logo
ಕನ್ನಡ ಸುದ್ದಿ  /  ಮನರಂಜನೆ  /  Abbabba Ott: ಒಟಿಟಿಗೆ ಬಂತು ಕಾಮಿಡಿ ಕಚಗುಳಿ ಇಡುವ ಅಬ್ಬಬ್ಬ ಸಿನಿಮಾ; ಯಾವ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯ?

Abbabba OTT: ಒಟಿಟಿಗೆ ಬಂತು ಕಾಮಿಡಿ ಕಚಗುಳಿ ಇಡುವ ಅಬ್ಬಬ್ಬ ಸಿನಿಮಾ; ಯಾವ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯ?

May 12, 2024 10:12 AM IST

google News

Abbabba OTT: ಒಟಿಟಿಗೆ ಬಂತು ಕಾಮಿಡಿ ಕಚಗುಳಿ ಇಡುವ ಅಬ್ಬಬ್ಬ ಸಿನಿಮಾ; ಯಾವ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯ?

    • ಕೆ.ಎಂ ಚೈತನ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದ ಅಬ್ಬಬ್ಬ ಸಿನಿಮಾ ಒಟಿಟಿಗೆ ಎಂಟ್ರಿಕೊಟ್ಟಿದೆ. ಲಿಖಿತ್‌ ಶೆಟ್ಟಿ, ಅಮೃತಾ ಅಯ್ಯಂಗಾರ್‌ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.  
Abbabba OTT: ಒಟಿಟಿಗೆ ಬಂತು ಕಾಮಿಡಿ ಕಚಗುಳಿ ಇಡುವ ಅಬ್ಬಬ್ಬ ಸಿನಿಮಾ; ಯಾವ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯ?
Abbabba OTT: ಒಟಿಟಿಗೆ ಬಂತು ಕಾಮಿಡಿ ಕಚಗುಳಿ ಇಡುವ ಅಬ್ಬಬ್ಬ ಸಿನಿಮಾ; ಯಾವ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯ?

Abbabba OTT: ಕಳೆದ ಫೆಬ್ರವರಿಯಲ್ಲಿ ಚಿತ್ರಮಂದಿರದಲ್ಲಿ ಸದ್ದು ಮಾಡಿ ಸುದ್ದಿಯಾಗಿದ್ದ ಅಬ್ಬಬ್ಬ ಸಿನಿಮಾ, ನೋಡುಗರಿಂದ ಮೆಚ್ಚುಗೆ ಗಳಿಸಿತ್ತಾದರೂ, ಹೆಚ್ಚು ದಿನ ಥಿಯೇಟರ್‌ನಲ್ಲಿ ನಿಲ್ಲಲ್ಲಿಲ್ಲ. ಆದರೆ, ಇಡೀ ತಂಡ ಒಂದೊಳ್ಳೆ ಸಿನಿಮಾ ಮಾಡಿದ ಖುಷಿಯಲ್ಲಿತ್ತು. ಪ್ರೇಕ್ಷಕರಿಂದ ಸಿಕ್ಕ ಮೆಚ್ಚುಗೆಗೆ ಧನ್ಯವಾದ ಹೇಳಿತ್ತು. ಹೀಗೆ ಫೆ. 16ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಅಬ್ಬಬ್ಬ ಸಿನಿಮಾ ಇದೀಗ ಒಟಿಟಿ ಅಂಗಳ ಪ್ರವೇಶಿಸಿದೆ. ಅಲ್ಲಿಯೂ ನೋಡುಗರಿಂದ ಮೆಚ್ಚುಗೆಯನ್ನೇ ಪಡೆದುಕೊಂಡಿದೆ. ಹಾಗಾದರೆ, ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯ? ಮುಂದೆ ಓದಿ.

ಆ ದಿನಗಳು ಸೇರಿ ಒಂದಷ್ಟು ಕೌತುಕ ಕಥೆಗಳ ಜತೆಗೆ ಆಗಮಿಸುವ ನಿರ್ದೇಶಕ ಕೆ. ಎಂ ಚೈತನ್ಯ, ಅಬ್ಬಬ್ಬ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಲಿಖಿತ್‌ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್‌ ನಾಯಕ , ನಾಯಕಿಯಾಗಿ ನಟಿಸಿದ್ದಾರೆ. ಹಾಸ್ಯದ ಕಚಗುಳಿ ಇಡುವ ಈ ಸಿನಿಮಾದ ಕಥೆಯೂ ಅಷ್ಟೇ ಮಜವಾಗಿದೆ. ನಾಯಕಿ ಹುಡುಗರ ಹಾಸ್ಟೆಲ್‌ಗೆ ಹೋಗಿ, ಅದೇ ಹಾಸ್ಟೆಲ್‌ನಿಂದ ಹೊರ ಬರಲು ಹೇಗೆಲ್ಲ ಪರದಾಡುತ್ತಾಳೆ ಎಂಬುದೇ ಈ ಸಿನಿಮಾದ ಕಥೆ.

ಏನಿದು ಅಬ್ಬಬ್ಬ ಸಿನಿಮಾ ಕಥೆ?

ಕಥಾನಾಯಕಿಗೆ ಬಾಯ್ಸ್‌ ಹಾಸ್ಟೆಲ್‌ ಹೇಗಿರುತ್ತೆ ಎಂಬುದನ್ನು ನೋಡುವ ಆಸೆ. ಕೇವಲ ಐದೇ ನಿಮಿಷದಲ್ಲಿ ಹಾಸ್ಟೆಲ್‌ ಹೇಗಿರುತ್ತೆ ನೋಡಿ ಆಚೆ ಬರ್ತಿನಿ ಎನ್ನುತ್ತಾಳೆ. ಆಕೆಯ ಆ ಆಸೆಯನ್ನು ಈಡೇರಿಸುವ ಉದ್ದೇಶಕ್ಕೆ ಕಾರ್ತಿಕ್‌, ಅಖಿಲಾಳನ್ನು ಹುಡುಗರಿರುವ ಹಾಸ್ಟೆಲ್‌ಗೆ ಗೌಪ್ಯವಾಗಿಯೇ ಕರೆದೊಯ್ತಾನೆ. ಅದಾದ ಮೇಲೆ ಹಾಸ್ಟೆಲ್‌ಗೆ ಹುಡುಗಿಯೊಬ್ಬಳು ಬಂದಿದ್ದಾಳೆ ಎಂಬ ವಿಚಾರ ಅಲ್ಲಿದ್ದವರಿಗೆ ಗೊತ್ತಾಗುತ್ತದೆ. ಆಕೆ ಅಲ್ಲಿಂದ ಹೇಗೆ ಹೊರಬರುತ್ತಾಳೆ? ಏನೆಲ್ಲ ಅವಾಂತರಗಳಾಗುತ್ತವೆ ಎಂಬುದನ್ನೇ ಕಾಮಿಡಿಯಾಗಿಯೇ ಹೇಳಿದ್ದಾರೆ ನಿರ್ದೇಶಕ ಕೆ. ಎಂ ಚೈತನ್ಯ.

ಅಮೆಜಾನ್‌ ಪ್ರೈಂನಲ್ಲಿ ಲಭ್ಯ

ಬಹುತೇಕ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಒಂದು ತಿಂಗಳಿಗೆ ಒಟಿಟಿಯತ್ತ ಮುಖ ಮಾಡುತ್ತವೆ. ಆದರೆ, ಅಬ್ಬಬ್ಬ ಸಿನಿಮಾ ಮಾತ್ರ ಬರೋಬ್ಬರಿ ಮೂರು ತಿಂಗಳನ್ನೇ ತೆಗೆದುಕೊಂಡಿದೆ. ಅಂದಹಾಗೆ, ಅಬ್ಬಬ್ಬ ಸಿನಿಮಾವನ್ನು ನೀವು ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಸದ್ಯ ಈ ಸಿನಿಮಾ ನೋಡಲೇಬೇಕು ಎಂದಾದರೆ, ಉಚಿತ ಸಬ್‌ಸ್ಕ್ರಿಪ್ಷನ್‌ ಹೊರತಾಗಿ 79 ರೂಪಾಯಿ ಪಾವತಿಸಲೇಬೇಕು. ಅದಾಗಿ ಉಚಿತವಾಗಿಯೇ ನೋಡಬೇಕು ಎನ್ನುವವರು ಮೇ 17ರ ವರೆಗೆ ಕಾಯಲೇಬೇಕು.

ಅಬ್ಬಬ್ಬ ಮಲಯಾಳಂ ರಿಮೇಕ್...

ಹಾಸ್ಟೆಲ್ ಕಾಮಿಡಿ ಮತ್ತು ಹಾರರ್ ಅಂಶಗಳೊಂದಿಗೆ ನಿರ್ದೇಶಕ ಕೆ.ಎಂ ಚೈತನ್ಯ ಅಬ್ಬಬ್ಬ ಚಿತ್ರದ ಮೂಲಕ ನೋಡುಗರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರವು IMDbಯಲ್ಲಿ 10ಕ್ಕೆ 9.5 ರೇಟಿಂಗ್ ಪಡೆದುಕೊಂಡಿದೆ. ಅಬ್ಬಬ್ಬ ಮಲಯಾಳಂ ಸಿನಿಮಾದ ರಿಮೇಕ್ ಎಂಬುದು ಗಮನಾರ್ಹ. 2015ರಲ್ಲಿ ನಿರ್ದೇಶಕ ಜಾನ್‌ ವರ್ಗೀಸ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಆದಿ ಕಪ್ಯಾರೆ ಕೂಟಮಣಿ (Adi Kapyare Kootamani) ಸಿನಿಮಾದ ರಿಮೇಕ್‌ ಇದಾಗಿದೆ.

ಮೂಲ ಮಲಯಾಳಿಯಲ್ಲಿ ಧ್ಯಾನ್ ಶ್ರೀನಿವಾಸನ್ ಮತ್ತು ನಮಿತಾ ಪ್ರಮೋದ್ ಮುಖ್ಯಭೂಮಿಕೆಯಲ್ಲಿದ್ದರು. ಇದೇ ಚಿತ್ರ ತಮಿಳಿಗೆ ಹಾಸ್ಟೆಲ್ ಎಂಬ ಹೆಸರಿನೊಂದಿಗೆ ರಿಮೇಕ್ ಮಾಡಲಾಗಿದೆ. ತಮಿಳು ರಿಮೇಕ್‌ನಲ್ಲಿ ಅಶೋಕ್ ಸೆಲ್ವನ್ ಮತ್ತು ಪ್ರಿಯಾ ಭವಾನಿ ಶಂಕರ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ