logo
ಕನ್ನಡ ಸುದ್ದಿ  /  ಮನರಂಜನೆ  /  Meghana Raj In Tatsama Tadbhava:‌ ‘ಆ ಪ್ರಶ್ನೆಗೆ ಇದೇ ನನ್ನ ಉತ್ತರ’; ವರ್ಷಗಳ ಬಳಿಕ ಸಿಹಿ ಸುದ್ದಿ ನೀಡಿದ ಮೇಘನಾ ರಾಜ್‌

Meghana Raj in Tatsama Tadbhava:‌ ‘ಆ ಪ್ರಶ್ನೆಗೆ ಇದೇ ನನ್ನ ಉತ್ತರ’; ವರ್ಷಗಳ ಬಳಿಕ ಸಿಹಿ ಸುದ್ದಿ ನೀಡಿದ ಮೇಘನಾ ರಾಜ್‌

HT Kannada Desk HT Kannada

Published Feb 19, 2023 11:00 AM IST

google News

‘ಆ ಪ್ರಶ್ನೆಗೆ ಇದೇ ನನ್ನ ಉತ್ತರ’; ವರ್ಷಗಳ ಬಳಿಕ ಸಿಹಿ ಸಿನಿಮಾ ಸುದ್ದಿ ನೀಡಿದ ಮೇಘನಾ ರಾಜ್‌

    • ಮೇಘನಾ ರಾಜ್‌ ಸರ್ಜಾ ಮತ್ತೆ ಸಿನಿಮಾಕ್ಕೆ ಕಂಬ್ಯಾಕ್‌ ಮಾಡಿದ್ದಾರೆ. ಕಳೆದ ವರ್ಷವೇ ಘೋಷಣೆ ಆಗಿದ್ದ ಆ ಸಿನಿಮಾದ ಶೀರ್ಷಿಕೆ ಇದೀಗ ಬಹಿರಂಗಗೊಂಡಿದೆ.
‘ಆ ಪ್ರಶ್ನೆಗೆ ಇದೇ ನನ್ನ ಉತ್ತರ’; ವರ್ಷಗಳ ಬಳಿಕ ಸಿಹಿ ಸಿನಿಮಾ ಸುದ್ದಿ ನೀಡಿದ ಮೇಘನಾ ರಾಜ್‌
‘ಆ ಪ್ರಶ್ನೆಗೆ ಇದೇ ನನ್ನ ಉತ್ತರ’; ವರ್ಷಗಳ ಬಳಿಕ ಸಿಹಿ ಸಿನಿಮಾ ಸುದ್ದಿ ನೀಡಿದ ಮೇಘನಾ ರಾಜ್‌

Meghana Raj in Tatsama Tadbhava: ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಸದ್ಯ ಏನು ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮಗ ರಾಯನ್‌ ಲಾಲನೆ- ಪಾಲನೆಯ ಜತೆಗೆ ಸಿನಿಮಾಗಳಲ್ಲಿಯೂ ಅವರು ಬಿಜಿಯಾಗಿದ್ದಾರೆ. ಸಾಲು ಸಾಲು ಕಥೆಗಳನ್ನೂ ಕೇಳುತ್ತಿದ್ದಾರೆ. ಈ ನಡುವೆ ಒಪ್ಪಿಕೊಂಡ ಸಿನಿಮಾಗಳ ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ. ಇದೀಗ ಅಪ್‌ಡೇಟ್‌ ಸುದ್ದಿಯೊಂದನ್ನು ಬಹಿರಂಗಗೊಳಿಸಿದ್ದಾರೆ. ಅಂದರೆ, ಹೊಸ ಸಿನಿಮಾದ ಪೋಸ್ಟರ್‌ ಮತ್ತು ಶೀರ್ಷಿಕೆ ಸಮೇತ ಮೇಘನಾ ಎದುರಾಗಿದ್ದಾರೆ.

ಮೇಘನಾ ರಾಜ್‌ ಸರ್ಜಾ ‘ತತ್ಸಮ ತದ್ಭವ’ ಶೀರ್ಷಿಕೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್‌ ಹಂಚಿಕೊಂಡಿರುವ ಅವರು, "ಮತ್ತೆ ಸಿನಿಮಾಕ್ಕೆ ಕಮ್‌ಬ್ಯಾಕ್‌ ಮಾಡುವುದು ಯಾವಾಗ? ಎಂಬ ಈ ಪ್ರಶ್ನೆಯನ್ನು ನಾನು ಸಾಕಷ್ಟು ಬಾರಿ ಎದುರಿಸಿದ್ದೇನೆ. ಅದಕ್ಕೆ ಉತ್ತರ ಇಲ್ಲಿದೆ.." ಎಂದು ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್‌ ಶೇರ್ ಮಾಡಿದ್ದಾರೆ.

ವಿಶಾಲ್‌ ಅತ್ರೇಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಾಯಕಿ ಪ್ರಧಾನ ‘ತತ್ಸಮ ತದ್ಭವ’ ಸಿನಿಮಾದಲ್ಲಿ ಮೇಘನಾ ರಾಜ್‌ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಕನ್ನಡದ ಜತೆಗೆ ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದೆ. ಪನ್ನಗಾ ಭರಣ, ಸ್ಪೂರ್ತಿ ಅನಿಲ್‌, ಚೇತನ್‌ ನಂಜುಡಯ್ಯ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತಾಂತ್ರಿಕ ಬಳಗದಲ್ಲಿ ವಾಸುಕಿ ವೈಭವ್‌ ಸಂಗೀತ ನೀಡಲಿರುವ ಈ ಚಿತ್ರಕ್ಕೆ, ಶ್ರೀನಿವಾಸ್‌ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಅವರ ಸಂಕಲನ ಈ ಚಿತ್ರಕ್ಕಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಸೃಜನ್ ಲೋಕೇಶ್ ಜತೆಗಿನ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಚಿತ್ರ ಸಿನಿಮಾ ತೆರೆ ಕಂಡಿತ್ತು. ಉಪೇಂದ್ರ ಜತೆಗೆ 'ಬುದ್ಧಿವಂತ 2' ಚಿತ್ರದಲ್ಲಿಯೂ ಮೇಘನಾ ನಟಿಸಿದ್ದಾರೆ. ಇದೆಲ್ಲವೂ ಬಹಳ ದಿನಗಳ ಹಿಂದೆ ನಟಿಸಿದ್ದ ಸಿನಿಮಾಗಳು. ಹೀಗಿರುವಾಗ ಕಳೆದ ವರ್ಷ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಹೊಸ ಚಿತ್ರವನ್ನು ಘೋಷಣೆ ಮಾಡಿದ್ದರು ಮೇಘನಾ. ಪನ್ನಗಾ ಭರಣ ಈ ಚಿತ್ರ ನಿರ್ಮಿಸುವ ವಿಚಾರವನ್ನು ಹಂಚಿಕೊಂಡಿದ್ದರು. ಸದ್ದಿಲ್ಲದೆ ಚಿತ್ರೀಕರಣವೂ ಶುರುವಾಗಿತ್ತು. ಆದರೆ ಶೀರ್ಷಿಕೆ ಮಾತ್ರ ಬಹಿರಂಗ ಆಗಿರಲಿಲ್ಲ. ಇದೀಗ ಅದೇ ಚಿತ್ರ ‘ತತ್ಸಮ ತದ್ಭವ’ ರೂಪದಲ್ಲಿ ಘೋಷಣೆ ಆಗಿದೆ.

ಸಿನಿಮಾ ಸಂಬಂಧಿ ಈ ಸುದ್ದಿಯನ್ನೂ ಓದಿ

Shivanna as Bhairathi Ranagal: ಶಿವರಾತ್ರಿಗೆ ‘ಭೈರತಿ ರಣಗಲ್‌’ ಸಿನಿಮಾ ಘೋಷಿಸಿದ ಶಿವಣ್ಣ; ಹಲವು ಊಹಾಪೋಹಗಳಿಗೆ ಕೊನೆಗೂ ಸಿಕ್ಕಿತು ಉತ್ತರ!

2017ರಲ್ಲಿ ನರ್ತನ್‌ ನಿರ್ದೇಶನದಲ್ಲಿ ‘ಮಫ್ತಿ’ ಸಿನಿಮಾ ಮೂಡಿಬಂದಿತ್ತು. ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಮತ್ತು ಶ್ರೀಮುರಳಿ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡ ಈ ಚಿತ್ರವನ್ನು ಪರಭಾಷೆ ವೀಕ್ಷಕರೂ ಮೆಚ್ಚಿದ್ದರು. ಈ ಚಿತ್ರದಲ್ಲಿ ಭೈರತಿ ರಣಗಲ್‌ ಪಾತ್ರದಲ್ಲಿ ಶಿವಣ್ಣ ಅಬ್ಬರಿಸಿದ್ದರು. ಸಿನಿಮಾ ಅಷ್ಟೇ ಅಲ್ಲ ಆ ಪಾತ್ರದ ಹೆಸರೂ ಎಲ್ಲರಿಗೆ ಹಿಡಿಸಿತ್ತು. ಶಿವಣ್ಣ ಸಹ ಆ ಹೆಸರಿನಲ್ಲಿಯೇ ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಹೇಳಿಕೊಂಡಿದ್ದರು. ಅದರಂತೆ ಇದೀಗ ‘ಭೈರತಿ ರಣಗಲ್‌’ ಸಿನಿಮಾ ಶುಭ ಶಿವರಾತ್ರಿ ಹಬ್ಬದ ಪ್ರಯುಕ್ತ ಘೋಷಣೆ ಆಗಿದೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು