logo
ಕನ್ನಡ ಸುದ್ದಿ  /  ಮನರಂಜನೆ  /  Shakeela: ಬಾಯ್‌ಫ್ರೆಂಡ್‌ನಿಂದ ಚಿಕ್ಕ ವಯಸ್ಸಲ್ಲೇ ಗರ್ಭ ಧರಿಸಿದ್ದೆ, ಅಮ್ಮ ಗರ್ಭಪಾತ ಮಾಡ್ಸಿದ್ರು! ಇಂದಿಗೂ ಆತನ ಜತೆಗಿದೆ ಶಕೀಲಾ ನಂಟು

Shakeela: ಬಾಯ್‌ಫ್ರೆಂಡ್‌ನಿಂದ ಚಿಕ್ಕ ವಯಸ್ಸಲ್ಲೇ ಗರ್ಭ ಧರಿಸಿದ್ದೆ, ಅಮ್ಮ ಗರ್ಭಪಾತ ಮಾಡ್ಸಿದ್ರು! ಇಂದಿಗೂ ಆತನ ಜತೆಗಿದೆ ಶಕೀಲಾ ನಂಟು

Sep 16, 2023 12:45 PM IST

google News

Shakeela: ಬಾಯ್‌ಫ್ರೆಂಡ್‌ನಿಂದಾಗಿ ಚಿಕ್ಕ ವಯಸ್ಸಲ್ಲೇ ಗರ್ಭ ಧರಿಸಿದ್ದೆ, ಅಮ್ಮ ಗರ್ಭಪಾತ ಮಾಡ್ಸಿದ್ರು! ಇಂದಿಗೂ ಆತನ ಜತೆಗಿದೆ ಶಕೀಲಾ ನಂಟು

    • ವಯಸ್ಕ ಸಿನಿಮಾಗಳ ಮಾಜಿ ನಟಿ ಶಕೀಲಾ, ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಗೌಪ್ಯವಾಗಿಟ್ಟಿಲ್ಲ. ಬುದ್ಧಿ ಬಂದ ಬಳಿಕ ಮೊದಲ ಸಲ ದೇಹ ಹಂಚಿಕೊಂಡ ವ್ಯಕ್ತಿಯ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದ ಶಕೀಲಾ, ಇದೀಗ ಬಾಲ್ಯದಲ್ಲಿ ಸ್ನೇಹಿತನಿಂದ ಗರ್ಭಧರಿಸಿದ್ದ ವಿಚಾರವನ್ನೂ ಬಿಚ್ಚಿಟ್ಟಿದ್ದಾರೆ.  
Shakeela: ಬಾಯ್‌ಫ್ರೆಂಡ್‌ನಿಂದಾಗಿ ಚಿಕ್ಕ ವಯಸ್ಸಲ್ಲೇ ಗರ್ಭ ಧರಿಸಿದ್ದೆ, ಅಮ್ಮ ಗರ್ಭಪಾತ ಮಾಡ್ಸಿದ್ರು! ಇಂದಿಗೂ ಆತನ ಜತೆಗಿದೆ ಶಕೀಲಾ ನಂಟು
Shakeela: ಬಾಯ್‌ಫ್ರೆಂಡ್‌ನಿಂದಾಗಿ ಚಿಕ್ಕ ವಯಸ್ಸಲ್ಲೇ ಗರ್ಭ ಧರಿಸಿದ್ದೆ, ಅಮ್ಮ ಗರ್ಭಪಾತ ಮಾಡ್ಸಿದ್ರು! ಇಂದಿಗೂ ಆತನ ಜತೆಗಿದೆ ಶಕೀಲಾ ನಂಟು

Shakeela: 90ರ ದಶಕದಲ್ಲಿ ಇಡೀ ಸೌತ್‌ ಸಿನಿಮಾರಂಗವನ್ನೇ ಆಳುತ್ತಿದ್ದ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುತ್ತಿದ್ದ ನಟಿಯರ ಪೈಕಿ ಶಕೀಲಾ ಸಹ ಒಬ್ಬರು. ವಯಸ್ಕ ಸಿನಿಮಾ ಮೂಲಕವೇ ಹಲ್‌ಚಲ್‌ ಸೃಷ್ಟಿಸಿದ್ದ ಶಕೀಲಾ, ಆ ದಿನಗಳಲ್ಲಿಯೇ ದೊಡ್ಡ ಸ್ಟಾರ್‌ ನಟಿ. ಶಕೀಲಾರ ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್‌ ಆಗುತ್ತಿದೆ ಎಂದಾಗ, ಅವರೆದುರು ಸ್ಟಾರ್‌ ನಟರ ಸಿನಿಮಾಗಳೇ ಮುಂದೂಡುತ್ತಿದ್ದವು. ಹಾಗಿತ್ತು ಅವರ ಆಗಿನ ಹವಾ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹೀಗೆ ನಾಲ್ಕೂ ಭಾಷೆಗಳಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದರು ಶಕೀಲಾ.

ಬಣ್ಣದ ಲೋಕದಲ್ಲಿ ಅಬ್ಬರಿಸಿದಷ್ಟು ಅವಮಾನಗಳನ್ನೂ ಶಕೀಲಾ ಎದುರಿಸಿದ್ದಾರೆ. ಮಲಯಾಳಂ ಸಿನಿಮಾರಂಗದಿಂದಲೇ ನಿಷೇಧಕ್ಕೂ ಒಳಗಾಗಿದ್ದರು ಈ ನಟಿ. ಬಳಿಕ ತಮಿಳಿನಲ್ಲಿ ಒಳ್ಳೆಯ ಸ್ಥಾನ ಗಿಟ್ಟಿಸಿಕೊಂಡರು. ಬಳಿಕ ಸಾಕಷ್ಟು ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಇದೀಗ ಇದೇ ನಟಿ ತಮ್ಮ ಬಾಲ್ಯದಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ಚಿಕ್ಕ ವಯಸ್ಸಲ್ಲೇ ಸ್ನೇಹಿತನಿಂದ ಗರ್ಭ ಧರಿಸಿದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ತಮಿಳಿನ ತಮ್ಮದೇ ಆದ ಕುಕ್ಕು ವಿಥ್‌ ಕೋಮಾಲಿ ಶೋನಲ್ಲಿ ಈ ಮಾಸದ ನೆನಪನ್ನು ಶಕೀಲಾ ಹೇಳಿಕೊಂಡಿದ್ದರು.

ಶಕೀಲಾ ಆಗಿನ್ನೂ ಅಪ್ರಾಪ್ತೆ. ಆ ವಯಸ್ಸಿನಲ್ಲಿಯೇ ಬಾಯ್‌ಫ್ರೆಂಡ್‌ ಜತೆಗೆ ಸಂಗ ಮಾಡಿ, ಗರ್ಭ ಧರಿಸಿದ್ದರು. ಚಿಕ್ಕ ವಯಸ್ಸಾಗಿದ್ದರಿಂದ ಗರ್ಭ ಧರಿಸಿದ ವಿಚಾರ ಶಕೀಲಾ ಗಮನಕ್ಕೆ ಬಂದಿರಲಿಲ್ಲ. ಅವರ ತಿಂಗಳ ಋತುಚಕ್ರದಲ್ಲಿಯೂ ಏರಿಳಿತಗಳಾಗಿದ್ದವು. ಈ ವಿಚಾರವನ್ನು ಅವರ ಅಮ್ಮನಿಗೂ ಶಕೀಲಾ ಹೇಳಿಕೊಂಡಿದ್ದರು. ಹೊಟ್ಟೆ ನೋಡಿ ಅನುಮಾನಗೊಂಡ ಶಕೀಲಾ ಅವರ ತಾಯಿ, ಕೊಂಚ ಗಲಿಬಿಲಿಯಾಗಿದ್ದರು. ಏನಿದು ಅಮ್ಮ.. ಎಂದೂ ಶಕೀಲಾ ಆಗ ಅಮ್ಮನಿಗೆ ಕೇಳಿದ್ದರಂತೆ. ಇದು ಮಗು ಮಾಡಿಕೊಳ್ಳುವ ವಯಸ್ಸಲ್ಲ ಎಂದು ತಕ್ಷಣ ಆಸ್ಪತ್ರೆಗೆ ಕರೆದೊಯ್ದ ಅವರ ತಾಯಿ, ಶಕೀಲಾಗೆ ಅಬಾರ್ಷನ್‌ ಮಾಡಿಸಿದ್ದರು.

"ಚಿಕ್ಕವಯಸ್ಸಲ್ಲಿ ನಾನು ಏಕಾಏಕಿ ದಪ್ಪಗಾದೆ. ಅದಕ್ಕೆ ಸ್ನೇಹಿತನೊಂದಿಗಿನ ಅಭ್ಯಾಸವೇ ಕಾರಣವಾಗಿತ್ತು. ಆ ಸಲುಗೆಯಿಂದ ನಾನು ಗರ್ಭಿಣಿಯಾದೆ. ಆ ವಯಸ್ಸಿನಲ್ಲಿ ನಾನು ಗರ್ಭಿಣಿಯಾಗಿದ್ದೇನೆ ಎಂಬ ಅರಿವೂ ನನಗಿಲ್ಲ. ನನಗೆ ಸಮಯಕ್ಕೆ ಸರಿಯಾಗಿ ಪಿರಿಯಡ್ಸ್ ಆಗುತ್ತಿರಲಿಲ್ಲ. ಆ ವಯಸ್ಸಲ್ಲಿ ನನಗೆ 6 ರಿಂದ 8 ತಿಂಗಳಿಗೊಮ್ಮೆ ಮಾತ್ರ ಪಿರಿಯಡ್ಸ್‌ ಆಗುತ್ತಿತ್ತು. ಹಾಗಾಗಿ ಗರ್ಭಿಣಿ ಆಗಿರುವುದು ಗೊತ್ತೇ ಆಗಲಿಲ್ಲ. ಅಮ್ಮನ ಗಮನಕ್ಕೂ ತಂದೆ. ಒಂದು ವೇಳೆ ಆವತ್ತು ಮಗು ಜನಿಸಿದ್ದರೆ ಅದು ಅಕ್ರಮವಾಗುತ್ತಿತ್ತು ಎಂದು ಅರಿತ ಅಮ್ಮ, ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದಳು" ಎಂದು ಹೇಳಿಕೊಂಡಿದ್ದಾರೆ. 

"ನಾನಿನ್ನು ಚಿಕ್ಕ ವಯಸ್ಸಿನವಳಾಗಿದ್ದರಿಂದ ಹೀಗಾಯ್ತು ಎಂದು ಅಂತ ಅಮ್ಮ ನನ್ನನ್ನು ಆವತ್ತು ಹೊಡೆದಿಲ್ಲ. ಬಾಲ್ಯದಲ್ಲಿನ ಈ ಘಟನೆಗೆ ಕಾರಣನಾದ ವ್ಯಕ್ತಿ ಜತೆಗೆ ಇಂದಿಗೂ ನಾನು ಟಚ್‌ನಲ್ಲಿದ್ದೇನೆ" ಎಂದು ಶಕೀಲಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಆತನ ಜತೆ ನನ್ನ ಮೊದಲ ದೈಹಿಕ ಸಂಬಂಧ

ಈ ಹಿಂದೆ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ವೈಯಕ್ತಿಕ ವಿಚಾರವೊಂದನ್ನು ಶಕೀಲಾ ಬಹಿರಂಗಪಡಿಸಿದ್ದರು. ಲೈಂಗಿಕತೆ ಸೇರಿ ಹಲವು ವಿಚಾರಗಳಿಗೆ ಎದುರಾದ ಪ್ರಶ್ನೆಗಳಿಗೆ ಯಾವುದೇ ಅಳುಕಿಲ್ಲದೆ, ನೇರವಾಗಿಯೇ ಹೇಳಿಕೊಂಡಿದ್ದರು. ಮೊದಲ ಬಾರಿ ಕನ್ಯತ್ವ ಕಳೆದುಕೊಂಡ ವಿಚಾರವನ್ನೂ ಹೇಳಿಕೊಂಡಿದ್ದರು. "ನಾನೇನೂ ವರ್ಜಿನ್‌ ಅಲ್ಲ. ನಾನು ಮೊದಲ ಸಲ ನನ್ನ ಸ್ನೇಹಿತನ ಜತೆಗೆ ದೇಹ ಹಂಚಿಕೊಂಡಿದ್ದೇನೆ. ಅವನ ಹೆಸರು ರಿಚರ್ಡ್‌ ಪಾಲ್‌" ಎಂದಷ್ಟೇ ಹೇಳಿದ್ದರು. ಇದೀಗ ಚಿಕ್ಕ ವಯಸ್ಸಿನಲ್ಲಿನ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ