logo
ಕನ್ನಡ ಸುದ್ದಿ  /  ಮನರಂಜನೆ  /  ಥಿಯೇಟರ್‌ನಲ್ಲಿ ಹಿಂದೆ ಉಳಿದ್ರೂ ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ ದಳಪತಿ ವಿಜಯ್‌‌ ಸಿನಿಮಾ; 14 ದೇಶಗಳಲ್ಲಿ ಟ್ರೆಂಡಿಗ್‌ನಲ್ಲಿರುವ ಗೋಟ್‌

ಥಿಯೇಟರ್‌ನಲ್ಲಿ ಹಿಂದೆ ಉಳಿದ್ರೂ ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ ದಳಪತಿ ವಿಜಯ್‌‌ ಸಿನಿಮಾ; 14 ದೇಶಗಳಲ್ಲಿ ಟ್ರೆಂಡಿಗ್‌ನಲ್ಲಿರುವ ಗೋಟ್‌

Rakshitha Sowmya HT Kannada

Oct 12, 2024 12:00 PM IST

google News

ಒಟಿಟಿಯಲ್ಲಿ ಧೂಳೆಬ್ಬಿಸುತ್ತಿರುವ ದಳಪತಿ ವಿಜಯ್‌ ದ್ವಿಪಾತ್ರದಲ್ಲಿ ನಟಿಸಿರುವ ಗೋಟ್‌ ತಮಿಳು ಸಿನಿಮಾ

  • ದಳಪತಿ ವಿಜಯ್‌ ಅಭಿನಯದ ದಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಹೇಳಿಕೊಳ್ಳುವಂತೆ ಸದ್ದು ಮಾಡದಿದ್ದರೂ ಒಟಿಟಿಯಲ್ಲಿ ಧೂಳು ಎಬ್ಬಿಸುತ್ತಿದೆ. ಸದ್ಯಕ್ಕೆ ಗೋಟ್‌ ಸಿನಿಮಾ ಗ್ಲೋಬಲ್‌ ರೇಂಜ್‌ನಲ್ಲಿ ಟಾಪ್‌ 5 ಸ್ಥಾನದಲ್ಲಿದ್ದು ಟ್ರೆಂಡ್‌ ಆಗುತ್ತಿದೆ.

 ಒಟಿಟಿಯಲ್ಲಿ ಧೂಳೆಬ್ಬಿಸುತ್ತಿರುವ ದಳಪತಿ ವಿಜಯ್‌ ದ್ವಿಪಾತ್ರದಲ್ಲಿ ನಟಿಸಿರುವ ಗೋಟ್‌ ತಮಿಳು ಸಿನಿಮಾ
ಒಟಿಟಿಯಲ್ಲಿ ಧೂಳೆಬ್ಬಿಸುತ್ತಿರುವ ದಳಪತಿ ವಿಜಯ್‌ ದ್ವಿಪಾತ್ರದಲ್ಲಿ ನಟಿಸಿರುವ ಗೋಟ್‌ ತಮಿಳು ಸಿನಿಮಾ

ವಿಜಯ್‌ ಡಬಲ್‌ ರೋಲ್‌ನಲ್ಲಿ ನಟಿಸಿದ್ದ ಗೋಟ್‌ ಸಿನಿಮಾ ಸೆಪ್ಟೆಂಬರ್‌ 5 ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು. ಆದರೆ ಈ ಹೈ ಬಜೆಟ್‌ ಆಕ್ಷನ್‌ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ನಿರೀಕ್ಷಿಸಿದಷ್ಟು ಕಲೆಕ್ಷನ್‌ ಮಾಡಲಿಲ್ಲ.

ಅಕ್ಟೋಬರ್‌ 3 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿರುವ ಚಿತ್ರ

ಸಿನಿಮಾ ಅನೌನ್ಸ್‌ ಆದಾಗಿನಿಂದ ರಿಲೀಸ್‌ ಆಗುವವರೆಗೂ ಸಿನಿಮಾ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿತ್ತು. ಇಷ್ಟಾದರೂ ಚಿತ್ರಮಂದಿರಕ್ಕೆ ಜನರನ್ನು ಕರೆತರುವಲ್ಲಿ ವಿಫಲವಾಗಿತ್ತು. ದಿನೇ ದಿನೆ ಕಲೆಕ್ಷನ್‌ ಡಲ್‌ ಆಯ್ತು. ಥಿಯೇಟರ್‌ನಲ್ಲಿ ರಿಲೀಸ್‌ ಆದ ಒಂದು ತಿಂಗಳಲ್ಲಿ ಸಿನಿಮಾ ಒಟಿಟಿಯಲ್ಲಿ ತೆರೆ ಕಂಡಿತ್ತು. ಅಕ್ಟೋಬರ್‌ 3 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದ ಸಿನಿಮಾ ಈಗ ಒಟಿಟಿಯಲ್ಲೇ ಜೋರು ಸದ್ದು ಮಾಡುತ್ತಿದೆ. ಒಳ್ಳೆ ವ್ಯೂವ್ಸ್‌ ದೊರೆತಿದೆ. ಭಾರತದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿ ಕೂಡಾ ಈ ಸಿನಿಮಾ ಟಾಪ್‌ 10 ರಲ್ಲಿ ಟ್ರೆಂಡ್‌ ಆಗುತ್ತಿದೆ.

ಗೋಟ್‌ ಸಿನಿಮಾ ಗ್ಲೋಬಲ್‌ ರೇಂಜ್‌ನಲ್ಲಿ 4ನೇ ಸ್ಥಾನದಲ್ಲಿ ಟ್ರೆಂಡ್‌ ಆಗುತ್ತಿದೆ. ನೆಟ್‌ಫ್ಲಿಕ್ಸ್‌ ನಾನ್‌ ಇಂಗ್ಲೀಷ್‌ ಸಿನಿಮಾ ಕೆಟಗಿರಿಯಲ್ಲಿ ಗೋಟ್‌ ಪ್ರಸ್ತುತ ಟಾಪ್‌ 5ರಲ್ಲಿ ಟ್ರೆಂಡ್‌ ಆಗುತ್ತಾ ಭಾರೀ ಸದ್ದು ಮಾಡುತ್ತಿದೆ. ಈ ವಿಚಾರವನ್ನು ಇತ್ತೀಚೆಗೆ ನೆಟ್‌ಫ್ಲಿಕ್ಸ್‌ ಇತ್ತೀಚೆಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಇಂಡಿಯಾ ಹೊರತುಪಡಿಸಿ ಮಲೇಷಿಯಾ, ಮಾಲ್ಡೀವ್ಸ್‌, ಖತಾರ್‌, ಸಿಂಗಪೂರ್‌ ಸೇರಿದಂತೆ ಒಟ್ಟು 14 ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ ಟಾಪ್‌ 10 ರಲ್ಲಿ ಗೋಟ್‌ ಸಿನಿಮಾ ಟ್ರಂಡ್‌ ಆಗುತ್ತಿದೆ. ಶ್ರೀಲಂಕಾದಲ್ಲಿ ಮೊದಲ ಸ್ಥಾನದಲ್ಲಿದ್ದರೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಒಟಿಟಿಯಲ್ಲಿ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ.

400 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಸಿನಿಮಾ

ಗೋಟ್‌ ಸಿನಿಮಾ ಸುಮಾರು 400 ಕೋಟಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ. ಇದುವರೆಗೂ ಈ ಚಿತ್ರ ವಿಶ್ವಾದ್ಯಂತ ಒಟ್ಟು 450 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಈ ಸಿನಿಮಾ 1000 ಕೋಟಿ ರೂ ಕಲೆಕ್ಷನ್‌ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದರ ಅರ್ಧದಷ್ಟೂ ಸಿನಿಮಾ ಹಣ ಗಳಿಸಲಿಲ್ಲ. ದಿ ಗೋಟ್‌ ಚಿತ್ರವನ್ನು ಎಜಿಎಸ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿ ಕಲ್ಪಾತಿ ಗಣೇಶ್‌, ಸುರೇಶ್‌, ಅಗೋರಂ ಜೊತೆ ಸೇರಿ ನಿರ್ಮಾಣ ಮಾಡಿದ್ದು ವೆಂಕಟ್‌ ಪ್ರಭು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಿ ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ಆದರೆ ಚಿತ್ರದಲ್ಲಿ ಆಕೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಇವರೊಂದಿಗೆ ಚಿತ್ರದಲ್ಲಿ ಪ್ರಶಾಂತ್‌, ಸ್ನೇಹ, ಪ್ರಭುದೇವ, ಜಯರಾಂ ಹಾಗೂ ಇನ್ನಿತರರು ನಟಿಸಿದ್ದಾರೆ.

ವಿಜಯ್‌ ಇತ್ತೀಚೆಗೆ ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಇನ್ಮುಂದೆ ಅವರು ಸಿನಿಮಾ ಬಿಟ್ಟು ರಾಜಕೀಯದಲ್ಲಿ ಮುಂದುವರೆಯುವ ಆಸೆ ವ್ಯಕ್ತಪಡಿಸಿದ್ದಾರೆ. ದಿ ಗೋಟ್‌, ವಿಜಯ್‌ ಅಭಿನಯದ ಕೊನೆಯ ಸಿನಿಮಾ ಎನ್ನಲಾಗಿತ್ತು. ಆದರೆ ಮತ್ತೊಂದು ಚಿತ್ರಕ್ಕೆ ವಿಜಯ್‌ ಸಹಿ ಹಾಕಿದ್ದು ಇತ್ತೀಚೆಗೆ ಸಿನಿಮಾ ಮುಹೂರ್ತ ನೆರವೇರಿದೆ. ಕನ್ನಡದ ಕೆವಿಎನ್‌ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ವಿಶೇಷ. ಬೀಸ್ಟ್‌ ಚಿತ್ರದಲ್ಲಿ ವಿಜಯ್‌ಗೆ ಜೊತೆಯಾಗಿದ್ದ ಪೂಜಾ ಹೆಗ್ಡೆ, ವಿಜಯ್‌ ಕೊನೆಯ ಸಿನಿಮಾದಲ್ಲೂ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಬಿ ಡಿಯೋಲ್‌, ಈ ಸಿನಿಮಾದಲ್ಲಿ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರಕ್ಕೆ ಎಚ್‌ ವಿನೋದ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. 2025 ಅಕ್ಟೋಬರ್‌ನಲ್ಲಿ ಈ ಸಿನಿಮಾ ತೆರೆ ಕಾಣಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ