logo
ಕನ್ನಡ ಸುದ್ದಿ  /  ಮನರಂಜನೆ  /  Ott Trending: ಮೈ ಡಿಯರ್‌ ದೊಂಗ ಒಟಿಟಿಯಲ್ಲಿ ಬಿಡುಗಡೆ; ಮನೆಯಲ್ಲೇ ನೋಡಿ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಸಿನಿಮಾ

OTT Trending: ಮೈ ಡಿಯರ್‌ ದೊಂಗ ಒಟಿಟಿಯಲ್ಲಿ ಬಿಡುಗಡೆ; ಮನೆಯಲ್ಲೇ ನೋಡಿ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಸಿನಿಮಾ

Praveen Chandra B HT Kannada

Apr 22, 2024 10:37 PM IST

google News

OTT Trending: ಮೈ ಡಿಯರ್‌ ದೊಂಗ ಒಟಿಟಿಯಲ್ಲಿ ಬಿಡುಗಡೆ

  • My Dear Donga OTT Response:ನೀವು ತೆಲುಗು ಸಿನಿಮಾ ಪ್ರಿಯರಾಗಿದ್ದರೆ ಒಟಿಟಿಯಲ್ಲಿ ಮೈ ಡಿಯರ್‌ ದೊಂಗ ಸಿನಿಮಾ ನೋಡಬಹುದು. ಇದು ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹಾಸ್ಯ ನಟ ಅಭಿನವ್‌ ಗೋಮಠ ನಟನೆಯ ಈ ಸಿನಿಮಾ ಒಟಿಟಿಯಲ್ಲಿ ಏಪ್ರಿಲ್‌ 19ರಂದು ರಿಲೀಸ್‌ ಆಗಿತ್ತು.

OTT Trending: ಮೈ ಡಿಯರ್‌ ದೊಂಗ ಒಟಿಟಿಯಲ್ಲಿ ಬಿಡುಗಡೆ
OTT Trending: ಮೈ ಡಿಯರ್‌ ದೊಂಗ ಒಟಿಟಿಯಲ್ಲಿ ಬಿಡುಗಡೆ

My Dear Donga OTT Release: ಒಟಿಟಿಯಲ್ಲಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂನಲ್ಲಿ ಒಳ್ಳೊಳ್ಳೆಯ ಸಿನಿಮಾಗಳಿವೆ. ತೆಲುಗು ಭಾಷೆಯ ಸಿನಿಮಾ ಇಷ್ಟಪಡುವವರು ಮೈ ಡಿಯರ್‌ ದೊಂಗ ಎಂಬ ಸಿನಿಮಾ ಕಾಯುತ್ತಿದೆ. ಕಾಮಿಡಿ ಜಾನರ್‌ನಲ್ಲಿ ಬಿಡುಗಡೆಯಾಗಿರುವ ಮೈ ಡಿಯರ್‌ ದೊಂಗವು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಒಟಿಟಿಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಮೈ ಡಿಯರ್‌ ದೊಂಗ ಒಟಿಟಿಯಲ್ಲಿ ಬಿಡುಗಡೆ

ಹಾಸ್ಯ ನಟ ಅಭಿನವ್‌ ಗೋಮಠ ಅಭಿನಯದ ಮೈ ಡಿಯರ್‌ ದೊಂಗ ಸಿನಿಮಾವು ಏಪ್ರಿಲ್‌ 19ರಂದು ಒಟಿಟಿಯಲ್ಲಿ ರಿಲೀಸ್‌ ಆಗಿತ್ತು. ಈ ಸಿನಿಮಾದಲ್ಲಿ ಶಾಲಿನಿ ಕೊಂಡೆಪುಡಿ, ಸುಂದರಂ ಮಾಸ್ಟರ್‌ ಖ್ಯಾತಿ ದಿವ್ಯಾ ಶ್ರೀಪಾದ ಜತೆಗೆ ಹೊಸ ನಟರಾದ ನಿಖಿಲ್‌ ಗಜುಲ ಮತ್ತು ಶಶಾಂಕ್‌ ನಟಿಸಿದ್ದಾರೆ. ಇವರೊಂದಿಗೆ ಫಸ್ಟ್ ಡೇ ಫಸ್ಟ್ ಶೋ ನಿರ್ದೇಶಕ ಹಾಗೂ ನಟ ವಂಶಿಧರ್ ಗೌಡ್ ಕೂಡ ನಟಿಸಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ.

ಯಾವ ಒಟಿಟಿಯಲ್ಲಿ ರಿಲೀಸ್?‌

ಮೈ ಡಿಯರ್‌ ದೊಂಗ ಚಿತ್ರದ ಕಥೆಯನ್ನು ಶಾಲಿನಿ ಬರೆದಿದ್ದಾರೆ. ಬಿಎಸ್‌ ಸರ್ವಜ್ಞ ಕುಮಾರ್‌ ನಿರ್ದೇಶಿಸಿದ್ದಾರೆ. ಕ್ಯಾಮ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಗೋಜಲ ಮಹೇಶ್ವರ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಫಸ್ಟ್ ಲುಕ್ ಪೋಸ್ಟರ್‌ಗಳ ಮೂಲಕ ಗಮನ ಸೆಳೆದಿರುವ ಮೈ ಡಿಯರ್ ಡೋಂಗಾ ಚಿತ್ರವು ಜನಪ್ರಿಯ ತೆಲುಗು OTT ಪ್ಲಾಟ್‌ಫಾರ್ಮ್ ಆಹಾದಲ್ಲಿ ಸ್ಟ್ರೀಮಿಂಗ್‌ ಆಗಿದೆ. ಈ ಸಿನಿಮಾಕ್ಕೆ ಶಾಲಿನಿ ಕೊಂಡೆಪುಡಿ ಬರೆದ ಡೈಲಾಗ್‌ ಚಿತ್ರದ ಪ್ರಮುಖ ಹೈಲೈಟ್‌ ಎಂದು ವಿಮರ್ಶೆಗಳು ತಿಳಿಸಿವೆ.

ಅಭಿನವ್ ಗೋಮಠ್ ಅವರ ಕಾಮಿಡಿ ಟೈಮಿಂಗ್, ಶಾಲಿನಿ ಅವರ ಚಿತ್ರಕಥೆ ಮತ್ತು ಸಂಭಾಷಣೆಗಳು ಸಿನಿಮಾವನ್ನು ಆಹ್ಲಾದವಾಗಿಸಿದೆಯಂತೆ. ಕ್ಯಾಮೆರಾ ಕಣ್ಣಲ್ಲಿ ಕಣ್ಣಿಟ್ಟು ಸುಜಾತಾ ನೀಡಿರುವ ಎಕ್ಸ್ ಪ್ರೆಶನ್ ಗಳು ತುಂಬಾ ಇಂಪ್ರೆಸ್ ಆಗಿವೆ ಎನ್ನಲಾಗಿದೆ.

ಎಲ್ಲರೂ ಕಡೆಗಣಿಸಿದ ಹುಡುಗಿ ಮನೆಗೆ ಬಂದ ಕಳ್ಳನ ಸಂಪರ್ಕಕ್ಕೆ ಬಂದದ್ದು ಹೇಗೆ? ನಿಜವಾದ ಕಳ್ಳನ ಜತೆ ಈಕೆ ಸ್ನೇಹ ಬೆಳೆಸಿದ್ದು ಯಾಕೆ? ಇವರ ಪ್ರೀತಿ ಯಾವ ರೀತಿ ಮುಂದುವರೆಯುತ್ತದೆ? ಈ ಯುವತಿಯ ಕೌಟುಂಬಿಕ ಹಿನ್ನಲೆ ಎಲ್ಲವನ್ನೂ ಕಾಮಿಡಿಯಾಗಿ ತೋರಿಸಲಾಗಿದೆ.

ರನ್ ಸಮಯ 1 ಗಂಟೆ 40 ನಿಮಿಷಗಳು

1 ಗಂಟೆ 40 ನಿಮಿಷಗಳ ಅವಧಿಯ ಮೈ ಡಿಯರ್ ದೊಂಗ ಸಿನಿಮಾ ಬೋರ್‌ ಹೊಡೆಸುವುದಿಲ್ಲ. ಹೊಟ್ಟೆ ಹುಣ್ಣಾಗುವಷ್ಟು ನಗು ಗ್ಯಾರಂಟಿ ಎಂದು ಪ್ರೇಕ್ಷಕರು ಹೊಗಳುತ್ತಿದ್ದಾರೆ. ಈ ವೀಕೆಂಡ್‌ನಲ್ಲಿ ಕನ್ನಡ ಸಿನಿಮಾ ಯಾವುದೂ ಒಟಿಟಿಯಲ್ಲಿ ಇಲ್ಲದೆ ಇದ್ದರೆ, ಈ ತೆಲುಗು ಸಿನಿಮಾ ನೋಡಿ ನಕ್ಕು ನಲಿಯಬಹುದು ಎಂದು ಎಚ್‌ಟಿ ಕನ್ನಡದ ಸಹೋದರ ಪತ್ರಿಕೆ ಎಚ್‌ಟಿ ತೆಲುಗು ಷರಾ ಬರೆದಿದೆ. ಆದರೆ, ಈ ಸಿನಿಮಾ ತೆಲುಗು, ತಮಿಳು, ಇಂಗ್ಲಿಷ್‌ನಲ್ಲಿ ರಿಲೀಸ್‌ ಆಗಿದೆ. ಕನ್ನಡಕ್ಕೆ ಡಬ್‌ ಆಗಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ