logo
ಕನ್ನಡ ಸುದ್ದಿ  /  ಮನರಂಜನೆ  /  Amala Paul: ಜಗತ್‌ ದೇಸಾಯಿ ಪ್ರಪೋಸ್‌ ಮಾಡಿದ 10 ದಿನದಲ್ಲೇ ತಾಳಿ ಕಟ್ಟಿಸಿಕೊಂಡ ಅಮಲಾ ಪೌಲ್‌; ಮುದ್ದಾದ ಜೋಡಿಯ ಮದುವೆ ಆಲ್ಬಂ

Amala Paul: ಜಗತ್‌ ದೇಸಾಯಿ ಪ್ರಪೋಸ್‌ ಮಾಡಿದ 10 ದಿನದಲ್ಲೇ ತಾಳಿ ಕಟ್ಟಿಸಿಕೊಂಡ ಅಮಲಾ ಪೌಲ್‌; ಮುದ್ದಾದ ಜೋಡಿಯ ಮದುವೆ ಆಲ್ಬಂ

Praveen Chandra B HT Kannada

Nov 06, 2023 09:18 AM IST

google News

ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಶುಭವಿವಾಹ

    • Amala paul 2nd marriage: ದಕ್ಷಿಣ ಭಾರತದ ಜನಪ್ರಿಯ ನಟಿ ಅಮಲಾ ಪೌಲ್‌ ಅವರು ಜಗತ್‌ ದೇಸಾಯಿ ಜತೆಗೆ ವಿವಾಹವಾಗಿದ್ದಾರೆ. ಇದು ಅಮಲಾ ಪೌಲ್‌ ಅವರ ಎರಡನೇ ವಿವಾಹ. ಕೊಚ್ಚಿಯಲ್ಲಿ ನಡೆದ ಸುಂದರ ಕ್ರಿಶ್ಚಿಯನ್‌ ಸಮಾರಂಭದಲ್ಲಿ ಇವರ ವಿವಾಹ ಜರುಗಿದೆ. ಮದುವೆಯ ಫೋಟೋಗಳನ್ನೂ ಅಮಲಾ ಪೌಲ್‌ ಹಂಚಿಕೊಂಡಿದ್ದಾರೆ.
ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಶುಭವಿವಾಹ
ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಶುಭವಿವಾಹ

ಅಮಲಾ ಪೌಲ್‌ ಅವರು ತನ್ನ ಬಾಯ್‌ಫ್ರೆಂಡ್‌ ಜಗತ್‌ ದೇಸಾಯಿ ಜತೆ ಶುಭ ವಿವಾಹವಾಗಿದ್ದಾರೆ. ಕೊಚ್ಚಿಯಲ್ಲಿ ಇವರಿಬ್ಬರು ಲ್ಯಾವೆಂಡರ್‌ ಬಣ್ಣದ ಉಡುಗೆ ತೊಟ್ಟು ಮದುವೆಯಾಗಿದ್ದಾರೆ. ತಮಿಳು, ಮಲಯಾಳಂ, ತೆಲುಗು ಮಾತ್ರವಲ್ಲದೆ ಹೆಬ್ಬುಲಿಯಂತಹ ಕನ್ನಡ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ. ಅಜಯ್‌ ದೇವಗಲ್‌ರ ಭೋಲಾ ಚಿತ್ರದ ಮೂಲಕ ಇವರು ಬಾಲಿವುಡ್‌ಗೂ ಎಂಟ್ರಿ ನೀಡಿದ್ದರು.

ಹತ್ತು ದಿನದ ಹಿಂದೆ ಪ್ರಪೋಸ್‌

ಅಮಲಾ ಪೌಲ್‌ಗೆ ಜಗತ್‌ ದೇಸಾಯಿ ಅವರು ಹತ್ತು ದಿನದ ಹಿಂದಷ್ಟೇ ಪ್ರಪೋಸ್‌ ಮಾಡಿದ್ದರು. ಅಮಲಾ ಪೌಲ್‌ ಹುಟ್ಟುಹಬ್ಬದಂದು ಜಗತ್‌ ದೇಸಾಯಿ ಪ್ರಪೋಸ್‌ ಮಾಡಿದ್ದರು. ಹತ್ತು ದಿನದ ಬಳಿಕ ಇವರಿಬ್ಬರು ವಿವಾಹವಾಗಿದ್ದಾರೆ. ಕ್ರಿಶ್ಚಿಯನ್‌ ಸಂಪ್ರದಾಯದ ಪ್ರಕಾರ ಇವರಿಬ್ಬರ ವಿವಾಹವು ನಡೆಯಿತು.

ಭಾನುವಾರ ಅಮಲಾ ಪೌಲ್‌ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಮದುವೆಯ ಹಲವು ಕ್ಯೂಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಮಲಾ ಪೌಲ್‌ ಅವರು ಲಾವೆಂಡರ್‌ ಉಡುಗೆ ತೊಟ್ಟಿದ್ದರು. ಅಂದರೆ, ಟಾಪ್‌ ಮತ್ತು ಸ್ಕರ್ಟ್‌ ಧರಿಸಿ ಅದಕ್ಕೆ ಮ್ಯಾಚ್‌ ಆಗುವ ನೆಕ್ಸೆಸ್‌ ಧರಿಸಿದ್ದರು. ಜತೆಗೆ ಲಾವೆಂಡರ್‌ ದುಪ್ಪಟ್ಟ ಧರಿಸಿದ್ದರು. ಇದು ಕುರ್ತಾ ಪಜಮಾ ವಿನ್ಯಾಸ ಮಾಡಿರುವ ಲಾವೆಂಡರ್‌. ಕೈಯಲ್ಲೊಂದು ಬೊಕೆ ಹಿಡಿದುಕೊಂಡು ತನ್ನ ಇನಿಯನ ಜತೆ ಇವರು ಹಲವು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.

ಅಮಲಾ ಪೌಲ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹೀಗೆಂದು ಬರೆದಿದ್ದಾರೆ. "ಪ್ರೀತಿ ಮತ್ತು ಅನುಗ್ರಹದಿಂದ ಜತೆಯಾಗಿದ್ದೇವೆ. ನನ್ನ ದಿವ್ಯ ಪುರುಷನನ್ನು ಮದುವೆಯಾದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವಿರಲಿ" ಎಂದು ಅವರು ಬರೆದಿದ್ದಾರೆ.

ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ವಿವಾಹ ಫೋಟೋಗಳು ಇಲ್ಲಿವೆ ನೋಡಿ.

ಜಗತ್‌ ದೇಸಾಯಿ ಪೋಸ್ಟ್‌

ಅಮಲಾ-ಜಗತ್‌ ಮದುವೆಯ ಇನ್ನೊಂದು ಫೋಟೋ ಆಲ್ಬಂ ಅನ್ನು ಜಗತ್‌ ದೇಸಾಯಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಎರಡು ಆತ್ಮ, ಒಂದು ವಿಧಿ, ನನ್ನ ಜೀವಿತಾವಧಿಯಲ್ಲಿ ಈ ದೈವಿಕ ಹೆಣ್ಣಿನ ಜತೆ ವಿವಾಹವಾಗುತ್ತಿದ್ದೇನೆ" ಎಂದು ಬರೆದಿದ್ದಾರೆ.

ಅಮಲಾ ಪೌಲ್‌ಗೆ ಇದು ಎರಡನೇ ವಿವಾಹ. ಇವರು ಮೊದಲ ಬಾರಿಗೆ ತಮಿಳು ನಿರ್ದೇಶಕ ಎಎಲ್‌ ವಿಜಯ್‌ ಜತೆ ವಿವಾಹವಾಗಿದ್ದರು. ಮದುವೆಯಾದ ಮೂರು ವರ್ಷದಲ್ಲಿ ಇವರಿಬ್ಬರು ಡಿವೋರ್ಸ್‌ ಆಗಿದ್ದರು. ಈಕೆಯ ಕುಟುಂಬ ಇವರು ನಟನೆಯಲ್ಲಿ ಮುಂದುವರೆಯಲು ಬಯಸದೆ ಇದ್ದ ಕಾರಣ ಸಂಬಂಧ ಕೊನೆಯಾಯಿತು ಎಂದು ವರದಿಗಳು ತಿಳಿಸಿವೆ.

ವಿಚ್ಛೇದನ ಪಡೆದ ಕನ್ನಡ ಕಿರುತೆರೆ ನಟಿಯರ ವಿವರ

ದೇಶದಲ್ಲಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಕನ್ನಡ ಕಿರುತೆರೆಯೂ ಇದಕ್ಕೆ ಹೊರತಾಗಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಹಲವು ಕನ್ನಡ ಕಿರುತೆರೆ ನಟನಟಿಯರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ಡಿವೋರ್ಸ್‌ ಪಡೆದಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳು ಇದ್ದರೂ ಕರಿಯರ್‌ನಲ್ಲಿ ಸಾಕಷ್ಟು ಸಾಧನೆ ಮಾಡಿ ಸೈ ಎಣಿಸಿಕೊಂಡಿದ್ದಾರೆ. ವಿವಾಹ ವಿಚ್ಛೇದನ ಪಡೆದ ಕನ್ನಡ ಕಿರುತೆರೆ ನಟಿ ಮತ್ತು ನಟರ ಕುರಿತು ಇಲ್ಲಿದೆ ವಿವರ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ