OTT Release Today: ಒಟಿಟಿಯಲ್ಲಿ ಇಂದು ಹೊಸ ಸಿನಿಮಾ, ವೆಬ್ ಸರಣಿಗಳ ಹಬ್ಬ, ಆಡುಜೀವಿತಂನಿಂದ ಮೂರನೇ ಕೃಷ್ಣಪ್ಪವರೆಗೆ
Jul 19, 2024 12:19 PM IST
OTT Release Today: ಒಟಿಟಿಯಲ್ಲಿ ಇಂದು ಹೊಸ ಸಿನಿಮಾ, ವೆಬ್ ಸರಣಿಗಳ ಹಬ್ಬ
- OTT release today: ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಝೀ5 ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಇಂದು ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆಯಾಗಿದೆ. ಆಡುಜೀವಿತಂನಿಂದ ಮೂರನೇ ಕೃಷ್ಣಪ್ಪವರೆಗೆ ಹಲವು ಕನ್ನಡ, ಮಲಯಾಳಂ, ತೆಲುಗು, ಹಿಂದಿ, ತಮಿಳು, ಇಂಗ್ಲಿಷ್ ಸಿನಿಮಾಗಳು, ಸೀರಿಸ್‌ಗಳು ರಿಲೀಸ್ ಆಗಿವೆ.
OTT Release Today: ಇಂದು ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಪ್ರತಿವಾರ ಪರಭಾಷೆಯ ಸಿನಿಮಾಗಳೇ ರಿಲೀಸ್ ಆಗುತ್ತಿರುವುದನ್ನು ನೋಡಿ ಬೇಸರಗೊಂಡ ಕನ್ನಡಿಗರಿಗೆ ಈ ಬಾರಿ ಮೂರನೇ ಕೃಷ್ಣಪ್ಪ ಮೋಡಿ ಮಾಡಲಿದ್ದಾನೆ. ಮೊದಲೆಲ್ಲ ಶುಕ್ರವಾರ ಬಂತೆಂದರೆ ದಿನಪತ್ರಿಕೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳ ವಿವರ, ಪೋಸ್ಟರ್‌ಗಳನ್ನು ನೋಡುವ ಕುತೂಹಲವಿತ್ತು. ಈಗ ಚಿತ್ರಮಂದಿರಗಳ ಸಿನಿಮಾ ಮಾಹಿತಿ ಜತೆ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳ ವಿವರ ಪಡೆಯಲು ಒಟಿಟಿ ಪ್ರೇಕ್ಷಕರು ಉತ್ಸುಕರಾಗಿರುತ್ತಾರೆ. ಪ್ರತಿಶುಕ್ರವಾರ ಹಲವು ಹೊಸ ಸಿನಿಮಾ, ವೆಬ್ ಸರಣಿಗಳು ಬಿಡುಗಡೆಯಾಗುತ್ತವೆ. ರಂಗಾಯಣ ರಘು ನಟಿಸಿರುವ ಮೂರನೇ ಕೃಷ್ಣಪ್ಪ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇಂದು ಬಿಡುಗಡೆಯಾಗಿದೆ. ಈ ಶುಕ್ರವಾರ ಬಿಡುಗಡೆಯಾದ ಹೊಸ ಸಿನಿಮಾ, ಸೀರಿಸ್‌ಗಳ ವಿವರ ಇಲ್ಲಿದೆ.
ನೆಟ್‌ಫ್ಲಿಕ್ಸ್ ಒಟಿಟಿ
- ಆಡುಜೀವಿತಂ (ಮಲಯಾಳಂ ಮೂಲ, ಕನ್ನಡ ಡಬ್ಬಿಂಗ್ ಚಲನಚಿತ್ರ) - ಜುಲೈ 19
- ಫೈಂಡ್ ಮಿ ಫಾಲಿಂಗ್ (ಇಂಗ್ಲಿಷ್ ಚಲನಚಿತ್ರ) - ಜುಲೈ 19
- ಸ್ಕೈ ವಾಕರ್ಸ್: ಎ ಲವ್ ಸ್ಟೋರಿ (ಇಂಗ್ಲಿಷ್ ಚಲನಚಿತ್ರ) - ಜುಲೈ 19
- ಸ್ವೀಟ್ ಹೋಮ್ ಸೀಸನ್ 3 (ಕೊರಿಯನ್ ವೆಬ್ ಸರಣಿ) - ಜುಲೈ 19
ಝೀ5 ಒಟಿಟಿ
- ಬಹಿಷ್ಕಾರನ್ (ತೆಲುಗು ವೆಬ್ ಸರಣಿ) – ಜುಲೈ 19
- ಬರ್ಜಾಕ್ (ಹಿಂದಿ ವೆಬ್ ಸರಣಿ) - ಜುಲೈ 19
ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ
- ಮೂರನೇ ಕೃಷ್ಣಪ್ಪ (ಕನ್ನಡ) ಜುಲೈ 19
- ಬೆಟ್ಟಿ ಲಾ ಫೆ (ಸ್ಪ್ಯಾನಿಷ್ ವೆಬ್ ಸರಣಿ) - ಜುಲೈ 19
- ಮನಮೆ (ತೆಲುಗು ಚಲನಚಿತ್ರ) – ಜುಲೈ 19 (ಇಂದು ಬಿಡುಗಡೆ ಸಾಧ್ಯತೆ)
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ
- ನಾಗೇಂದ್ರನ್ಸ್ ಹನಿಮೂನ್ (ಮಲಯಾಳಂ ವೆಬ್ ಸರಣಿ)- ಜುಲೈ 19
- ಯಂಗ್ ವುಮನ್ ಅಂಡ್ ದಿ ಸೀ (ಇಂಗ್ಲಿಷ್ ಚಲನಚಿತ್ರ) - ಜುಲೈ 19
ಆಹಾ ಒಟಿಟಿ
- ದಿ ಅಕಾಲಿ (ತಮಿಳು ಚಲನಚಿತ್ರ) - ಜುಲೈ 19
- ಬೂಮರ್ ಅಂಕಲ್ (ತಮಿಳು ಚಲನಚಿತ್ರ)- ಜುಲೈ 20
ಬುಕ್ ಮೈ ಶೋ ಒಟಿಟಿ
- ದಿ ಡೀಪ್ ಡಾರ್ಕ್ (ಫ್ರೆಂಚ್ ಚಲನಚಿತ್ರ) - ಜುಲೈ 19
- ದಿ ವಾಚರ್ಸ್ (ಇಂಗ್ಲಿಷ್ ಚಲನಚಿತ್ರ) - ಜುಲೈ 19
- ಐಎಸ್‌ಎಸ್ (ಇಂಗ್ಲಿಷ್ ಚಲನಚಿತ್ರ) - ಜಿಯೋ ಸಿನಿಮಾ ಒಟಿಟಿ- ಜುಲೈ 19
- ಅರ್ಕಾಡಿಯನ್ (ಇಂಗ್ಲಿಷ್ ಚಲನಚಿತ್ರ) - ಲಯನ್ಸ್ ಗೇಟ್ ಪ್ಲೇ ಒಟಿಟಿ - ಜುಲೈ 19
- ಲೇಡಿ ಇನ್ ದಿ ಲೇಕ್ (ಇಂಗ್ಲಿಷ್ ವೆಬ್ ಸರಣಿ) - ಆಪಲ್ ಪ್ಲಸ್ ಟಿವಿ- ಜುಲೈ 19
- ಧರ್ಮಜುದ್ಧ (ಬಂಗಾಳಿ ಚಲನಚಿತ್ರ)- ಹೋಯ್ ಚೋಯ್ ಟಿವಿ- ಜುಲೈ 19
ಇದನ್ನೂ ಓದಿ: ಲೀಕ್ ಆದ ಬಾತ್‌ರೂಮ್ ವಿಡಿಯೋ ನೋಡಿ ದರ್ಶನ್ ಹೀರೋಯಿನ್ ಕೆಂಡಾಮಂಡಲ; ಮ್ಯಾನೇಜರ್‌ಗೆ ಕ್ಲಾಸ್ ತೆಗೆದುಕೊಂಡ ಊರ್ವಶಿ
ಇಂದು ಜುಲೈ 19 ಶುಕ್ರವಾರದಂದು 19 ಸಿನಿಮಾಗಳು ಮತ್ತು ವೆಬ್ ಸಿರೀಸ್ ಒಟ್ಟಿಗೆ ಬಿಡುಗಡೆಯಾಗಿದೆ. ಇವುಗಳಲ್ಲಿ, ಮಲಯಾಳಂ ಬ್ಲಾಕ್‌ಬಸ್ಟರ್ ಸರ್ವೈವಲ್ ಥ್ರಿಲ್ಲರ್ ಆಡುಜೀವಿತಂ ನೋಡಲೇಬೇಕಾದ ಚಲನಚಿತ್ರವಾಗಿದೆ. ಇದರೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿರುವ ರಂಗಾಯಣ ರಘು ನಟನೆಯ ಮೂರನೇ ಕೃಷ್ಣಪ್ಪ ಸಿನಿಮಾ ನೋಡಿದರೆ ಕಾಮಿಡಿ ಪ್ಲಸ್ ಎಂಟರ್‌ಟೇನ್‌ಮೆಂಟ್ ಖಾತ್ರಿ.