logo
ಕನ್ನಡ ಸುದ್ದಿ  /  ಮನರಂಜನೆ  /  Radhika Pandit Father Birthday: ಡ್ಯಾಡಿ ಮೈ ಲವ್ಲಿ ಡ್ಯಾಡಿ...ಪ್ರೀತಿಯ ಅಪ್ಪನಿಗೆ ಬರ್ತ್‌ಡೇ ಶುಭ ಕೋರಿದ ರಾಧಿಕಾ ಪಂಡಿತ್‌

Radhika Pandit Father Birthday: ಡ್ಯಾಡಿ ಮೈ ಲವ್ಲಿ ಡ್ಯಾಡಿ...ಪ್ರೀತಿಯ ಅಪ್ಪನಿಗೆ ಬರ್ತ್‌ಡೇ ಶುಭ ಕೋರಿದ ರಾಧಿಕಾ ಪಂಡಿತ್‌

HT Kannada Desk HT Kannada

Jan 17, 2023 08:33 AM IST

google News

ತಂದೆ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾಧಿಕಾ ಪಂಡಿತ್‌

    • ಅಪ್ಪನೊಂದಿಗೆ ಇರುವ ಫೋಟೋ ಹಂಚಿಕೊಂಡಿರುವ ರಾಧಿಕಾ, ನಾನು ಯಾವಾಗಲೂ ಅಪ್ಪನ ರಾಜಕುಮಾರಿ, ಎಂದೆಂದಿಗೂ ಅಪ್ಪನ ಪುಟ್ಟ ಮಗಳು, ಹುಟ್ಟುಹಬ್ಬದ ಶುಭಾಶಯಗಳು ಅಪ್ಪ ಎಂದು ಬರೆದುಕೊಂಡಿದ್ದಾರೆ.
ತಂದೆ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾಧಿಕಾ ಪಂಡಿತ್‌
ತಂದೆ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾಧಿಕಾ ಪಂಡಿತ್‌ (PC: iamradhikapandit Instagram)

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಮೊದಲಿನಿಂದಲೂ ಸೋಷಿಯಲ್‌ ಮೀಡಿಯಾದಲ್ಲಿ ಬಹಳ ಆಕ್ಟಿವ್‌ ಇದ್ದಾರೆ. ಅದರಲ್ಲೂ ಅವರು ಗೃಹಿಣಿ ಆದ ನಂತರ, ಎರಡು ಮಕ್ಕಳ ತಾಯಿ ಆದ ನಂತರ ಮತ್ತಷ್ಟು ಆಕ್ಟಿವ್‌ ಇದ್ದು ಅಭಿಮಾನಿಗಳಿಗಾಗಿ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚುಕೊಳ್ಳುತ್ತಾರೆ. ವಿಶೇಷ ದಿನಗಳಲ್ಲಿ ಫ್ಯಾನ್ಸ್‌ಗೆ ಶುಭ ಕೋರುತ್ತಾರೆ. ಸೋಮವಾರ ರಾಧಿಕಾ ತಮ್ಮ ತಂದೆ ಹುಟ್ಟುಹಬ್ಬಕ್ಕೆ ಶುಭ ಕೋರಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್‌ ತಂದೆ ಕೃಷ್ಣ ಪ್ರಸಾದ್‌ ಭಟ್‌ ಜನವರಿ 16 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರೀತಿಯ ಅಪ್ಪನಿಗೆ ರಾಧಿಕಾ ಪಂಡಿತ್‌ ಶುಭ ಕೋರಿದ್ದಾರೆ. ''ಅಪ್ಪನೊಂದಿಗೆ ಇರುವ ಫೋಟೋ ಹಂಚಿಕೊಂಡಿರುವ ರಾಧಿಕಾ, ನಾನು ಯಾವಾಗಲೂ ಅಪ್ಪನ ರಾಜಕುಮಾರಿ, ಎಂದೆಂದಿಗೂ ಅಪ್ಪನ ಪುಟ್ಟ ಮಗಳು, ಹುಟ್ಟುಹಬ್ಬದ ಶುಭಾಶಯಗಳು ಅಪ್ಪ'' ಎಂದು ಬರೆದುಕೊಂಡಿದ್ದಾರೆ. ರಾಧಿಕಾ ಅಭಿಮಾನಿಗಳು ಕೂಡಾ ಕೃಷ್ಣ ಪ್ರಸಾದ್‌ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ರಾಧಿಕಾ ಪಂಡಿತ್‌ ಹೀಗೆ ಅಪ್ಪನೊಂದಿಗಿನ ಫೋಟೋ ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅನೇಕ ಫೋಟೋಗಳನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ತಂದೆ ಹಾಗೂ ತಮ್ಮಿಬ್ಬರು ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿರುವಂತೆ ಪೋಸ್‌ ನೀಡಿರುವ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದರು. ''ಪ್ರಪಂಚದಲ್ಲಿ ನನ್ನ ಅಪ್ಪ ಬಹಳ ಸೇಫೆಸ್ಟ್‌ ಡ್ರೈವರ್‌. ಅವರು ಡ್ರೈವ್‌ ಮಾಡುವಾಗ ನಾನು ಆರಾಮವಾಗಿ ನಿದ್ರೆ ಮಾಡಬಹುದು. ನಾನು ಸ್ಕೂಲ್‌ ಮತ್ತು ಕಾಲೇಜಿಗೆ ಹೋಗುವಾಗ ಅಪ್ಪನೇ ನನಗೆ ಡ್ರಾಪ್‌, ಪಿಕಪ್‌ ಮಾಡುತ್ತಿದ್ದರು. ನಾನು ಕ್ಲಾಸ್‌ ಬಂಕ್‌ ಮಾಡಿದಾಗ ಕೂಡಾ ಅಪ್ಪ ಬೇಕಾದ ಕಡೆಗೆ ಕರೆದೊಯ್ಯುತ್ತಿದ್ದರು'' ಎಂದು ರಾಧಿಕಾ ಬರೆದುಕೊಂಡಿದ್ದರು. ಅಷ್ಟೇ ಅಲ್ಲ, ಈ ಫೋಟೋ, ಪೋಸ್‌ ನೀಡಲು ಮಾತ್ರ, ನೀವು ರೈಡ್‌ ಮಾಡುವಾಗ ತಪ್ಪದೆ ಹೆಲ್ಮೆಟ್‌ ಧರಿಸಿ ಎಂದು ರಾಧಿಕಾ ಅಭಿಮಾನಿಗಳ ಬಳಿ ಮನವಿ ಮಾಡಿದ್ದರು.

ಹಾಸನದಲ್ಲಿ ಸಂಕ್ರಾಂತಿ ಆಚರಿಸಿದ ಯಶ್‌-ರಾಧಿಕಾ ಪಂಡಿತ್‌

ಜನವರಿ 15, ರಾಧಿಕಾ ಪಂಡಿತ್‌ ಹಾಗೂ ಯಶ್‌ ತಮ್ಮ ಮಕ್ಕಳೊಂದಿಗೆ ಹಾಸನಕ್ಕೆ ತೆರಳಿ ಸಂಕ್ರಾಂತಿ ಆಚರಿಸಿದ್ದಾರೆ. ಹಾಸನದ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಯಶ್‌, ತಂದೆ-ತಾಯಿಗಳೊಂದಿಗೆ ಈ ಬಾರಿ ಮಕರ ಸಂಕ್ರಾಂತಿ ಸೆಲೆಬ್ರೇಟ್‌ ಮಾಡಿದ್ದಾರೆ. ಯಶ್‌ ಹಾಗೂ ರಾಧಿಕಾ ತಮ್ಮ ಮಕ್ಕಳೊಂದಿಗೆ ಟ್ರಾಕ್ಟರ್‌ ಏರಿ ಕುಳಿತಿರುವ ಫೋಟೋಗಳು ವೈರಲ್‌ ಆಗುತ್ತಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ