Thangalaan Twitter Review: ಚಿಯಾನ್ ವಿಕ್ರಮ್ ತಂಗಲಾನ್ ಸಿನಿಮಾಕ್ಕೆ ಉಘೇ ಉಘೇ ಎಂದ ಪ್ರೇಕ್ಷಕ, ಕೆಜಿಎಫ್ ಪೂರ್ವಿಕರ ಕಥೆಯ ರೋಮಾಂಚನ
Aug 15, 2024 09:52 AM IST
Thangalaan Twitter Review: ಚಿಯಾನ್ ವಿಕ್ರಮ್ ತಂಗಲಾನ್ ಸಿನಿಮಾಕ್ಕೆ ಉಘೇ ಉಘೇ ಎಂದ ಪ್ರೇಕ್ಷಕ
- Thangalaan Movie Twitter Review: ಕರ್ನಾಟಕದ ಕೆಜಿಎಫ್‌ನ ಪೂರ್ವಿಕರ ಕಥೆಯನ್ನು ಹೊಂದಿರುವ ಚಿಯಾನ್ ವಿಕ್ರಮ್ ನಟನೆಯ, ಪಾ ರಂಜಿತ್ ನಿರ್ದೇಶನದ ತಂಗಲಾನ್ ಸಿನಿಮಾ ಹೇಗಿದೆ? ಈ ಸಿನಿಮಾದಲ್ಲಿ ಇಷ್ಟವಾಗುವ ಅಂಶಗಳೇನು? ಎಷ್ಟು ರೇಟಿಂಗ್? ಟ್ವಿಟ್ಟರ್‌ನಲ್ಲಿ ಕಂಡ ತಂಗಲಾನ್ ವಿಮರ್ಶೆಗಳನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ.
Thangalaan Movie Review: ಯಶ್ ನಟನೆಯ ಕೆಜಿಎಫ್‌ನ ಇನ್ನೊಂದು ಕಥೆಯನ್ನು ತಂಗಲಾನ್ ಮೂಲಕ ಪಾ ರಂಜಿತ್ ಹೇಳಿದ್ದಾರೆ. ತಂಗಲಾನ್ ಎಂದರೆ ಚಿನ್ನದ ಮಗ (ಸನ್ ಆಫ್ ಗೋಲ್ಡ್). ತಮಿಳಿನ ಈ ಸಾಹಸ ಸಿನಿಮಾವನ್ನು ಪಾ ರಂಜಿನ್ ನಿರ್ದೇಶಿಸಿದ್ದಾರೆ. ಚಿಯಾನ್ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಮಾಳವಿಕಾ ಮೋಹನನ್ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಪಾರ್ವತಿ ತಿರುವೊಟ್ಟು, ಡೇನಿಯಲ್ ಕ್ಯಾಲ್ಟಗಿರೋನ್, ಪಶುಪತಿ, ಹರಿ ಕೃಷ್ಣನ್ ಅನ್ಬುದುರೈ ಮತ್ತು ಸಂಪತ್ ರಾಮ್ ನಟಿಸಿದ್ದಾರೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಕೆಜಿಎಫ್‌ನ ಹಳ್ಳಿಯಲ್ಲಿ ಚಿನ್ನವನ್ನು ಪತ್ತೆಹಚ್ಚಲು ಬ್ರಿಟಿಷ್ ಜನರಲ್‌ಗೆ ಸಹಾಯ ಮಾಡುವ ಬುಡಕಟ್ಟು ನಾಯಕ, ಇದಕ್ಕೆ ಅಡ್ಡಿಯಾಗುವ ಮಾಯಾ ಹೆಣ್ಣು... ಹೀಗೆ ವಿಭಿನ್ನ ಕಥೆಯನ್ನು ಹೊಂದಿರುವ ತಂಗಲಾನ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪಾಸಿಟಿವ್ ವಿಮರ್ಶೆ ಕೇಳಿಬರುತ್ತಿದೆ. ಕನ್ನಡದ ಕೃಷ್ಣಂ ಪ್ರಣಯ ಸಖಿ ಕುರಿತೂ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾದ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಕಾಯುತ್ತಿವೆ.
ತಂಗಲಾನ್ ಸಿನಿಮಾದ ವಿಮರ್ಶೆ
ತಂಗಲಾನ್ ಸಿನಿಮಾವನ್ನು ಈಗಾಗಲೇ ಸಾಕಷ್ಟು ಜನರು ವೀಕ್ಷಿಸಿದ್ದಾರೆ. ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿದ ತಂಗಲಾನ್ ಸಿನಿಮಾ ವಿಮರ್ಶೆ ಇಲ್ಲಿದೆ.
"ಬ್ಲಾಕ್‌ಬಸ್ಟರ್ ಸಿನಿಮಾ. ಕ್ಲೈಮ್ಯಾಕ್ಸ್ ಕಣ್ಣೀರು ತರಿಸುತ್ತದೆ. ಸಿನಿಮಾ ನಿರ್ಮಿಸುವಲ್ಲಿ ರಂಜಿತ್ ಭಿನ್ನ ಅಭಿರುಚಿ ಹೊಂದಿದದ್ದಾರೆ. ವಿಕ್ರಮ್ ಅವರ ಸಿನಿಮಾಗಳಲ್ಲಿಯೇ ಅತ್ಯುತ್ತಮ" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ವಿಮರ್ಶೆ ಮಾಡಿದ್ದಾರೆ.
"ತಂಗಲಾನ್ ಸಿನಿಮಾ ಅದ್ಭುತ. ಅರ್ಜುನ್ ನಟನೆ ಅನಿರೀಕ್ಷಿತ, ಬ್ರಿಲಿಯಂಟ್, ಹರಿಕೃಷ್ಣನ್ ಅಂಬುದೊರೈ ಮತ್ತು ಪ್ರೀತಿಕರಣ್ ಕ್ಯೂಟ್, ಡೇನಿಯಲ್ ಅದ್ಭುತ, ಕೊನೆಯವರೆಗೂ ಇಂಗ್ಲಿಷ್ ಮ್ಯಾನ್‌ನಂತೆ ನಟಿಸಿದ್ದಾರೆ" ಎಂದು ಇನ್ನೊಬ್ಬರು ರಿವ್ಯೂ ಮಾಡಿದ್ದಾರೆ.
"ಮೊದಲಾರ್ಧ ಅದ್ಭುತ ಹಿಡಿತ. ಈ ಸಿನಿಮಾದ ಟ್ವಿಸ್ಟ್‌ಗಳು ಅನಿರೀಕ್ಷಿತವಾಗಿವೆ. ಅದ್ಭುತ ದೃಶ್ಯಗಳು, ಚಿಯಾನ್ ನಟನೆ ಅಮೋಘ" ಎಂದು ಇನ್ನೊಬ್ಬರು ರಿವ್ಯೂ ಮಾಡಿದ್ದಾರೆ.
"ಮೊದಲಾರ್ಧ ಗೂಸ್‌ಬಂಪ್ಸ್. ಚಿಯಾನ್ ನಟನೆ ಅಚ್ಚರಿದಾಯಕ. ಜಿವಿ ಪ್ರಕಾಶ್ ಈ ಸಿನಿಮಾದ ಬೆನ್ನೆಲುಬು. ಸಿನಿಮಾದ ವಿಷುಯಲ್ಸ್ ಅದ್ಭುತ. ಪಾ ರಂಜಿತ್ ಅವರೇ ಅದ್ಭುತವಾಗಿ ಸಿನಿಮಾ ಮಾಡಿದೀರಿ. ಹಾವಿನ ದೃಷ್ಯವಂತೂ ಭಯಾನಕ" ಎಂದು ಮತ್ತೊಬ್ಬರು ಟ್ವಿಟ್ಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅಪರೂಪಕ್ಕೆ ಎಂಬಂತೆ ಟ್ವಿಟ್ಟರ್‌ನಲ್ಲಿ ಕೆಲವು ನೆಗೆಟಿವ್ ಕಾಮೆಂಟ್‌ಗಳೂ ಕಾಣಿಸಿವೆ.
"ಮೊದಲಾರ್ಧ ಓಕೆ. ದ್ವಿತಿಯಾರ್ಧ ಕ್ಲೂಲೆಸ್, ಏನಾಗುತ್ತದೆ ಎಂದು ತಿಳಿಯುವುದಿಲ್ಲ. ಚಿಯಾನ್ ಪರ್ಫಾಮೆನ್ಸ್ ಅದ್ಭುತ. ಪಾರ್ವತಿ ನಟನೆ ಉತ್ತಮ. ಮಾಳವಿಕಾ ಮೋಹನನ್ ಓಕೆ. ಹಿನ್ನೆಲೆ ಸಂಗೀತ ಉತ್ತಮ. ಡೈಲಾಗ್‌ಗಳು ಅರ್ಥವಾಗುವುದು ಕಷ್ಟ. ಇಂಟರ್‌ವಲ್ ಬಳಿಕ ಕಥೆ ಬೇಗ ಸಾಗುವುದಿಲ್ಲ. ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಿಲ್ಲ. ಪಾ ರಂಜಿತ್ ಬೇಸರ ತರಿಸಿದ್ದಾರೆ" ಎಂದು ಒಬ್ಬರು ಸಿನಿಮಾ ಚೆನ್ನಾಗಿಲ್ಲ ಎಂದು ವಿಮರ್ಶೆ ಮಾಡಿದ್ದಾರೆ.
ವಿಭಾಗ