logo
ಕನ್ನಡ ಸುದ್ದಿ  /  ಮನರಂಜನೆ  /  ನೀವು ಕೊರಿಯನ್‌ ಸಿನಿಮಾ ಪ್ರಿಯರಾ? ಹುಲು, ವಿಯು ಸೇರಿದಂತೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮಿಷ್ಟದ ಸಿನಿಮಾಗಳನ್ನು ಫ್ರೀ ಆಗಿ ನೋಡಬಹುದು

ನೀವು ಕೊರಿಯನ್‌ ಸಿನಿಮಾ ಪ್ರಿಯರಾ? ಹುಲು, ವಿಯು ಸೇರಿದಂತೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮಿಷ್ಟದ ಸಿನಿಮಾಗಳನ್ನು ಫ್ರೀ ಆಗಿ ನೋಡಬಹುದು

Rakshitha Sowmya HT Kannada

Oct 11, 2024 01:22 PM IST

google News

ಹುಲು, ಎಂಎಕ್ಸ್‌ ಪ್ಲೇಯರ್‌ ಸೇರಿದಂತೆ ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹುತೇಕ ಕೊರಿಯನ್‌ ಸಿನಿಮಾಗಳು ಉಚಿತವಾಗಿ ನೋಡಲು ಲಭ್ಯವಿದೆ.

  • ಮೊದೆಲೆಲ್ಲಾ ಥಿಯೇಟರ್‌ಗಳಲ್ಲಿ ಹೆಚ್ಚಾಗಿ ಸ್ಥಳೀಯ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದ ಎಷ್ಟೋ ಜನರು ಒಟಿಟಿ ಪ್ಲಾಟ್‌ಫಾರ್ಮ್‌ ಜನಪ್ರಿಯವಾದ ನಂತರ ಇತರ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅವುಗಳಲ್ಲಿ ಕೊರಿಯನ್‌ ಭಾಷೆಯ ಸಿನಿಮಾಗಳು ಕೂಡಾ ಇವೆ. ನೀವೂ ಕೊರಿಯನ್‌ ಸಿನಿಮಾ ಇಷ್ಟಪಡುವವರಾದರೆ ಈ ಮಾಹಿತಿ ಓದಿ.

ಹುಲು, ಎಂಎಕ್ಸ್‌ ಪ್ಲೇಯರ್‌ ಸೇರಿದಂತೆ ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹುತೇಕ ಕೊರಿಯನ್‌ ಸಿನಿಮಾಗಳು ಉಚಿತವಾಗಿ ನೋಡಲು ಲಭ್ಯವಿದೆ.
ಹುಲು, ಎಂಎಕ್ಸ್‌ ಪ್ಲೇಯರ್‌ ಸೇರಿದಂತೆ ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹುತೇಕ ಕೊರಿಯನ್‌ ಸಿನಿಮಾಗಳು ಉಚಿತವಾಗಿ ನೋಡಲು ಲಭ್ಯವಿದೆ.

ಸಿನಿಪ್ರಿಯರು ಭಾರತೀಯ ಭಾಷೆಗಳ ನಂತರ ಹೆಚ್ಚಾಗಿ ಕೊರಿಯನ್‌ ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ. ಈ ಸಿನಿಮಾಗಳು ಇಂಡಿಯನ್‌ ಸೆಂಟಿಮೆಂಟ್‌ಗೆ ಬಹಳ ಹತ್ತಿರವಾಗಿರುವುದು, ಸಿನಿಮಾದ ಕಂಟೆಂಟ್‌ಗಳು ಇದಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೊರಿಯನ್‌ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ನೀವೂ ಕೊರಿಯರ್‌ ಸಿನಿಪ್ರಿಯರಾಗಿದ್ದಲ್ಲಿ ಮನೆಯಲ್ಲೇ ಕುಳಿತು ಎಂಜಾಯ್‌ ಮಾಡಬಹುದು. ಉಚಿತ ಕೊರಿಯನ್‌ ಸಿನಿಮಾಗಳನ್ನು ಎಲ್ಲಿ ನೋಡಬಹುದು? ಇಲ್ಲಿದೆ ಮಾಹಿತಿ.

ಹುಲು ಒಟಿಟಿ

ಜನಪ್ರಿಯ OTTಗಳಲ್ಲಿ ಹುಲು ಕೂಡಾ ಒಂದು. ಹಲವು ಭಾಷೆಗಳಲ್ಲಿ ಕಂಟೆಂಟ್ ಇದ್ದರೂ ಇಲ್ಲಿ ಕೊರಿಯನ್ ಸಿನಿಮಾಗಳು ಬಹಳ ಜನಪ್ರಿಯವಾಗಿವೆ. ಇಲ್ಲಿ ನೀವು ಕೊರಿಯನ್‌ ಸಿನಿಮಾಗಳನ್ನು ಉಚಿತವಾಗಿ ಇಂಗ್ಲಿಷ್ ಸಬ್‌ಟೈಟಲ್‌ ಜೊತೆ ವೀಕ್ಷಿಸಬಹುದು. ಒಂದೇ ಸಮಯದಲ್ಲಿ ಅನೇಕ ಡಿವೈಸ್‌ಗಳಲ್ಲಿ ವೀಕ್ಷಿಸಲು ಇಲ್ಲಿ ಸಾಧ್ಯ. ಆದ್ದರಿಂದ ಇದು ಸಿನಿಪ್ರಿಯರ ಮೆಚ್ಚಿನ ಒಟಿಟಿ ವೇದಿಕೆಯಾಗಿದೆ.

ಎಂಎಕ್ಸ್‌ ಪ್ಲೇಯರ್

ಅಮೆಜಾನ್ ಇತ್ತೀಚೆಗೆ ಎಮ್‌ಎಕ್ಸ್‌ ಪ್ಲೇಯರನ್ನು ಅಧಿಕೃತವಾಗಿ ಖರೀದಿಸಿದೆ. ಇದು ಕೂಡಾ ಕೊರಿಯನ್ ನಾಟಕಗಳಿಗೆ ಉತ್ತಮ ವೇದಿಕೆಯಾಗಿದೆ. ಇಲ್ಲಿ ಅನೇಕ ಕೊರಿಯನ್ ಸಿನಿಮಾಗಳು ಮತ್ತು ತೆಲುಗಿಗೆ ಡಬ್ ಆಗಿರುವ ವೆಬ್ ಸರಣಿಗಳು ಲಭ್ಯವಿದೆ. ಇವುಗಳನ್ನು ಯಾವುದೇ ಚಂದಾದಾರಿಕೆ ಇಲ್ಲದೆ ಉಚಿತವಾಗಿ ವೀಕ್ಷಿಸಬಹುದು. ಸಬ್‌ ಟೈಟಲ್‌ ಆಪ್ಷನ್‌ ಕೂಡಾ ಇದೆ. ನೀವು ಅದನ್ನು ಡೌನ್‌ಲೋಡ್ ಮಾಡಬಹುದು ಅಥವಾ ಇಲ್ಲೇ ನೇರವಾಗಿ ವೀಕ್ಷಿಸಬಹುದು.

ಯೂಟ್ಯೂಬ್‌

ಕೊರಿಯನ್ ನಾಟಕಗಳನ್ನು ಉಚಿತವಾಗಿ ವೀಕ್ಷಿಸಲು ಮತ್ತೊಂದು ಅತ್ಯುತ್ತಮ ಆಯ್ಕೆ YouTube. ಸಾಂದರ್ಭಿಕ ಕೊರಿಯರ್ ನಾಟಕಗಳಿಗೆ ಒಗ್ಗಿಕೊಂಡಿರುವವರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ. ಇದಲ್ಲದೆ, ಇದು ಪ್ರತಿ ಸ್ಮಾರ್ಟ್ ಫೋನ್‌ನಲ್ಲಿ ಇರುವ ಅಪ್ಲಿಕೇಶನ್ ಆಗಿದೆ. ಯಾರಾದರೂ ಯೂಟ್ಯೂಬ್‌ ಬಳಸಿ ಕೊರಿಯರ್‌ ಚಿತ್ರಗಳನ್ನು ನೋಡಬಹುದು.

ವಿಕಿ ರಾಕುಟೆನ್

ವಿಕಿ ರಾಕುಟೆನ್ ಕೊರಿಯನ್‌ ಸಿನಿಮಾಗಳ ನಂಬರ್ ಒನ್ ಅಪ್ಲಿಕೇಶನ್ ಆಗಿದೆ. ಕೊರಿಯನ್ ಸಿನಿಮಾಗಳು ಮತ್ತು ವೆಬ್ ಸರಣಿಗಳು 200 ಕ್ಕೂ ಹೆಚ್ಚು ಭಾಷೆಗಳಲ್ಲಿ ಉಪಶೀರ್ಷಿಕೆಗಳೊಂದಿಗೆ ಲಭ್ಯವಿದೆ. ನಿಮ್ಮ ಬಳಿ ಆ್ಯಂಡ್ರಾಯ್ಡ್, ಐಒಎಸ್, ಯಾವುದೇ ಮೊಬೈಲ್ ಇದ್ದರೂ ಈ ವಿಕಿ ಆಪ್ ಡೌನ್‌ಲೋಡ್ ಮಾಡಿಕೊಂಡು ಉಚಿತವಾಗಿ ವೀಕ್ಷಿಸಬಹುದು. ಆದರೆ ಇದರಲ್ಲಿ ಜಾಹೀರಾತುಗಳು ಹೆಚ್ಚಾಗಿದ್ದು ಆಡ್‌ ಫ್ರೀಗೆ ನೀವು ಹೆಚ್ಚಿನ ಹಣ ಪಾವತಿಸಬೇಕಿರುತ್ತದೆ.

ವಿಯು

Viu ಅಪ್ಲಿಕೇಶನ್‌ನಲ್ಲಿ ಉತ್ತಮ ಕೊರಿಯನ್ ಚಿತ್ರಗಳು ಲಭ್ಯವಿವೆ. ಅವೆಲ್ಲವನ್ನೂ ಉಚಿತವಾಗಿ ವೀಕ್ಷಿಸಬಹುದು. ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಸಿನಿಮಾಗಳನ್ನು ನೋಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ