logo
ಕನ್ನಡ ಸುದ್ದಿ  /  ಮನರಂಜನೆ  /  ನಟ ಸೂರ್ಯನ ಮದುವೆಯಾದಾಗ ನನಗೆ ಆ 2 ವಿಷಯದ ಕುರಿತು ಭಯವಿತ್ತು; ನಟಿ ಜ್ಯೋತಿಕಾ ಮನದ ಮಾತು

ನಟ ಸೂರ್ಯನ ಮದುವೆಯಾದಾಗ ನನಗೆ ಆ 2 ವಿಷಯದ ಕುರಿತು ಭಯವಿತ್ತು; ನಟಿ ಜ್ಯೋತಿಕಾ ಮನದ ಮಾತು

Praveen Chandra B HT Kannada

Dec 27, 2023 01:34 PM IST

google News

ಜ್ಯೋತಿಕಾ ಮತ್ತು ಸೂರ್ಯ

  • Jyothika Interview: ತಮಿಳು ಚಿತ್ರರಂಗದ ಜನಪ್ರಿಯ ತಾರೆಗಳಾದ ಸೂರ್ಯ ಮತ್ತು ಜ್ಯೋತಿಕಾ ಅವರದ್ದು ಪ್ರೇಮ ವಿವಾಹ. ಇತ್ತೀಚೆಗೆ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ನಟಿ ಜ್ಯೋತಿಕಾ ತನ್ನ ಪ್ರೇಮ ವಿವಾಹದ ಸಂದರ್ಭದ ಕುರಿತು ಒಂದಿಷ್ಟು ವಿವರ ನೀಡಿದ್ದಾರೆ.

ಜ್ಯೋತಿಕಾ ಮತ್ತು ಸೂರ್ಯ
ಜ್ಯೋತಿಕಾ ಮತ್ತು ಸೂರ್ಯ

ತಮಿಳು ಸಿನಿಮಾ ಕ್ಷೇತ್ರದಲ್ಲಿ ನಟ ಸೂರ್ಯ ಮಾತ್ರವಲ್ಲದೆ ನಟಿ ಜ್ಯೋತಿಕಾ ಕೂಡ ಜನಪ್ರಿಯ ನಟಿ. ಇವರಿಬ್ಬರೂ ತಮ್ಮ ಸಿನಿಮಾ ಕರಿಯರ್‌ನಲ್ಲಿ ಉತ್ತುಂಗದಲ್ಲಿದ್ದಾಗ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಹಲವು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ 2006ರಲ್ಲಿ ವಿವಾಹವಾದರು. ಪಂಜಾಬಿ ಕುಟುಂಬದಿಂದ ಬಂದ ಜ್ಯೋತಿಕಾಳಿಗೆ ಸೂರ್ಯನ ಮದುವೆಯಾಗುವ ಸಂದರ್ಭದಲ್ಲಿ ಹಲವು ವಿಚಾರದ ಕುರಿತು ಭಯವಿತ್ತಂತೆ. ಬಿಹೈಂಡ್‌ವುಡ್‌ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಜ್ಯೋತಿಕಾ ಹಲವು ವಿಚಾರಗಳನ್ನು ಮುಕ್ತವಾಗಿ ಹೇಳಿದ್ದಾರೆ.

ಈ ರೀತಿ ಪ್ರೀತಿಸಿ ಮದುವೆಯಾಗಿ ಗಂಡನ ಮನೆಗೆ ಹೋಗುವ ಎಲ್ಲಾ ಮಹಿಳೆಯರಿಗೆ ಜಾತಿ ಸೇರಿದಂತೆ ಹಲವು ವಿಚಾರಗಳ ಕುರಿತು ಆತಂಕ ಇರುತ್ತದೆ. ನನ್ನಲ್ಲಿಯೂ ಆ ಭಯವಿತ್ತು ಎಂದು ಜ್ಯೋತಿಕಾ ಸಂದರ್ಶನದಲ್ಲಿ ಹೇಳಿದ್ದಾರೆ. ನನಗೆ ತಮಿಳು ಕೂಡ ಸರಿಯಾಗಿ ಬರುತ್ತಿರಲಿಲ್ಲ. ಜಾತಿ ಮತ್ತು ತಮಿಳು ಭಾಷೆ ತಿಳಿಯದೆ ಇರುವ ಎರಡು ಭಯ ನನ್ನಲ್ಲಿ ಆ ಸಂದರ್ಭದಲ್ಲಿತ್ತು ಎಂದು ಅವರು ಹೇಳಿದ್ದಾರೆ.

ಆದರೆ, ಸೂರ್ಯನ ಮನೆಗೆ ಸೇರಿದ ಮೇಲೆ ಆ ಭಯಗಳೆಲ್ಲ ಕರಗಿ ಹೋದವು. ನಿಧಾನಕ್ಕೆ ಭಯ ಕಡಿಮೆಯಾಗತೊಡಗಿತು. ಆ ವೇಳೆ ಮನೆಯಲ್ಲಿ ಸೂರ್ಯನ ಅಮ್ಮ ಇದ್ದರು. ನಾನು ಅತ್ತೆ ಜತೆ ಮನಸ್ಸು ಬಿಚ್ಚಿ ತುಂಬಾ ಮಾತನಾಡುತ್ತಿದ್ದೆ. ಮನೆಯ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಹೀಗಾಗಿ, ನನ್ನಲ್ಲಿ ಆರಂಭದಲ್ಲಿದ್ದ ಭಯ ಕರಗಿ ಹೋಯಿತು.

ಮನೆಯಲ್ಲಿ ಎಲ್ಲರೂ ತುಂಬಾ ಒಗ್ಗಟ್ಟಾಗಿರುತ್ತೇವೆ. ಎಲ್ಲರನ್ನೂ ಎಲ್ಲರೂ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ನಾನು ಶೂಟಿಂಗ್‌ ಸ್ಪಾಟ್‌ನಲ್ಲಿರುವಾಗ ಪ್ರೊಡಕ್ಷನ್‌ ಕಡೆಯಿಂದ ಒದಗಿಸುವ ಆಹಾರ ಸೇವಿಸುತ್ತಿದ್ದೆ. ಅಥವಾ ನನಗಾಗಿ ನಾನೇ ಆಹಾರ ಆರ್ಡರ್‌ ಮಾಡುತ್ತಿದ್ದೆ. ಮದುವೆಯಾಗುವ ತನಕ ಇದೇ ರೀತಿ ಮಾಡುತ್ತಿದ್ದೆ. ಮದುವೆಯಾದ ಬಳಿಕ ಈ ವಿಷಯ ಬದಲಾಯಿತು.

ಮದುವೆಯ ನಂತರ ನನ್ನ ಚಿಕ್ಕಮ್ಮ ನನಗೆ ಊಟವನ್ನು ತಯಾರಿಸಿ ಕ್ಯಾರಿಯರ್‌ನಲ್ಲಿ ಕಳುಹಿಸುತ್ತಿದ್ದರು. ಸೂರ್ಯ ಮತ್ತು ಅವರ ತಂದೆ ಶಿವಕುಮಾರ್‌ ಇರುವಾಗಲೇ ಇತ್ತು. ನನ್ನ ತಾಯಿ ಮತ್ತು ಸೂರ್ಯನ ತಾಯಿ ತುಂಬಾ ಆತ್ಮೀಯರು. ನಾನು ಆರಂಭದಲ್ಲಿ ತುಂಬಾ ನಿರಾಶಾವಾದಿಯಾಗಿದ್ದೆ. ಸೂರ್ಯನ ಮನೆ ಸೇರಿದ ಬಳಿಕ ನನ್ನನ್ನು ನಾನು ಸಾಕಷ್ಟು ಬದಲಾಯಿಸಿಕೊಂಡೆ ಎಂದು ಜ್ಯೋತಿಕಾ ಸಂದರ್ಶನದಲ್ಲಿ ಹೇಳಿದ್ದಾರೆ.

ಜ್ಯೋತಿಕಾ ಶರವಣನ್‌ ಅವರು 1978ರ ಅಕ್ಟೋಬರ್‌ 18ರಂದು ಜನಿಸಿದರು. ತೆಲುಗು, ತಮಿಳು, ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಾಲ್ಕು ಸೌತ್‌ ಫಿಲ್ಮ್‌ಪೇರ್‌ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತಮಿಳು ನಾಡು ಸಿನಿಮಾರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ಇವರು. ದಕ್ಷಿಣ ಭಾರತದ ಅತ್ಯುತ್ತಮ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

1997ರಲ್ಲಿ ದೋಲಿ ಸಾಜಾ ಕೆ ರಖ್ನಾ ಚಿತ್ರದ ಮೂಲಕ ಜ್ಯೋತಿಕಾ ಸಿನಿಮಾಕ್ಷೇತ್ರ ಪ್ರವೇಶಿಸಿದರು. ಇವರು 1999ರಲ್ಲಿ ವಾಲಿ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದರು. 2003ರಲ್ಲಿ ಟಾಗೋರ್‌ ಚಿತ್ರದ ಮೂಲಕ ಟಾಲಿವುಡ್‌ಗೆ ಪ್ರವೇಶಿಸಿದರು. ಈ ಚಿತ್ರದಲ್ಲಿ ಚಿರಂಜೀವಿ ಜತೆ ನಟಿಸಿದರು. ವಾಲಿ ಚಿತ್ರದ ನಟನೆಗಾಗಿ ಬೆಸ್ಟ್‌ ಫಿಮೇಲ್‌ ಡಿಬಟ್‌-ಸೌತ್‌ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದರು. ಕೆಲವು ಕನ್ನಡ, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ