Friday Movies: ನವೆಂಬರ್ 10ರಂದು 15 ಚಿತ್ರಗಳು ಥಿಯೇಟರ್‌ಗಳಲ್ಲಿ ಬಿಡುಗಡೆ; ಗರಡಿಯಿಂದ ಕೋಳಿಕೆ ರಂಗದವರೆಗೆ, ನಾಳೆ ಯಾವ ಚಿತ್ರ ನೋಡ್ತಿರಿ
Nov 09, 2023 05:41 PM IST
Friday Movies: ನವೆಂಬರ್ 10ರಂದು 15 ಚಿತ್ರಗಳು ಥಿಯೇಟರ್‌ಗಳಲ್ಲಿ ಬಿಡುಗಡೆ
- This friday release movies: ಈ ದೀಪಾವಳಿ ಹಬ್ಬದ ಸಮಯದಲ್ಲಿ ಹತ್ತು ಹಲವು ಚಿತ್ರಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಶುಕ್ರವಾರ ಒಟ್ಟು ಹದಿನೈದು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಭಾನುವಾರ ಟೈಗರ್ 3 ಕೂಡ ರಿಲೀಸ್ ಆಗಲಿದೆ. ಸಿನಿಪ್ರಿಯರಿಗೆ ಇದಲ್ವೆ ದೀಪಾವಳಿ.
ಬೆಂಗಳೂರು: ಎಲ್ಲರೂ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ವೀಕೆಂಡ್‌ಗೆ ಸಾಕಷ್ಟು ಜನರು ಊರಿಗೆ ಹೊರಟಿರಬಹುದು. ಬೆಂಗಳೂರು, ಮಂಗಳೂರು, ಮೈಸೂರು ಮುಂತಾದ ನಗರಗಳಲ್ಲಿರುವವರು ಸಿಟಿಯಲ್ಲೇ ದೀಪಾವಳಿ ಆಚರಿಸಬಹುದು. ಈ ದೀಪಾವಳಿ ಹಬ್ಬದ ಬಿಡುವಿನಲ್ಲಿ ಫ್ಯಾಮಿಲಿ ಸಮೇತ ಯಾವುದಾದರೂ ಸಿನಿಮಾ ನೋಡಲು ಹೋಗಬಹುದು. ಈ ಭಾನುವಾರ ಬಹುನಿರೀಕ್ಷಿತ ಸಲ್ಮಾನ್ ಖಾನ್ ಚಿತ್ರ ಟೈಗರ್ 3 ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಗರಡಿ ಮತ್ತು ನಾ ಕೋಳಿಕೆ ರಂಗ ಎಂಬ ಚಿತ್ರಗಳೂ ಬಿಡುಗಡೆಯಾಗಲಿವೆ. ಈ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಲಿರುವ ಹದಿನೈದು ಚಿತ್ರಗಳ ವಿವರ ಇಲ್ಲಿದೆ.
ನವೆಂಬರ್ 10ರಂದು ಬಿಡುಗಡೆಯಾಗುವ ಕನ್ನಡ ಸಿನಿಮಾಗಳು
ನಾ ಕೋಳಿಕೆ ರಂಗ
ಇದು ನಾಳೆ ಬಿಡುಗಡೆಯಾಗಲಿರುವ ಇನ್ನೊಂದು ಬಹುನಿರೀಕ್ಷಿತ ಹಾಸ್ಯ ಚಿತ್ರ. ಮಾಸ್ಟರ್ ಆನಂದ್ ಮತ್ತು ಭವ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ರಾಜೇಶ್ವರಿ, ಭವ್ಯ, ಹೊನ್ನಾಳ್ಳಿ ಕೃಷ್ಣ, ವೈಜನಾಥ್ ಬಿರಾದರ್, ಶೋಭರಾಜ್ ಮುಂತಾದ ಪ್ರಮುಖ ನಟನಟಿಯರು ನಟಿಸಿದ್ದಾರೆ.
ವಸಂತಕಾಲದ ಹೂವುಗಳು
ನಾಳೆ ಬಿಡುಗಡೆಯಾಗಲಿರುವ ಇನ್ನೊಂದು ಕನ್ನಡ ಸಿನಿಮಾವಿದು. ಸಚಿನ್ ಗಂಗರಾಮ್, ರಾಧ ಭದ್ರಾವತಿ, ರಮೇಶ್ ರೈ ಕುಕ್ಕುವಳ್ಳಿ, ಗುರುರಾಜ್ ಶೆಟ್ಟಿ, ಪವನ್ ಭಾರದ್ವಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಗರಡಿ
ಯೋಗರಾಜ್ ಭಟ್ ನಿರ್ದೇಶನದ ಸೂರ್ಯ ನಾಯಕನಟನಾಗಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರದಲ್ಲಿರುವ ಗರಡಿಯು ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ. ನಾಳೆ ಬಿಡುಗಡೆಯಾಗಲಿರುವ ಈ ಚಿತ್ರದ ಕುರಿತು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ವಿಶೇಷ ಲೇಖನಗಳನ್ನು ಬರೆದಿದೆ. ಈ ಚಿತ್ರದ ಕುರಿತು ಹೆಚ್ಚಿನ ವಿವರಕ್ಕೆ ಇಲ್ಲಿಗೆ ಭೇಟಿ ನೀಡಿ.
ರಾಯಲ್ ಮೆಕ್
ನಾಳೆ ಅಂದರೆ ನವೆಂಬರ್ 10ರಂದು ರಾಯಲ್ ಮೆಕ್ ಎಂಬ ಕನ್ನಡ ಚಿತ್ರ ಬಿಡುಗಡೆಯಾಗಲಿದೆ. ಧನುಷ್ ಮಾಧವನ್, ಶ್ರಾವ್ಯ ರಾವ್, ರಾಘವೇಂದ್ರ ರಾಜ್‌ಕುಮಾರ್, ವಿನಯ ಪ್ರಸಾದ್, ರಮೇಶ್ ಭಟ್, ಕುರಿ ಪ್ರತಾಪ್ ಮುಂತಾದವರು ನಟಿಸಿದ ಈ ಚಿತ್ರವೂ ಕನ್ನಡದ ಬಹುನಿರೀಕ್ಷೆಯ ಚಿತ್ರವಾಗಿದೆ.
ನಾಳೆ ಬಿಡುಗಡೆಯಾಗಲಿರುವ ಇತರೆ ಭಾಷೆಯ ಚಿತ್ರಗಳು
ದಿ ಮಾರ್ವಲೆಸ್
ಹಾಲಿವುಡ್ ಸಿನಿಮಾ ಇಷ್ಟಪಡುವವರು ಭಾರತದಲ್ಲಿ ನಾಳೆಯಿಂದ ದೀ ಮಾರ್ವಲೆಸ್ ಸಿನಿಮಾ ನೋಡಬಹುದು. ಮಾರ್ವೆಲ್ ಕಾಮಿಕ್ಸ್ ಆಧರಿತ ಈ ಸೂಪರ್‌ಹೀರೋ ಚಿತ್ರವನ್ನು ವಿಶೇಷವಾಗಿ ಮಕ್ಕಳು ಇಷ್ಟಪಡಬಹುದು.
ಜಪಾನ್
ಕ್ಷಮಿಸಿ ಇದು ಜಪಾನ್ ದೇಶದವರ ಸಿನಿಮಾವಲ್ಲ. ತೆಲುಗು ಮತ್ತು ತಮಿಳಿನಲ್ಲಿ ನಾಳೆ ಜಪಾನ್ ಹೆಸರಿನ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ನಟ ಕಾರ್ತಿಯ ಬಹುನಿರೀಕ್ಷಿತ ಚಿತ್ರವಿದು. ಅನು ಎಮ್ಯುನೆಲ್, ಸುನಿಲ್. ವಿಜಯ್ ಮಿಲ್ಟನ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಜಿಗರ್‌ಥಂಡ ಡಬಲ್ ಎಕ್ಸ್
ನಟೋರಿಯಸ್ ಗ್ಯಾಂಗ್‌ಸ್ಟಾರ್ ಚಿತ್ರವಿದು. ಇದು ತಮಿಳಿನ ರಾಘವೇಂದ್ರ ಲಾರೆನ್ಸ್ ಚಿತ್ರ. ಇತ್ತೀಚೆಗೆ ಚಂದ್ರಮುಖಿ 3ಯಲ್ಲಿ ನಿರೀಕ್ಷಿತ ಯಶಸ್ಸು ಇವರಿಗೆ ದೊರಕಿರಲಿಲ್ಲ. ಇದೀಗ ಜಿಗರ್‌ಥಂಡ ಡಬಲ್ ಎಕ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಈ ಚಿತ್ರದಲ್ಲಿ ರಾಘವೇಂದ್ರ ಲಾರೆನ್ಸ್, ಎಸ್‌ಜಿ ಸೂರ್ಯ, ನಿಮಿಷ ಸಜಯನ್, ಶೈನ್ ಟಾಮ್, ನವೀನ್ ಚಂದ್ರ ಮುಂತಾದವರು ನಟಿಸಿದ್ದಾರೆ.
ಬಾಂದ್ರಾ
ಇದು ಮಲಯಾಳಂ ಚಿತ್ರ. ನಾಳೆ ಬಿಡುಗಡೆಯಾಗಲಿದೆ. ಒಂದು ದಶಕ ಹಳೆಯದಾದ ಟ್ರಾಜಿಡಿ ಕಥೆಯೊಂದಿಗೆ ನಿರ್ದೇಶಕ ಸಾಕ್ಷಿ ಬಂದಿದ್ದಾರೆ. ಬಾಲಿವುಡ್ ನಟನೊಬ್ಬನ ಆತ್ಮಹತ್ಯೆಯ ಸುತ್ತ ಈ ಚಿತ್ರ ಸುತ್ತಲಿದೆ. ಮಲಯಾಳಂ ನಟ ದಿಲೀಪ್, ತಮನ್ನಾ ಭಾಟಿಯಾ, ಆರ್. ಶರತ್ ಕುಮಾರ್ ಮುಂತಾದ ಪ್ರಮುಖ ನಟನಟಿಯರು ಈ ಚಿತ್ರದಲ್ಲಿದ್ದಾರೆ.
ಅಲಾ ನೀನು ಚೆರ್ರಿ
ತೆಲುಗು ಚಿತ್ರಪ್ರಿಯರು ಈ ಚಿತ್ರ ನೋಡಬಹುದು. ದಿನೇಶ್ ತೇಜ್, ಪಾಯಲ್ ರಾಧಕೃಷ್ಣನ್, ಹೆಬ್ಬಾ ಪಟೇಲ್, ಮಹೇಶ್ ಅಚಂತ ಮುಂತಾದವರ ತಾರಾಗಣವಿದೆ.
ಸ್ಯಾಮಚಿ ಆಯಿ
ಮರಾಠಿ ಸಿನಿಮಾ ಪ್ರಿಯರು ನಾಳೆ ಬಿಡುಗಡೆಯಾಗಲಿರುವ ಈ ಚಿತ್ರ ನೋಡಬಹುದು.
ನಾಲ್- ಭಾಗ 2
ಇದು ಕೂಡ ನಾಳೆ ಬಿಡುಗಡೆಯಾಗಲಿರುವ ಇನ್ನೊಂದು ಮರಾಠಿ ಚಿತ್ರ.
ವೆಲಾ
ಇದು ನಾಳೆ ಬಿಡುಗಡೆಯಾಗಲಿರುವ ಇನ್ನೊಂದು ಮಲಯಾಳಂ ಚಿತ್ರ. ಶಾನೆ ನಿಗಮ್, ಸುನ್ನಿ ವಾಯ್ನೆ, ಸಿದ್ಧಾರ್ಥ ಭರತನ್, ಆದಿತಿ ಬಾಲನ್ ಮುಂತಾದ ನಟನಟಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ.
ರೈಡ್
ನವೆಂಬರ್ 10ರಂದು ಚಿತ್ರಮಂದಿರಗಳಲ್ಲಿ ತಮಿಳು ಚಿತ್ರ ರೈಡ್ ಬಿಡುಗಡೆಯಾಗಲಿದೆ. ವಿಕ್ರಮ್ ಪ್ರಭು, ಶ್ರೀ ದಿವ್ಯ, ಡೇನಿಯಲ್ ಪೇಪ್, ಹರೀಶ್ ಪೆರಾಡಿ ಮುಂತಾದವರು ತಾರಾಗಣದಲ್ಲಿದ್ದಾರೆ.
ಜರ್ನಿ ಟು ಬೆಥ್ಲಹ್ಯಾಮ್
ನವೆಂಬರ್ 10ರಂದು ಜರ್ನಿ ಟು ಬೆಥ್ಲಹ್ಯಾಮ್ ಎಂಬ ಹಾಲಿವುಡ್ ಸಿನಿಮಾ ಬಿಡುಗಡೆಯಾಗಲಿದೆ. ಕ್ರಿಸ್ಮಸ್ ಮ್ಯೂಸಿಕಲ್ ಅಡ್ವೇಂಚರ್ ರೈಡ್ ಚಿತ್ರ ಇದಾಗಿದೆ. ನಗು, ಸಂಗೀತ, ಮನರಂಜನೆ, ಅಡ್ವೇಂಚರ್ ಇತ್ಯಾದಿಗಳು ಈ ಚಿತ್ರದಲ್ಲಿವೆಯಂತೆ.
ಅರ್ಥರಾತ್ರಿ ಪಂಥ್ರರಂಡು ಮುಥಲ್ ಆರು ವಾರೆ
ಇದು ಮಲಯಾಳಂ ಚಿತ್ರ. ನಾಳೆ ಬಿಡುಗಡೆಯಾಗಲಿದೆ. ಹೀಗೆ ಈ ಶುಕ್ರವಾರ ಹದಿನೈದು ಚಿತ್ರ ಬಿಡುಗಡೆಯಾಗಲಿವೆ. ಇಲ್ಲಿಗೆ ಮುಗಿಯುವುದಿಲ್ಲ. ಈ ಭಾನುವಾರ ಮತ್ತೆ ಟೈಗರ್ 3 ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಲಿವೆ. ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಸಿನಿ ಹಬ್ಬವೇ ನಡೆಯಲಿದೆ.