್ಲಾ ಸೋಷಿಯಲ್ ಮೀಡಿಯಾ ಬಳಸುತ್ತೀರ ಎನ್ನುವ ಪ್ರಶ್ನೆಗಿಂತ ಈಗಿನ ಸಂದರ್ಭದಲ್ಲಿ ಯಾರು ಬಳಸುತ್ತಿಲ್ಲ ಎಂಬ ಪ್ರಶ್ನೆ ಸೂಕ್ತವಾಗಿದೆ. ಕೈಗೆಟಕುವ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ದೊರೆಯುತ್ತಿದ್ದಂತೆ, ಎಲ್ಲರೂ ಸೋಷಿಯಲ್ ಮೀಡಿಯಾ ಬಳಸಲು ಆರಂಭಿಸಿದ್ದಾರೆ. ಜೊತೆಗೆ ಯೂಟ್ಯೂಬ್ ಶಾರ್ಟ್ಸ್ ಹಾಗೂ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಿ ಅದನ್ನು ಶೇರ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಗ್ಗಾಗ್ಗೆ ಕೆಲವೊಂದು ರೀಲ್ಸ್, ಶಾರ್ಟ್ಸ್‌ಗಳು ಬಹಳ ಫೇಮಸ್ ಆಗುತ್ತವೆ. ಟ್ರೆಂಡಿಂಗ್‌ನಲ್ಲಿರುವ ಈ ರೀಲ್ಸ್ ನೋಡಿದವರು ನಮ್ಮದೂ ಒಂದು ಇರಲಿ ಎಂದು ತಾವೂ ಕೂಡಾ ಒಂದೆರಡು ಸ್ಟೆಪ್ಸ್ ಹಾಕುತ್ತಾರೆ. ಆದರೆ ಬಹಳಷ್ಟು ಜನರಿಗೆ ವೈರಲ್ ಆಗುತ್ತಿರುವ ಆ ರೀಲ್ಸ್, ಬ್ಯಾಕ್‌ಗ್ರೌಂಡ್ ಹಾಡು ಯಾವುದು ಎಂದು ಮಾಹಿತಿ ಇರುವುದಿಲ್ಲ. ಕಳೆದ ಕೆಲವು ದಿನಗಳಿಂದ ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ನಲ್ಲಿ ನೆಂಜಿಲ್ ಜಿಲ್ ಜಿಲ್... ಹಾಡಿಗೆ ಅನೇಕ ಮಂದಿ ರೀಲ್ಸ್ ಮಾಡುತ್ತಿದ್ದಾರೆ. ಇದು ಸಾಕಷ್ಟು ವೈರಲ್ ಕೂಡಾ ಆಗಿದೆ. ಇದು ಯಾವ ಸಿನಿಮಾ? ಯಾವ ಭಾಷೆಯ ಚಿತ್ರ? ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.
ನೆಂಜಿಲ್ ಜಿಲ್ ಜಿಲ್ ಜಿಲ್.... ಕಾದಿಲ್ ದಿಲ್ ದಿಲ್ ದಿಲ್ ದಿಲ್.. ಕನ್ನತ್ತಿಲ್ ಮುತ್ತಮಿತ್ತಾಲ್.... ಮತ್ತೆ ಮತ್ತೆ ಕೇಳಬೇಕೆನಿಸುವ ಈ ಹಾಡು ತಮಿಳಿನ 'ಕನ್ನತ್ತಿಲ್ ಮುತ್ತಮಿತ್ತಾಲ್' ಚಿತ್ರದ್ದು. ಈ ಹಾಡಿನ ಮೇಲ್ ವರ್ಷನ್‌ನಲ್ಲಿ ನಟ ಮಾಧವನ್ ಹಾಗೂ ಬೇಬಿ ಕೀರ್ತನಾ ನಟಿಸಿದ್ದು ಪಿ. ಜಯಚಂದ್ರನ್ ಹಾಡು ಹಾಡಿದ್ದಾರೆ. ಫೀಮೇಲ್ ವರ್ಷನ್‌ನಲ್ಲಿ ಸಿಮ್ರಾನ್ ಹಾಗೂ ಬೇಬಿ ಕೀರ್ತನಾ ನಟಿಸಿದ್ದಾರೆ. ಹಿನ್ನೆಲೆ ಗಾಯಕಿ, ಖ್ಯಾತ ಕಂಠದಾನ ಕಲಾವಿದೆ ಚಿನ್ಮಯಿ, ಈ ಹಾಡಿಗೆ ದನಿಯಾಗಿದ್ದಾರೆ. ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಮೆಸ್ಟ್ರೋ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.
2002 ಫೆಬ್ರವರಿ 14 ರಂದು ಈ ಸಿನಿಮಾ ತೆರೆ ಕಂಡಿತ್ತು. ಮದ್ರಾಸ್ ಟಾಕೀಸ್ ಬ್ಯಾನರ್ ಅಡಿ ಮಣಿರತ್ನಂ ಹಾಗೂ ಜಿ ಶ್ರೀನಿವಾಸನ್ 'ಕನ್ನತ್ತಿಲ್ ಮುತ್ತಮಿತ್ತಾಲ್' ಚಿತ್ರವನ್ನು ನಿರ್ಮಿಸಿದ್ದು ಮಣಿರತ್ನಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದರು. ತಮಿಳು ಲೇಖಕಿ ಸುಜಾತ ಬರೆದ 'ಅಮುತವುಮ್ ಅವನುಮ್' ಪುಸ್ತಕ ಆಧರಿಸಿದ ಚಿತ್ರವಿದು. ಮಾಧನವ್ , ಸಿಮ್ರಾನ್, ಕೀರ್ತನಾ, ನಂದಿತಾ ದಾಸ್, ಪ್ರಕಾಶ್ ರಾಜ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಆ ಸಮಯದಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರಕ್ಕೆ ನ್ಯಾಷನಲ್ ಫಿಲ್ಮ್ ಅವಾರ್ಡ್, ಫಿಲ್ಮ್‌ಫೇರ್ ಅವಾರ್ಡ್, ತಮಿಳುನಾಡು ಸ್ಟೇಟ್ ಫಿಲ್ಮ್ ಅವಾರ್ಡ್, ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಲಾಸ್ ಏಂಜಲೀಸ್, ಜೆರುಸಲೇಂ ಫಿಲಮ್ ಫೆಸ್ಟಿವಲ್, ಜಿಂಬಾಬ್ವೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಅನೇಕ್ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
ಮತ್ತಷ್ಟು ಮನರಂಜನೆ ಸುದ್ದಿಗಳು
ಟೈಗರ್ ಪ್ರಭಾಕರ್ ಮೂರನೇ ಪತ್ನಿ ಅಂಜು ಹಾಗೂ ಮಗನನ್ನು ನೋಡಿದ್ದೀರಾ... ಇಲ್ಲಿವೆ ನೋಡಿ ಫೋಟೋಗಳು!
1974 ರಲ್ಲಿ ಪ್ರಭಾಕರ್ ಆಲ್ಫೋನ್ಸೋ ಮೇರಿ ಅವರನ್ನು ಮದುವೆಯಾದರು. ಅವರೊಂದಿಗೆ ವಿಚ್ಛೇದನದ ನಂತರ 1985ರಲ್ಲಿ ನಟಿ ಜಯಮಾಲಾ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಕೆಲವು ದಿನಗಳ ನಂತರ ಈ ಸಂಬಂಧದಲ್ಲಿ ಕೂಡಾ ಬಿರುಕು ಮೂಡುತ್ತದೆ. ಕೊನೆಗೆ ಅವರು ರೇಂಜರ್ ಚಿತ್ರದ ಸಹನಟಿ ಅಂಜು ಅವರನ್ನು ಮದುವೆಯಾದರು. ಅಂಜು ಹಾಗೂ ಪ್ರಭಾಕರ್ ದಂಪತಿಗೆ ಒಬ್ಬ ಮಗ ಇದ್ಧಾರೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಇವರ ಹೆಸರು ಅರ್ಜುನ್ ಪ್ರಭಾಕರ್. ಅಂಜು, ಅರ್ಜುನ್ ಫೋಟೋಗಳನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ.
ಗುಳಿಕೆನ್ನೆ ಹುಡುಗನಿಗೆ ತೆಲುಗಿನಲ್ಲೂ ಡಿಮ್ಯಾಂಡ್... ಅಂಧನ ಪಾತ್ರದ ಮೂಲಕ ಪರಭಾಷೆಗೆ ಹಾರಿದ ವಿಜಯ್ ಸೂರ್ಯ
ವಿಜಯ್ ಸೂರ್ಯ ಈಗ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಎಂಬ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಅವರು 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದು ಚಿತ್ರೀಕರಣಕ್ಕಾಗಿ ಬೆಂಗಳೂರು-ಹೈದರಾಬಾದ್ ಎರಡೂ ನಗರಗಳಿಗೂ ಹೋಗಿ ಬಂದು ಮಾಡುತ್ತಿದ್ದಾರೆ. ವಿಜಯ್ ಸೂರ್ಯ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.