logo
ಕನ್ನಡ ಸುದ್ದಿ  /  ಮನರಂಜನೆ  /  Thangalaan Ott: ಸಡನ್‌ ಸರ್ಪ್ರೈಸ್‌.. ಒಟಿಟಿಗೆ ಬಂದ ಚಿಯಾನ್‌ ವಿಕ್ರಂ ತಮಿಳು ಸಿನಿಮಾ ತಂಗಲಾನ್‌! ಆದರೆ, ಇಲ್ಲೊಂದು ಟ್ವಿಸ್ಟ್‌ ಇದೆ

Thangalaan OTT: ಸಡನ್‌ ಸರ್ಪ್ರೈಸ್‌.. ಒಟಿಟಿಗೆ ಬಂದ ಚಿಯಾನ್‌ ವಿಕ್ರಂ ತಮಿಳು ಸಿನಿಮಾ ತಂಗಲಾನ್‌! ಆದರೆ, ಇಲ್ಲೊಂದು ಟ್ವಿಸ್ಟ್‌ ಇದೆ

Sep 16, 2024 03:45 PM IST

google News

ವಿದೇಶಿ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್‌ ಆಗುತ್ತಿದೆ ತಂಗಲಾನ್‌ ಸಿನಿಮಾ.

    • Thangalaan OTT: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಕಳೆದ ಆಗಸ್ಟ್‌ 15ರಂದು ತೆರೆಗೆ ಬಂದಿತ್ತು ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾ. ಇದೀಗ ಇದೇ ಚಿತ್ರ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದೆ. ಆದರೆ, ಇದನ್ನು ಸದ್ಯ ಭಾರತದಲ್ಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ.. 
ವಿದೇಶಿ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್‌ ಆಗುತ್ತಿದೆ ತಂಗಲಾನ್‌ ಸಿನಿಮಾ.
ವಿದೇಶಿ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್‌ ಆಗುತ್ತಿದೆ ತಂಗಲಾನ್‌ ಸಿನಿಮಾ.

Thangalaan OTT: ವಿಕ್ರಮ್ ಅಭಿನಯದ ತಂಗಲಾನ್ ಸಿನಿಮಾ ಇದ್ದಕ್ಕಿದ್ದಂತೆ ಒಟಿಟಿ ಅಂಗಳಕ್ಕೆ ಆಗಮಿಸಿದೆ. ಈ ಸಾಹಸಮಯ ಸಿನಿಮಾ ಶನಿವಾರದಿಂದ ಎಂಥುಸನ್‌ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಆದರೆ ಈ ಒಟಿಟಿ ವೇದಿಕೆ ಭಾರತದಲ್ಲಿ ಬಳಕೆಗೆ ಇಲ್ಲ. ವಿದೇಶಗಳಲ್ಲಿ ಮಾತ್ರ ಇದು ಲಭ್ಯ ಇರುವುದರಿಂದ, ಸಾಗರೋತ್ತರ ಪ್ರೇಕ್ಷಕರಿಗೆ ಮಾತ್ರ ತಂಗಳನ್ ಸಿನಿಮಾ ನೋಡುವ ಅವಕಾಶವಿದೆ. ಭಾರತೀಯ ಪ್ರೇಕ್ಷಕರು ಒಟಿಟಿಯಲ್ಲಿ ತಂಗಲಾನ್ ಚಿತ್ರವನ್ನು ವೀಕ್ಷಿಸಲು ಇನ್ನೂ ಕೆಲವು ದಿನ ಕಾಯಬೇಕಾಗಿದೆ. ಈ ನಡುವೆ ಇದೇ ಸಿನಿಮಾದ ಎಚ್‌ಡಿ ವರ್ಷನ್‌ ಹಲವು ಪೈರಸಿ ಸೈಟ್‌ಗಳಲ್ಲಿ ಸೋರಿಕೆಯಾಗಿದೆ.

ಸೆಪ್ಟೆಂಬರ್‌ 20ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ

ತಂಗಲಾನ್‌ ಸಿನಿಮಾದ ಡಿಜಿಟಲ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಪಡೆದುಕೊಂಡಿದೆ. ಸೆಪ್ಟೆಂಬರ್ 20ರಂದು ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಮಾಹಿತಿ ಹೊರಬಿದ್ದಿದೆ. ಅದೇ ದಿನ ತಮಿಳು, ತೆಲುಗು ಜೊತೆಗೆ ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎನ್ನಲಾಗಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ತಂಗಲಾನ್‌ ಸಿನಿಮಾದ OTT ಹಕ್ಕುಗಳನ್ನು ಬರೋಬ್ಬರಿ 35 ಕೋಟಿಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಪಾ ರಂಜಿತ್ ನಿರ್ದೇಶನದ ಸಿನಿಮಾ

ಬ್ರಿಟಿಷರ ಕಾಲದಲ್ಲಿ ದುರ್ಬಲ ವರ್ಗದವರ ವಿರುದ್ಧದ ತಾರತಮ್ಯವನ್ನು ಸಾಹಸಮಯ ಅಂಶಗಳೊಂದಿಗೆ ನಿರ್ದೇಶಕ ಪಾ ರಂಜಿತ್ ಈ ಸಿನಿಮಾದಲ್ಲಿ ತೋರಿಸಿದ್ದಾರೆ. ತಂಗಲಾನ್‌ ಚಿತ್ರದಲ್ಲಿ ವಿಕ್ರಮ್ ಎದುರು ನಾಯಕಿಯಾಗಿ ಪಾರ್ವತಿ ತಿರುವೋತ್ತು ನಟಿಸಿದ್ದಾರೆ. ಮಾಳವಿಕಾ ಮೋಹನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಮರ್ಷಿಯಲ್‌ ಆಗಿ ಸೋಲು..

ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾದ ತಂಗಳನ್ 70 ಕೋಟಿಗಿಂತ ಕಡಿಮೆ ಕಲೆಕ್ಷನ್‌ನೊಂದಿಗೆ ಕಮರ್ಷಿಯಲ್‌ ಸೋಲು ಕಂಡಿತು. ವಿಮರ್ಶೆ ದೃಷ್ಟಿಯಿಂದ ವಿಕ್ರಮ್ ಮತ್ತು ಪಾರ್ವತಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ತಂಗಲಾನ್‌ ಪಾತ್ರದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ ಚಿಯಾನ್‌ ವಿಕ್ರಮ್.‌ ಆದರೆ, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿ ಸಿನಿಮಾ ಸೋತಿದೆ.

ತಂಗಲಾನ್ ಕಥೆ ಏನು?

ಪಾ. ರಂಜಿತ್ ನಿರ್ದೇಶನದ ಮತ್ತು ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಜ್ಞಾನವೇಲ್ ರಾಜ ನಿರ್ಮಿಸಿದ ಸಿನಿಮಾ ತಂಗಲಾನ್. ಚಿಯಾನ್ ವಿಕ್ರಮ್ ಅವರ 61ನೇ ಚಿತ್ರವಿದು. ಜಿ. ವಿ. ಪ್ರಕಾಶ್ ಸಂಗೀತ ಈ ಚಿತ್ರಕ್ಕಿದೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಚಿನ್ನದ ಗಣಿಗಾರಿಕೆಗಾಗಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ಬ್ರಿಟಿಷರ ವಿರುದ್ಧ ಆದಿವಾಸಿಗಳು ನಡೆಸಿದ ಕೆಚ್ಚೆದೆಯ ಹೋರಾಟವೇ ಚಿತ್ರದ ಕಥಾವಸ್ತು. ಈ ಸಿನಿಮಾ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ ಸೆಪ್ಟೆಂಬರ್ 20ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ.

ಆಗಸ್ಟ್ 15ರಂದು ಚಿತ್ರಮಂದಿರಕ್ಕೆ ಬಂದಿತ್ತು..

ತಂಗಲಾನ್‌ ಸಿನಿಮಾ ಆಗಸ್ಟ್‌ 15ರಂದು ಮೂಲ ತಮಿಳಿನ ಜತೆಗೆ ಕನ್ನಡ, ತೆಲುಗಿನಲ್ಲಿಯೂ ಬಿಡುಗಡೆ ಆಗಿತ್ತು. ಆದರೆ, ಈ ಚಿತ್ರವು ಕನ್ನಡ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು. ತಂಗಲಾನ್‌ಗೂ ಮೊದಲು ನಿರ್ದೇಶಕ ಪಾ ರಂಜಿತ್, ರಜನಿಕಾಂತ್ ಜೊತೆಗೆ ಕಬಾಲಿ ಮತ್ತು ಕಾಲಾ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು.

ತಂಗಲಾನ್‌ ಸಿನಿಮಾ ಬಳಿಕ ನಟ ವಿಕ್ರಮ್ ತಮಿಳಿನಲ್ಲಿ ವೀರಧೀರ ಸೂರನ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಚಿನ್ನಾ ಖ್ಯಾತಿಯ ಎಸ್ ಯು ಅರುಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೌಟುಂಬಿಕ ರಿವೇಂಜ್ ಡ್ರಾಮಾ ಆಗಿ ತಯಾರಾಗುತ್ತಿರುವ ಈ ಸಿನಿಮಾ ಈ ವರ್ಷಾಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ