logo
ಕನ್ನಡ ಸುದ್ದಿ  /  ಮನರಂಜನೆ  /  Akira Nandan: ಅಧಿಕೃತವಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಪವನ್‌ ಕಲ್ಯಾಣ್‌ ಪುತ್ರ ಅಕಿರಾ.. ಖುಷಿ-ಬೇಸರ ಎರಡೂ ಆಯ್ತು ಎಂದ ಫ್ಯಾನ್ಸ್‌

Akira Nandan: ಅಧಿಕೃತವಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಪವನ್‌ ಕಲ್ಯಾಣ್‌ ಪುತ್ರ ಅಕಿರಾ.. ಖುಷಿ-ಬೇಸರ ಎರಡೂ ಆಯ್ತು ಎಂದ ಫ್ಯಾನ್ಸ್‌

Rakshitha Sowmya HT Kannada

Apr 13, 2023 09:20 PM IST

google News

ಸಂಗೀತ ನಿರ್ದೇಶಕನಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಅಕಿರಾ ನಂದನ್‌

    • ಕೊನೆಗೂ ಅಕಿರಾ ನಂದನ್‌ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಷಯವನ್ನು ತೆಲುಗಿನ ಖ್ಯಾತ ನಟ ಅದ್ವಿಶೇಷ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಸಂಗೀತ ನಿರ್ದೇಶಕನಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಅಕಿರಾ ನಂದನ್‌
ಸಂಗೀತ ನಿರ್ದೇಶಕನಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಅಕಿರಾ ನಂದನ್‌

ತೆಲುಗು ಸ್ಟಾರ್‌ ನಟ ಪವನ್ ಕಲ್ಯಾಣ್ ಪುತ್ರ ಅಕಿರಾ ನಂದನ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದರು. 2 ವರ್ಷಗಳ ಹಿಂದೆ ಕೂಡಾ ಇದೇ ಸುದ್ದಿ ಕೇಳಿಬಂದಿತ್ತು. ಇನ್ನೇನು ಅಕಿರಾ ಚಿತ್ರವೊಂದರಲ್ಲಿ ಹೀರೋ ಆಗಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಬಹಳ ದಿನಗಳು ಕಾದ ನಂತರ ಅಭಿಮಾನಿಗಳ ಬಹಳ ದಿನಗಳ ಕನಸು ಈಗ ನೆರವೇರಿದೆ.

ಕೆಲವು ದಿನಗಳ ಹಿಂದಷ್ಟೇ ಅಕಿರಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗಲಾದರೂ ಅವರ ಸಿನಿಮಾ ಎಂಟ್ರಿ ಬಗ್ಗೆ ಹೊಸ ಅಪ್‌ಡೇಟ್‌ ಸಿಗಬಹುದು ಎಂದು ಸಿನಿಪ್ರಿಯರು ಕಾಯುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಕೊನೆಗೂ ಅಕಿರಾ ನಂದನ್‌ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಾಯಕನಾಗಿ ಅಲ್ಲ, ಸಂಗೀತ ನಿರ್ದೇಶಕನಾಗಿ. ಹೌದು, ಅಕಿರಾ ನಂದನ್‌ ತೆಲುಗು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕನಾಗಿ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿ ಕೆಲವರು ಹೀರೋ ಆಗಿ ಬರಬಹುದಿತ್ತು ಎಂದು ಬೇಸರಗೊಂಡಿದ್ದಾರೆ. ಇನ್ನೂ ಕೆಲವರು ಮ್ಯೂಸಿಕ್‌ ಡೈರೆಕ್ಟರ್‌ ಆಗಿ ಆದರೂ ಟಾಲಿವುಡ್‌ ಎಂಟ್ರಿ ಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಹೀರೋ ಆಗೇ ಆಗ್ತಾರೆ ಎಂದಿದ್ದಾರೆ.

19 ವರ್ಷದ ಅಕಿರಾ, 'ರೈಟರ್ಸ್ ಬ್ಲಾಕ್' ಎಂಬ ಕಿರುಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ವಿಷಯವನ್ನು ತೆಲುಗಿನ ಖ್ಯಾತ ನಟ ಅದ್ವಿಶೇಷ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ರೈಟರ್ಸ್ ಬ್ಲಾಕ್ ಕುರಿತು ಟ್ವೀಟ್ ಮಾಡಿರುವ ಅದ್ವಿಶೇಷ್‌ ನನ್ನ ಪ್ರೀತಿಯ ಕಾರ್ತಿಕೇಯ ಅವರ ವಿಭಿನ್ನ ಕಾನ್ಸೆಪ್ಟ್‌ನ ಕಿರುಚಿತ್ರದ ಕುರಿತು ಹೇಳಿಕೊಳ್ಳಲು ಖುಷಿ ಆಗುತ್ತಿದೆ. ಈ ಕಿರುಚಿತ್ರಕ್ಕೆ ನನ್ನ ಇಷ್ಟದ ಮಗು, ಅಕಿರಾ ನಂದನ್‌ ಮ್ಯೂಸಿಕ್‌ ನೀಡುತ್ತಿದ್ದಾರೆ. ಇದರಲ್ಲಿ ಮನೋಜ್‌ ರಿಶಿ ನಟಿಸುತ್ತಿದ್ದಾರೆ ಎಂದು ಬರೆದು ತಂಡಕ್ಕೆ ಶುಭ ಹಾರೈಸಿದ್ದಾರೆ.

ಕಾರ್ತಿಕೇಯ ಯರ್ಲಗಡ್ಡ ನಿರ್ದೇಶನದ ಈ ಕಿರುಚಿತ್ರವನ್ನು ಇಂಗ್ಲಿಷ್‌ನಲ್ಲಿ ನಿರ್ಮಿಸಲಾಗಿದೆ. 5 ನಿಮಿಷದ ಈ ಕಿರು ಚಿತ್ರದಲ್ಲಿ ಅಕಿರಾ ಅವರ ಸಂಗೀತ ಆಕರ್ಷಕವಾಗಿದೆ. ಲೇಖಕರು ಕಥೆಯನ್ನು ಬರೆಯುವಲ್ಲಿ ಒತ್ತಡ ಮತ್ತು ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದು ಈ ಕಿರುಚಿತ್ರದ ಮುಖ್ಯ ವಿಷಯ. ಅಕಿರಾ ನಂದನ್‌ಗೆ ಮೊದಲಿನಿಂದಲೂ ಸಂಗೀತದ ಬಗ್ಗೆ ಒಲವಿದೆ. ಸಂಗೀತ ಮೇಲಿನ ಆಸಕ್ತಿಯಿಂದ ಅಕಿರಾ, ಪಿಯಾನೋ ಕಲಿತರು. ತಾಯಿ ರೇಣು ದೇಸಾಯಿ ಆಗ್ಗಾಗ್ಗೆಅಕಿರಾ ಪಿಯಾನೋ ನುಡಿಸುವ ವೀಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಅಕಿರಾ, ತಮ್ಮ ಶಾಲೆಯ ಸಮಾರಂಭದಲ್ಲಿ 'ಆರ್‌ಆರ್‌ಆರ್' ಚಿತ್ರದ ಹಾಡನ್ನು ಪಿಯಾನೋದಲ್ಲಿ ನುಡಿಸಿ ಎಲ್ಲರ ಗಮನ ಸೆಳೆದಿದ್ದರು.

ಇತ್ತೀಚೆಗಷ್ಟೇ ಅಕಿರಾ ನಂದನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪವನ್ ಕಲ್ಯಾಣ್‌ ಅಭಿಮಾನಿಗಳ ವಿರುದ್ಧ ರೇಣು ದೇಸಾಯಿ ವಾಗ್ದಾಳಿ ನಡೆಸಿದ್ದರು. ಏಪ್ರಿಲ್ 8 ರಂದು ರೇಣು ದೇಸಾಯಿ ಮಗನ 19ನೇ ವರ್ಷದ ಹುಟ್ಟುಹಬ್ಬಕ್ಕೆ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. 19ನೇ ವರ್ಷದ ಹುಟ್ಟುಹಬ್ಬ ಮಗನೇ, ಇಷ್ಟು ದೊಡ್ಡವನಾದರೂ ಇನ್ನೂ ಪುಟ್ಟ ಮಗುವಿನಂತೆ ನನ್ನ ತೊಡೆಯ ಮೇಲೆ ಕುಳಿತುಕೊಳ್ಳುತ್ತಾನೆ ಎಂದು ಲವ್‌ ಎಮೊಜಿ ಹಾಕಿ ರೇಣು ದೇಸಾಯಿ ಫೋಟೋ ಶೇರ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪವನ್‌ ಕಲ್ಯಾಣ್‌ ಅಭಿಮಾನಿಯೊಬ್ಬರು ''ಸಹೋದರ, ಪವನ್‌ ಕಲ್ಯಾಣ್‌ಗೆ ಮಗನ ಪ್ರೀತಿ ಸಿಗದಂತೆ ಮಾಡಿದ್ದೀರಿ'' ಎಂದಿದ್ದರು.

ಪವನ್‌ ಕಲ್ಯಾಣ್‌ ಅಭಿಮಾನಿಯ ಕಮೆಂಟ್‌ಗೆ ರೇಣು ದೇಸಾಯಿ ಖಾರವಾಗಿ ಪ್ರತಿಕ್ರಿಯಿಸಿದ್ದರು. ''ಅಕಿರಾ ಕೇವಲ ನಿಮ್ಮ ಸಹೋದರನ ಮಗ ಮಾತ್ರನಲ್ಲ, ನನ್ನ ಮಗ ಕೂಡಾ ಹೌದು. ನೀವು ಅವರ ಅಭಿಮಾನಿ ಆಗಿರಬಹುದು. ಆದರೆ ಗೌರವದಿಂದ ಮಾತನಾಡುವುದನ್ನು ಕಲಿಯಿರಿ'' ಎಂದು ಬೇಸರ ವ್ಯಕ್ತಪಡಿಸಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ