logo
ಕನ್ನಡ ಸುದ್ದಿ  /  ಮನರಂಜನೆ  /  Warrant Against Jayaprada: ಮಾಜಿ ಸಂಸದೆ ಜಯಪ್ರದಾ ವಿರುದ್ದ ಜಾಮೀನು ರಹಿತ ವಾರೆಂಟ್‌..ಬಂಧನದ ಭೀತಿಯಲ್ಲಿ ಬಹುಭಾಷಾ ನಟಿ

Warrant Against Jayaprada: ಮಾಜಿ ಸಂಸದೆ ಜಯಪ್ರದಾ ವಿರುದ್ದ ಜಾಮೀನು ರಹಿತ ವಾರೆಂಟ್‌..ಬಂಧನದ ಭೀತಿಯಲ್ಲಿ ಬಹುಭಾಷಾ ನಟಿ

HT Kannada Desk HT Kannada

Dec 22, 2022 07:00 PM IST

google News

ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್‌

    • ಜಯಪ್ರದಾ (Jayaprada) ಮಾತ್ರ ಇದುವರೆಗೂ ಒಮ್ಮೆಯೂ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೋರ್ಟ್‌ ಹೇಳಿದೆ. ನಟಿಯ ವರ್ತನೆಗೆ ಕೋರ್ಟ್‌ ಅಸಮಾಧಾನ ಹೊರ ಹಾಕಿದೆ. ಇದರ ಪರಿಣಾಮ ರಾಂಪುರ್‌ ನ್ಯಾಯಾಲಯ (Rampur Court) ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿ ಕೋರ್ಟ್‌ಗೆ ಕರೆ ತರುವಂತೆ ಆದೇಶಿಸಿದೆ.
ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್‌
ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್‌ (PC: Jayaprada Facebook)

ಖ್ಯಾತ ನಟಿ, ರಾಜಕಾರಣಿ ಜಯಪ್ರದಾಗೆ ಉತ್ತರ ಪ್ರದೇಶದ ರಾಂಪುರ್‌ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ. ಬಹುಭಾಷಾ ನಟಿಯ ವಿರುದ್ಧ ಜಾಮೀನು ವಾರೆಂಟ್‌ ಜಾರಿ ಮಾಡಿರುವ ಸುದ್ದಿ ತಿಳಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಜಯಪ್ರದಾ ಮಾಡಿದ ತಪ್ಪಾದ್ರೂ ಏನು ಎಂದು ಪ್ರಶ್ನಿಸುತ್ತಿದ್ದಾರೆ.

ಅಸಲಿಗೆ ಜಯಪ್ರದಾ, ಚುನಾವಣೆ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 2019 ಲೋಕಸಭೆ ಚುನಾವಣೆ ಸಮಯದಲ್ಲಿ ಎಲೆಕ್ಷನ್‌ ನಿಯಮ ಉಲ್ಲಂಘಿಸಿದ್ದಕ್ಕೆ ಜಯಪ್ರದಾ ವಿರುದ್ಧ 2 ಕೇಸ್‌ಗಳು ದಾಖಲಾಗಿದ್ದವು. ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ ಜಯಪ್ರದಾ ಮಾತ್ರ ಇದುವರೆಗೂ ಒಮ್ಮೆಯೂ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೋರ್ಟ್‌ ಹೇಳಿದೆ. ನಟಿಯ ವರ್ತನೆಗೆ ಕೋರ್ಟ್‌ ಅಸಮಾಧಾನ ಹೊರ ಹಾಕಿದೆ. ಇದರ ಪರಿಣಾಮ ರಾಂಪುರ್‌ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿ ಕೋರ್ಟ್‌ಗೆ ಕರೆ ತರುವಂತೆ ಆದೇಶಿಸಿದೆ.

ಸದ್ಯಕ್ಕೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜಯಪ್ರದಾ, 2019ರ ಲೋಕಸಭೆ ಚುನಾವಣೆಯಲ್ಲಿ ರಾಂಪುರ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಚುನಾವಣೆ ಸಮಯದಲ್ಲಿ ಅವರು ನೀತಿ ನಿಯಮ ಉಲ್ಲಂಘಿಸಿದ್ದರು. ಉತ್ತರ ಪ್ರದೇಶದ ರಾಂಪುರ್‌ನ ಕಾಮ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಾಗೂ ಸ್ವರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ ಪರಿಣಾಮ ಎರಡೂ ಕಡೆ ಪ್ರಕರಣ ದಾಖಲಾಗಿದೆ. ಎಷ್ಟು ಬಾರಿ ನೊಟೀಸ್‌ ಜಾರಿ ಮಾಡಿದರೂ ಆಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಆದರೆ ಈಗ ಕೋರ್ಟ್‌ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದ್ದು ನಟಿಗೆ ಬಂಧನದ ಭೀತಿ ಎದುರಾಗಿದೆ. ಜನವರಿ 9ಕ್ಕೆ ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಜಯಪ್ರದಾ ಮೂಲತ: ಆಂಧ್ರ ಪ್ರದೇಶದ ರಾಜಮಂಡ್ರಿಯವರು, ಅವರ ನಿಜವಾದ ಹೆಸರು ಲಲಿತಾ ರಾಣಿ. ಜಯಪ್ರದಾ ತಂದೆ ತೆಲುಗು ಚಿತ್ರರಂಗದಲ್ಲಿ ಫೈನಾನ್ಶಿಯರ್‌ ಆಗಿ ಗುರುತಿಸಿಕೊಂಡಿದ್ದರು. ಚಿಕ್ಕಂದಿನಲ್ಲೇ ನಾಟಕ, ಡ್ಯಾನ್ಸ್‌ನಲ್ಲಿ ಆಸಕ್ತಿ ಇದ್ದ ಜಯಪ್ರದಾ, ಶಾಲೆಯ ಕಾರ್ಯಕ್ರಮವೊಂದರಲ್ಲಿ ಮಾಡಿದ್ದ ಡ್ಯಾನ್ಸ್‌ ಅಲ್ಲಿ ಬಂದವರ ಮೆಚ್ಚುಗೆ ಗಳಿಸಿತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ನಿರ್ದೇಶಕರೊಬ್ಬರು ತಮ್ಮ ಚಿತ್ರದಲ್ಲಿ ಮೂರು ನಿಮಿಷದ ಹಾಡಿಗೆ ಡ್ಯಾನ್ಸ್‌ ಮಾಡುವಂತೆ ಮನವಿ ಮಾಡಿದರು. ಈ ಆಫರ್‌ಗೆ ಜಯಪ್ರದಾ ನಿರಾಕರಿಸಿದರೂ ಅವರ ಮನೆಯವರ ಒತ್ತಾಯದ ಮೇರೆಗೆ ಡ್ಯಾನ್ಸ್‌ ಮಾಡಲು ಒಪ್ಪಿದರು. ಮುಂದೆ ಇದೇ ಅವರು ಚಿತ್ರರಂಗದಲ್ಲಿ ಮಿಂಚಲು ಕಾರಣವಾಯ್ತು.

ನಂತರ ಜಯಪ್ರದಾ 3-4 ಸಿನಿಮಾಗಳಲ್ಲಿ ನಟಿಸಿದರೂ 1975ರಲ್ಲಿ ತೆರೆ ಕಂಡ 'ಅಂತುಲೇನಿ ಕಥಾ ' ಚಿತ್ರದ ಮೂಲಕ ಬೆಳಕಿಗೆ ಬಂದರು. ಈ ಚಿತ್ರವನ್ನು ಕೆ. ಬಾಲಚಂದರ್‌ ನಿರ್ದೇಶಿಸಿದ್ದರು. ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಜಯಪ್ರದಾ ನಟಿಸಿದ್ದಾರೆ. ಕನ್ನಡದಲ್ಲಿ ಡಾ . ರಾಜ್‌ಕುಮಾರ್‌ ಜೊತೆ ಸನಾದಿ ಅಪ್ಪಣ್ಣ, ಹುಲಿಯ ಹಾಲಿನ ಮೇವು, ಕವಿರತ್ನ ಕಾಳಿದಾಸ, ಶಬ್ಧವೇಧಿ, ಡಾ. ವಿಷ್ಣುವರ್ಧನ್‌ ಜೊತೆ ಮಣಿಕಂಠನ ಮಹಿಮೆ, ಹಿಮಪಾತ, ಹಬ್ಬ, ಈ ಬಂಧನ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಆಗಿ ಜಯಪ್ರದಾ ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ