logo
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ನಾರಾಯಣಾಚಾರ್ಯರ ಮನೆಗೆ ಬಂದ ಗುರುಗಳು; ಏನಿರಬಹುದು ಆಗಮನದ ಹಿಂದಿನ ಉದ್ದೇಶ?

Ramachari Serial: ನಾರಾಯಣಾಚಾರ್ಯರ ಮನೆಗೆ ಬಂದ ಗುರುಗಳು; ಏನಿರಬಹುದು ಆಗಮನದ ಹಿಂದಿನ ಉದ್ದೇಶ?

Suma Gaonkar HT Kannada

Jan 20, 2025 01:12 PM IST

google News

ರಾಮಾಚಾರಿ ಧಾರಾವಾಹಿ

    • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣಾಚಾರ್ಯರ ಮನೆಗೆ ಗುರುಗಳು ಬಂದಿದ್ದಾರೆ. ಗುರುಗಳು ಬಂದ ಕಾರಣ ಏನು ಎಂಬುದು ಇನ್ನು ಮುಂದೆ ತಿಳಿಯಲಿದೆ. ಗುರುಗಳಿಗೆ ನಾರಾಯಣಾಚಾರ್ಯರು ಪಾದ ಪೂಜೆ ಮಾಡಿದ್ದಾರೆ. 
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿ (Colors Kannada)

ರಾಮಾಚಾರಿ ಧಾರಾವಾಹಿಯಲ್ಲಿ ಗುರುಗಳ ಆಗಮನವಾಗಿದೆ. ಅವರು ಬರುತ್ತಾರೆ ಎಂಬ ಮಾಹಿತಿ ಮೊದಲೇ ಇದ್ದ ಕಾರಣ ಎಲ್ಲರೂ ತಯಾರಿ ನಡೆಸಿಕೊಂಡಿದ್ದಾರೆ. ಮನೆಯನ್ನು ಸ್ವಚ್ಛಮಾಡಿ, ಊಟ, ಉಪಹಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಗುರುಗಳು ಯಾವ ಕಾರಣಕ್ಕಾಗಿ ಬಂದಿದ್ದಾರೆ ಎಂಬುದು ತಿಳಿದಿಲ್ಲ. ನಾರಾಯಣಾಚಾರ್ಯರು ಮಾತ್ರ ತಮ್ಮ ಗುರುಗಳು ಮನೆಗೆ ಬರುತ್ತಿದ್ದಾರೆ ಎಂದು ತುಂಬಾ ಸಂತೋಷದಲ್ಲಿರುವಂತೆ ತೋರುತ್ತದೆ. “ನನ್ನಂತ ಪಾಮರನ ಮನೆಗೆ ನೀವು ಬಂದಿರುವುದು ತುಂಬಾ ಸಂತೋಷ ತಂದಿದೆ” ಎನ್ನುತ್ತಲೇ ನಾರಾಯಣಾಚಾರ್ಯ ಅವರ ಸೇವೆ ಮಾಡುತ್ತಾರೆ.

ಮಂತ್ರ ಹೇಳುತ್ತಾ ಅವರನ್ನು ಒಳಗಡೆ ಬರ ಮಾಡಿಕೊಳ್ಳುತ್ತಾರೆ. ಆದರೆ ಅಂದು ರಾಮಾಚಾರಿ ಮತ್ತು ಕೋದಂಡ ಮನೆಯಲ್ಲಿ ಇರೋದಿಲ್ಲ. ಅವರು ಎಲ್ಲಿ ಎಂದು ಗುರುಗಳು ಪ್ರಶ್ನೆ ಮಾಡುತ್ತಾರೆ. ಆಗ ನಾರಾಯಣಾಚಾರ್ಯ “ರಾಮಾಚಾರಿ ಕೆಲಸದ ಒತ್ತಡ ಇರುವ ಕಾರಣ ಆಫೀಸ್‌ಗೆ ಹೋಗಿದ್ದಾನೆ. ಕೋದಂಡ ಒಂದು ಗೃಹ ಪ್ರವೇಶಕ್ಕೆ ಹೋಗಿದ್ದಾನೆ” ಎಂದು ಉತ್ತರಿಸಿದ್ದಾರೆ. ಆ ನಂತರ ಅಲ್ಲೇ ನಿಂತಿರುವ ಕಿಟ್ಟಿಯನ್ನು ನೋಡಿ, ಇವನು ಯಾರು ಎಂದು ಗುರುಗಳು ಪ್ರಶ್ನೆ ಮಾಡಿದ್ದಾರೆ. ಆಗ ಇವನು ನನ್ನ ಮೂರನೇ ಮಗ ಕಿಟ್ಟಿ ಎಂದು ನಾರಾಯಣಾಚಾರ್ಯ ಹೇಳಿದ್ದಾರೆ.

ಗುರುಗಳ ಆಶೀರ್ವಾದ

ಜಾನಕಿ ಹಾಗೂ ಮನೆಯಲ್ಲ ಎಲ್ಲರೂ ಬಂದು ಗುರುಗಳ ಆಶೀರ್ವಾದ ಪಡೆದುಕೊಂಡಿದ್ದಾರೆ. ಆ ನಂತರದಲ್ಲಿ ನಾರಾಯಣಾಚಾರ್ಯ ಗುರುಗಳ ಪಾದ ಪೂಜೆ ಮಾಡಿದ್ದಾರೆ. ಇದರಿಂದ ಗುರುಗಳ ಮುಖದಲ್ಲಿ ಸಮಾಧಾನ ಹಾಗೂ ಸಂತೋಷ ಎದ್ದು ತೋರುತ್ತಿದೆ. ಇನ್ನು ರುಕ್ಕು ಅಡುಗೆ ಮಾಡುತ್ತಾ ಇರುತ್ತಾಳೆ. ಗುರುಗಳು ಬಂದ ಕಾರಣ ಏನು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬಹುದು.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ