logo
ಕನ್ನಡ ಸುದ್ದಿ  /  ಮನರಂಜನೆ  /  ಆ ಚಿತ್ರೋದ್ಯಮ ನೋಡಿದ್ರೆ ಹೊಟ್ಟೆಕಿಚ್ಚಾಗುತ್ತೆ, ಅಸೂಯೆ ಬರುತ್ತೆ, ಒಳ್ಳೇ ಕಲಾವಿದರೇ ಅಲ್ಲಿ ಸೃಷ್ಟಿಯಾಗ್ತಾರೆ; ರಾಜಮೌಳಿ

ಆ ಚಿತ್ರೋದ್ಯಮ ನೋಡಿದ್ರೆ ಹೊಟ್ಟೆಕಿಚ್ಚಾಗುತ್ತೆ, ಅಸೂಯೆ ಬರುತ್ತೆ, ಒಳ್ಳೇ ಕಲಾವಿದರೇ ಅಲ್ಲಿ ಸೃಷ್ಟಿಯಾಗ್ತಾರೆ; ರಾಜಮೌಳಿ

Mar 14, 2024 08:56 AM IST

google News

ಆ ಚಿತ್ರೋದ್ಯಮ ನೋಡಿದ್ರೆ ಹೊಟ್ಟೆಕಿಚ್ಚಾಗುತ್ತೆ, ಅಸೂಯೆ ಬರುತ್ತೆ, ಒಳ್ಳೇ ಕಲಾವಿದರೇ ಅಲ್ಲಿ ಸೃಷ್ಟಿಯಾಗ್ತಾರೆ; ರಾಜಮೌಳಿ

    • ನಿರ್ದೇಶಕ ರಾಜಮೌಳಿ ಮಲಯಾಳಂ ಸಿನಿಮಾಗಳ ಬಗ್ಗೆ ಮನದುಂಬಿ ಮಾತನಾಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಹೇಗೆ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುತ್ತಾರೆ ಎಂಬುದನ್ನು ಮಾಲಿವುಡ್‌ನಿಂದ ನೋಡಿ ಕಲಿಯಬೇಕು. ಅಷ್ಟೇ ಅಲ್ಲ ಒಳ್ಳೊಳ್ಳೆ ಕಲಾವಿದರೂ ಅಲ್ಲಿ ಸೃಷ್ಟಿಯಾಗುತ್ತಾರೆ ಎಂದಿದ್ದಾರೆ ರಾಜಮೌಳಿ. 
ಆ ಚಿತ್ರೋದ್ಯಮ ನೋಡಿದ್ರೆ ಹೊಟ್ಟೆಕಿಚ್ಚಾಗುತ್ತೆ, ಅಸೂಯೆ ಬರುತ್ತೆ, ಒಳ್ಳೇ ಕಲಾವಿದರೇ ಅಲ್ಲಿ ಸೃಷ್ಟಿಯಾಗ್ತಾರೆ; ರಾಜಮೌಳಿ
ಆ ಚಿತ್ರೋದ್ಯಮ ನೋಡಿದ್ರೆ ಹೊಟ್ಟೆಕಿಚ್ಚಾಗುತ್ತೆ, ಅಸೂಯೆ ಬರುತ್ತೆ, ಒಳ್ಳೇ ಕಲಾವಿದರೇ ಅಲ್ಲಿ ಸೃಷ್ಟಿಯಾಗ್ತಾರೆ; ರಾಜಮೌಳಿ

Rajamouli about Malayalam Movies: ಕಡಿಮೆ ಬಜೆಟ್‌ನಲ್ಲಿ ಮೂಡಿಬರುವ ಮಲಯಾಳಂ ಸಿನಿಮಾಗಳು ನೋಡುಗರಿಂದ ಹೆಚ್ಚು ಮನ್ನಣೆಗೆ ಪಾತ್ರವಾಗುತ್ತವೆ. ಸರಳ ಕಥೆ, ಸಿಂಪಲ್‌ ಮೇಕಿಂಗ್‌ನಿಂದಲೇ ಎಲ್ಲರ ಗಮನ ಸೆಳೆಯುವ ಮಲಯಾಳಂ ಸಿನಿಮಾಗಳು, ನೇಟಿವಿಟಿಗೆ ತಕ್ಕದಾದ ಕಥೆ ಹೆಣೆದು ಒಟಿಟಿಯಲ್ಲಿ ಅಪಾರ ನೋಡುಗ ವರ್ಗವನ್ನು ಸಂಪಾದಿಸಿವೆ. ಈಗ ಅದೇ ಚಿತ್ರೋದ್ಯಮದ ಬಗ್ಗೆ ತೆಲುಗಿನ ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಮಾತನಾಡಿದ್ದಾರೆ.

ಮಾಲಿವುಡ್‌ನಲ್ಲಿ ಇತ್ತೀಚೆಗಷ್ಟೇ ಪ್ರೇಮುಲು ಹೆಸರಿನ ಸಿನಿಮಾ ತೆರೆಕಂಡಿತ್ತು. ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ಈ ಸಿನಿಮಾ ಅಲ್ಲಿಂದ ಪರಭಾಷೆಗಳಿಗೆ ಡಬ್‌ ಆಗಿ ಅಲ್ಲಿಯೂ ಮೋಡಿ ಮಾಡುತ್ತಿದೆ. ತೆಲುಗು ತಮಿಳಿನಲ್ಲೂ ಸಿನಿಮಾ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ತೆಲುಗಿನ ಸಿನಿಮಾ ಪ್ರೇಕ್ಷಕ, ಪ್ರೇಮುಲು ಚಿತ್ರವನ್ನು ಅಪ್ಪಿ ಒಪ್ಪಿದ್ದಾನೆ. ಅದೇ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ ಪ್ರೇಮಲು ಬಗ್ಗೆ ಮನದುಂಬಿ ಮಾತನಾಡಿದ್ದಾರೆ ರಾಜಮೌಳಿ.

ಅಂದಹಾಗೆ, ಮಲಯಾಳಂನ ಪ್ರೇಮುಲು ಚಿತ್ರವನ್ನು ತೆಲುಗಿನಲ್ಲಿ ಡಬ್‌ ಮಾಡಿದ್ದು, ರಾಜಮೌಳಿ ಅವರ ಪುತ್ರ ಕಾರ್ತಿಕೇಯ. ಅದರಂತೆ ಮಾರ್ಚ್‌ 8ರಂದು ಈ ಸಿನಿಮಾ ತೆಲುಗಿನಲ್ಲಿ ಡಬ್‌ ಆಗಿ ತೆರೆಕಂಡು, ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಈ ಸಿನಿಮಾ ಬಗ್ಗೆಯೇ ಮುಕ್ತ ಕಂಠದಿಂದ ಹೊಗಳಿದ್ದಾರೆ ರಾಜಮೌಳಿ.

ಬಾಕ್ಸ್‌ ಆಫೀಸ್‌ನಲ್ಲಿ ಒಟ್ಟಾರೆ 100 ಕೋಟಿ ಕಲೆಕ್ಷನ್‌ ಮಾಡಿರುವ ಪ್ರೇಮುಲು ಸಿನಿಮಾ ಸದ್ಯ ಟಾಲಿವುಡ್‌ನ ಹಾಟ್‌ ಟಾಪಿಕ್‌. ಈ ಸಿನಿಮಾ ಬಗ್ಗೆ ನಟ ಮಹೇಶ್‌ ಬಾಬು ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆ ಪೈಕಿ ಪ್ರೇಮುಲು ಬಗ್ಗೆ ರಾಜಮೌಳಿ ಹೇಳಿದ್ದು ಹೀಗೆ. "ಮಲಯಾಳಂ ಚಿತ್ರರಂಗ ಶ್ರೇಷ್ಠ ನಟರನ್ನು ಉತ್ಪಾದಿಸುತ್ತದೆ ಎಂಬುದನ್ನು ನಾನು ಒಪ್ಪುತ್ತೇನೆ. ಜತೆಗೆ ಈ ಚಿತ್ರರಂಗದ ಬಗ್ಗೆ ಅಷ್ಟೇ ಅಸೂಯೆಯೂ ನನ್ನೊಳಗಿದೆ" ಎಂದು ಮಾಲಿವುಡ್‌ ಚಿತ್ರೋದ್ಯಮವನ್ನು ಕೊಂಡಾಡಿದ್ದಾರೆ ಆರ್‌ಆರ್‌ಆರ್‌ ನಿರ್ದೇಶಕ.

ಮಲಯಾಳಂನಲ್ಲಿ ಸಣ್ಣ ಸಣ್ಣ ಪಾತ್ರಗಳೂ ಗಮನ ಸೆಳೆಯುತ್ತವೆ. ಆ ಸಣ್ಣ ಪಾತ್ರಗಳ ಮೇಲೆಯೇ ನಿರ್ದೇಶರು ಹೆಚ್ಚು ಗಮನವಹಿಸಿರುತ್ತಾರೆ. ಹಾಗಾಗಿಯೇ ಅಲ್ಲಿಂದ ಒಳ್ಳೊಳ್ಳೆ ಕಲಾವಿದರು ಹೊರಬರುತ್ತಾರೆ. ಈ ಹಿಂದೆಯೂ ಪೃಥ್ವಿರಾಜ್‌ ಸುಕುಮಾರನ್‌ ಜತೆಗೆ ರೌಂಡ್‌ ಟೇಬಲ್‌ ಮೀಟಿಂಗ್‌ನಲ್ಲಿ ಇದ್ದಾಗಲೂ ಇದೇ ಮಾತನ್ನು ಹೇಳಿದ್ದೆ. ನಟರ ಜತೆಗೆ ತಂತ್ರಜ್ಞರನ್ನೂ ಕೊಂಡಾಡಿದ್ದರು ರಾಜಮೌಳಿ.

ಮಾ. 15ರಂದು ತಮಿಳಿನಲ್ಲಿ ಬಿಡುಗಡೆ.

ನಸ್ಲಾನ್ ಕೆ ಗಫೂರ್ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿರುವ ಪ್ರೇಮುಲು ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಈ ಸಿನಿಮಾವನ್ನು ಕೇವಲ 10 ಕೋಟಿಗೂ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಮೂಲ ಬಜೆಟ್‌ಗಿಂತ ಎರಡು ಪಟ್ಟು ಹೆಚ್ಚು ಕಲೆಕ್ಷನ್ ಮಾಡಿ ಗೆಲುವಿನ ಸಿಹಿಯುಂಡಿತ್ತು ಈ ಸಿನಿಮಾ. ಇದೀಗ ಮಾರ್ಚ್ 15 ರಂದು ತಮಿಳುನಾಡಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ