logo
ಕನ್ನಡ ಸುದ್ದಿ  /  ಮನರಂಜನೆ  /  ಒಬ್ಬರಲ್ಲ, ಇಬ್ಬರಲ್ಲ ನನ್ನ ಬಾಳಲ್ಲಿ ಬಂದವರು ಏಳು ಜನ ಪುರುಷರು! ದತ್ತು ಮಗುವಿಗೂ ನನ್ನ ಕಳಂಕ ಅಂಟುವುದು ಬೇಡ; ಶಕೀಲಾ

ಒಬ್ಬರಲ್ಲ, ಇಬ್ಬರಲ್ಲ ನನ್ನ ಬಾಳಲ್ಲಿ ಬಂದವರು ಏಳು ಜನ ಪುರುಷರು! ದತ್ತು ಮಗುವಿಗೂ ನನ್ನ ಕಳಂಕ ಅಂಟುವುದು ಬೇಡ; ಶಕೀಲಾ

Oct 30, 2023 06:59 PM IST

google News

ಒಬ್ಬರಲ್ಲ, ಇಬ್ಬರಲ್ಲ ನನ್ನ ಬಾಳಲ್ಲಿ ಬಂದವರು ಏಳು ಪುರುಷರು! ದತ್ತು ಮಗುವಿಗೂ ನನ್ನ ಕಳಂಕ ಅಂಟುವುದು ಬೇಡ; ಶಕೀಲಾ

    • Shakila About Her Love Life: ನಟಿ ಶಕೀಲಾ, 80-90ರ ದಶಕದಲ್ಲಿ ವಯಸ್ಕ ಸಿನಿಮಾಗಳ ಮೂಲಕವೇ ಬಹು ಬೇಡಿಕೆಯ ಸೃಷ್ಟಿಸಿಕೊಂಡಿದ್ದರು. ಆ ದಿನಗಳಲ್ಲಿ ಹಲವರ ಮೇಲೆ ಈ ನಟಿಗೂ ಪ್ರೇಮಾಂಕುರವಾಗಿತ್ತು. 
ಒಬ್ಬರಲ್ಲ, ಇಬ್ಬರಲ್ಲ ನನ್ನ ಬಾಳಲ್ಲಿ ಬಂದವರು ಏಳು ಪುರುಷರು! ದತ್ತು ಮಗುವಿಗೂ ನನ್ನ ಕಳಂಕ ಅಂಟುವುದು ಬೇಡ; ಶಕೀಲಾ
ಒಬ್ಬರಲ್ಲ, ಇಬ್ಬರಲ್ಲ ನನ್ನ ಬಾಳಲ್ಲಿ ಬಂದವರು ಏಳು ಪುರುಷರು! ದತ್ತು ಮಗುವಿಗೂ ನನ್ನ ಕಳಂಕ ಅಂಟುವುದು ಬೇಡ; ಶಕೀಲಾ

Shakila: ವಯಸ್ಕ ಸಿನಿಮಾಗಳ ಮಾಜಿ ತಾರೆ ಶಕೀಲಾ, ಒಂದು ಕಾಲದಲ್ಲಿ ಸೌತ್‌ ಸಿನಿಮಾ ದುನಿಯಾವನ್ನು ಆಳಿದವರು. ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳ ಸಿನಿಮಾಗಳಿಗೆ ಟಕ್ಕರ್‌ ಕೊಡುವ ಏಕೈಕ ನಟಿಯಾಗಿದ್ದರು. ಆ ನಟಿಯ ಸಹವಾಸವೇ ಸಾಕೆಂದು ಸ್ಟಾರ್‌ ನಟರೇ ತಮ್ಮ ಸಿನಿಮಾಗಳನ್ನು ಮುಂದೂಡಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಆದರೆ, ಇದೇ ನಟಿಯ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ.

ಕೆಡುಕು ಬಯಸಿದ ತಾಯಿಯನ್ನೂ ನೋಡಿಕೊಂಡಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿದ್ದಾಗ ತನ್ನ ಇಡೀ ವ್ಯವಹಾರದ ಅಕೌಂಟ್ಸ್‌ ನಿರ್ವಹಣೆ ಪಡೆದುಕೊಂಡಿದ್ದ ಅಕ್ಕನ ಮೋಸವನ್ನೂ ನೋಡಿದ್ದಾರೆ. ಕೊನೆಗೆ ಗಳಿಸಿದ ಹಣ ಬರಿದಾಗಿಸಿಕೊಂಡು, ಕೈ ಖಾಲಿ ಮಾಡಿಕೊಂಡು ನರಕವನ್ನೂ ಕಂಡಿದ್ದಾರೆ. ಇದರ ಜತೆಗೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಗ, ಇದೇ ನಟಿಯಲ್ಲಿ ಹಲವು ಪುರುಷರೂ ಈಕೆಯ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ. ಈ ವಿಚಾರವನ್ನು ಬಯೋಗ್ರಾಫಿಯಲ್ಲೂ ನಮೂದಿಸಿದ್ದಾರೆ, ಸಂದರ್ಶನಗಳಲ್ಲೂ ಹೇಳಿಕೊಂಡಿದ್ದಾರೆ.

ಹೌದು, ವಯಸ್ಕ ಸಿನಿಮಾ ನಟಿಯಾದರೂ, ನಟಿ ಶಕೀಲಾಗೆ ಪ್ರೇಮಾಂಕುರವಾಗಿತ್ತು. ಕಾಲಕ್ಕೆ ತಕ್ಕಂತೆ, ಹಲವರು ಈಕೆಯ ಬಾಳಲ್ಲಿ ಬಂದು ಹೋಗಿದ್ದರು. ಅದೂ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಏಳೆಂಟು ಮಂದಿ! ಆ ಏಳೆಂಟು ಮಂದಿಯಲ್ಲಿ ಎಲ್ಲರಿಗೂ ಗೊತ್ತಿರುವ ಹೆಸರು ನಿತೀಶ್‌. ಆತನ ಜತೆಗೆ 10 ವರ್ಷದ ನಂಟಿತ್ತು ಶಕೀಲಾಗೆ. ಇನ್ನೂ ಹಲವರ ಜತೆಗೆ ಐದು ವರ್ಷ, ಏಳು ವರ್ಷ, ನಾಲ್ಕು ವರ್ಷದ ಪ್ರೀತಿಯಲ್ಲಿದ್ದರು. ಆ ಬಗ್ಗೆ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನನಗೆ ಏಳೆಂಟು ಮಂದಿ ಜತೆ ಪ್ರೀತಿಯಾಗಿತ್ತು..

"ಪ್ರೀತಿ ವಿಚಾರದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ವ್ಯಾಖ್ಯಾನ ಇರುತ್ತೆ. ಅದೇ ರೀತಿ ನಾನು ಯಾರನ್ನೇ ಪ್ರೀತಿಸಿದರೂ ಅದರಲ್ಲಿ ಒಂದು ಗಟ್ಟಿಯಾದ ಪ್ರೀತಿಯಿತ್ತು. ನನ್ನ ಇಡೀ ಪ್ರೇಮಕಹಾನಿಯಲ್ಲಿ ನಿತೀಶ್‌ನದ್ದೇ ಕೊನೇ ಪ್ರೀತಿ. ಆತನ ಜತೆಗೆ 10 ವರ್ಷ ಕಳೆದೆ. ಪ್ರೀತಿಯ ಜತೆಗೆ ಮದುವೆಯ ಪ್ರಸ್ತಾಪವೂ ನಡೆದಿತ್ತು. ಅದಕ್ಕೂ ಮೊದಲು ನನಗೆ ಹಲವರ ಪ್ರೀತಿಯಲ್ಲಿದ್ದೆ. ಒಬ್ಬನ ಜತೆಗೆ ಏಳು ವರ್ಷ, ಮತ್ತೊಬ್ಬರ ಜತೆಗೆ ನಾಲ್ಕು, ಇನ್ನೊಬ್ಬರ ಜತೆಗೆ ಒಂದು ವರ್ಷ. ಎಲ್ಲರ ಜತೆಗೂ ನಾನು ಸ್ಟ್ರಾಂಗ್‌ ರಿಲೇಷನ್‌ ಶಿಪ್‌ ಇತ್ತು. ಸಾಕಷ್ಟು ಬ್ರೇಕಪ್‌ಗಳನ್ನೂ ನಾನು ಕಂಡಿದ್ದೇನೆ. ಆದಾದ ಬಳಿಕ ಮತ್ತೆ ಕೆಲವರು ನನ್ನ ಜೀವನಕ್ಕೆ ಬಂದರು. ಯಾರ ಜತೆಗೇ ನಾನು ಪ್ರೀತಿ ಸಂಬಂಧ ಇಟ್ಟುಕೊಂಡರೆ, ಆ ಪ್ರೀತಿಯಲ್ಲಿ ನಂಬಿಕೆ ಇರಿಸಿಕೊಂಡೇ ಇದ್ದೆ. ಮದುವೆ ಆಗೋಣ ಎಂದೇ ಮಾತನಾಡಿಕೊಂಡಿದ್ದೆ.

ನಿತೀಶ್‌ ಬಗ್ಗೆ ಶಕೀಲಾ ಹೆಚ್ಚು ಚರ್ಚೆ

ನಿತೀಶ್‌ ಎಂಬ ವ್ಯಕ್ತಿಯ ಜತೆಗೆ ಶಕೀಲಾ ಹೆಸರು ತಳುಕು ಹಾಕಿಕೊಂಡಿತ್ತು. ಆ ಜೋಡಿಯ ಮದುವೆ ಆಗಿದೆ. ಇನ್ನೇನು ಮದುವೆ ಆಗಲಿದ್ದಾರಂತೆ. ಅವರಿಬ್ಬರೂ ಲೀವ್‌ ಇಬ್ಬರ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬೆಲ್ಲ ಸುದ್ದಿ ಆಗ ಗುಲ್ಲೆದ್ದಿತ್ತು. ಆ ಬಗ್ಗೆಯೂ ಹೇಳಿಕೊಳ್ಳುವ ಶಕೀಲಾ, "ನನ್ನ ಮತ್ತು ನಿತೀಶ್‌ ನಡುವೆ 10 ವರ್ಷದ ಪ್ರೀತಿ. ಇನ್ನೇನು ಮದುವೆ ಆಗುವ ಹಂತದಲ್ಲಿದ್ದೆವು. ಹಾಗಿರುವಾಗಲೇ ನಿತೀಶ್‌ ಕುಡಿತದ ಚಟಕ್ಕೆ ದಾಸರಾಗಿದ್ದರು. ಅವನು ಕುಡಿತದ ಚಟಕ್ಕೆ ದಾಸನಾದರೆ, ಅವರ ತಂದೆ ನನ್ನ ಕಡೆ ಬೆರಳು ಮಾಡಿ, ನೀನೇ ಆತನಿಗೆ ಕುಡಿತದ ಚಟ ಕಲಿಸಿದ್ದೀಯಾ, ನೀನೇ ಕುಡಿಸುತ್ತಿದ್ದೀಯಾ ಎಂದೆಲ್ಲ ಅವಮಾನಿಸಿದ್ದರು".

"ನನಗೂ ಕೋಪ ಬಂತು. ನೀನೂ ಕುಡಿತಿದ್ದೀಯಾ ಹಾಗಾಗಿ ಒಂದಷ್ಟು ದಿನ ದೂರ ಇರೋಣ ಎಂದು ಹೇಳಿದೆ. ಒಂದು ತಿಂಗಳ ಕಾಲ ನನಗೆ ಮೇಲಿಂದ ಮೇಲೆ ಫೋನ್‌ ಕರೆ ಮಾಡುತ್ತಲಿದ್ದ. ಆದರೆ, ನಾನು ಮಾತ್ರ ಕರೆ ಸ್ವೀಕರಿಸಲಿಲ್ಲ. ಇದಾದ ಬಳಿಕ ಒಂದು ದಿನ ನನಗೆ ಮದುವೆ ಆಯ್ತು ಎಂದು ಹೇಳಿ ದಂಪತಿಯ ಫೋಟೋ ಕಳುಹಿಸಿದ್ದ" ಎಂದಿದ್ದಾರೆ.

ಪ್ರೀತಿ ಮುರಿದು ಬೀಳಲು ಇನ್ನೂ ಇವೆ ಹಲವು ಕಾರಣ..

ವಯಸ್ಸಾಗಿದ್ದ ಅಮ್ಮನನ್ನು ಓಲ್ಡ್‌ ಏಜ್‌ನಲ್ಲಿ ಇರಿಸು ಎಂದು ನಾನು ಪ್ರೀತಿಸಿದ ಹಲವರು ನನಗೆ ಹೇಳಿದರು. ಅದು ನನಗ್ಯಾಕೋ ಸರಿ ಅನಿಸಲಿಲ್ಲ. ಒಂದು ವೇಳೆ ನಾನು ಆವತ್ತು ಕಾಂಪ್ರಮೈಸ್‌ ಆಗಿದ್ದರೆ, ನನಗೂ ಇಂದು ಒಂದು ಕುಟುಂಬ ಇರ್ತಿತ್ತು, ಮಕ್ಕಳು ಇರುತ್ತಿದ್ದವು. ಆದರೆ, ಆಗ ನನಗೆ ನನ್ನ ಕುಟುಂಬವೇ ಮುಖ್ಯ ಆಗಿತ್ತು. ಈಗ ಮದುವೆ ಆಗುವುದು ದೂರದ ವಿಚಾರ. ಆದರೆ, ಪ್ರೀತಿ ಈಗಲೂ ಮಾಡಬಹುದು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ದತ್ತು ಮಕ್ಕಳಿಗೂ ನನ್ನ ಕಳಂಕ ಅಂಟಬಾರದು

"ಮಕ್ಕಳೆಂದರೆ ನನಗೆ ತುಂಬ ಇಷ್ಟ. ಆದರೆ, ಮಕ್ಕಳನ್ನು ದತ್ತು ಪಡೆಯುವ ನಿರ್ಧಾರಕ್ಕೆ ನಾನು ಹೋಗಿಲ್ಲ. ಅದಕ್ಕೆ ಅದರದೇ ಆದ ಒಂದಷ್ಟು ಜವಾಬ್ದಾರಿಗಳಿವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನನಗೆ ಕಾಡುವ ಇನ್ನೊಂದು ಭಯ ಏನೆಂದರೆ, ಶಕೀಲಾ ಅಂದರೇ ಸಾಫ್ಟ್‌ ಫೋರ್ನ್‌ ಮೂವೀಸ್‌ ಎಂಬುದು ಎಲ್ಲರ ತಲೆಯಲ್ಲಿ ಕೂತಿದೆ. ಅದೂ ಇದೂ ಎಂದು ಏನೇನೋ ಮಾತನಾಡುತ್ತಾರೆ. "ನೀನು ಶಕೀಲಾಳ ಮಗ/ಮಗಳು ಅಲ್ವಾ, ನೀನೂ ಹಾಗೆಯೇ ಬಿಡು" ಎಂದು ಆ ಮಗುವನ್ನೂ ಆಡಿಕೊಳ್ಳುತ್ತಾರೆ. ಆ ಪುಟಾಣಿಯ ಜೀವನವೂ ಹಾಳಾಗೋದು ಬೇಡ ಎಂಬ ಕಾರಣಕ್ಕೆ ನಾನು ಮಗುವನ್ನು ದತ್ತು ಪಡೆದಿಲ್ಲ" ಎಂದು ಐಡ್ರೀಮ್‌ ವುಮನ್‌ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಶಕೀಲಾ ಹೇಳಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ