logo
ಕನ್ನಡ ಸುದ್ದಿ  /  ಮನರಂಜನೆ  /  Ott News: ಮನೆಯಲ್ಲೇ ಕುಳಿತು ನೋಡಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ; ಆಲಿಯಾ ಭಟ್‌ ಮೈಚಳಿ ಬಿಟ್ಟು ನಟಿಸಿದ ಈ ಚಿತ್ರದ ಒಟಿಟಿ ಮಾಹಿತಿ

OTT News: ಮನೆಯಲ್ಲೇ ಕುಳಿತು ನೋಡಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ; ಆಲಿಯಾ ಭಟ್‌ ಮೈಚಳಿ ಬಿಟ್ಟು ನಟಿಸಿದ ಈ ಚಿತ್ರದ ಒಟಿಟಿ ಮಾಹಿತಿ

Praveen Chandra B HT Kannada

Sep 26, 2023 03:24 PM IST

google News

OTT News: ಮನೆಯಲ್ಲೇ ಕುಳಿತು ನೋಡಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

    • Rocky Aur Rani Kii Prem Kahaani: ಈ ವರ್ಷದ ಪ್ರಮುಖ ಬಾಲಿವುಡ್‌ ಸಿನಿಮಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಆಲಿಯಾ ಭಟ್‌ ಮತ್ತು ರಣವೀರ್‌ ಸಿಂಗ್‌ ಮೈಚಳಿ ಬಿಟ್ಟು ನಟಿಸಿದ ರೊಮ್ಯಾಂಟಿಕ್‌ ಚಿತ್ರವನ್ನು ಎಲ್ಲಿ ಹೇಗೆ ನೋಡಬಹುದೆಂಬ ವಿವರ ಇಲ್ಲಿದೆ.
OTT News: ಮನೆಯಲ್ಲೇ ಕುಳಿತು ನೋಡಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
OTT News: ಮನೆಯಲ್ಲೇ ಕುಳಿತು ನೋಡಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

ಬೆಂಗಳೂರು: ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಗೊಂಡ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಎಂಬ ಚಿತ್ರವನ್ನೂ ನೀವು ಇನ್ನೂ ನೋಡಿಲ್ಲ ಎಂದರೆ ಈ ಚಿತ್ರವನ್ನು ಎಲ್ಲಿ ನೋಡಬೇಕೆಂಬ ವಿವರ ಇಲ್ಲಿದೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾವನ್ನು ಕಳೆದ ವಾರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕುರಿತು ಕರಣ್‌ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಘೋಷಿಸಿದದರು. ರಾಕಿ ಮತ್ತು ರಾಣಿ ತಮ್ಮ ಪ್ರೇಮ ಕಹಾನಿ ಜತೆ ನಿಮ್ಮನ್ನು ನೋಡಲು ಬಂದಿದ್ದಾರೆ. ಇದೀಗ ಈ ಸಿನಿಮಾವನ್ನು ಅಮೆಜಾನ್‌ ಪ್ರೈಮ್‌ನಲ್ಲಿ ವೀಕ್ಷಿಸಿ" ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡಿದ್ದರು.

ಕರಣ್‌ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ನನ್ನನ್ನು ನಂಬಿ ಕರಣ್‌, ನಾನು ಈ ಚಿತ್ರವನ್ನು 20ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ. ಪ್ರತಿಬಾರಿ ನೋಡಿದಾಗಲೂ ಎಲ್ಲಾ ನಟರ ಅದ್ಭುತ ನಟನೆ ಮನಸೂರೆಗೊಂಡಿದೆ. ವಿಶೇಷವಾಗಿ ಆಲಿಯಾ ಭಟ್‌ ಮತ್ತು ರಣವೀರ್‌ ಸಿಂಗ್‌ ಅವರ ನಟನೆ ಹುಚ್ಚು ಹಿಡಿಸುವಂತೆ ಇದೆ" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಈ ಸಿನಿಮಾ ಜುಲೈ 28ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಆಲಿಯಾ ಭಟ್‌ ಮತ್ತು ರಣ್‌ವೀರ್‌ ಸಿಂಗ್‌ ಜೋಡಿ ಇರುವ ಈ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿತ್ತು. ಈ ವರ್ಷದ ಬಹುನಿರೀಕ್ಷೆಯ ಸಿನಿಮಾವಾಗಿತ್ತು. ಆದರೆ, ಈ ಸಿನಿಮಾ ಭಾರತದಲ್ಲಿ ಹೇಳಿಕೊಳ್ಳುವಷ್ಟು ಗಳಿಕೆ ಮಾಡಿರಲಿಲ್ಲ. ಆದರೆ, ಜಾಗತಿಕವಾಗಿ ಉತ್ತಮ ಗಳಿಕೆ ಮಾಡಿತ್ತು.

ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಜಗತ್ತಿನಾದ್ಯಂತ ಸುಮಾರು 340 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ವರದಿಗಳು ತಿಳಿಸಿದ್ದವು. ಈ ಸಿನಿಮಾದಲ್ಲಿ ಆಲಿಯಾ ಭಟ್‌ ಮತ್ತು ರಣ್‌ವೀರ್‌ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ಕೆಲವರಿಗೆ ಕರಣ್‌ ಜೋಹರ್‌ ನಿರ್ದೇಶನದ ಬಗ್ಗೆ ಚಕಾರವಿತ್ತು.

ಈ ಸಿನಿಮಾ ಬಿಡುಗಡೆಯಾಗಿ ಸುಮಾರು ಎರಡು ತಿಂಗಳಾಗುತ್ತ ಬಂದಾಗ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಈ ಚಿತ್ರವನ್ನ ಬಾಲಿವುಡ್‌ ಸಿನಿಮಾ ಪ್ರೇಮಿಗಳು ಅಮೆಜಾನ್‌ ಪ್ರೈಮ್‌ನಲ್ಲಿ ನೋಡಬಹುದು. ವಿಶೇಷವೆಂದರೆ ಥಿಯೇಟರ್‌ನಲ್ಲಿ ಅನಿವಾರ್ಯವಾಗಿ ಈ ಸಿನಿಮಾದ ಗಾತ್ರ ಕಡಿಮೆ ಮಾಡಲು ಕತ್ತರಿ ಪ್ರಯೋಗ ಮಾಡಲಾಗಿತ್ತು. ಆದರೆ, ಒಟಿಟಿ ವೀಕ್ಷಕರಿಗೆ ಈ ರೀತಿಯ ಕಟ್ಟಿಂಗ್‌ ಇಲ್ಲದ ಪೂರ್ಣ ಆವೃತ್ತಿಯನ್ನು ನೋಡುವ ಅವಕಾಶ ದೊರಕಿದೆ.

ಒಟಿಟಿಯಲ್ಲಿ ಬಿಡುಗಡೆಗೊಂಡ ಆರ್‌ಡಿಎಕ್ಸ್‌

ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ದೊಡ್ಡ ಪ್ರೇಕ್ಷಕ ವರ್ಗವಿದೆ. ಆರ್‌ಡಿಎಕ್ಸ್‌: ರಾಬರ್ಟ್ ಡೋನಿ ಕ್ಸೇವಿಯರ್ ಸಿನಿಮಾವು ಈಗಾಗಲೇ ಅಂದರೆ ಸೆಪ್ಟೆಂಬರ್‌ 23ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಥಿಯೇಟರ್‌ಗಳಲ್ಲಿ ಆಗಸ್ಟ್‌ 25ರಂದು ಬಿಡುಗಡೆಯಾದ ಈ ಸಿನಿಮಾವು ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗ ಡೆಯಾಗಿದ್ದು, ಸಾಕಷ್ಟು ಜನರು ಸೂಪರ್‌ ಸಿನಿಮಾವೆಂದು ಹೇಳುತ್ತಿದ್ದಾರೆ. ಸೆಪ್ಟೆಂಬರ್ 23 ರ ಮಧ್ಯರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ 'ಆರ್‌ಡಿಎಸ್‌' ಬಿಡುಗಡೆಯಾಗಿತ್ತು. ಸೆಪ್ಟೆಂಬರ್‌ 24ರಂದು ಒಟಿಟಿಯಲ್ಲಿ ನೋಡಿರುವ ಸಾಕಷ್ಟು ಜನರು ಈ ಸಿನಿಮಾದ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಮಾಡುತ್ತಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ