logo
ಕನ್ನಡ ಸುದ್ದಿ  /  ಮನರಂಜನೆ  /  Ott Releases: ಈ ಸೆಖೆಗೆ ಮನೆಯಲ್ಲೇ ಸಿನಿಮಾ ನೋಡಲು ಬಯಸ್ತಿರಾ? ಒಟಿಟಿಗೆ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳ ಆಗಮನ, ಇಲ್ಲಿದೆ ವಿವರ

OTT releases: ಈ ಸೆಖೆಗೆ ಮನೆಯಲ್ಲೇ ಸಿನಿಮಾ ನೋಡಲು ಬಯಸ್ತಿರಾ? ಒಟಿಟಿಗೆ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳ ಆಗಮನ, ಇಲ್ಲಿದೆ ವಿವರ

Praveen Chandra B HT Kannada

Mar 09, 2024 06:30 AM IST

google News

ಒಟಿಟಿಗೆ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳ ಆಗಮನ

    • OTT releases to watch this weekend: ಈ ಬಿಸಿಲ ಬೇಗೆಗೆ ಮನೆಯಿಂದ ಹೊರಕ್ಕೆ ಹೋಗಿ ಸಿನಿಮಾ ನೋಡೋದು ಬೇಸರ ಎನ್ನುವವರು ಸಾಕಷ್ಟು ಜನರಿರಬಹುದು. ಈ ಒಟಿಟಿ ಕಾಲದಲ್ಲಿ ಹಲವು ಹೊಸ ಸಿನಿಮಾ, ಸರಣಿಗಳನ್ನು ಮನೆಯಲ್ಲಿ ನೋಡಬಹುದು. ಈ ವೀಕೆಂಡ್‌ಗೆ ನೋಡಬಹುದಾದ ಹೊಸ ಸಿನಿಮಾ, ಸರಣಿಗಳ ವಿವರ ಇಲ್ಲಿದೆ.
ಒಟಿಟಿಗೆ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳ ಆಗಮನ
ಒಟಿಟಿಗೆ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳ ಆಗಮನ

ಈ ವಾರ ಚಿತ್ರಮಂದಿರಗಳಲ್ಲೂ ಸಿನಿಮಾ ಹಬ್ಬ. ಒಟಿಟಿಯಲ್ಲೂ ಸಿನಿಮಾ, ವೆಬ್‌ ಸರಣಿಗಳ ಹಬ್ಬ. ಸಾಕಷ್ಟು ಜನರು ಚಿತ್ರಮಂದಿರಗಳಿಗೆ ಹೋಗಿ ಕರಟಕ ದಮನಕ, ರಂಗನಾಯಕ, ಬ್ಲಿಂಕ್‌, ಜೋಗ್‌ 101 ಮುಂತಾದ ಸಿನಿಮಾಗಳನ್ನು ನೋಡಲು ಬಯಸಬಹುದು. ಕೆಲವರಿಗೆ ಹಲವು ಕಾರಣಗಳಿಂದ ಚಿತ್ರಮಂದಿರಗಳಿಗೆ ಹೋಗಲು ಸಾಧ್ಯವಾಗದು. ಈಗ ಬಿಸಿಲು ಧಗೆ ಹೆಚ್ಚಿರುವುದರಿಂದ ಮನೆಯಿಂದ ಹೊರಕ್ಕೆ ಹೋಗಲು ಬಯಸದೆ ಇರುವವರೂ ಸಾಕಷ್ಟು ಜನ ಇರುತ್ತಾರೆ. ಒಟ್ಟಾರೆ ಮನೆಯಲ್ಲಿಯೇ ಯಾವುದಾದರೂ ಸಿನಿಮಾ, ವೆಬ್‌ ಸರಣಿ ನೋಡೋಣ ಎಂದುಕೊಳ್ಳುವವರಿಗೆ ಹಲವು ಆಯ್ಕೆಗಳು ಈ ವಾರಾಂತ್ಯದಲ್ಲಿ ಇವೆ. ಒಟಿಟಿಯಲ್ಲಿರುವ ಹೊಸ ಸಿನಿಮಾ, ವೆಬ್‌ ಸರಣಿಗಳ ವಿವರ ಇಲ್ಲಿದೆ.

ಶೋಟೈಮ್‌ (ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌)

ಸುಮಿತ್‌ ರಾಯ್‌ ನಿರ್ಮಾಣದ ಮಿಹಿರ್‌ ದೇಸಾಯಿ ಮತ್ತು ಅರ್ಚಿತ್‌ ಕುಮಾರ್‌ ನಿರ್ದೇಶನದ ಶೋಟೈಮ್‌ ಸಿನಿಮಾವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಇಮ್ರಾನ್ ಹಶ್ಮಿ, ನಾಸಿರುದ್ದೀನ್ ಶಾ, ಮೌನಿ ರಾಯ್, ಶ್ರಿಯಾ ಸರನ್, ಮಹಿಮಾ ಮಕ್ವಾನಾ ಅಭಿನಯದ ಈ ಚಿತ್ರ ಚಿತ್ರರಸಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಸ್ವಜನಪಕ್ಷಪಾತ ಮತ್ತು ಅಧಿಕಾರದ ಹೋರಾಟಗಳ ಹೊರತಾಗಿ ಬಾಲಿವುಡ್‌ನಲ್ಲಿ ಏನಾಗುತ್ತದೆ ಎಂಬ ವಿವರವೂ ಈ ಸಿನಿಮಾದಲ್ಲಿ ದೊರಕುತ್ತದೆ.

ಹನುಮಾನ್‌ (ಝೀ5)

ಪ್ರಶಾಂತ್‌ ವರ್ಮಾ ನಿರ್ದೇಶನದ ತೇಜ ಸಜ್ಜಾ, ಅಮಿತಾ ಅಯ್ಯರ್‌, ವರಲಕ್ಷ್ಮಿ ಶರತ್‌ಕುಮಾರ್‌ ನಟನೆಯ ಈ ಬ್ಲಾಕ್‌ಬಸ್ಟರ್‌ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ವೀಕ್ಷಿಸಬಹುದು. ಈ ಸಿನಿಮಾದ ಸೀಕ್ವೆಲ್‌ ಜೈ ಹನುಮಾನ್‌ ಕೂಡ ಆಗಮಿಸುವ ಸೂಚನೆಯಿದೆ.

ಮೇರಿ ಕ್ರಿಸ್ಮಸ್‌ (ನೆಟ್‌ಫ್ಲಿಕ್ಸ್‌)

ಮೇರಿ ಕ್ರಿಸ್‌ಮಸ್‌

ಮೇರಿ ಕ್ರಿಸ್ಮಸ್‌ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. . "ಈ ವರ್ಷ ಕ್ರಿಸ್ಮಸ್‌ ಬೇಗನೇ ಬರುತ್ತಿದೆ. ಕ್ರಿಸ್ಮಸ್‌ನ ಅತ್ಯುತ್ತಮ ಉಡುಗೊರೆ ಬಿಚ್ಚಿ ನೋಡಲು ಇದು ಅತ್ಯುತ್ತಮ ಸಮಯ. ಮೇರಿ ಕ್ರಿಸ್ಮಸ್‌ ಸಿನಿಮಾವನ್ನು ನಾಳೆಯಿಂದ (ಇಂದಿನಿಂದ- ಮಾರ್ಚ್‌ 8) ಸ್ಟ್ರೀಮಿಂಗ್‌ ಆಗಲಿದೆ" ಎಂದು ನೆಟ್‌ಫ್ಲಿಕ್ಸ್‌ ಟ್ವೀಟ್‌ ಮಾಡಿದೆ.

ಮಹಾರಾಣಿ ಸೀಸನ್‌ 3

ಬಿಹಾರದಲ್ಲಿ 1990ರಲ್ಲಿ ನಡೆದ ಘಟನೆ ಆಧರಿತ ರಾಜಕೀಯ ವಿಷಯವನ್ನು ಮಹಾರಾಣಿ ಸೀಸನ್‌ 3 ಸರಣಿ ಹೊಂದಿದೆ. ಈ ವೆಬ್‌ ಸರಣಿಯಲ್ಲಿ ಹುಮಾ ಖುರೇಷಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೋಹುಮ್‌ ಶಾ, ಅಮಿತ್‌ ಸಿಯೆಲ್‌, ಕಣಿ ಕುಸ್ರುತಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ವೆಬ್‌ ಸರಣಿ ಮಾರ್ಚ್‌ 7ರಂದು ಸೋನಿಲಿವ್‌ನಲ್ಲಿ ಬಿಡುಗಡೆಯಾಗಿದೆ.

ದಮ್ಸೆಲ್‌ (ನೆಟ್‌ಫ್ಲಿಕ್ಸ್‌)

ಮಿಲಿ ಬಾಬಿ ಬ್ರೌನ್‌, ರಾಯ್‌ ವಿನ್‌ಸ್ಟೋನ್‌, ನಿಕ್‌ ರಾಬಿನ್‌ಸನ್‌ ಮುಂತಾದವರು ನಟಿಸಿದ ಸಿನಿಮಾ. ಮಹಿಳೆಯೊಬ್ಬಳು ಸುಂದರ ಯುವಕನನ್ನು ಮದುವೆಯಾಗುವ ಕಥೆಯನ್ನು ಇದು ಹೊಂದಿದೆ ಮತ್ತು ಮದುವೆಯಾದ ಬಳಿಕ ತನ್ನನ್ನು ಟ್ರಾಪ್‌ನೊಳಗೆ ಸಿಲುಕಿಸಲಾಗಿದೆ ಎಂದು ಆಕೆಗೆ ತಿಳಿಯುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್‌ 8ರಂದು ಡಮ್ಸೆಲ್‌ ಸಿನಿಮಾ ಬಿಡುಗಡೆಯಾಗಿದೆ.

ಲಾಲ್‌ ಸಲಾಮ್‌ (ನೆಟ್‌ಫ್ಲಿಕ್ಸ್‌)

ಲಾಲ್‌ ಸಲಾಮ್‌ ಸಿನಿಮಾ ಮಾರ್ಚ್‌ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಲೈಕಾ ಪ್ರೊಡಕ್ಷನ್‌ ನಿರ್ಮಾಣದ ಮತ್ತು ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆಯಾಗಿತ್ತು. ಲಾಲ್‌ ಸಲಾಮ್‌ನಲ್ಲಿ ರಜನಿಕಾಂತ್‌ ಅವರರು ಮೊಯ್ದೀನ್‌ ಬಾವಾ ಆಗಿ ಕಾಣಿಸಿಕೊಂಡಿದ್ದಾರೆ. ಲಾಲ್‌ ಸಲಾಮ್‌ ಸಿನಿಮಾದಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಬ್ಲಾಕ್‌ಬೆರಿ (ಆಪಲ್‌ ಟೀವಿ)

ಮ್ಯಾಟ್ ಜಾನ್ಸನ್ ನಿರ್ದೇಶನದ ಜೇ ಬರುಚೆಲ್, ಗ್ಲೆನ್ ಹೋವರ್ಟನ್ ಮತ್ತು ಮ್ಯಾಟ್ ಜಾನ್ಸನ್ ನಟನೆಯ ಈ ಚಿತ್ರವು ಬ್ಲ್ಯಾಕ್‌ಬೆರಿ ಫೋನ್‌ಗಳ ರಚನೆಯ ಕಾಲ್ಪನಿಕ ಸಿನಿಮಾವಾಗಿದೆ.

ದಿ ಜಂಟಲ್‌ಮೆನ್ (ನೆಟ್‌ಫ್ಲಿಕ್ಸ್)

ಗೈ ರಿಚ್ಚಿ ರಚಿಸಿದ, ಕ್ರಿಸ್ಟೋಫರ್ ಬೆನ್‌ಸ್ಟೆಡ್ ಅವರ ನಿರ್ದೇಶನದ ದಿ ಜಂಟಲ್ಮೆನ್‌ ಚಿತ್ರವು ಇದೇ ಹೆಸರಿನ 2019 ರ ಚಲನಚಿತ್ರದ ಸ್ಪಿನ್-ಆಫ್ ಆಗಿದೆ. ಥಿಯೋ ಜೇಮ್ಸ್ ಮತ್ತು ಕಾಯಾ ಸ್ಕೋಡೆಲಾರಿಯೊ ನಟಿಸಿದ ಈ ಸರಣಿಯು ಶ್ರೀಮಂತನೊಬ್ಬನ ಮೇಲೆ ಕೇಂದ್ರೀಕೃತವಾಗಿದೆ.

ದಿ ರಿಜಿಮ್‌ ( ಜಿಯೋ ಸಿನೆಮಾ)

ದಿ ರಿಜಿಮ್‌

ಕೇಟ್ ವಿನ್ಸ್ಲೆಟ್, ಮಾರ್ಥಾ ಪ್ಲಿಂಪ್ಟನ್, ಆಂಡ್ರಿಯಾ ರೈಸ್ಬರೋ, ಮಥಿಯಾಸ್ ಸ್ಕೋನೆರ್ಟ್ಸ್ ಮತ್ತು ಹಗ್ ಗ್ರಾಂಟ್ ಅವರ ಕಿರು-ಸರಣಿಯನ್ನು ವಿಲ್ ಟ್ರೇಸಿ ರಚಿಸಿದ್ದಾರೆ. ಸ್ಟೀಫನ್ ಫ್ರಿಯರ್ಸ್ ಮತ್ತು ಜೆಸ್ಸಿಕಾ ಹಾಬ್ಸ್ ನಿರ್ದೇಶಿಸಿದ್ದಾರೆ. ಈ ಸರಣಿ ಆರು ಕಂತುಗಳನ್ನು ಒಳಗೊಂಡಿದೆ. ವಿಡಂಬನಾತ್ಮಕ ಸರಣಿಯು ಯುರೋಪಿನ ಮೇಲೆ ಅಧ್ಯಕ್ಷರಾಗಿರುವ ಸರ್ವಾಧಿಕಾರಿಯ ಕಥೆಯನ್ನು ಹೇಳುತ್ತದೆ.

ಹೀಗೆ ಒಟಿಟಿಯಲ್ಲಿ ಹಲವು ಸಿನಿಮಾಗಳು, ವೆಬ್‌ ಸರಣಿಗಳು ಇವೆ. ಕೆಲವೊಂದು ಕನ್ನಡ ಸಿನಿಮಾಗಳು ಹೆಚ್ಚು ಸದ್ದು ಮಾಡದೆ ಒಟಿಟಿಗೆ ಆಗಮಿಸುತ್ತವೆ. ಆಯಾ ಒಟಿಟಿಯ ಕನ್ನಡ ವಿಭಾಗವನ್ನು ಆಗಾಗ ನೋಡಲು ಮರೆಯಬೇಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ