logo
ಕನ್ನಡ ಸುದ್ದಿ  /  ಮನರಂಜನೆ  /  Rajinikanth: ಕಾವೇರಿ ವಿಚಾರದಲ್ಲಿ ರಜಿನಿಕಾಂತ್‌ ತಮಿಳುನಾಡಿಗೆ ದ್ರೋಹ ಮಾಡುತ್ತಿದ್ದಾರೆ; ತಲೈವಾ ವಿರುದ್ಧ ಬುಸುಗುಟ್ಟಿದ ವನ್ನಿಅರಸು

Rajinikanth: ಕಾವೇರಿ ವಿಚಾರದಲ್ಲಿ ರಜಿನಿಕಾಂತ್‌ ತಮಿಳುನಾಡಿಗೆ ದ್ರೋಹ ಮಾಡುತ್ತಿದ್ದಾರೆ; ತಲೈವಾ ವಿರುದ್ಧ ಬುಸುಗುಟ್ಟಿದ ವನ್ನಿಅರಸು

HT Kannada Desk HT Kannada

Oct 10, 2023 01:03 PM IST

google News

ರಜಿನಿಕಾಂತ್‌ ವಿರುದ್ದ ತಮಿಳುನಾಡು ರಾಜಕೀಯ ಮುಖಂಡ ವನ್ನಿ ಅರಸು ಗರಂ

  • Rajinikanth: ಈಗ ಕಾವೇರಿ ಗಲಾಟೆ ಆರಂಭವಾದಾಗ ಕೂಡಾ ವಾಟಾಳ್‌ ನಾಗರಾಜ್‌ ರಜನಿಕಾಂತ್‌ ಕರ್ನಾಟಕದವರಾಗಿ ಇಲ್ಲಿಗೆ ಬೆಂಬಲ ನೀಡಬೇಕು ಎಂದಿದ್ದರು. ಇಲ್ಲವಾದರೆ ಯಾವುದೇ ಕಾರಣಕ್ಕೂ ರಜಿನಿಕಾಂತ್‌ ಕರ್ನಾಟಕಕ್ಕೆ ಬರಬಾರದು. ಅವರ ಸಿನಿಮಾಗಳು ಇಲ್ಲಿ ರಿಲೀಸ್‌ ಆಗಬಾರದು ಎಂದು ಕಂಡಿಷನ್‌ ಮಾಡಿದ್ದರು.

ರಜಿನಿಕಾಂತ್‌ ವಿರುದ್ದ ತಮಿಳುನಾಡು ರಾಜಕೀಯ ಮುಖಂಡ ವನ್ನಿ ಅರಸು ಗರಂ
ರಜಿನಿಕಾಂತ್‌ ವಿರುದ್ದ ತಮಿಳುನಾಡು ರಾಜಕೀಯ ಮುಖಂಡ ವನ್ನಿ ಅರಸು ಗರಂ

Rajinikanth: ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಾವೇರಿ ವಿವಾದ ಮತ್ತೆ ಆರಂಭವಾಗಿದೆ. ಇದೇ ವಿಚಾರವಾಗಿ ಸೆಪ್ಟೆಂಬರ್‌ 29ರಂದು ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರ್ನಾಟಕ ಬಂದ್‌ ಕೂಡಾ ಕರೆಯಲಾಗಿತ್ತು. ಸಿನಿಮಾ ಮಂದಿ ಕೂಡಾ ಶೂಟಿಂಗ್‌ ನಿಲ್ಲಿಸಿ ಬಂದ್‌ಗೆ ಬೆಂಬಲ ನೀಡಿದ್ದರು. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಇಲ್ಲಿ ರೈತರು ಪ್ರತಿಭಟನೆ ನಡೆಸಿದೆ, ಅತ್ತ ತಮಿಳುನಾಡಿನಲ್ಲಿ ಕೂಡಾ ರೈತರು ನಮ್ಮ ಬೆಳೆಗೆ ನೀರು ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ.

ಅಡಕತ್ತರಿಯಲ್ಲಿ ಸಿಲುಕಿದ ರಜಿನಿಕಾಂತ್‌

ಪ್ರತಿ ಬಾರಿ ಕಾವೇರಿ ವಿವಾದ ಆರಂಭವಾದಾಗ ನಟ ರಜನಿಕಾಂತ್‌ ಮುನ್ನೆಲೆಗೆ ಬರುತ್ತಾರೆ. ರಜನಿಕಾಂತ್‌ ಮೂಲತ: ಮರಾಠಿ ಕುಟುಂಬದವರಾದರೂ ಹುಟ್ಟಿ, ಬೆಳೆದದ್ದು ಬೆಂಗಳೂರಿನಲ್ಲಿ. ಆದರೆ ಅವರು ವೃತ್ತಿ ಬದುಕು ಕಟ್ಟಿಕೊಂಡಿದ್ದು ತಮಿಳುನಾಡಿನಲ್ಲಿ. ಕಾವೇರಿ ಪ್ರತಿಭಟನೆಯಲ್ಲಿ ಕರ್ನಾಟಕದ ನಟ ನಟಿಯರು ಕರ್ನಾಟಕದ ಪರ ನಿಲ್ಲುತ್ತಾರೆ. ತಮಿಳುನಾಡಿನವರು ತಮ್ಮ ರಾಜ್ಯದ ಪರ ನಿಂತಿದ್ದಾರೆ. ಆದರೆ ಈ ವಿಚಾರದಲ್ಲಿ ರಜಿನಿಕಾಂತ್‌ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಕರ್ನಾಟಕದ ಪರ ನಿಂತರೆ ತಮಿಳುನಾಡಿಗೆ, ತಮಿಳುನಾಡಿನ ಪರ ನಿಂತರೆ ಕರ್ನಾಟಕದವರಿಗೆ ಬೇಸರ ಉಂಟಾಗುತ್ತದೆ. ಇದೇ ಕಾರಣಕ್ಕೆ ರಜಿನಿಕಾಂತ್‌ ಮೌನ ವಹಿಸಿದ್ದಾರೆ.

ರಜಿನಿಕಾಂತ್‌ ಕರ್ನಾಟಕಕ್ಕೆ ಬರಬಾರದು ಎಂದಿದ್ದ ವಾಟಾಳ್‌ ನಾಗರಾಜ್

ಈಗ ಕಾವೇರಿ ಗಲಾಟೆ ಆರಂಭವಾದಾಗ ಕೂಡಾ ವಾಟಾಳ್‌ ನಾಗರಾಜ್‌ ರಜನಿಕಾಂತ್‌ ಕರ್ನಾಟಕದವರಾಗಿ ಇಲ್ಲಿಗೆ ಬೆಂಬಲ ನೀಡಬೇಕು ಎಂದಿದ್ದರು. ಇಲ್ಲವಾದರೆ ಯಾವುದೇ ಕಾರಣಕ್ಕೂ ರಜಿನಿಕಾಂತ್‌ ಕರ್ನಾಟಕಕ್ಕೆ ಬರಬಾರದು. ಅವರ ಸಿನಿಮಾಗಳು ಇಲ್ಲಿ ರಿಲೀಸ್‌ ಆಗಬಾರದು ಎಂದು ಕಂಡಿಷನ್‌ ಮಾಡಿದ್ದರು. ಇದೀಗ ತಮಿಳುನಾಡಿನ ರಾಜಕೀಯ ಮುಖಂಡ ವನ್ನಿ ಅರಸು ಕೂಡಾ ರಜಿನಿಕಾಂತ್‌ ವಿರುದ್ಧ ಗರಂ ಆಗಿದ್ದಾರೆ. ಕಾವೇರಿ ವಿಚಾರದಲ್ಲಿ ರಜಿನಿಕಾಂತ್‌ ತಮಿಳುನಾಡಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.‌

ಕಾವೇರಿ ವಿಚಾರದಲ್ಲಿ ಮೌನ ವಹಿಸಿರುವ ರಜಿನಿಕಾಂತ್‌

ಇತ್ತೀಚೆಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ರಜಿನಿಕಾಂತ್‌ಗೆ ಮಾಧ್ಯಮದವರಿಂದ ಕಾವೇರಿ ವಿವಾದದ ಬಗ್ಗೆ ಪ್ರಶ್ನೆ ಎದುರಾಗಿದೆ. ಆದರೆ ಈ ಪ್ರಶ್ನೆಗೆ ರಜಿನಿಕಾಂತ್‌ ಉತ್ತರಿಸಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡು ರಾಜಕೀಯ ಮುಖಂಡ ವನ್ನಿ ಅರಸು ರಜಿನಿಕಾಂತ್, ತಮಿಳುನಾಡಿನಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದಾರೆ. ಇಲ್ಲಿ ಹಣ ಹೆಸರು ಸಂಪಾದಿಸಿದ್ದಾರೆ. ಆದರೆ ಕಾವೇರಿ ವಿಚಾರದಲ್ಲಿ ಮಾತ್ರ ಅವರು ಮೌನ ವಹಿಸಿದ್ದಾರೆ. ಇದು ಅವರು ತಮಿಳುನಾಡಿಗೆ ಮಾಡುತ್ತಿರುವ ದ್ರೋಹ ಎಂದು ರಜಿನಿಕಾಂತ್‌ ವಿರುದ್ಧ ಆರೋಪ ಮಾಡಿದ್ದಾರೆ.

ಹೆಚ್ಚಿನ ಮನರಂಜನೆ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ