ನಿರೀಕ್ಷಿತ ದಿನಾಂಕದಂದು OTTಯಲ್ಲಿ ಬಿಡುಗಡೆಯಾಗದ ಕೃಷ್ಣಂ ಪ್ರಣಯ ಸಖಿ; ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದ ಅಭಿಮಾನಿಗಳು
Oct 12, 2024 05:22 PM IST
ನಿರೀಕ್ಷಿತ ದಿನಾಂಕದಂದು OTTಯಲ್ಲಿ ಬಿಡುಗಡೆಯಾಗದ ಕೃಷ್ಣಂ ಪ್ರಣಯ ಸಖಿ
- Krishnam Pranaya Sakhi: ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ ಎಂದು ಎಲ್ಲರೂ ಕಾದಿದ್ದಾರೆ. ಆದರೆ ಕಾಯುವಿಕೆಯನ್ನು ಇನ್ನಷ್ಟು ದಿನ ಮುಂದೂಡುವ ಪ್ರಸಂಗ ಎದುರಾಗಿದೆ. ಇನ್ನೆಷ್ಟು ದಿನ ಕಾಯಬೇಕು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಇತ್ತೀಚಿಗೆ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಇದೀಗ ಓಟಿಟಿಗೆ ಎಂಟ್ರಿ ಕೊಡಲಿದೆ ಎಂದು ಅಭಿಮಾನಿಗಳು ಕಾದದ್ದೊಂದೇ ಆಯ್ತು. ಆಗಸ್ಟ್ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಅಕ್ಟೋಬರ್ 11ರಂದು ಓಟಿಟಿ ಸ್ಟ್ರೀಮಿಂಗ್ ಆರಂಭಿಸಿದೆ ಎಂಬ ನಿರೀಕ್ಷೆ ಇತ್ತು. ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಮತ್ತೆ ತೆರೆಮೇಲೆ ನೋಡಿದ ಪ್ರೇಕ್ಷಕರು ತುಂಬಾ ಖುಷಿಪಟ್ಟಿದ್ದಾರೆ. ಎಷ್ಟೋ ಜನ ಈ ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ದಂಡುಪಾಳ್ಯ ಖ್ಯಾತಿಯ ಶ್ರೀನಿವಾಸ ರಾಜು ನಿರ್ದೇಶಿಸಿದ, ಕೃಷ್ಣಂ ಪ್ರಣಯ ಸಖಿ ಚಿತ್ರವು ತನ್ನ ಹಾಡುಗಳಿಂದಲೇ ತುಂಬಾ ಜನಪ್ರಿಯತೆ ಗಳಿಸಿದೆ.
ಈ ವೀಕೆಂಡ್‌ನಲ್ಲಿ ನೋಡಿ
ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸೂಪರ್ ಹಿಟ್ ಪಟ್ಟ ಪಡೆದುಕೊಂಡಿದೆ. ಇತ್ತೀಚಿನ ಕೆಲ ದಿನಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ, ಕೃಷ್ಣ ಪ್ರಣಯ ಸಖಿ ಸಿನಿಮಾ ಒಳ್ಳೆಯ ಕಲೆಕ್ಷನ್ ಜತೆಗೆ ಜನಮೆಚ್ಚುಗೆಯನ್ನೂ ಪಡೆದು ಇದೀಗ ಓಟಿಟಿಯಲ್ಲೂ ನಿಮ್ಮ ವೀಕ್ಷಣೆಗೆ ಲಭ್ಯವಾಗಲಿದೆ. ವೀಕೆಂಡ್ ಬಂತು ಮನೆಯಲ್ಲೇ ಕುಳಿತು ಯಾವುದಾದರೂ ಸಿನಿಮಾ ನೋಡೋಣ ಎಂದು ನೀವು ಅಂದುಕೊಂಡು ಕಾದಿದ್ದವರಿಗೆ ನಿರಾಸೆಯಾಗಿದೆ. ನಿರೀಕ್ಷಿತ ದಿನಾಂಕದಂದು ಇದು ಓಟಿಟಿಯಲ್ಲಿ ಬಿಡುಗಡೆಯಾಗಿಲ್ಲ.
ದೊಡ್ಡ ಹಿಟ್‌ನ ನಿರೀಕ್ಷೆಯಲ್ಲಿದ್ದ ನಟ ಗಣೇಶ್ ಅವರಿಗೆ ಈ ಚಿತ್ರ ಮತ್ತಷ್ಟು ಹೆಸರು ತಂದುಕೊಟ್ಟಿದೆ. ತುಂಬಾ ವರ್ಷಗಳ ನಂತರ ಮತ್ತೆ ತಮ್ಮ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಕೃಷ್ಣಂ ಪ್ರಣಯ ಸಖಿಯಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ಗಿರಿ ಶಿವಣ್ಣ, ಶರಣ್ಯ ಶೆಟ್ಟಿ, ಶಶಿಕುಮಾರ್, ಅಂಬುಜಾ, ಶ್ರುತಿ, ಮಾನಸಿ ಸುಧೀರ್ ಸೇರಿದಂತೆ ಇನ್ನೂ ಹಲವಾರು ಕಲಾವಿಧರು ಅಭಿನಯಿಸಿದ್ದಾರೆ.
ಭರ್ಜರಿ ಕಲೆಕ್ಷನ್
ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ವೆಂಕಟ್ ರಾಮ ಪ್ರಸಾದ್ ಅವರ ಛಾಯಾಗ್ರಹಣ ಇನ್ನಷ್ಟು ಮೆರಗು ನೀಡಿದೆ. ಬಲು ಆಕರ್ಷಕ ಪೋಸ್ಟರ್‌ನಿಂದ ಹಲವರ ಮನಗೆದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 25 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂಬ ನಿರೀಕ್ಷೆ ಜನರಿಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನಷ್ಟು ದಿನ ಕಾದು ನೋಡಬೇಕಿದೆ.
ವಿಭಾಗ