logo
ಕನ್ನಡ ಸುದ್ದಿ  /  ಮನರಂಜನೆ  /  Sl Bhyrappa: ಎಸ್‌ಎಲ್ ಭೈರಪ್ಪ ಅವರ ವಂಶವೃಕ್ಷ ಕಾದಂಬರಿ ದುರ್ಬಳಕೆ; ಹೈದರಾಬಾದ್ ಮೂಲದ ಸಂಸ್ಥೆಗೆ 5 ಲಕ್ಷ ದಂಡ

SL Bhyrappa: ಎಸ್‌ಎಲ್ ಭೈರಪ್ಪ ಅವರ ವಂಶವೃಕ್ಷ ಕಾದಂಬರಿ ದುರ್ಬಳಕೆ; ಹೈದರಾಬಾದ್ ಮೂಲದ ಸಂಸ್ಥೆಗೆ 5 ಲಕ್ಷ ದಂಡ

HT Kannada Desk HT Kannada

Dec 29, 2023 11:23 AM IST

google News

ಹಿರಿಯ ಸಾಹಿತಿ ಎಸ್‌.ಎಲ್.ಭೈರಪ್ಪ ಅವರ ಕಾದಂಬರಿ ದುರ್ಬಳಕೆಗೆ ಹೈದ್ರಾಬಾದ್‌ ಸಂಸ್ಥೆಗೆ ಮೈಸೂರು ನ್ಯಾಯಾಲಯ ದಂಡ ವಿಧಿಸಿದೆ.

    • SL Bhyrappa News ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ವಂಶವೃಕ್ಷ ಕಾದಂಬರಿ ದುರ್ಬಳಕೆ ಮಾಡಿಕೊಂಡ ಹೈದ್ರಾಬಾದ್‌ನ ಪ್ರಕಾಶನ ಸಂಸ್ಥೆಗೆ ದಂಡ ವಿಧಿಸಲಾಗಿದೆ. 
ಹಿರಿಯ ಸಾಹಿತಿ ಎಸ್‌.ಎಲ್.ಭೈರಪ್ಪ ಅವರ ಕಾದಂಬರಿ ದುರ್ಬಳಕೆಗೆ ಹೈದ್ರಾಬಾದ್‌ ಸಂಸ್ಥೆಗೆ ಮೈಸೂರು ನ್ಯಾಯಾಲಯ ದಂಡ ವಿಧಿಸಿದೆ.
ಹಿರಿಯ ಸಾಹಿತಿ ಎಸ್‌.ಎಲ್.ಭೈರಪ್ಪ ಅವರ ಕಾದಂಬರಿ ದುರ್ಬಳಕೆಗೆ ಹೈದ್ರಾಬಾದ್‌ ಸಂಸ್ಥೆಗೆ ಮೈಸೂರು ನ್ಯಾಯಾಲಯ ದಂಡ ವಿಧಿಸಿದೆ.

ಮೈಸೂರು: ಕನ್ನಡದ ಹಿರಿಯ ಸಾಹಿತಿ, ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಅವರ ಐದು ದಶಕದಷ್ಟು ಹಳಯೆದಾದ ವಂಶವೃಕ್ಷ ಕಾದಂಬರಿಯನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಹೈದ್ರಾಬಾದ್‌ ಮೂಲದ ಪ್ರಕಾಶನ ಸಂಸ್ಥೆಗೆ 5 ಲಕ್ಷ ರೂ. ನಷ್ಟ ಪರಿಹಾರದ ದಂಡ ವಿಧಿಸಲಾಗಿದೆ.

ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಈ ತೀರ್ಪು ನೀಡಿದ್ದು, ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರಿಗೆ ನಷ್ಟ ತುಂಬಿಕೊಡುವಂತೆ ಹೈದರಾಬಾದಿನ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನಕ್ಕೆ ಆದೇಶ ನೀಡಿದೆ ಎಂದು ಮೈಸೂರಿನ ಜಸ್ಟ್‌ ಕನ್ನಡ ವರದಿ ಮಾಡಿದೆ.

ಎಸ್‌.ಎಲ್‌.ಭೈರಪ್ಪ ಅವರ ಪ್ರಮುಖ ಕಾದಂಬರಿಗಳಲ್ಲಿ ವಂಶವೃಕ್ಷ ಕೂಡ ಒಂದು. 1960 ರ ದಶಕದ ಈ ಕಾದಂಬರಿಗೆ ಈಗಲೂ ಓದುಗರು ಇದ್ದಾರೆ. ಈ ಕಾದಂಬರಿ ಕನ್ನಡದಲ್ಲಿ ಚಲನಚಿತ್ರವಾಗಿದೆ. ಈ ಕಾದಂಬರಿ ಹಲವು ಭಾಷೆಗಳಿಗೂ ಅನುವಾದಗೊಂಡಿದೆ. ಬಹುತೇಕರು ಅನುವಾದಕ್ಕೆ ಅನುಮತಿಯನ್ನೂ ಭೈರಪ್ಪ ಅವರಿಂದ ಪಡೆದಿದ್ದಾರೆ.

ಇದೇ ಕಾದಂಬರಿಯನ್ನು ತೆಲುಗಿನಲ್ಲಿ ಅನುವಾದ ಮಾಡುವ ಹಕ್ಕನ್ನು ಭೈರಪ್ಪ ಅವರು ದಶಕದ ಹಿಂದೆಯೇ ಸನಗರಂ ನಾಗಭೂಷಣಂ ಎಂಬುವವರಿಗೆ ಹಸ್ತಾಂತರಿಸಿದ್ದರು. ಅದರಂತೆ ಆಗಲೇ ನಾಗಭೂಷಣಂ ಅವರು ತೆಲುಗಿಗೆ ವಂಶವೃಕ್ಷ ಕಾದಂಬರಿ ಅನುವಾದಿಸಿದ್ದರು. ಅದು ತೆಲುಗಿನಲ್ಲಿ ವಂಶವೃಕ್ಷಂ ಆಗಿ ಜನಪ್ರಿಯವೂ ಆಗಿದೆ. ಕೆಲ ವರ್ಷದ ಹಿಂದೆ ಸನಗರಂ ನಾಗಭೂಷಣಂ ಅವರು ಕಾಲವಾಗಿದ್ಧಾರೆ.

ಆದರೆ ಹೈದ್ರಾಬಾದ್‌ನ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನವೂ ಭೈರಪ್ಪ ಅವರ ವಂಶವೃಕ್ಷ ಕಾದಂಬರಿಯನ್ನು ಅನುವಾದಿಸಿ ಪ್ರಕಟಿಸಿತ್ತು. ಆದರೆ ಇದಕ್ಕೆ ಅನುಮತಿಯನ್ನೇ ಪಡೆದಿರಲಿಲ್ಲ. ಇದು ಭೈರಪ್ಪ ಅವರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಪ್ರಕಾಶನದವರಿಗೆ ನೊಟೀಸ್‌ ಜಾರಿಗೊಳಿಸಿ ನಂತರ ನ್ಯಾಯಾಲಯದಲ್ಲ ಮೊಕದ್ದಮೆಯನ್ನೂ ದಾಖಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಯಾವುದೇ ಕೃತಿಯ ಹಕ್ಕು ಸ್ವಾಮ್ಯ ಆ ಲೇಖಕರು ಹಾಗೂ ಪ್ರಕಾಶಕರಿಗೆ ಸೇರಿದ್ದು. ಅನುಮತಿ ಇಲ್ಲದೇ ಯಾವುದೇ ಕೃತಿ ಬಳಸುವುದು, ಅನುವಾದ ಮಾಡಲು ಅವಕಾಶವಿಲ್ಲ. ಇದು ಕೃತಿ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಲಿದೆ. ಭೈರಪ್ಪ ಅವರ ಕೃತಿಯಲ್ಲೂ ಇದೇ ರೀತಿ ಆಗಿದೆ ಎಂದು ತೀರ್ಪು ನೀಡಿತ್ತು. ಅಲ್ಲದೇ ಕೃತಿ ಅನುಮತಿಯಿಲ್ಲದೇ ದುರ್ಬಳಕೆ ಮಾಡಿಕೊಂಡಿದ್ದಕ್ಕೆ 5,05,000 ನಷ್ಟದ ರೂಪದಲ್ಲಿ ಭೈರಪ್ಪ ಅವರಿಗೆ ತುಂಬಿಕೊಡಬೇಕು ಎಂದು ಆದೇಶಿಸಿದೆ.

ಭೈರಪ್ಪ ಅವರ ಪರವಾಗಿ ಹಿರಿಯ ವಕೀಲರಾದ ಅ.ಮ.ಭಾಸ್ಕರ್‌ ಹಾಗೂ ಪಿ.ಜಿ.ರಾಘವೇಂದ್ರ ಅವರು ವಾದಿಸಿದ್ದರು. ಅಲ್ಲದೇ ನ್ಯಾಯಾಲಯದ ಆದೇಶ ಪ್ರತಿಯನ್ನು ಭೈರಪ್ಪ ಅವರಿಗೆ ತಲುಪಿಸಿದರು.

===

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ