ಒಟಿಟಿಯಲ್ಲಿ ಪ್ರಭಾಸ್ ಸಿನಿಮಾಗಳಿಗೆ ಹೆಚ್ಚಿದ ಬೇಡಿಕೆ; ಬಾಲಿವುಡ್ ಚಿತ್ರಗಳಿಗೆ ಪೈಪೋಟಿ ಕೊಟ್ಟು ಜೇಬು ತುಂಬಿಸಿಕೊಳ್ಳುತ್ತಿರುವ ನಿರ್ಮಾಪಕರು
Nov 02, 2024 12:23 PM IST
ಒಟಿಟಿಯಲ್ಲಿ ಪ್ರಭಾಸ್ ಸಿನಿಮಾಗಳಿಗೆ ಹೆಚ್ಚಿದ ಬೇಡಿಕೆ
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸಿನಿಮಾಗಳಿಗೆ ಒಟಿಟಿಯಲ್ಲಿ ಭಾರೀ ಡಿಮ್ಯಾಂಡ್ ಶುರುವಾಗಿದೆ. ಇದರಿಂದ ಪ್ರಭಾಸ್ ಸಿನಿಮಾ ನಿರ್ಮಾಪಕರಿಗೆ ಲಾಭದ ಮೇಲೆ ಲಾಭ ಬರುತ್ತಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲೂ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ತೆಲುಗು ಸಿನಿಮಾರಂಗದಲ್ಲಿ ಬಹಳಷ್ಟು ನಟರು ಈಗ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಆ ಹೀರೋಗಳಲ್ಲಿ ಪ್ರಭಾಸ್ ಮೊದಲ ಸ್ಥಾನದಲ್ಲಿ ನಿಂತಿದ್ದಾರೆ. ತಮಗಿರುವ ಇಮೇಜ್, ಬ್ಲಾಕ್ ಬಸ್ಟರ್ ಸಿನಿಮಾ, ಬಾಕ್ಸ್ ಆಫೀಸ್ ಕಲೆಕ್ಷನ್ ಸೇರಿದಂತೆ ನಾನಾ ವಿಚಾರದಲ್ಲಿ ಪ್ರಭಾಸ್ ಮುಂದಿದ್ದಾರೆ.
ಬಾಹುಬಲಿ ಚಿತ್ರದಿಂದ ಶುರುವಾದ ಪ್ರಭಾಸ್ ಪ್ಯಾನ್ ಇಂಡಿಯಾ ಪ್ರಯಾಣ ಕಲ್ಕಿ 2898 ಎಡಿ ಯಶಸ್ಸಿನವರೆಗೂ ಬಂದು ಮುಟ್ಟಿದೆ. ಥಿಯೇಟ್ರಿಕಲ್, ಡಿಜಿಟಲ್, ಸ್ಯಾಟಲೈಟ್, ಓವರ್‌ಸೀಸ್ ಬಿಸ್ನೆಸ್ ಈ ಎಲ್ಲಾ ವಿಚಾರಗಳಲ್ಲೂ ಪ್ರಭಾಸ್ ಸಿನಿಮಾಗಳು ನಾಗಾಲೋಟದಲ್ಲಿ ಸಾಗುತ್ತಿದೆ.
ಬಾಲಿವುಡ್ ಸಿನಿಮಾಗಳ ಜೊತೆ ಪ್ರಭಾಸ್ ಚಿತ್ರಗಳ ಪೈಪೋಟಿ
ಪ್ರಭಾಸ್ ಸಿನಿಮಾಗಳು ಬಾಲಿವುಡ್ ಸ್ಟಾರ್ ಸಿನಿಮಾಗಳ ಜೊತೆ ಪೈಪೋಟಿಗೆ ನಿಂತಿದೆ. ಪ್ರಭಾಸ್ ಅವರ ಸ್ಕ್ರೀನ್ ಪ್ರೆಸೆನ್ಸ್, ಇಮೇಜ್ ಎಲ್ಲವೂ ಉತ್ತರ ಭಾರತದ ಸಿನಿಪ್ರಿಯರನ್ನು ಬಹಳ ಸೆಳೆದಿದೆ. ಸುಮಾರು 28 ವರ್ಷಗಳಿಂದ ಸತತವಾಗಿ ಶಾರುಖ್ ಖಾನ್ ಅವರ ದಿಲ್‌ವಾಲೆ ದುಲ್ಹನಿಯೇ ಲೇಜಾಯೆಂಗೆ ಸಿನಿಮಾ ಪ್ರದರ್ಶನವಾಗುತ್ತಿರುವ ಮರಾಠಾ ಮಂದಿರದಲ್ಲಿ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಪ್ರದರ್ಶನವಾಗುತ್ತಿರುವುದು ಅವರ ಸಿನಿಮಾಗೆ ಇರುವ ಕ್ರೇಜ್ ಎಷ್ಟೆಂದು ತೋರಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿ ಕೂಡಾ ಪ್ರಭಾಸ್ ಸಿನಿಮಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿದ್ದಾರೆ. ಸಲಾರ್, ಕಲ್ಕಿ ಸಿನಿಮಾಗಳಿಂದ ಒಳ್ಳೆ ಲಾಭ ದೊರೆತಿದೆ. ಕನ್ನಡ, ತಮಿಳು, ಮಲಯಾಳಂನಲ್ಲೂ ಪ್ರಭಾಸ್‌ಗೆ ಹೆಚ್ಚಿನ ಅಭಿಮಾನಿಗಳಿದ್ದು ಒಟಿಟಿಯಲ್ಲಿ ಅವರ ಸಿನಿಮಾಗಳನ್ನು ಹುಡುಕುತ್ತಿದ್ದಾರೆ.
ಭಾರೀ ಲಾಭ ಗಳಿಸುತ್ತಿರುವ ಪ್ರಭಾಸ್ ಸಿನಿಮಾ ನಿರ್ಮಾಪಕರು
ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಭಾಸ್ ಸಿನಿಮಾಗಳ ಹಿಂದಿ ಆವೃತ್ತಿಗಳು ಹೆಚ್ಚಾಗಿ ಖರೀದಿ ಆಗುತ್ತಿವೆ. ಅದರಲ್ಲೂ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸಲಾರ್ ಹಿಂದಿ ವರ್ಷನ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ತೆಗೆದುಕೊಂಡರೆ, ಇತರ ಹಿಂದೆ ಡಬ್ಬಿಂಗ್ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡುತ್ತಿದೆ. ಕಲ್ಕಿ 2898 ಎಡಿ ಹಿಂದಿ ಹಕ್ಕನ್ನೂ ನೆಟ್‌ಫ್ಲಿಕ್ಸ್ ಪಡೆದಿದೆ. ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಭಾಸ್ ತೆಲುಗು, ತಮಿಳು, ಕನ್ನಡ, ಮಲಯಾಳಂ ವರ್ಷನ್‌ಗಳ ಸಿನಿಮಾಗಳನ್ನು ನೋಡಬಹುದು. ಹೀಗೆ ಥಿಯೇಟ್ರಿಕಲ್, ಒಟಿಟಿ ಸೇರಿ ಇತರ ಬಿಸ್ನೆಸ್‌ಗಳಿಂದ ಪ್ರಭಾಸ್ ಸಿನಿಮಾ ನಿರ್ಮಾಪಕರು ಭಾರೀ ದುಡ್ಡು ಮಾಡಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾದ ಡಾರ್ಲಿಂಗ್ ಪ್ರಭಾಸ್
ಮುಂದಿನ ವರ್ಷಗಳಲ್ಲಿ ರಾಜಾ ಸಾಬ್, ಸಲಾರ್ 2, ಕಲ್ಕಿ 2, ಸ್ಪಿರಿಟ್ ಸೇರಿದಂತೆ ಪ್ರಭಾಸ್ ಅವರ ಹೊಸ ಸಿನಿಮಾಗಳು ಇತಿಹಾಸ ಸೃಷ್ಟಿಸಲು ಸಜ್ಜಾಗಿವೆ. ಸೀತಾರಾಮಂ ಸಿನಿಮಾ ನಿರ್ದೇಶಕ ರಾಘವಪೂಡಿ ಜೊತೆಎ ಪ್ರಭಾಸ್ ಫೌಜಿ ಎಂಬ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಸಿನಿಮಾ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದೆ. ಇತ್ತೀಚೆಗೆ ರಾಜಾ ಸಾಬ್ ಸಿನಿಮಾ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಕೆಲವು ದಿನಗಳ ಹಿಂದಷ್ಟೇ ರಾಜಾ ಸಾಬ್ ಸಿನಿಮಾ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಸಿನಿಮಾ 2025 ಏಪ್ರಿಲ್‌ನಲ್ಲಿ ತೆರೆ ಕಾಣಲಿದೆ. ಜೊತೆಗೆ ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.