logo
ಕನ್ನಡ ಸುದ್ದಿ  /  ಮನರಂಜನೆ  /  ಅಮೆರಿಕದಲ್ಲಿ ಅಭಿಮಾನಿಗಳ ರಂಪಾಟ, ಬಾಲಯ್ಯ ಹಾಡಿಗೆ ಥಿಯೇಟರ್‌ನಲ್ಲಿ ಕುಣಿದ ವೃದ್ಧ..'ವೀರಸಿಂಹ ರೆಡ್ಡಿ' ರಿವ್ಯೂ ಪ್ರಮುಖ ಅಂಶಗಳು ಇಲ್ಲಿವೆ

ಅಮೆರಿಕದಲ್ಲಿ ಅಭಿಮಾನಿಗಳ ರಂಪಾಟ, ಬಾಲಯ್ಯ ಹಾಡಿಗೆ ಥಿಯೇಟರ್‌ನಲ್ಲಿ ಕುಣಿದ ವೃದ್ಧ..'ವೀರಸಿಂಹ ರೆಡ್ಡಿ' ರಿವ್ಯೂ ಪ್ರಮುಖ ಅಂಶಗಳು ಇಲ್ಲಿವೆ

HT Kannada Desk HT Kannada

Jan 12, 2023 12:38 PM IST

google News

'ವೀರಸಿಂಹ ರೆಡ್ಡಿ' ರಿವ್ಯೂ

    • ವೃದ್ಧರೊಬ್ಬರು ಬಾಲಯ್ಯ ಹಾಡಿಗೆ ಥಿಯೇಟರ್‌ನಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಒಟ್ಟಿನಲ್ಲಿ ತಮನ್‌ ಸಂಗೀತ ವರ್ಕೌಟ್‌ ಆಗಿದೆ.
 'ವೀರಸಿಂಹ ರೆಡ್ಡಿ'  ರಿವ್ಯೂ
'ವೀರಸಿಂಹ ರೆಡ್ಡಿ' ರಿವ್ಯೂ

Veera Simha Reddy Review: ನಂದಮುರಿ ಬಾಲಕೃಷ್ಣ ಹಾಗೂ ದುನಿಯಾ ವಿಜಯ್‌ ಅಭಿನಯದ 'ವೀರಸಿಂಹ ರೆಡ್ಡಿ' ಸಿನಿಮಾ ಇಂದು ತೆರೆ ಕಂಡಿದೆ. ಅನೇಕ ಮಂದಿ ಮಾರ್ನಿಂಗ್‌ ಶೋ ನೋಡಿ ಬಂದು ಸಿನಿಮಾ ಹೇಗಿದೆ ಅನ್ನೋದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಿನಿಮಾ ಪಕ್ಕಾ ಮಾಸ್‌-ಕ್ಲಾಸ್‌

ಚಿತ್ರದಲ್ಲಿ ಬಾಲಯ್ಯ ಮಾಸ್‌ ಫರ್ಮಾಮೆನ್ಸ್‌ ನೋಡಿ ಥ್ರಿಲ್‌ ಆದೆ. ಫಸ್ಟ್‌ ಆಫ್‌ ಪಕ್ಕಾ ಮಾಸ್.‌ ಸೆಕೆಂಡ್‌ ಹಾಫ್‌ ಕ್ಲಾಸ್‌ ಹಾಗೂ ಮಾಸ್‌ , ತಮನ್‌ ಮ್ಯೂಸಿಕ್‌ ಬಹಳ ಚೆನ್ನಾಗಿದೆ ಎಂದು ಬಾಲಕೃಷ್ಣ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ ಬಾಲಕೃಷ್ಣ ಗಾಡ್‌ ಆಫ್‌ ಮಾಸ್‌ ಎಂದು ಬರೆದುಕೊಂಡಿದ್ದಾರೆ. ಕೆಲವೊಂದು ದೃಶ್ಯಗಳಿಗೆ ಎಕ್ಸ್‌ಲೆಂಟ್‌, ಸಂಕ್ರಾಂತಿ ಹಬ್ಬಕ್ಕೆ ಹೇಳಿ ಮಾಡಿಸಿದ ಸಿನಿಮಾ ಎಂದು ಬಾಲಕೃಷ್ಣ ಅಭಿಮಾನಿಗಳು ಹೊಗಳುತ್ತಿದ್ದಾರೆ.

ಜೈ ಬಾಲಯ್ಯ ಹಾಡಿಗೆ ಥಿಯೇಟರ್‌ನಲ್ಲೇ ಕುಣಿದ ವೃದ್ಧ

ಚಿತ್ರದ ಹಾಡುಗಳಿಗೆ ಕೆಲವರು ಹುಚ್ಚೆದ್ದು ಕುಣಿದಿದ್ದಾರೆ. ಅದರಲ್ಲೂ ಜೈ ಬಾಲಯ್ಯ.. ಹಾಡಿಗಂತೂ ಮಕ್ಕಳು, ದೊಡ್ಡವರು ಎನ್ನದೆ ಎಲ್ಲರೂ ಚಿತ್ರಮಂದಿರದಲ್ಲೇ ಕುಣಿದು ಕುಪ್ಪಣಿಸಿದ್ದಾರೆ. ವೃದ್ಧರೊಬ್ಬರು ಈ ಹಾಡಿಗೆ ಥಿಯೇಟರ್‌ನಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಒಟ್ಟಿನಲ್ಲಿ ತಮನ್‌ ಸಂಗೀತ ವರ್ಕೌಟ್‌ ಆಗಿದೆ.

ಅಮೆರಿಕದಲ್ಲೂ ಬಾಲಯ್ಯ ಹವಾ ಜೋರು

ಅಮೆರಿಕದ ಡಲ್ಲಾಸ್‌ನಲ್ಲಿ ಕೂಡಾ ವೀರಸಿಂಹರೆಡ್ಡಿ ತೆರೆ ಕಂಡಿದೆ. ಡಲ್ಲಾಸ್‌ನಲ್ಲಿ ಅಭಿಮಾನಿಗಳು ಥಿಯೇಟರ್‌ ಒಳಗೆ ಪೇಪರ್‌ ಚೂರುಗಳನ್ನು ಎಸೆದು ಅರಚಾಡಿ ರಂಪಾಟ ಮಾಡಿದ್ದಕ್ಕೆ ಶೋ ಸ್ಥಗಿತಗೊಂಡಿದೆ. ನಂತರ ಅಭಿಮಾನಿಗಳು ಹೊರ ಬಂದು ಥಿಯೇಟರ್‌ ಹೊರಗೆ ಬಾಲಯ್ಯ ಹೆಸರು ಘೋಷಣೆ ಕೂಗಿದ್ದಾರೆ. ಜನರು ಗುಂಪು ಗೂಡಿದ್ದರಿಂದ ಕೆಲವು ಹೊತ್ತು ಅಮೆರಿಕ ರಸ್ತೆಗಳಲ್ಲೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಕಾರು ಒದ್ದ ಸೀನ್‌ಗೆ ಲಾಜಿಕ್‌ ಇಲ್ಲ ಎಂದ ಜನರು

ಚಿತ್ರದ ಕೆಲವೊಂದು ಸೀನ್‌ಗಳಿಗೆ ಶಿಳ್ಳೆ, ಚಪ್ಪಾಳೆ ತಟ್ಟಿದ ಕೆಲವರು ಬಾಲಕೃಷ್ಣ ಕೋಪದಿಂದ ಕಾರು ಒದ್ದ ಸೀನ್‌ ನೋಡಿ ನಕ್ಕಿದ್ದಾರೆ. ಬಾಲಕೃಷ್ಣ ಕಾರು ಒದ್ದಾಗ, ಆ ಕಾರು ಕಿಲೋ ಮೀಟರ್‌ ಗಟ್ಟಲೆ ರಿವರ್ಸ್‌ ಹೋಗುತ್ತದೆ. ಇದನ್ನು ನೋಡಿ ಕೆಲವರು ಸಂಭ್ರಮಿಸಿದ್ದರೆ ಇನ್ನೂ ಕೆಲವರು ಲಾಜಿಕ್‌ ಇಲ್ಲದ ದೃಶ್ಯ ಎಂದಿದ್ದಾರೆ.

ಒಟ್ಟಿನಲ್ಲಿ ವೀರಸಿಂಹರೆಡ್ಡಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರುತಿ ಹಾಸನ್‌ಗೆ ಈ ಚಿತ್ರದಲ್ಲಿ ಹೆಚ್ಚು ಕೆಲಸ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ, ಗೋಪಿಚಂದ್ ಮಲಿನೇನಿ ನಿರ್ದೇಶಿಸಿರುವ ಸಿನಿಮಾ ಇದು. ಈ ಚಿತ್ರದಲ್ಲಿ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ನಂದಮುರಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌, ಹನಿ ರೋಸ್‌, ದುನಿಯಾ ವಿಜಯ್‌, ನವೀನ್‌ ಚಂದ್ರ , ರವಿಶಂಕರ್‌, ಅಜಯ್‌ ಘೋಷ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಇದು ದುನಿಯಾ ವಿಜಯ್‌ ಅವರ ಮೊದಲ ತೆಲುಗು ಸಿನಿಮಾ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ