logo
ಕನ್ನಡ ಸುದ್ದಿ  /  ಮನರಂಜನೆ  /  Spy Ops Series: ಇಸ್ರೇಲ್ ಪ್ಯಾಲೆಸ್ಟೀನ್ ನಡುವಿನ ಸಂಘರ್ಷ, ಅಮಾಯಕರ ಬದುಕಿನ ಕಥೆ ಹೇಳುವ ಸ್ಪೈ ಓಪ್ಸ್‌ ವೆಬ್‌ಸರಣಿ ಕುರಿತ ಮಧು ವೈಎನ್‌ ಬರಹ

Spy Ops Series: ಇಸ್ರೇಲ್ ಪ್ಯಾಲೆಸ್ಟೀನ್ ನಡುವಿನ ಸಂಘರ್ಷ, ಅಮಾಯಕರ ಬದುಕಿನ ಕಥೆ ಹೇಳುವ ಸ್ಪೈ ಓಪ್ಸ್‌ ವೆಬ್‌ಸರಣಿ ಕುರಿತ ಮಧು ವೈಎನ್‌ ಬರಹ

Reshma HT Kannada

Sep 20, 2023 02:59 PM IST

google News

ಸ್ಪೈಓಪ್ಸ್‌ ಸರಣಿ (ಎಡಚಿತ್ರ), ಮಧು ವೈಎನ್‌ (ಬಲಚಿತ್ರ)

    • Spy Ops Web Series: ಇಸ್ರೆಲ್‌ ಪಾಲೆಸ್ಟೀನ್‌ ನಡುವಿನ ಸಂಘರ್ಷದಲ್ಲಿ ಅದೆಷ್ಟೋ ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಆದರೆ ತಪ್ಪೇ ಇಲ್ಲದೇ ಬಲಿಯಾದ ಅಮಾಯಕನೊಬ್ಬ ಎರಡು ದೇಶಗಳ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಕಾರಣವಾಗುತ್ತಾನೆ. ಹೀಗೆ ಇಸ್ರೆಲ್‌ ಪ್ಯಾಲೆಸ್ಟೀನ್‌ ಸಂಘರ್ಷದ ಕಥೆ ಹೇಳುವ ಸ್ಪೈ ಏಪ್ಸ್‌ ಸರಣಿಯ ಕುರಿತು ಮಧು ವೈಎನ್‌ ಅವರ ಬರಹ ಇಲ್ಲಿದೆ.  
ಸ್ಪೈಓಪ್ಸ್‌ ಸರಣಿ (ಎಡಚಿತ್ರ), ಮಧು ವೈಎನ್‌ (ಬಲಚಿತ್ರ)
ಸ್ಪೈಓಪ್ಸ್‌ ಸರಣಿ (ಎಡಚಿತ್ರ), ಮಧು ವೈಎನ್‌ (ಬಲಚಿತ್ರ)

ದೇಶ ದೇಶಗಳ ನಡುವೆ ಯುದ್ಧವಾದರೆ ಅದರಲ್ಲಿ ಅದೆಷ್ಟೋ ಅಮಾಯಕರು ಬಲಿಯಾಗುತ್ತಾರೆ. ಯುದ್ಧಕ್ಕೆ ಕಾರಣ ಏನು ಎಂದೂ ಕೂಡ ತಿಳಿಯದ ಅವರು ದ್ವೇಷದ ಉರಿಜ್ವಾಲೆಯಲ್ಲಿ ಬೆಂದು ಹೋಗುತ್ತಾರೆ. ಸಾವಿರಾರು ಜನರು ಬಲಿಯಾಗುವ ಜೊತೆಗೆ ಅಪಾರ ನಷ್ಟವೂ ಉಂಟಾಗುತ್ತದೆ. ಮೊದಲನೇ ಮಹಾಯದ್ಧ, ಎರಡನೇ ಮಹಾಯದ್ಧದ ಬಳಿಕ ಕೇಳುವ ಬಹುದೊಡ್ಡ ಸಂಘರ್ಷದ ಹೆಸರುಗಳಲ್ಲಿ ಇಸ್ರೇಲ್‌ ಪ್ಯಾಲೆಸ್ಟೀನ್‌ ಯುದ್ಧ ಕೂಡ ಒಂದು. ಈ ಯದ್ಧವೂ ಕೂಡ ಹಲವು ಅಮಾಯಕರ ಬಲಿಗೆ ಕಾರಣವಾಗಿತ್ತು.

ಈ ಯುದ್ಧದ ಸನ್ನಿವೇಶವನ್ನು ಕಣ್ಣಿಗೆ ಕಟ್ಟಿದಂತೆ ಕಟ್ಟಿಕೊಟ್ಟಿವೆ ಕೆಲವು ಸಿನಿಮಾ ಹಾಗೂ ವೆಬ್‌ಸರಣಿಗಳು. ಇವುಗಳಲ್ಲಿ ಸ್ಪೈ ಓಪ್ಸ್‌ ಸರಣಿ ಕೂಡ ಒಂದು. ಸ್ಪೈ ಓಪ್ಸ್‌ ಸರಣಿಯ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಮಧು. ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಸ್ಪೈಓಪ್ಸ್‌ ಸರಣಿಯ ಐದು ಹಾಗೂ ಆರನೇ ಸಿರೀಸ್‌ನಲ್ಲಿ ಇದನ್ನು ನೋಡಬಹುದು ಎಂದು ಮಧು ಕಾಮೆಂಟ್‌ ಮಾಡಿದ್ದಾರೆ.

ಕೆಲವರು ಇದನ್ನು ಮುನಿಚ್‌ ಸಿನಿಮಾದಲ್ಲೂ ನೋಡಬಹುದು ಎಂದು ಕಾಮೆಂಟ್‌ ಮಾಡಿದ್ದಾರೆ.

ಮಧು ವೈಎನ್‌ ಬರಹ

1972, ಜರ್ಮನಿಯ ಮ್ಯೂನಿಕ್‌ನಲ್ಲಿ ಜರುಗಿದ ಒಲಂಪಿಕ್‌ನಲ್ಲಿ ಪ್ಯಾಲೆಸ್ಟೀನ್ ಬಂಡುಕೋರರು ಇಸ್ರೇಲ್ ಕ್ರೀಡಾಪಟುಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುತ್ತಾರೆ. ಸಂಧಾನ ಪ್ರಹಸನ ವಿಫಲವಾಗಿ ಎಲ್ಲಾ ಒತ್ತೆಯಾಳುಗಳು ಸಾವನ್ನಪ್ಪುತ್ತಾರೆ.

ಈ ಯೋಜನೆ‌ ರೂಪಿಸಿದ್ದವರು ಪ್ಯಾಲೆಸ್ಟೀನಿನ ʼಬ್ಲಾಕ್ ಸೆಪ್ಟೆಂಬರ್ʼ ತಂಡ ಎಂದು ತಿಳಿದುಬರುತ್ತದೆ. ಅದೇ ಹೆಸರು ಯಾಕೆಂದರೆ ಇಸ್ರೇಲ್ ಹಿಂದೆ ಸೆಪ್ಟಂಬರ್‌ನಲ್ಲಿ ಪ್ಯಾಲೆಸ್ಟೀನಿನ ಅರಬರನ್ನು ಹತ್ಯೆ ಮಾಡಿರುತ್ತದೆ. (ಇಬ್ಬರ ಸಾರ್ವಭೌಮತ್ವದ ಜಗಳದಲ್ಲಿ).

ಇದಕ್ಕೆ ಪ್ರತೀಕಾರವಾಗಿ ಅಂದಿನ ಇಸ್ರೇಲ್‌ನ ಪ್ರಧಾನಿ ಗೋಲ್ಡಾ ಮೇರ್ (ನಮ್ಮ ಇಂಧಿರಾಗಾಂಧಿಯವರಿಗೆ ಹೋಲಿಕೆಯುಳ್ಳ), ತಮ್ಮ ಸೀಕ್ರೆಟ್ ಏಜೆನ್ಸಿ ಮೊಸಾದ್‌ಗೆ ʼಬ್ಲಾಕ್ ಸೆಪ್ಟಂಬರ್ʼ ತಂಡದ ಎಲ್ಲಾ ಸದಸ್ಯರನ್ನು ಅವರು ಯಾವೆಲ್ಲ ದೇಶಗಳಲ್ಲಿ ಅಡಗಿದ್ದರೂ ಸರಿ ಹುಡುಕಿ ಕೊಲ್ಲಿ ಎಂದು ಆಜ್ಞೆ ಹೊರಡಿಸುತ್ತಾಳೆ. ಅದಕ್ಕೆ ಅಪರೇಶನ್ ವ್ರಾತ್ ಆಫ್ ಗಾಡ್ ಎಂದು ಹೆಸರಿಟ್ಟುಕೊಳ್ಳುತ್ತಾರೆ.

ಮೊಸಾದ್ ಸಂಸ್ಥೆ ಫ್ರಾನ್ಸ್ ಬ್ರಿಟನ್ ನಾರ್ವೆ ಮುಂತಾಗಿ ಯುರೋಪಿನ ಎಲ್ಲ ದೇಶಗಳನ್ನು ಅಲೆದು ಅಡಗಿದ್ದವರನ್ನೆಲ್ಲ‌ ಹುಡುಕಿ ಹುಡುಕಿ ಮುಗಿಸಿಕೊಂಡು ಬರುತ್ತದೆ. ಅಲಿ ಹಸನ್ ಸಲೇಮಾ ಎಂಬ ಬ್ಲಾಕ್ ಸೆಪ್ಟೆಂಬರ್ ಮುಖ್ಯಸ್ಥ ಮಾತ್ರ ಸಿಕ್ಕಿರಲ್ಲ.

ಕೊನೆಗೊಮ್ಮೆ ನಾರ್ವೆ ದೇಶದ ಒಂದು ಹೋಟೆಲಿನಲ್ಲಿ ವೇಟರ್ ಆಗಿ ಕಾಣಿಸಿಕೊಳ್ತಾನೆ. ಮೊಸಾದ್ ಏಜೆಂಟರುಗಳಿಗೆ.

ಸಂಜೆ ತನ್ನ ಪ್ರೆಗ್ನೆಂಟ್ ಹೆಂಡತಿಯೊಂದಿಗೆ ಕಾರು ಇಳಿದು ಮನೆ ಬಾಗಿಲು ತೆರೆಯುತ್ತಿರುವಾಗ ಮೊಸಾದ ಏಜಂಟರುಗಳು ಆತನನ್ನು ಹೊಡೆದುರುಳಿಸುತ್ತಾರೆ. ಮಡದಿ ಓಡೋಡಿ‌ ಬಂದು ನೋಡುತ್ತಾಳೆ, ಗಂಡ ರಕ್ತದ ಮಡುವಿನಲ್ಲಿ ಸತ್ತುಬಿದ್ದಿದ್ದಾನೆ.

ಮಾರನೇ ದಿವಸ ಗೊತ್ತಾಗಿದ್ದೇನಂದರೆ‌ ಮೊಸಾದ್, ಅಲಿ ಹಸನ್‌ಗೆ ಹೋಲಿಕೆಯಿರುವ ಒಬ್ಬ ಅಮಾಯಕ ಮೊರಕ್ಕೊ ಪ್ರಜೆಯನ್ನು ಬಲಿ ತೆಗೆದುಕೊಂಡಿರುತ್ತದೆ. ಅಮಾಯಕ ಗರ್ಭಿಣಿ ಮತ್ತು ಮಗುವನ್ನು ಅನಾಥರನ್ನಾಗಿಸಿರುತ್ತದೆ.

ಈ ಪ್ರಕರಣ ಇಡೀ ಜಗತ್ತಿನೆದುರು ಇಸ್ರೇಲ್ ತಲೆತಗ್ಗಿಸುವಂತೆ ಮಾಡುತ್ತದೆ. ನಾರ್ವೆ ಸರ್ಕಾರ ಇಸ್ರೇಲ್ ಏಜೆಂಟರುಗಳನ್ನು ಬಂಧಿಸಿ ಶಿಕ್ಷೆ ವಿಧಿಸುತ್ತದೆ.

ಕಾಲಾನಂತರ ಇಸ್ರೇಲ್ ಪಶ್ಚಾತ್ತಾಪದಿಂದ ಮೊರಕ್ಕೊ ಪ್ರಜೆಯ ಕುಟುಂಬಕ್ಕೆ ಹಣಸಹಾಯ ಮಾಡುತ್ತದೆ. ಎಲ್ಲ ದೇಶಗಳಿಂದ ತನ್ನ ಏಜಂಟರುಗಳನ್ನು ವಾಪಸ್ ಕರೆಸಿಕೊಳ್ಳುತ್ತದೆ.

ಮುಂದೊಂದಿನ ಅಮೆರಿಕ‌ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಪ್ಯಾಲೆಸ್ಟೀನ್ ಸಂಧಾನವಾಗುತ್ತದೆ. ವಿಶ್ವಸಂಸ್ಥೆಯು ಎರಡೂ ದೇಶಗಳ ನಾಯಕರುಗಳನ್ನು ಕರೆಸಿ ಕೈಕುಲುಕಿಸುತ್ತಾರೆ. ಆ ದಿನ ವಿಶ್ವಸಂಸ್ಥೆ ಸಂಗೀತ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿರುತ್ತಾರೆ. ಎರಡೂ ದೇಶದ ನಾಯಕರು ಸಂಗೀತ ನುಡಿಸಿದ ತಂಡದ ಮುಖ್ಯಸ್ಥನಿಗೆ ತುಂಬ ಚನ್ನಾಗಿ ನುಡಿಸಿದಿರಿ ಎಂದು ಶುಭಕೋರುತ್ತಾರೆ.

ಆ ಸಂಗೀತಗಾರ ಹತನಾದ ಮೊರಕ್ಕೊ ಪ್ರಜೆಯ ಸಹೋದರನಾಗಿರುತ್ತಾನೆ.

(ನೆಟ್‌ಫ್ಲಿಕ್ಸ್‌ನಲ್ಲಿದೆ, ಭಾರತ ಕೆನಡಾ ಪ್ರಹಸನದಿಂದ ಸಾಂದರ್ಭಿಕವಾಗಿ ನೆನಪಾಯಿತು).

ಮಧು ಅವರ ಬರಹಕ್ಕೆ ಬಂದ ಕಾಮೆಂಟ್‌ಗಳು

ʼಎಲ್ಲ ದೇಶಗಳು ಈ ಥರದ ದುಸ್ಸಾಹಸ ಮಾಡುತ್ತಲೆ ಬಂದಿವೆ.ಪಾಕಿಸ್ತಾನ ದಾವೂದ್ ಮೂಲಕ ಬಾಂಬೆ ಬ್ಲಾಸ್ಟ್ ಮಾಡಿಸಲಿಲ್ಲವೆ. ಈಗ ಖಾಲೀಸ್ತಾನದ ನಾಯಕನನ್ನು ಭಾರತ ನಿವಾರಿಸಿಕೊಂಡಿದೆ ಆತನ ಹಿಂದೆ ಯಾರಿದ್ದಾರೊ ಯಾರಿಗೆ ಗೊತ್ತುಂಟುʼ ಎಂದು ನಾಗಣ್ಣ ಎಂ.ಬಿ. ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.

ʼಈಗಲೂ ಇಸ್ರೇಲಿಗಳ ಮತ್ತು ಪ್ಯಾಲಾಸ್ಟಿನಿಯರ ದ್ವೇಷ, ಕಾದಾಟ ನಿಂತಿಲ್ಲ. ಅದೇ netflix ನಲ್ಲಿ Fouda ನೋಡಿ. "Munich' ಎಂಬ ಚಲನಚಿತ್ರವೂ ಬಂದಿತ್ತು. Netflix ನಲ್ಲಿ ಇದೆ. ಈ ಹಗೆತನ ಅರ್ಥ್ ಮಾಡಿಕೊಳ್ಳೊಕ್ಕೆ ನಾನು ಇಸ್ರೇಲ್‌ನಲ್ಲಿ ಏಳು ದಿನ ಇದ್ದು ಬಂದೆ. ಆದರೆ ಪ್ರವಾಸಿಗಳನ್ನ gaza ಕಡೆ ಬಿಡುವುದಿಲ್ಲʼ ಶಾಕುಂತಲಾ ಶ್ರೀಧರ್‌ ಅವರು ಕಾಮೆಂಟ್‌ ಮೂಲಕ ತಮ್ಮ ಅಭಿಪ್ರಾಯ ಅನುಭವ ಹಂಚಿಕೊಂಡಿದ್ದಾರೆ.

ಶೋಭಾ ಮಣಿ ಅವರು ಕಾಮೆಂಟ್‌ ಮಾಡಿದ್ದು ಹೀಗೆ: ದೇಶಗಳ ನಡುವೆ ಹಗೆತನ,, ದ್ವೇಷ,, ಪ್ರತೀಕಾರ,,, ಕೊನೆಗೆ ಸಂಧಾನ,,ವಿಶ್ವ ಶಾಂತಿ,, ಸಂಸ್ಥೆಯಿಂದ. ಹಳ್ಳಿ ಗಳಲ್ಲಿಯೂ,, ಹೀಗೆ ಅಲ್ವಾ. ಹಿರಿಯರು ಬುದ್ಧಿ ಹೇಳಿ,,, ಸಂಧಾನ ಮಾತುಕತೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ