ಗಾರ್ಡಿಯನ್ ಓಟಿಟಿ ರಿಲೀಸ್ ದಿನಾಂಕ ಪ್ರಕಟ: ಹನ್ಸಿಕಾ ಮೋಟ್ವಾನಿ ಹಾರರ್ ಡ್ರಾಮಾ ಮನೆಯಲ್ಲೇ ನೋಡಿ
Oct 28, 2024 10:44 AM IST
ಗಾರ್ಡಿಯನ್ ಓಟಿಟಿ ರಿಲೀಸ್ ದಿನಾಂಕ ಪ್ರಕಟ: ಹನ್ಸಿಕಾ ಮೋಟ್ವಾನಿ ಹಾರರ್ ಡ್ರಾಮಾ
- Guardian OTT release date: ಗುರು ಶರವನನ್ ಮತ್ತು ಶಬರಿ ನಿರ್ದೇಶನದ, ಹನ್ಸಿಕಾ ಮೋಟ್ವಾನಿ, ಸುರೇಶ್ ಮೆನನ್, ಶ್ರೀಮಾನ್ ಮುಂತಾದವರು ನಟಿಸಿರುವ ಗಾರ್ಡಿಯನ್ ಎಂಬ ಭಯಾನಕ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ದೀಪಾವಳಿ ವಾರಾಂತ್ಯದಲ್ಲಿ ಹಾರರ್ ಸಿನಿಮಾ ನೋಡಲು ಬಯಸುವವರಿಗೆ ಇದು ಸೂಕ್ತವಾಗಿದೆ.
Guardian OTT release date: ಗಾರ್ಡಿಯನ್ ಎನ್ನುವುದು 2024ರ ತಮಿಳು ಹಾರರ್ ಸಿನಿಮಾ. ಇದರಲ್ಲಿ ಹನ್ಸಿಕಾ ಮೋಟ್ವಾನಿಯವರದ್ದು ನಾಯಕಿ ಪಾತ್ರ. ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸದ್ಯದಲ್ಲಿಯೇ ಆಹಾ ತಮಿಳು ಓಟಿಟಿಯಲ್ಲಿ ಲಭ್ಯವಿರಲಿದೆ. ಅಕ್ಟೋಬರ್ 30ರಂದು ಈ ಹಾರರ್ ಸಿನಿಮಾ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ದೀಪಾವಳಿ ವಾರಾಂತ್ಯದಲ್ಲಿ ಹಾರರ್ ಸಿನಿಮಾ ನೋಡಲು ಬಯಸುವವರಿಗೆ ಇದು ಸೂಕ್ತವಾಗಿದೆ. ಓಟಿಟಿ ಪ್ಲೇ ಪ್ಲೀಮಿಯಂ ಆಪ್‌ನಲ್ಲೂ ಈ ಸಿನಿಮಾ ನೋಡಬಹುದು.
ಇದೇ ವರ್ಷ ಮಾರ್ಚ್ 8ರಂದು ಗಾರ್ಡಿಯನ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಕಥೆ ಮತ್ತು ನಿರ್ದೇಶನ ಗುರು ಶರವಣನ್ ಮತ್ತು ಶಬರಿ ಅವರದ್ದು. ಈ ಸಿನಿಮಾದ ಪ್ರಮುಖ ಪಾತ್ರವನ್ನು ಹನ್ಸಿಕಾ ಮೋಟ್ವಾನಿ ನಿರ್ವಹಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಹಲವು ತಿಂಗಳ ಬಳಿಕ ಇದೀಗ ಓಟಿಟಿಯತ್ತ ಮುಖ ಮಾಡಿದೆ. ಈ ಹಾರರ್ ಥ್ರಿಲ್ಲರ್ ಸಿನಿಮಾದ ಓಟಿಟಿ ಹಕ್ಕುಗಳನ್ನು ಆಹಾ ತಮಿಳು ಪಡೆದುಕೊಂಡಿದೆ. ಇದೀಗ ಆಹಾ ತಮಿಳು ಇದರ ಓಟಿಟಿ ಸ್ಟ್ರೀಮಿಂಗ್ ದಿನಾಂಕದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದೆ.
ಗಾರ್ಡಿಯನ್‌ನಲ್ಲಿ ಹನ್ಸಿಕಾ ಮೋಟ್ವಾನಿ ಅವರು ಅಪರ್ಣಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅಪರ್ಣಾ ವೃತ್ತಿಯಲ್ಲಿ ಆರ್ಕಿಟೆಕ್ಟ್. ಜೀವನದಲ್ಲಿ ತಾನು ಅನ್‌ಲಕ್ಕಿ ಎಂದುಕೊಂಡಿರುತ್ತಾರೆ. ನನಗೆ ಅದೃಷ್ಟವಿಲ್ಲ, ಎಲ್ಲಿ ಹೋದರೂ ಸೋಲು, ಜೀವನದಲ್ಲಿ ಗೆಲುವು ಸಿಗದಂತಹ ದುರಾದೃಷ್ಟವಂತೆ ಎಂದುಕೊಳ್ಳುತ್ತಾರೆ. ಅನೇಕ ದುರಾದೃಷ್ಟ ಘಟನೆಗಳು ಈಕೆಯ ಜೀವನದಲ್ಲಿ ನಡೆಯುತ್ತವೆ. ಆದರೆ, ಒಂದು ಸಣ್ಣ ಅಪಘಾತದ ಬಳಿಕ ಈಕೆಯ ಬದುಕು ಬದಲಾಗುತ್ತದೆ.
ಆ ಸಣ್ಣ ಅಪಘಾತದ ಬಳಿಕ ಆಕೆ ಏನು ಅಂದುಕೊಳ್ಳುತ್ತಾಳೋ ಅದು ನಿಜವಾದ ಬದುಕಿನಲ್ಲಿ ನಡೆಯುತ್ತದೆ. ಆದರೆ, ಕೆಲವೊಮ್ಮೆ ಈಕೆಯ ಒಳ್ಳೆಯ ಕೋರಿಕೆಗಳು ಕೆಟ್ಟ ಪರಿಣಾಮವನ್ನೂ ಉಂಟು ಮಾಡುತ್ತದೆ. ಈಕೆಯನ್ನು ಯಾರೋ ಕೊಲ್ಲಲು ಪ್ರಯತ್ನಿಸುವಂತಹ ಫೀಲ್‌ನೀಡುತ್ತದೆ. ಈಕೆಯ ವಿಶೇಷ ಶಕ್ತಿಯನ್ನು ಯಾವುದೋ ದುಷ್ಟ ಶಕ್ತಿ ಅತಿಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತದೆ. ಮನುಷ್ಯ ಮತ್ತು ಅತಿಮಾನುಷ ಶಕ್ತಿಯ ನಡುವಿನ ಹೋರಾಟ ಆರಂಭವಾಗುತ್ತದೆ.
ಗಾರ್ಡಿಯನ್ ಸಿನಿಮಾದಲ್ಲಿ ಹನ್ಸಿಕಾ ಮೋಟ್ವಾನಿ, ಸುರೇಶ್ ಮೆನನ್, ಶ್ರೀಮನ್, ರಾಜೇಂದ್ರನ್, ಪ್ರದೀಪ್ ರಾಯನ್, ಟೈಗರ್ ಗಾರ್ಡನ್ ತಂಗದುರೈ ಮತ್ತು ಇತರರು ನಟಿಸಿದ್ದಾರೆ. ಶಬರಿ ಮತ್ತು ಗುರುಶರವಣನ್ ನಿರ್ದೇಶಿಸಿದ್ದಾರೆ. ಇವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಫಿಲ್ಮ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಚಂದರ್ ಈ ಚಿತ್ರವನ್ನು ಬೆಂಬಲಿಸಿದ್ದಾರೆ. ಗಾರ್ಡಿಯನ್‌ಗೆ ಸಂಗೀತವನ್ನು ಸ್ಯಾಮ್ ಸಿಎಸ್ ಸಂಯೋಜಿಸಿದ್ದಾರೆ. ಕೆ.ಎ. ಶಕ್ತಿವೇಲ್ ಕ್ಯಾಮರಾ ಹಿಡಿದಿದ್ದಾರೆ. ಎಂ.ತ್ಯಾಗರಾಜನ್ ಸಂಕಲನ ಮತ್ತು ಲಾಲ್ಗುಡಿ ಎನ್.ಇಳಯರಾಜ ಕಲಾನಿರ್ದೇಶಕರಾಗಿದ್ದಾರೆ. ಗಾರ್ಡಿಯನ್ ಆಹಾ ತಮಿಳಿನ ವಿಷಯ ಕ್ಯಾಟಲಾಗ್‌ಗೆ ಇತ್ತೀಚಿನ ಸೇರ್ಪಡೆಯಾಗಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅಂಜಾಮೈ ಎಂಬ ಸಾಮಾಜಿಕ ನಾಟಕವನ್ನು ಸೇರಿಸುವುದಾಗಿ ಘೋಷಿಸಿತು, ಅದು ಈ ವಾರ ಆನ್‌ಲೈನ್ ಸ್ಟ್ರೀಮಿಂಗ್ ಆಗಲಿದೆ.